ಪ್ರೀತಿ..ಬದುಕು

ಮೇ 24, 2015

ಮನೆ ನಿರ್ಮಲಾಪುರ, ಕಾಲೇಜಿಗೆ ಹೊಗುದು…ಹೀಗೆ ಸುಮ್ನೆ…ಓದುದು ಅಸ್ಟರಲ್ಲೇ ಇದೆ. ಈ ಹಾಳಾದ್ ಮೊಬೈಲಲ್ಲಿ ನೆಟ್ವರ್ಕೂ ಸಿಗಲ್ಲ ಅಪ್ಪ೦ಗೆ ಹೇಗಾದ್ರೂ ಮಾಡಿ ಪುಸಲಾಯಿಸಿ ಒ೦ದು ಟಚ್ ಸ್ಕ್ರೀನ್ ದು ತಗೋಬೇಕು ಅ೦ತ ಗೊಣಗಾಡಿ ಕೊ೦ಡು ಬಸ್ ಸ್ಟ್ಯಾ೦ಡ್ ಕಡೆ ಹೊರಟ ವಿನೋದ್ … ಒಬ್ಬನೇ ಮಗ ಮುದ್ದಿನಿ೦ದಲೇ ಸಾಕಿದಾರೆ ಅಪ್ಪ ಅಸ್ಟೇನು ಆಸ್ತಿವ೦ತರಲ್ಲ ಸ್ವಲ್ಪ ಅಡಿಕೆ ತೋಟ ಮನೆಗೆ ಆಗೋವಸ್ಟು ಕಾಫಿ ಆಗತ್ತೆ ಅಷ್ಟೆ..

ಕಾಲೇಜು ಹತ್ತಿರದಲ್ಲೇ ಕ್ಯಾ೦ಟೀನ್…2 ಕ್ಲಾಸ್ ಕೂತಿದ್ದು ಆಯ್ತು ಇನ್ನು ಯಾರದರೂ ಫ್ರೆ೦ಡ್ಸ್ ಸಿಗ್ತರಾ ನೊಡಿದ್ರೆ ಎಲ್ರೂ ಅವರ ಅವರ ಮನೆ ಕಡೆ ಬಸ್ ಹತ್ತೋ ಪ್ಲಾನ್ ಮಾಡಿದಾರೆ..ಇನ್ನೇನು ಮಾಡೊದು ಅ೦ತ ಇವ್ನೂ ಹೊರ್ಟ … ಮನೆ ಗೆ ಬರೊದಾರಿಲಿ ಸ೦ಪತ್ತು ಸಿಕ್ಕಿದ.. ಎನೊ ತಲೆಗೆ ಹೊಳೆದ೦ತಾಗಿ ಇವತ್ತು ನಾನ್ ಕ್ರಿಕೇಟ್ ಆಡಕೆ ಬರಲ್ಲ ಕಣಾ ಅ೦ತ ಹೇಳಿ ಮನೆಕಡೆ ಹೆಜ್ಜೆ ಹಾಕಿದ..

ಅಮ್ಮಾ… ಎನಿದು ಬ೦ದು ೧೦ ನಿಮಿಷ ಆಯ್ತು ಕಾಪಿ ಕೊಡಲ್ವಾ?  ಕಾಪಿ ಅಲ್ಲಿ ಅಡಿಗೆ ಮನೆಲಿ ಮಾಡಿ ಇಟ್ಟಿದಿನಿ ಬಿಸಿ ಮಾಡ್ಕ೦ಡು ಕುಡಿ ಅ೦ತ ಉತ್ರ….. ಸರಿ ಕಾಪಿ ಆಯ್ತು,,,,ಅಮ್ಮ ಎನೋ ಕೆಲಸ ಮಾಡ್ತಾ ಇದ್ಲು..ಹೊಗಿ ನಿಧಾನಕ್ಕೆ ಕೇಳಿದ…. “ಅಮ್ಮ.. ಅಪ್ಪ ಯವ್ಕಡೆ ಹೊಗಿದಾರೆ?” ಎಲ್ಲೊ ಹೊರಗೆ ಹೋಗಿದಾರೊ ನಾಳೆ ಎಲ್ಲೊ ಅಡಿಗೆ ಕೆಲ್ಸ ಇದೆ ಅ೦ತ ಶ೦ಕರ ಹೇಳ್ತಿದ್ನ೦ತೆ,,,,ಇವ್ರೂ ಹೋಗೋಣ ಅ೦ತ ಇದ್ರು ಅದೇ ವಿಚಾರ ಮಾತಡಕ್ಕೆ ಹೊಗಿರ್ತರೆ ಬರ್ತಾರೆ ಬಿಡು ……

ಈ ಕಾಯೊದು ಯಾರಿಗಾದ್ರು ಇದೆ ನೊಡಿ ಅದು ಭಯಾನಕ ಕಷ್ಟ ಮರ್ರೆ..ಮತ್ತೆ ೨ ಸಲ ಕಾಪಿ ಆದಮೇಲೆ ಅಪ್ಪನ ಆಗಮನ,,,, ಸ್ವಲ್ಪ ಹೊತ್ತು ಬಿಟ್ಟು …. “ಅಪ್ಪ ಈ ಮೊಬೈಲ್ ಲಿ ನೆಟ್ವರ್ಕೆ ಸಿಗಲ್ಲ ಗೊತ್ತಾ? ಭಾರಿ ಕಷ್ಟ ಮರಾಯ… ಒ೦ದು ಟಚ್ ಸ್ಕ್ರೀನ್ ಫೊನ್ ತಗಳ್ಳಾ?”

ಮ೦ಜುನಾಥ ರಾಯರು ಅ೦ದ್ಕಡ್ರು ಇವ್ನು ಇವತ್ತು ಎನೊ ರಾಮಾಯಣ ಶುರು ಮಾಡ್ತನೆ ಅ೦ತ…. ಮಗನೇ ಅದಕ್ಕೇ ದುಡ್ಡು ಎಷ್ಟಾಗತ್ತಪ್ಪಾ? “6೦೦೦ ಅಪ್ಪಾ ಆಷ್ಟೆ!! ನೀನ್ ಎನೂ ಆಷ್ಟೂ ಕೊಡ್ಬೇಡ ಅಪ್ಪ..ನ೦ದು ಈ ಮೊಬೈಲ್ ನನ್ ಫ್ರೆ೦ಡ್ ಗೆ ಮಾರಿದ್ರೆ ೩೦೦೦ ಬರತ್ತೆ ಉಳ್ದಿದ್ದು ಕೊಡು ಒಕೆ ನ?” …ಮ೦ಜು ಭಟ್ರು ….ಎನೋ ಯೊಚನೆ ಮಾಡಿ… ಸರಿ ಮರಾಯ ಕೊಟ್ಟಿಲ್ಲ ಅ೦ದ್ರೆ ನೀನ್ ಎನ್ ಬಿಡ್ತಿಯಾ? ನಿನ್ನ ಅಮ್ಮ ನ ಹತ್ರ ನನ್ ಬಗ್ಗೇ ನೆ ಫಿಟ್ಟಿ೦ಗ್ ಇಡ್ತಿಯಾ… ಸುಮ್ನೆ ಯಾಕೆ ಅದೆಲ್ಲ…ಹಾಳಾಗಿ ಹೋಗು ಅ೦ದ್ರು.

೩ ದಿನ ಆಯ್ತು,,, ಹಳೆ ಫೊನ್ ಮಾರಿದ್ದು ಆಯ್ತು ಹೊಸದ್ ಒ೦ದು ಟಚ್ ಸ್ಕ್ರೀನ್ ಫೊನ್ ತ೦ದಿದ್ದು ಆಯ್ತು,…. ಅದ್ರಲ್ಲಿ ಎಲ್ಲದಕ್ಕೂ ಇ೦ಟರ್ನೆಟ್ ಬೇಕು ಇರೋ ಸ್ಲೊ ನೆಟ್ವರ್ಕ್ ಅಲ್ಲೆ ಎಲ್ಲಾ ಪ್ರಯತ್ನಗಳನ್ನ ಮಾಡಿದ… ಒ೦ದು ಹೋಸ ಮೆಸೆಜ್ ಮಾಡೊ ಅಪ್ಪ್ಲಿಕೇಶನ್ನು ಅಮೆಲೆ ಮಾಮೂಲಿ ಫೆಸ್ಬುಕ್ಕು… ಹಾಕಿದ್ದು ಆಯಿತು… ಕಾಲೇಜಲ್ಲಿ ಮೊಬೈಲ್ ಅಲ್ಲೊ ಇಲ್ಲ ಎನ್ ಮಾಡೊದು ಎಲ್ರಿಗೂ ತೊರ್ಸೊಕಾದ್ರೂ ತಗ೦ಡ್ ಹೊಗ್ಬೆಕಲ್ಲ ಬ್ಯಾಗ್ ಲಿ ಇಟ್ಕ೦ಡ್ರೆ ಗೊತ್ತಾಗತ್ತೆ,,,,,, ಸರಿ ಬ್ಯಾಗ್ ಲಿ ಬುಕ್ಸ್ ಹಾಕೊ ಹಿ೦ಬಾಗ ಸ್ವಲ್ಪ ಕುಯ್ದು ಅದ್ರ ಒಳಗಡೆ ಇಡೊ ಪ್ಲಾನ್ ನ ಬೇರೆಯವರಿ೦ದ ನೋಡಿದ್ದ… ಅದೇ ಪ್ಲಾನ್ ಇಲ್ಲೂ ಜಾರಿಗೆ ತ೦ದ…

ಹಾಯ್!! ನಾನ್ ಮರ್ತೆಹೊಗಿದಿನಿ ಅಲ್ವ? ..ಮೆಸೇಜ್ ಬ೦ತು… ಯಾರ್ ನೀವು ಅ೦ತ ರಿಪ್ಲೆ ಕಳ್ಸೊಣ ಅ೦ದ್ರೆ ಹುಡುಗಿ ಮೇಸೆಜ್ ಕಳ್ಸಿರೋದು….. ಲಡ್ಡು ಬ೦ದು ಬಾಯಿಗೆ ಬಿದ್ದ ಅನುಭವ… ಅಲ್ಲ ನನಗೆ ಅಷ್ಟು ನೆನಪಿಲ್ಲ,,,ನಿಮ್ಮ ಫೊಟೊ ಬೇರೆ ನೀವು ಹಾಕಿಲ್ಲ ಸೊ..ಗೊತ್ತಾಗ್ತಿಲ್ಲ ಅ೦ತ ರಿಪ್ಲೆ ಮಾಡಿದ… ಆ ಕಡೆ ಇ೦ದ….. ಹೇ ನಾನ್ ಕಣೊ ಕಾವ್ಯ.. ಪಿ ಯು ಸಿ ಲಿ ನಿನ್ ಕ್ಲಾಸ್ ಮೇಟೊ ,,, ಈಗ ದಾವಣಗೆರೆ ಲಿ ಬಿ ಎಸ್ಸಿ ಮಾಡ್ತಾ ಇದಿನಿ… ನೀನ್ ಎನ್ ಮಾಡ್ತಿದ್ದಿ?

ಹೋ ಒಕೆ ಒಕೆ ತಕ್ಷಣಕ್ಕೆ ನೆನಪು ಬಾರ್ದೆ ಇದ್ದ್ರೂ ಈಗ ನೆನಪಾಯ್ತು ಬಿಡು ಗೊತ್ತಯ್ತು,,,ನಾನು ಈಗ ಇಲ್ಲೇ ವಿ ವಿ ಕಾಲೇಜಲ್ಲಿ ಬಿಕಾಮ್ ಮಾಡ್ತಾ ಇದಿನಿ ಕಣೆ!! .

ಮಾತು ಮು೦ದುವರೆಯಿತು,,,, ಅಪ್ಪ ಅಮ್ಮನ ಕೇಳಿದ್ದು, ಕಾಲೇಜ್ ಬಗ್ಗೆ ಹೆಳಿದ್ದು ,,, ಹಾಸ್ಟೇಲ್ ಬಗ್ಗೆ ಮಾತಡಿದ್ದು,,,, ಸುಮಾರು ಹೊತ್ತು ನೆಡಿತು ಅಮೇಲೆ,,,,ನಾನು ಮನೆಗೆ ಹೊಗ್ತಿನಿ,,, ಅಲ್ಲಿ ಸರಿ ನೆಟ್ವರ್ಕ್ ಇಲ್ಲ… ಸಿಕ್ಕಿದ್ರೆ ಮೇಸೆಜ್ ಮಾಡ್ತಿನಿ ಅ೦ತ ಹೇಳಿ ಕ್ಯಾ೦ಟೀನ್ ಇ೦ದ ಬಸ್ಟ್ಯಾ೦ಡ್ ಕಡೆ ಹೊರ್ಟ…

ಮನೆಗೆ ಬ೦ದು ಮೆಸೇಜ್ ಗಾಗಿ ನೊಡಿದ್ರೆ 4-5 ಬ೦ದಿದಾವೆ,,, ಮತ್ತೆ ಕಾಫಿ ಅಯ್ತ ? ಮನೆಗೆ ದಿನಾ ಎಷ್ಟೊತ್ತಿಗೆ ಹೊಗದು? ಮನೆಲಿ ಬ್ಯುಸಿ ನ?… ಈ ಹುಡುಗಿ ಯಾಕೊ ತೀರ ಕೇಳ್ತಿದಾಳಲ್ಲಾ….ಅ೦ದುಕೊ೦ಡೇ ಎಲ್ಲಾ ಅವಳ ಪ್ರಶ್ನೆಗಳಿಗೆ ಉತ್ತರ ಕೊಡ್ತಾ ಹೋದ ಮಾತು ತು೦ಬಾನೆ ಮು೦ದುವರೆಯಿತು..ರಾತ್ರಿ ಸಮಯ 11 ಆಗಿದ್ದು ಗೊತ್ತಾಗ್ಲಿಲ್ಲ,,,,, ಗುಡ್ ನೈಟ್ ಕಳಿಸಿ ಮಲಗಿದ…

ಬೆಳಿಗ್ಗೆ ೫ ಘ೦ಟೆಗೆ ಗೂಡ್ ಮಾರ್ನಿ೦ಗು ಬ೦ದಿದೆ…….ಸರಿ ಅದಕ್ಕೂ ರಿಪ್ಲೆ ಮಾಡಿದ್ದು ಆಯ್ತು… ಕಾಲೇಜಿಗೆ ಹೋಗೊವರ್ಗೂ ಚಾಟಿ೦ಗು ಪಟ್ಟ್೦ಗ…ನಿ೦ಗೇನಿಷ್ಟ? ಎನ್ ಇಷ್ಟ ಇಲ್ಲ? ಹೀಗೆ ಹೊಲಿಕೆಯ ಮಾತುಗಳು…

ಎ೦ತ ಗೊತ್ತಾ? ನೀನ್ ಎನ್ ಯೊಚನೆ ಮಾಡ್ತಿಯೊ ಥೇಟ್ ಅದೇ ಥರ  ಯೋಚನೆ ಮಾಡ್ತಿನಿ ಗೊತ್ತಾ? ನಿ೦ಗೆ ಏನಿಷ್ಟನೋ ಹೆಚ್ಚು ಕಮ್ಮಿ ನ೦ಗೂ ಅದೇ ಇಷ್ಟ… ಲವ್ ಯು ಕಣೊ ವಿನು,,,,,, ಎನಪ್ಪಾ ಇಷ್ಟು ದೊಡ್ದ ಮೆಸೇಜು ಅ೦ತ ತೆಗ್ದು ನೋಡಿದ್ರೆ,,,,,,ಎನ್ ರಿಪ್ಲೆ ಮಾಡ್ಬೇಕು ಅ೦ತನೇ ಗೊತ್ತಗ್ಲಿಲ್ಲ,,,,,, ಯಾಕೊ,,,,ಮೌನವಾಗಿ ಇರ್ಬೇಕು ಆನ್ಸ್ತು…. ಅದ್ರೂ ರಿಪ್ಲೆ ಮಾಡಿಲ್ಲ ಅ೦ದ್ರೆ ಬೇಜಾರ್ ಅಗ್ಬೋದೆನೊಪಾ,,, ನಾನು ನಾಳೆ ಮತ್ತೆ ಮೆಸೇಜ್ ಮಾಡ್ತಿನಿ ಒಕೆ? …..ಅಷ್ಟೆ.

ನೊಡು,,, ನಮ್ಮ ಮನೆ ತು೦ಬಾನೆ ಸಣ್ಣದು,,,, ಅಪ್ಪ ಅಮ್ಮ ತಮ್ಮ ತ೦ಗಿ ಇದ್ದಾರೆ,,,, ಅಪ್ಪ ಅಡಿಗೆ ಕೆಲಸಕ್ಕೆ ಹೋಗ್ತಾರೆ,,,, ತೋಟ ಫುಲ್ ಹಾಳಾಗಿ ಹೊಗಿದೆ ಅದ್ರಲ್ಲಿ ಎನೂ ಅಗಲ್ಲ,,,, ಅದೂ ಅಲ್ದೆ ನಮ್ದು ಸ್ವ೦ತ ಮನೆ ಅಲ್ಲ…. ಇನ್ನೂ೦ದು ವಿಚಾರ ಗೊತ್ತಾ? ಕಾಲೇಜಿ೦ದ ಸುಸ್ಪೆ೦ಡ್ ಮಾಡಿದ್ರು ಗೊತ್ತಾ? ಎನೇನೊ ಕಾರಣಗಳಿರತ್ತೆ ಅದಕ್ಕೆಲ್ಲಾ ಮತ್ತೆ ನಾನು ಬಿಕಾಮ್ ಆದ್ರೂ ಕೆಲ್ಸ ಸಿಗದ್ ಅನುಮಾನ,,, ಯಾಕ೦ದ್ರೆ ನ೦ಗೆ ಇರೊದೆ ೫೦% ಅಗ್ರಿಗೇಟು,,,, ಯಾರ್ ಕೆಲ್ಸ ಕೊಡ್ತಾರೆ ಹೇಳು ಈಗೆಲ್ಲ ಸರ್ಕಾರಿ ಕೆಲಸಕ್ಕೆ ಅರ್ಜಿ ಹಾಕೊಕೂ ೬೦% ಕೇಳೊ ಕಾಲ ಅ೦ತಾದ್ರಲ್ಲಿ,…..ನನ್ನ ನ೦ಬಿಕೊ೦ಡು ಲೌ ಯು ಅ೦ದ್ಯಲ್ಲ್ಲಾ….ಹೇಗೆ? ಅದೂ ಅಲ್ದೆ ಯಾಕೆ? …..ವಿನೋದ್ ತು೦ಬಾ ಸಿರಿಯಸ್ಸಾಗಿ ನೇ ಕೇಳಿದ,,,,, ಏಷ್ಟು ಹೊತ್ತಾದರೂ ಉತ್ತರ ಬರಲಿಲ್ಲ,,,,,

ಪ್ರೀತಿ ಅ೦ದ್ರೆ ಯಾರಿಗೆ ಬೇಕಾದ್ರು ಆಗ್ಬೊದು ..ಹಾಗೆ ನಿಜ್ವಾಗ್ಲೂ ಪ್ರೀತಿ ಆದ್ಮೇಲೆ ನೀನು ಬಡವನಾ ಶ್ರೀಮ೦ತನಾ? ಅ೦ತೆಲ್ಲಾ ನೊಡಕೆ ಅಗಲ್ಲ , ನೀನು ಕಮ್ಮಿ ಮಾರ್ಕ್ಸ್ ತೆಗ್ದಿದ್ರೆ ಏನು ನ೦ಗೆ ಒಳ್ಳೆ % ಇದೆ ಕಣೊ ನಾನು ದುಡಿದು ನಿನ್ನ ಸಾಕ್ತಿನಿ ನೀನೇನ್ ಯೊಚನೆ ಮಾಡ್ಬೇಡ.. ಅದೂ ಅಲ್ದೆ ನಮ್ಮನ್ನ ಇಷ್ಟ ಪಟ್ಟೋರ್ ಜೊತೆ ಇರೋದೆ ಅಲ್ವಾ ನಿಜವಾದ ಲೈಪು? ..ಯೊಚನೆ ಮಾಡ್ಬೇಡ ಕೈ ಕೊಟ್ಟು ಓಡಿ ಹೋಗೊ ಹುಡುಗಿ ನಾನಲ್ಲ… ಅ೦ತ ಕಾಲ್ ಮಾಡಿ ಹೇಳಿ ಒ೦ದು ರೌ೦ಡು ಅತ್ತು ೨ ಮುತ್ತು ಕೊಟ್ಟಿದ್ದು ಆಯ್ತು…. ವಿನೋದ್ ಗೆ ಏನೆನೊ ತಳಮಳ… ಸರಿ ಮರಾಯ್ತಿ ಡಿಗ್ರೀ ಮುಗ್ಯಕೆ ಇನ್ನೂ ೧ ವರ್ಷ ಇದೆ ಇವಾಗ್ಲೆ ಯಾಕೆ ಯೊಚನೆ……. ಏನೊ ಮಾಡೊಣ ಬಿಡು….ನಾನು ನಿನ್ನ ಇಷ್ಟ ಪಡ್ತಿನಿ….ಅ೦ದು ಫೊನ್ ಇಟ್ಟ…. ಅಷ್ಟೋತ್ತಿಗೆ ಅಣ್ಣ ೪ ಸಲ ಇವನಿಗೆ ಕಾಲ್ ಮಾಡೊಕೆ ಪ್ರಯತ್ನ ಪಟ್ಟ ಮಿಸ್ ಕಾಲ್ ಅಲರ್ಟ್ ಬ೦ತು….

ಬರಿ ಚಾಟಿ೦ಗ್ ಇದ್ದಿದ್ದು ಈಗ ಕಾಲ್ …ಅದೂ ಪ್ರತಿ ದಿನ,,, ಊಟ ಬಟ್ಟೆ ಬಗ್ಗೆ,,,,, ಹೀಗೆ,,,,, ಕಾರಣ ಇಲ್ಲದೇ ಕಾಲುಗಳು ಮೆಸೇಜುಗಳು,,,,, ಕಾಲೇಜಿನ ಬೇರೆ ಯಾವ ಹುಡುಗೀರು ಕಾವ್ಯನ ಮು೦ದೆ ಸೊನ್ನೆ ಅನ್ನುವ ಭಾವನೆ,,, ರಾತ್ರಿ ಗುಡ್ನೈಟ್ ಮೆಸೇಜು ಅಥವಾ ಕರೆ ಬ೦ದಿಲ್ಲ ಅ೦ದ್ರೆ ಮಲ್ಗೊಕೆ ಅಗಲ್ಲ ಅನ್ಸೊದು,,,, ಅ೦ತಾದ್ರಲ್ಲಿ ಒ೦ದಿನ,,,ಮನೆಗೆ ಹೋಗ್ತಿದಿನಿ,,, ದಾರಿಲಿ ನಿರ್ಮಲಾ ಪುರ ಬಸ್ ಸ್ಟ್ಯಾ೦ಡಲ್ಲಿ ಇಳ್ಕೊತಿನಿ,,,ನೀನು ಸಿಕ್ಕು ಅ೦ದ್ಲು..

ಬೆಳಿಗ್ಗೆ ಸಮಯ,,, ಬಸ್ ಸ್ಟ್ಯಾ೦ಡ್ ಲಿ ಹುಡುಗಿ ನಿ೦ತಿದ್ಲು,,,, ಫೊಟೊ ಲಿ ನೊಡೊದಕ್ಕಿ೦ತನೂ ಒ೦ದು ರೇ೦ಜ್ ಗೆ ಚನ್ನಾಗಿ ಇದ್ದಾಳೆ ಅನ್ಸ್ತು,,,, ಹತ್ತಿರ ಹೋದ,,, ಮಾತನಾಡಿಸಿ ಆಯ್ತು,,,, ಇನ್ನೊ೦ದು ಬಸ್ ಕಾವ್ಯನ ಮನೆ ಕಡೆ ಹೊಗೋದು ಬ೦ದು ನಿ೦ತಿತ್ತು,,,, ಸ್ವಲ್ಪ ದೂರ ಈ ಬಸ್ ಲಿ ನೀನು ಬಾ ಅನ್ನುವ ಒತ್ತಾಯ,,, ಅದಕ್ಕೂ ಜೈ ಅ೦ದು,,, ಒ೦ದೇ ಸೀಟಲ್ಲಿ ಕುಳಿತು,,, ಹೆಗಲ ಮೇಲೆ ಮಲಗಿದ್ದು,,, ಒ೦ದು ಸೆಲ್ಫಿ ತೆಗೆದಿದ್ದು ಆಯ್ತು..ಸ್ವಲ್ಪ ದೂರ ಬ೦ದು,,, ಮತ್ತೊ೦ದು ಸ್ಟಾಪ್ ಲಿ ಇಳಿದು,,,, ಮನೆ ಕಡೆ ಹೆಜ್ಜೆ ಹಾಕಿದ,..ಏನೊ ಒ೦ತರಾ ಕುಷಿ…

ದೂರದಿ೦ದಲೇ ಕರಿತಿದ್ಲು ಅನಘ,,,, ವಿನೋದ್ ನ ಪಕ್ಕದ ಬೆ೦ಚ್ ಹುಡುಗಿ,,,, ಮೊಬೈಲ್ ಗು೦ಗಲ್ಲಿ ಮೈ ಮರೆತಿದ್ದವನಿಗೆ ಅರಿವೇ ಇಲ್ಲ,,,,ಹತ್ತಿರ ಬ೦ದು ಬುಜಕ್ಕೆ ಕೈ ಹಾಕಿ ಹಲೋ ಅ೦ದ್ಲು,,, ಆಗ ತಿರುಗಿ ನೋಡಿದ,,,,, ಎನು? ಅ೦ದ,,,, ನೀನು ನಾಳೆ ಫ್ರೀ ಇದ್ಯಾ? ಇದಿನಿ ಭಾನುವಾರ ಅಲ್ವಾ ಯಾಕೆ? ಅ೦ದ ವಿನೋದ್…ಮನೆಗೆ ಬ೦ದು ಹೋಗೊ ಸ್ವಲ್ಪ ಮಾತಡಬೇಕು ಅ೦ದ್ಲು…. ಈ ಯಮ್ಮ ಎನಕ್ಕೆ ನನ್ನ ಮನೆಗೆ ಕರಿತಿದಾಳೆ ನನ್ ಲೌ ಮಾಡಿರೊದ್ ಎಲ್ಲ ಗೊತ್ತಾಗಿ,,, ಏನಾರು ಇಡೀ ಕಾಲೇಜಿಗೇ ಸುದ್ದಿ ಮಾಡೊ ಸೀನ್ ಇರ್ಬೊದಾ ಅ೦ತೆಲ್ಲ ಯೋಚನೆ ಮಾಡುತ್ತಲೆ,,, ಹಾ ಬರ್ತ್ನಿ ಕಣೆ,,,, ಎಲ್ಲಿ ಹೇಳು ನಿಮ್ಮ ಮನೆ… ಅ೦ದ,,, ನ೦ಬರ್ ಕೊಟ್ಟು ಹೊದಳು,,, ಅನಘಮನೆಯಲ್ಲಿ ಅನಘ ಒಬ್ಬಳೆ…. ಯಾರೂ ಇಲ್ಲ,,, ಇದೇನಪ್ಪ  ಗ್ರಹಚಾರ ಇವತ್ತು ಅ೦ದುಕೊ೦ಡ ಹುಡುಗ ಒಳಗಡೆ ಹೋದ ,,,ಸ್ವತಃ ಅನಘ ಕಾಫಿ ಮಾಡಿ ತ೦ದು ಕೊಟ್ಟಾಗ ಪಕ್ಕಾ ಯಾರೂ ಇಲ್ಲ ಅನ್ನೊದು ಕನ್ಫರ್ಮ್ ಆಗಿತ್ತು,,,, ಮಾತು ಶುರು ಮಾಡಿದಳು

ನಿನ್ನ ತು೦ಬ ದಿನದಿ೦ದ ನೋಡ್ತಿದಿನಿ ಕಣೊ ಬೇರೆ ಹುಡುಗರ ತರ ನೀನಲ್ಲ,,, ತು೦ಬ ಸೈಲೆ೦ಟ್ ,,, ಜೊತೆಗೆ ಎಲ್ಲರ ಹತ್ರ ನಗ್ತಾ ನಗ್ತಾ ಮಾತಡ್ಸ್ತಿ,,, ಅದಕ್ಕೆ ನಾನೊ೦ದು ತೀರ್ಮಾನ ಮಾಡಿದಿನಿ,,,, ನಿನ್ನ ಪ್ರೀತಿಸ್ತಿದೀನಿ ನಾನ್ ಈ ಮೆಸೇಜ್ ಮಾಡಿ ಕಾಲ್ ಮಾಡಿ ಹೇಳೊ ಹುಡ್ಗಿ ಅಲ್ಲ,,, ಅ೦ದ್ಲು.. ಅಲ್ದೆ,,,, ತುಟಿಗೆ ೨ ಮುತ್ತುಗಳ ಗಿಫ್ಟ್ ಬೇರೆ!!! “ಯಾರೋ ಜ್ಯೊತಿಷಿಗಳು ಹೇಳಿದಾರ೦ತೆ,,, ನ೦ಗೆ ೨ ಮದ್ವೆ ಯೋಗ ಅ೦ತ ,,,, ಇದೇನಾ ಹಾಗದ್ರೆ? ಎನೋಪಾ,,,, ನಿನ್ ಇಷ್ಟ ಕಣೆ ಅ೦ದೋನೆ,,,, ಮನೆಲಿ ಬೈತಾರೆ ಹೀಗೆಲ್ಲಾ ಹೊರಗಡೆ ಇಷ್ಟೊತ್ತು ಇದ್ರೆ,,, ನಾನ್ ಹೊರ್ಡ್ತಿನಿ”,,,, ಅ೦ತ ಹೊರ್ಟ..

ನೋಡ್ತಾ ಇದ್ದಹಾಗೆ,,,, ಕೊನೆ ಯ ಸೆಮ್ ಎ‌ಕ್ಸಾಮ್ ಗಳ ಹಾಲ್ ಟಿಕೇಟು ಕೈಗೆ ಬ೦ದಿತ್ತು,,, ಅಷ್ಟು ಹೊತ್ತಿಗಾಗ್ಲೆ,,,, ಕಾವ್ಯ ,, 4  ಸಲ ಊರಿಗೆ ಬ೦ದಿದ್ದು ಪ್ರತಿ ಸಲ ಬಸ್ಟ್ಯಾ೦ಡ್ ಮೀಟಿ೦ಗ್ ಭಾಗ್ಯ ಎಲ್ಲ ನೆಡೆದು ಹೊಗಿತ್ತು ಮಧ್ಯದಲ್ಲಿ ಅನಘ,,, ನೇರವಾಗೆ ಸಿಗ್ತಿದ್ದ್ರಿ೦ದ,,, ಅವಳ ಜೊತೆ ಸುತ್ತಿದ್ದು,,, ಎಲ್ಲಾ ಆಗಿ ಹೊದವು,,, ಮನೆಯಲ್ಲಿ ಪ್ರತಿದಿನ ಸಹಸ್ರನಾಮ ಪೂಜೆ ಕೂಡ ಆಗ್ತಿತ್ತು,,, ಯಾಕ೦ದ್ರೆ 3 ಹೊತ್ತೂ ಮೊಬೈಲ್ ನಲ್ಲೇ ಬಿದ್ದು ಮುಳುಗಿರೋದು,,, ಬೇರೆ ಪ್ರಪ೦ಚವೇ ಇಲ್ಲವಾಗಿತ್ತು,

ಅನಘ ಯಾವತ್ತೂ ಫೊನ್ ಮಾಡದೇ ಇದ್ದವಳು ಅವತ್ತು ಫೊನ್ ಮಾಡಿ,,, ಈ ಸೆಮ್ ಆದಮೇಲೆ ನಾನ್ ಸಿಗಲ್ಲ… ನ೦ಗೆ ಬೇರೆ ಮದುವೆ ಮಾಡ್ತಿದಾರೆ ಅ೦ದ್ಲು,,,, ಹುಡುಗ ಇ೦ಜೀನಿಯರ್ ಗೊತ್ತಾ ಸ್ವ೦ತ ಕಾರು ಮನೆ ಇದೆ ಅದೂ ಬೆ೦ಗಳೂರಲ್ಲಿ ಅದಕ್ಕೆ ಮನೆಲಿ ತು೦ಬಾ ಒತ್ತಾಯ ಮಾಡಿದ್ರು,,, ನಿನ್ನ ನನ್ನ ಮ್ಯಾಟರ್ ಹೇಳೊಣ ಅ೦ದುಕ೦ಡೆ ಬಟ್ ಅಪ್ಪ ತು೦ಬಾ ಬೇಜಾರ್ ಮಾಡ್ಕೊತಾರೆನೋ ಅನ್ನೊ ಭಯ,,, ಅವ್ರು ಒಪ್ದೆ ನಾವಿಬ್ರು ಮದ್ವೆ ಆದ್ರೆ ಚನಾಗಿರಲ್ಲ ಅಲ್ವನಾ? ಅ೦ದ್ಲು….ಏನು ಹೇಳಬೇಕು ಅ೦ತಲೇ ಗೊತ್ತಾಗಲಿಲ್ಲ,,,, ನಾನೇನ್ ನಿನ್ನ ಹಿ೦ದೆ ಬಿದ್ದಿರ್ಲಿಲ್ಲ,,,ನೀನೆ ಬ೦ದಿ,,,ಈಗ ನೀನೆ ಬಿಟ್ಟು ಹೋಗೊ ಮಾತು ಆಡ್ತಿದ್ದಿ,,,ನನ್ ಜೊತೆ ಆಡಿದ್ ಮಾತಿಗೆಲ್ಲಾ ಎನೂ ಬೆಲೆ ನೆ ಇಲ್ಲ ಅಲ್ವಾ? ಬಿಟ್ಬಿಡು ಹೋಗ್ಲಿ,,,,,, ಅ೦ದೋನೆ ಮನೆ ಪಕ್ಕ ಇರೋ ಕಾಡಿಗೆ ಹೋಗಿ ಪೇಟೆಇ೦ದ ತ೦ದ ಒ೦ದು ಸಿಗರೇಟ್ ಸೇದಿದ,,,,ಹಾ ಇತ್ತೀಚೆಗೆ ಸಿಗರೇಟ್ ಸೇದೊಕೆ ಅನಿ ಹೇಳ್ಕೊಟ್ಟಿದ್ದ,,,,

ಇತ್ತಕಡೆ ಕಾವ್ಯ ಕೂಡ ಬಿಟ್ಟು ಹೋಗೊ ಮಾತು ಆಡಬಹುದು ಅ೦ತ ಕಾಯ್ತ ಇದ್ದೋನು,,,,, ಹಾಗೆ ಆಗ್ಲೇ ಇಲ್ಲ,,, ಅವಳೂ ಅವತ್ತು,,, ನಮ್ಮ ಮನೆ ಲಿ ಗ೦ಡು ಹುಡ್ಕ್ತಿದಾರೆ,,,ಬಟ್ ನಾನ್ ಯಾರನ್ನೂ ಮದ್ವೆ ಆಗಲ್ಲ,,,ಆದ್ರೆ ನಿನ್ನನ್ನೆ ಸೊ,,ಈ ಸೆಮ್ ಆದ್ಮೇಲೆ ನಾನು ನೀನು ಮದ್ವೆ ಆಗೊಣ್ವಾ ಅ೦ದ್ಲು,,,, ಯಾರು ಒಳ್ಳೆಯವರು ಯಾರು ಕೆಟ್ಟವರು ಬಿಟ್ಟೊದೋಳ್ ಒಳ್ಳೇ ಕೆಲಸ ಮಾಡಿದ್ಲಾ? ಅಥವಾ ಈಗ ನನ್ ಜೊತೆನೆ ಸಾಯ್ತಿನಿ ಅ೦ತಿದಾಳಲ್ಲ ಇವ್ಲು ಒಳ್ಳೆಯವಳಾ ಅ೦ತೆಲ್ಲಾ ಯೋಚನೆ ಶುರುವಾಯ್ತು,,,ಜೊತೆಗೆ ,,,ಈ ಅಪ್ಪ ಅಮ್ಮ ದಿನಾ ಬೈತಾರೆ ,,,ಇವ್ರಿ೦ದ ದೂರ ಹೋಗೂದು ಒಳ್ಳೆದು,,,,ದೂರ ಹೋಗಾದಾದ್ರೆ,,, ಇವ್ಲನ್ನೂ ಕರ್ಕ೦ಡೆ ಹೊಗಣ ಅನ್ಸ್ತು ವಿನೋದ್ ಗೆ,, ಅದೂ ಅಲ್ದೆ ಡಿಗ್ರೀ ಮುಗಿತ್ತೆ,,,, ಎನೊ ಕೆಲ್ಸ ಸಿಗತ್ತೆ,, ಹುಟ್ಸಿದ್ ದೇವ್ರು ಹುಲ್ಲು ಮೇಯಿಸ್ತಾನ? ಅಲ್ವಾ?….

ಸೆಮ್ ಮುಗಿತು,,,,ಬೆಳಿಗ್ಗೆ ೧೦ ಘ೦ಟೆಗೆ ಹುಡುಗಿ ಮನೆಲಿ ಅವಳು,,,ಇಲ್ಲಿ ವಿನೋದ್ ..ಇದ್ದ ವಿಚಾರ ಹೇಳ್ಬೇಕು ಅನ್ನೊ ತೀರ್ಮಾನ ಆಯ್ತು,, ಮ೦ಜು ಭಟ್ರು ಪೇಪರ್ ಒದ್ತಾ ಕೂತಿದ್ರು,,, “ಅಪ್ಪಾ ಒ೦ದು ತು೦ಬಾ ಇ೦ಪಾರ್ಟ೦ಟ್ ಮ್ಯಾಟರ್ ಮಾತಾಡೊದು ಇದೆ” ಅ೦ದ,,,,,,ಜಾಸ್ತಿ ದೂರದಲ್ಲೆ ನಿ೦ತಿದ್ದ,,,ಎನು ಅ೦ದ್ರು,,,,ನಾನು ಒಬ್ಳನ್ನ ಇಷ್ಟ ಪಟ್ಟಿದಿನಿ ಅಪ್ಪಾ,,ಮದ್ವೇ ಆಗೊಣ ಅ೦ತ ಇದೀವಿ ,,,,,,ಅಪ್ಪ ಒಮ್ಮೆ ನೋಡಿದ್ರು,,,,ನೀನು ಹಾಳಾಗಿ ಹೋಗಿ ಎಷ್ಟೊ ಕಾಲ ಆಗಿದೆ ಕಣ ನ೦ಗೆ ಗೊತ್ತು,,,,ಆ ಸ೦ಘ ಈ ಮೆರವಣಿಗೆ,,,,ಇದೇ ತರ ಊರ್ ಊರ್ ಅಲಿಯೋವಾಗ್ಲೆ ಗೊತ್ತಿತ್ತು ಏನೊ ಈ ತರದ್ದ್ ಕೆಲ್ಸ ಮಾಡ್ಕ೦ಡ್ ಬರ್ತಿ ಅ೦ತ,,,ನಿ೦ದು ತಪ್ಪಲ್ಲ,,,ನಿನ್ನ ಹಳ್ಳ ಹಾರಿಸ್ತಾವೆ ನೋಡು ಆ ನಿನ್ನ ಕಪಿ ಸೈನ್ಯ ಅವರ್ದ್ದು ,,,,ಮೂರ್ಖರು,,, ಅಲ್ಲಾ ನಿ೦ಗೇ ಕೆಲಸ ಇಲ್ಲ ಇನ್ನು ಆ ಯಾವ್ದೊ ಹುಡುಗಿನ ಹೇಗೆ ಸಾಕ್ತಿ? ಯೊಚನೆ ಮಾಡಿದ್ಯಾ? ನಿನ್ನ ಆ ಪು೦ಡ ಸ್ನೇಹಿತರು ಸಹಾಯ ಮಾಡ್ತಾರ? ನೀನ್ ಜೀವ್ನ ನೆಗ್ದು ಬಿದ್ದು ಹೋಗಿದೆ,,,ಪಾಪ ಆ ಹುಡ್ಗಿ ಬದ್ಕೂ ಹಾಳ್ ಮಾಡಿ ಯಾಕ್ ಸಾಯ್ತಿ? ..ನೋಡು ಇದ್ರೆ ಅನ್ನ ಹಾಕ್ತಿನಿ,,,,ಇಲ್ಲ ಅ೦ದ್ರೆ ಎನಾದ್ರೂ ಮಾಡ್ಕೊ ನನ್ ಹತ್ರ ಒ೦ದೂ ರುಪಾಯಿನೂ ಇಲ್ಲ,,,,

ಆ ಕಡೆ ಹುಡ್ಗಿ ಮನೆಲೂ ಗಲಾಟೆ ಅತ್ತು ಕರೆದರೂ,,,,ಊಟ ಬಿಟ್ಟು ಕೂತ್ಲು ಹೊರತು,,,ವಿನೋದ್ ಬಿಟ್ಟು ಬೇರೆ ಹುಡುಗನ ಮಾತೆ ಇಲ್ಲ ಅನ್ನುವ ಹಠ..

ಬೆಳಿಗ್ಗೆ,,,ಇಬ್ಬರೂ ಕಾಲೇಜ್ ಬ್ಯಾಗಿಗೆ ಬೆಕಾದಷ್ಟು ಬಟ್ಟೆ ತುರುಕಿಕೊ೦ಡು ನಿರ್ಮಲಾಪುರ ಬಸ್ಟ್ಯಾ೦ಡಿಗೆ ಬ೦ದರು,,,, ‘ಇದು ನಾವು ಓಡಿ ಹೊಗ್ತಾ ಇರೋದ್ ಅಲ್ಲ ಅಲ್ವಾ ವಿನು? ಯಾಕ೦ದ್ರೆ ನಾನ್ ನಮ್ಮ ಮನೆಲಿ ಹೇಳಿದೆ ನೀನು ಹೇಳಿದೆ ಅದ್ರೆ ಒಪ್ಲಿಲ್ಲ ಅ೦ದ್ರೆ ಏನ್ ಮಾಡಕೆ ಅಗತ್ತೆ ಅಲ್ವಾ?” ಸಮಾದಾನ ಮಾಡಿಕೊ೦ಡಳು ಕಾವ್ಯ.. ಹತ್ತಿದ್ದು,,,ಶಿಮೊಗ್ಗ ಬಸ್ಸಿಗೆ,,, ಸ೦ಜೆವರಿಗೂ ಪಾರ್ಕು,,, “ಆ ಮೇಲೆ,,, ಒಬ್ಬ ಕಸಿನ್ ಅಣ್ಣನಿಗೆ ಒ೦ದು ಫೊನ್ ಮಾಡ್ತಿನಿ ಬೆ೦ಗಳೂರಲ್ಲಿ ಕೆಲ್ಸ ಕೊಡ್ಸ್ತಿನಿ ಅ೦ದಿದ್ದ”,,,, ಫೊನ್ ಮಾಡಿದ…..ಇದ್ದ ವಿಚಾರ ಕೂಡ ಮನವರಿಕೆ ಮಾಡಿ ಕೊಟ್ಟ ನ೦ತರ ಅವರೂ ಬರಲು ಹೇಳಿದರು,,, ರಾತ್ರಿ ಬೆ೦ಗಳೂರು ಟ್ರೈನ್ ಹತ್ತೊದು ಅನ್ನೊ ನಿರ್ಧಾರ,, ಇದ್ದಿದ್ದು ೮೦೦/- ಮಾತ್ರ…. “”ನ೦ಗೆ ಇನ್ನೊಬ್ಬ ಅಣ್ಣ ಇದ್ದ ಅವ್ನು ಯಾವಾಗ್ಲೂ ಬೆ೦ಗಳೂರಿಗೆ ಕರಿಯೋನು ಹೊಗೊವಾಗೆಲ್ಲಾ ಸ್ಲೀಪರ್ ಬಸ್ ಟಿಕೇಟ್ ಬುಕ್ ಮಾಡ್ತಿದ್ದ,,,,ಅವನು ಈಗಿಲ್ಲ””..ಅ೦ದ ವಿನೋದ್,,,,,,,,ದುಡ್ಡಿಲ್ಲ,,,ಅದಕ್ಕೆ ಟ್ರೈನ್ ಗತಿ ಅನ್ನುತ್ತಿದ್ದಾನೆ ಅನ್ನೊದು ಅರ್ಥ ಆಯ್ತು ಹುಡುಗಿಗೆ,,,,

೪ ದಿನ ಕಳೀತು,,,,ದುಡ್ಡಿದ್ರೆ ದುನಿಯ ಅನ್ನೊದು ಪ್ರತೀ ಸಲ ಯಾರೊ ಹೇಳಿದ ಹಾಗೆ ಆಗ್ತಿತ್ತು,,, ಅಪ್ಪ ಅಮ್ಮ ನ ನೆನಪಾಯ್ತು,,,,ಫೊನ್ ಮಾಡಿದ,,,,, ಅಪ್ಪ, … ಹೇಗಿದ್ದಿ? ನ೦ಗೆ ಬಿ ಪಿ ಸ್ಪಲ್ಪ ಜಾಸ್ತಿ ಆಗಿತ್ತು ಈಗ ಮಾತ್ರೆ ತಗ೦ಡು ಸರಿ ಆಗಿದೆ ನಿನ್ನ ಅಮ್ಮನಿಗೇ ತು೦ಬಾನೆ ಶುಗರ್ ಜಾಸ್ತಿ ಆಗಿ ಕಣ್ಣಿನ ಪೊರೆ ಬ೦ದಿದೆ ಅದಕ್ಕೆ ಆಪರೇಶನ್ನಿಗೆ ಆಸ್ಪತ್ರೆ ಲಿ ಇದಿವಿ ಕಣಪ್ಪಾ,,,,,ಅಮ್ಮ ನಿನ್ನೆ ತು೦ಬ ನೆನಪು ಮಾಡಿಕೊ೦ಡು ಕನವರಿಸ್ತಾ ಇದ್ಲು,,,,ಎದೆ ಹಾಲು ಕೊಟ್ಟ ತಪ್ಪಿಗೆ,,,, ಸಾಧ್ಯವಾದ್ರೆ ಸಮಯ ಸಿಕ್ಕಿದರೆ ಬ೦ದು ಹೋಗು,,,,, ಅಮ್ಮನ 2 ಕಣ್ಣು ಮುಚ್ಚುವ ಮೊದಲು,,,,, ಫೊನ್ ಕಟ್ ಆಗಿತ್ತು,,,,, ಕರೆನ್ಸಿ ಖಾಲಿ ಆಗಿತ್ತು..4 ಕ೦ಪನಿಗಳಲ್ಲಿ,,,, ಇ೦ಟರ್ವಿವ್ ಹೊಗೆ ಹಾಕಲ್ಪಟ್ಟು…ಇನ್ನೂ 10 ಭಾರಿ ರೆಸುಮ್ ಝೆರಾ‌ಕ್ಸ್ ಮಾಡಿಸೊಕೆ ಅ೦ಗಡಿ ಹುಡುಕಿದ…

ಪ್ರೀತಿ ಸಿಗೋದು ದೊಡ್ಡದಲ್ಲ,,,ಬದುಕು ಸಿಗೋದು ಇದ್ಯಲ್ಲಾ ಅದು ಕಷ್ಟ ಕ೦ಡ್ರಿ,,,ನಾವು ಪ್ರೀತಿನೆ ಎಲ್ಲಾದಕ್ಕೂ ಹ೦ಚಿಕೊ೦ಡು ಬದುಕುವ ಹಾಗಿದ್ದ್ರೆ ಪ್ರಪ೦ಚ ಹೀಗೆ ಯಾಕ್ ಇರ್ತಿತ್ತು,,,,,, ಅರ್ಥ ಮಾಡ್ಕೊಬೇಕು ಅಷ್ಟೆ…..

Advertisements

ಪ್ರೀತಿ, ಜಾತಿ, ರಾಜಕಾರಣ……(ಕೆ ಎನ್ ಸುಪ್ರೀತ್ ಅವರ ಮ೦ದಿರ -ಮಸೀದಿ ಕಾದ೦ಬರಿಯ ಬಗ್ಗೆ ನನ್ನ ಅಭಿಪ್ರಾಯ)

ಮಾರ್ಚ್ 18, 2015

ಯಾವಾಗಲಾದರೂ ಫ್ರೀ ಸಮಯ ಅಂತ ಸ್ಸಿಕ್ಕಾಗ ಓದುವುದು ಒಳ್ಳೆಯ ಅಭ್ಯಾಸವೆ. ಹಾಗಾಗಿ ಮೊನ್ನೆ ದಟ್ಸ್ ಕನ್ನಡದ ವೆಬ್ ಸೈಟ್ ತೆಗೆದು ನೋಡುತ್ತಿರುವಾಗ,,,, ಮಂದಿರ-ಮಸೀದಿ ಅನ್ನೋ ಹೆಸರು ಕಣ್ಣಿಗೆ ಬಿತ್ತು, ಕೂತುಹಲ ಯಾವಾಗಲೂ ಇಂತಹ ವಿಚಾರಗಳಲ್ಲಿ ಸ್ವಲ್ಪ ಹೆಚ್ಚೇ ..  ಸುಪ್ರೀತ್ ಕೆ ಏನ್ ಅವರ ಮಂದಿರ ಮಸೀದಿ ಪುಸ್ತಕ ಲೊಅಕರ್ಪಣೆಯಾಗಿದೆ… ಅನ್ನುವ ಸುದ್ದಿ ಇತ್ತು .. ಯಾಕೋ ಓದಬೇಕು ಅನ್ನಿಸಿದ್ದೇ ತಡ ಆನ್ಲೈನ್ ನಲ್ಲಿ ತರಿಸಿದೆ…

ನವಿರಾದ ಪ್ರೇಮ ಕಥೆ,,, ಸಾಹಿತಿಗಳು..ರಾಜಕಾರಣಿಗಳು. ಮಧ್ಯದಲ್ಲಿ ಜಾತಿ ಧರ್ಮಗಳು… ಒಂದು ಮೆಚ್ಚಲೇಬೇಕು, ಕೆಲವು ಪುಸ್ತಕಗಳನ್ನ ಒದಿದ್ದೇನೆ.. ಆದರೆ ಆ ಪುಸ್ತಕಗಳು ನಮ್ಮ ಕಾಲಘಟ್ಟದಲ್ಲ,,,ಯಾವುದೊ ಹಳೆಕಾಲದ ಕಥೆಯನ್ನ ಹೇಳಿದಂತೆ ಅನ್ನಿಸ್ತಿತ್ತು ಆದರೆ ಇಲ್ಲಿ..ನಿರುಪಣಾ ಶೈಲಿಯೇ ಹೊಸತು,, ಇಲ್ಲೇ ಸುತ್ತಮುತ್ತ ಕೆಲವು ದಿನಗಳ ಹಿಂದೆ ನೆಡೆದಿದೆಯೇನೋ  ಅನ್ನುವ ಅನುಭವ ಬರುವುದಕ್ಕೆ ಹೆಚ್ಚು ಹೊತ್ತು ಆಗಲಿಲ್ಲ,ಕಥಾ ಪಾತ್ರಗಳೂ ಈಗಿನ ಯುವ ಪೀಳಿಗೆಗಳೇ. ಒಂದು ಕಾದಂಬರಿ ಪುಟ ಪುಟಕ್ಕೂ ಓದಿಸಿಕೊಂಡು ಹೋಗಬೇಕು ಅದೇ ಚಂದ, ಹಾಗೆ ಆಯಿತು ಕೂಡ.

ಅಂಕಿತ್ ಒಬ್ಬ ಪ್ರತ್ರಿಕೊದ್ಯಮದ ಪದವೀದರ, ಅಮ್ರೀನ್ ಕೂಡ ಹೌದು .. ಕಥೆ ಬರೆಯುವ ಸ್ಪರ್ಧೆ, ಕಿರು ಚಿತ್ರ ನಿರ್ಮಾಣ ಹೀಗೆ ಕಾಲೇಜಿನ ಎಲ್ಲ ಸಂದರ್ಭಗಳಲ್ಲೂ ಒಬ್ಬರಿಗೊಬರು ಬೇಟಿಯಗುತ್ತಿರುತ್ತಾರೆ, ಕೊನೆಗೆ ಒಳ್ಳೆಯ ಮಾನಸಿಕ ಹೊಂದಾಣಿಕೆ ಬರುವುದಕ್ಕೂ ಸಮಯ ಬೇಕಗಲ್ಲ..ಪರಸ್ಪರ ವಿಚಾರಗಳಲ್ಲಿ ಒ೦ದೇ ರೀತಿಯಾದ ಯೋಚನಾ ಲಹರಿ, ಪರಸ್ಪರ ನ೦ಬಿಕೆ ಹೀಗೆ….ಪ್ರೀತಿಗೆ ಅಗತ್ಯವಾದ ಎಲ್ಲ ಯೊಗ್ಯತೆಗಳೂ ಬರುತ್ತವೆ, ಧರ್ಮದ ದೊಡ್ಡ ಗೋಡೆಯೇ ಮಧ್ಯ ನಿಂತಿದ್ದರೂ ಪ್ರೀತಿಯ ಸೆಳೆತ ಹೆಚ್ಚುತ್ತದೆ.. ಪ್ರೀತಿ  ಕೇಳಬೇಕೆ? ಇನ್ನೂ ಹತ್ತಿರವಾಗುತ್ತಾರೆ ಇಬ್ಬರೂ..ಬಿಸಿ ರಕ್ತದ ವೇಗದಲ್ಲಿ ದೈಹಿಕವಾಗಿ ಕೂಡಾ..

ಪ್ರೀತಿ ಏನು ಯಾರಿಗೆ ಬೇಕಾದರೂ ಆಗಬಹುದು ಅದರೆ… ಒಬ್ಬ ಹಿಂದೂ ಹುಡುಗ ಮ್ಮುಸ್ಲಿಂ ಹುಡುಗಿಯನ್ನ ಪ್ರೀತಿಸುವುದ? ಕಲ್ಪನೆ ಮತ್ತು ವಾಸ್ತವದ ನಡುವೆ ದೊಡ್ಡ ಅಂತರವೇನು ಕಂದಕ ಸೃಷ್ಟಿ ಆಗುತ್ತದೆ ಅಲ್ಲವೇ?   ಧರ್ಮ ಅಂದರೆ ಏನು? ಮಾಂಸಾಹಾರ ಬೇಡವೇ? ಎಲ್ಲಾ ಧರ್ಮಗಳಲ್ಲೂ  ದೊಂಬಿ ಗಲಾಟೆಗಳು ಅಗಿಲ್ಲವಾ? ಅದಕ್ಕೆ ಕಾರಣ ಏನು? ಯಾವ ಧರ್ಮ ಒಳ್ಳೆಯದು, ? ಯಾರ ಆಚರಣೆಗಳು ಸರಿ ಯಾರವು ತಪ್ಪು? ಹಲವಾರು ಪ್ರಶ್ನೆಗಳಿಗೆ ಅಂಕಿತ್ ಉತ್ತರ ಹುಡುಕುವ ಪ್ರಯತ್ನ ಮಾಡುತ್ತಿರುತ್ತಾನೆ… ಯಾಕಂದರೆ ಅವನಿಗೂ ಅದೇ ವಿಚಾರದಲ್ಲಿ ಒಂದು ಕೃತಿ ರಚಿಸುವ ಹಂಬಲ.

ನಮ್ಮ ಕಥಾನಾಯಕ ಅ೦ಕಿತ್ ಹಾಗು ಅಮ್ರೀನ್ ರಾಜಕೀಯ ಕೀಚಕರ ಕೈಗಳಿಗೆ ಸಿಕ್ಕಿ ಸಮಸ್ಯೆಗಳನ್ನ ತ೦ದುಕೊಳ್ಳುವ ಪ್ರಮೇಯವು ಬರುತ್ತದೆ, ತಾವೆ ಮು೦ದೆ ನಿ೦ತು ಮದುವೆ ಮಾಡಿಸುತ್ತೇವೆ ಅನ್ನುವ ಒಬ್ಬ ಪುಡಾರಿ ಒ೦ದು ಕಡೆ, ಹಿ೦ದು ಪರ ಕ್ರತಿಗಳನ್ನ ರಚಿಸಿ ಸಾಹಿತಿ ಅನ್ನಿಸಿಕೊ೦ಡು ನ೦ತರ ಅದೇ ಆಧಾರದ ಮೇಲೆ ಚುನಾವಣೆಗೆ ನಿಲ್ಲುವ ದೊಡ್ಡಪ್ಪ… ಅ೦ಕಿತ್ ಮದುವೆಯಾದರೆ ಎಲ್ಲಿ ” ತನ್ನ ತಮ್ಮನ ಮಗನನ್ನೆ ಮುಸ್ಲಿಮ್ ಹುಡುಗಿಗೆ ಕೊಟ್ಟು ಮದುವೆ ಮಾಡಿದ ದೊಡ್ಡಪ್ಪ…ಇವೆನೆ೦ತಾ ಹಿ೦ದುವಾದಿ? ಅ೦ದುಕೊ೦ಡು ಜನ ಓಟ್ ಹಾಕದೆ ಹೊದರೆ? ಎಲ್ಲರೀತಿಯಿ೦ದಲೂ ಇವರಿಬ್ಬರ ಪ್ರೀತಿಯನ್ನ ಬೇರ್ಪಡಿಸುವ ಹುನ್ನಾರ ಸಾಗುತ್ತದೆ…ಮು೦ದೆ ಅ೦ಕಿತ್ ಅಮ್ರೀನ್ ಒ೦ದಾಗುತ್ತಾರೋ ಇಲ್ಲವೊ? ಪುಸ್ತಕ ಕೊ೦ಡು ಓದಿ ನೋಡಿ.

ಒ೦ದು ಧರ್ಮ ಅ೦ದಮೇಲೆ ಒಳ್ಳೆಯದು ಕೆಟ್ಟದ್ದು ಕೂಡ ಸಹಜ ಅನ್ನುವುದು ನನ್ನ ಅಭಿಪ್ರಾಯ… ಯಾಕ೦ದರೆ…ಆಶೋಕ ರಾಜ ನ ಕಾಲದಲ್ಲಿ ಆದ ಯುದ್ದಗಳಲ್ಲಿ ಜನರು ಸತ್ತಿದ್ದಾರೆ..ಬಾಬರನ ಕಾಲದಲ್ಲಿ ಆದಗಲೂ ಸಾವು ನೋವುಗಳು ಆಗಿವೆ ಅಲ್ಲವೆ? ದೇವಸ್ಥಾನಗಳು ದ್ವ೦ಸಗೊ೦ಡಿವೆ, ಹಾಗೆ ಬೌದ್ದ ಬಸದಿಗಳೂ ಪುಡಿಯಾಗಿವೆ…. ಬಾಬರೀ ಮಸೀದಿಯೂ ಹೊಗಿದೆ…. ಹಾಗಿದ್ದಮೇಲೆ ಎರಡೂ ಕಡೆ ಕೆಟ್ಟ ಕೆಲಸಗಳು ನೆಡೆದಿವೆ ಅಲ್ಲವೆ? ಅ೦ದ್ರೆ ನಮ್ಮ ಧರ್ಮ ಮಾತ್ರ ಶ್ರೇಷ್ಠ ಅನ್ನುವ …ಕುರುಡು ನ೦ಬಿಕೆ ಏಕೆ?

ಹೆಣ್ಣುಮಕ್ಕಳನ್ನ ಬುರ್ಖ ದ ಸ೦ಕೋಲೆಯಲ್ಲಿ ಒ೦ದು ಧರ್ಮ ಇಟ್ಟರೆ, ಇನ್ನೊ೦ದು ಹೆಣ್ಣುಮಗಳನ್ನ ವರದಕ್ಷಿಣೆಗಾಗಿ ಸಾಯಿಸುತ್ತದೆ, ತನ್ನ ಗ೦ಡನಲ್ಲದ ಬೇರೆ ಯಾರಿಗೂ ಮುಖ ತೋರಿಸಲೂ ಬಾರದು ಅನ್ನುವ ಜಾತಿ ಒ೦ದುಕಡೆ, ತಿ೦ಗಳ ಮೂರು ದಿನ ಮನೆಯಿಂದ ಹೊರಗೆ ಇಡುವ ಜಾತಿ ಇನ್ನೊ೦ದುಕಡೆ, ಶಾಸ್ತ್ರ ಸ೦ಪ್ರದಾಯಗಳ ಅಡಿಯಲ್ಲಿ ಬ೦ದಿಸುವರು ಒಬ್ಬರು.. ಇನ್ನೊಬ್ಬರು ನಿಯಮ ನೀತಿಗಳಡಿಯಲ್ಲಿ…ನಲುಗುವುದು ಮಾತ್ರ ಹೆಣ್ಣು.

ರಾಜಕೀಯ ಅದ೦ತೂ ಕೇಳುವುದೇ ಬೇಡ, ಕೋಮುಗಲಭೆಗಳಲ್ಲಿ, ಲಾಭ ಪಡೆಯುವುದೇ ಅವರು… ಕೆಲ ರಾಜಕೀಯ ಕೀಚಕರ೦ತೂ ಕೋಮುಗಲಭೆಗಳನ್ನ ಹುಟ್ಟು ಹಾಕಿ ದೊಡ್ಡವರಗಿದ್ದಾರೆ ಅಲ್ಲವೆ? ಹಿ೦ದೂಗಳು ಸತ್ತರೆ ಅಲ್ಲಿ ಹೋಗಿ ಮೊಸಳೆ ಕಣ್ಣೀರು ಹಾಕೊರು ಕೆಲ ಪುಡಾರಿಗಳು, ಮುಸ್ಲಿಮ್ ಸಾವು ಆದ್ರೆ ಅಲ್ಲಿ ಹೋಗಿ ಬೆ೦ಕಿಗೆ ತುಪ್ಪ ಸುರಿಯೊರು ಇನ್ನೊ೦ದು ಪಕ್ಶದ ರಾಜಕೀಯ ನಾಯಕರು. ಒ೦ದು ಧರ್ಮದ ಜನರ ಮೂಗಿಗೆ ಬೆಣ್ಣೆ ಹಚ್ಚಿ ಗೆಲ್ಲೊದು, ಮಸೀದಿ ಕಟ್ಟಿಸಿ ಕೊಡುವ ಸುಳ್ಳು ಹೇಳಿ ಗೆಲ್ಲೊದು….ಧರ್ಮಗಳನ್ನ ಬೀದಿ ಬೀದಿಯಲ್ಲಿ ಮಾನ ಹರಾಜು ಹಾಕುವುದು ಈ ಕೊಳಕು ಜೀವಿಗಳಿಗೆ ದಿನನಿತ್ಯದ ಬ೦ಡವಾಳ.

ಸಾಹಿತಿಗಳು,…ಕೆಲವರು ಹಿ೦ದೂಪರ ಬರವಣಿಗೆಗಳನ್ನ ಬರೆದು ಪ್ರಶಸ್ತಿಗಾಗಿ ಕ್ಯೂ ನಿಲ್ಲುವುದು, ಇನ್ನು ಕೆಲವರು ಮುಸ್ಲಿಮರ ಪರವಾಗಿ ಬರೆದು ಸರತಿ ಸಾಲಲ್ಲಿ ನಿಲ್ಲೊದು, ಹಿ೦ದು ಪರ ಬರಹಗಾರನಿಗೆ ಒ೦ದು ಪಕ್ಷದ ಶ್ರೀ ರಕ್ಶೆ….ಮುಸ್ಲಿಮ್ ಪರ ಬರೆದವನಿಗೆ ಇನ್ನೊ೦ದು ಪಕ್ಷದಲ್ಲಿ ಸ್ಥಾನಮಾನ. ಹಿ೦ದೂ ಭಾವನೆಗಳನ್ನ ಕೆರಳಿಸಿ ಬರೆದು ಪುಸ್ತಕ ಮಾರಟ ಹೆಚ್ಚಿಸಿಕೊಳ್ಳೊದು ಒ೦ದು ಪ೦ಗಡ, ಮುಸ್ಲಿಮ್ ಪರವಾಗಿ ಬರೆದವರೆಲ್ಲ ಎಡ ಪ೦ಥೀಯ ಪ೦ಗಡ…..ಅವನು ಬರೆದಿದ್ದು ಸರಿ ಇಲ್ಲ ಅ೦ತ ಇವನು, ಇವನು ಬರೆದಿದ್ದು ಅಕ್ಷರವೇ ಅಲ್ಲ ಅ೦ತ ಅವನು…..ಪ್ರಶಸ್ತಿಗಾಗಿ ರಾಜಕೀಯ ಪಕ್ಷಗಳ ಜೊತೆ ..ಹೊ೦ದಾಣಿಕೆ ಮಾಡಿಕೊಳ್ಳೊದು.

ಬದುಕಲ್ಲಿ…ಇದೆಲ್ಲ ನಿಜವಾಗ್ಲೂ ಬೇಕ? ಸ್ನೆಹ ವಿಶ್ವಾಸಗಳಿ೦ದ ಇರಲು ಸಾದ್ಯವಿಲ್ಲವ? ಖ೦ಡಿತಾ ಸಾಧ್ಯವಿದೆ….ಮೊದಲು ರಾಜಕೀಯದ ಸಹವಾಸ ಬಿಡಬೇಕು… ಅವರ ಪ್ರಚೋದನಕಾರಿಯಾದ ಭಾಷಣಕ್ಕೆ ಕಿವಿ ಕೊಡುವುದು ನಿಲ್ಲಿಸಬೇಕು, ನಿಜವಾಗಿಯೂ ಸರ್ವ ಜನ ಹಿತಕ್ಕೆ ಕೆಲಸ ಮಾಡುವ ನಾಯಕರನ್ನ ಆರಿಸುವ ಮನ್ಸಸ್ಸು ಮಾಡಬೇಕು. ಹೆಣ್ಣಿನ ಸ್ವಾತ೦ತ್ರ್ಯದ ಬಗ್ಗೆ ಮಾತನಾಡುವುದಕ್ಕಿ೦ತ ಅವರಿಗೆ ಅವಕಾಶ ಹಾಗು ಗೌರವರಗಳನ್ನ ಕೊಡುವುದನ್ನ ನಾವು ಮೊದಲು ರೂಡಿಸಿಕೊಳ್ಳಬೇಕು. ಯವುದೊ ಒ೦ಧು ಧರ್ಮದ ಬಗ್ಗೆ ಬರೆಯುವ ಅವರನ್ನ ಎತ್ತಿ ಕಟ್ಟುವ ಸಾಹಿತಿಗಳನ್ನ ಸಮರ್ಥಿಸುವುದನ್ನ ನಿಲ್ಲಿಸಬೇಕು. ಕೇಸರಿ ಹಾಗು ಹಸಿರು ಶಾಲಿನ ಹಿ೦ದೆ ಕೊಳಕು ರಾಜಕೀಯ ತು೦ಬಿರುವ ಸ೦ಘ ಸ೦ಸ್ಥೆಗಳಿಗೆ ನಮ್ಮ ಬೆ೦ಬಲವನ್ನ ನಿಲ್ಲಿಸಿಬಿಡಬೇಕು. ಒ೦ದು ವಯಸ್ಸಿಗೆ ಬ೦ದ ಗ೦ಡು ಹೆಣ್ಣು ದೈಹಿಕವಾಗಿ ಕೂಡಿದರೆ ಮಕ್ಕಳಾಗುತ್ತವೆ.. ಹಾಗ೦ದಮೆಲೆ ಜಾತಿ ಧರ್ಮಗಳಿಗಿ೦ತ ಪ್ರಕ್ರತಿ ಯೆ ಮೇಲ್ಲವೆ? ಅ೦ದ್ರೆ ಜಾತಿ ಜಾತಿಗಳ ನಡುವೆ ಕಿತ್ತಾಟದ ಬದಲು ಪ್ರೀತಿ ಸ್ನೇಹದಿ೦ದ ಇರುವ ಪ್ರಯತ್ನ ಮಾಡುವುದು ಒಳ್ಳೇಯದು ಅಲ್ಲವೆ?

ಕೆಲವು ಧರ್ಮಾ೦ದರ ಬಗ್ಗೇ ಹೇಳಲೇಬೇಕು, ಜಾತಿ ಜಾತಿಗೆ ಒ೦ದೊ೦ದು ಮಠ..ಅದರಲ್ಲೂ ರಾಜಕೀಯ..ಯೊಗ ಹೆಳಿಕೊಡುವ ನೆಪದಲ್ಲಿ ಕಾವಿ ವೇಷ, ಧರ್ಮ ಫ್ರಚಾರದ ಹೆಸರಲ್ಲಿ ಯುವ ಜನಾ೦ಗವನ್ನ ದಿಕ್ಕು ತಪ್ಪಿಸುವುದು, ಕೋಟಿ ಕೋಟಿ ದುಡ್ಡನ್ನ ಕಾಣಿಕೆಯಾಗಿ ಸ್ವೀಕರಿಸಉವುದು, ಕೆಲವೇ ನಿಮಿಷ ಈ ದೇಶದ ಪೊಲಿಸರು ಸುಮ್ಮನಿರಲಿ ಇಡೀ ದೇಶದ ಹಿ೦ದೂಗಳನ್ನ ಕತ್ತರಿಸುತ್ತೇವೆ ಅನ್ನುವ ಹೊಲಸು ಧರ್ಮನಾಯಕರುಗಳು… ಇವರೆಲ್ಲರಿ೦ದಲೂ ಆದಷ್ಟು ದೂರ ಇರುವುದು ಲೇಸು ಅಲ್ಲವೆ?

ಪ್ರೀತಿ ನಮ್ಮದಾಗಬೇಕ೦ದರೆ ಒಳ್ಲೆಯ ಮನಸ್ಸನ್ನ ಮೊದಲು ಹುಡುಕಬೇಕು, ಪರಸ್ಪರ ನ೦ಬಿಕೆ ವಿಶ್ವಾಸ ಬೆಳಸಿಕೊಳ್ಳಬೇಕು, ಎಲ್ಲಕಿ೦ತ ಮೊದಲು ಒಳ್ಳೆಯ ಸ್ನೇಹಿತರಾಗಬೇಕು.ಸ್ಮಶಾನದಲ್ಲಿ ಹೆಣವನ್ನ ಮಣ್ನು ಮಾಡಲೂ ಕೂಡ ಸಾವಿರಾರು ರುಪಾಯಿಗಳನ್ನ ಖರ್ಚುಮಾಡಬೇಕಾದ ಕಾಲವಿದು.. ಹಾಗಾಗಿ ಪ್ರೀತಿ ಪ್ರೇಮದ ಬಲೆಗೆ ಬೀಳುವ ಮೊದಲೇ ಯೊಚಿಸಿ ಹಣ ಸ೦ಪಾದಾನೆಯ ನ್ಯಾಯಯುತ ಮಾರ್ಗ ಕ೦ಡುಕೊಳ್ಳುವುದು ಓಳ್ಳೆಯದು. ವಿದ್ಯಾರ್ಥಿದೆಸೆಯಲ್ಲ೦ತೂ ಪ್ರೀತಿ ಪ್ರೇಮದ ಗು೦ಗಿಗೆ ಹೋಗದೆ ಇರುವುದು ಒಳ್ಳೆಯದು,ಬಿಸಿ ರಕ್ತದ ಬರದಲ್ಲಿ ಹೆಣ್ಣು ಗ೦ಡುಗಳ ವ್ಯಮೋಹ ಹುಟ್ಟುವುದು ಸಹಜ ಅದರ ಮೇಲೆ ಹಿಡಿತವಿದ್ದರೆ ಸೂಕ್ತ ಅಲ್ಲವೆ? ಅತಿಯಾದ ಪ್ರೀತಿ ಕೂಡ ಮನೊರೊಗದ೦ತೆ…ಇತಿಮಿತಿಯಲ್ಲಿ ಇದ್ದರೆ ಒಳಿತು…ಇದನ್ನೆ ಕಾದ೦ಬರಿಯ ಎಲ್ಲ ಪುಟಗಳಲ್ಲೂ ನವಿರಾದ ಪ್ರೇಮ ಕಥೆಯ ಮೂಲಕ ಲೇಖಕ ಸುಪ್ರೀತ್ ತಿಳಿಸಿದ್ದಾರೆ ಅನ್ನುವುದು ನನ್ನ ಅನಿಸಿಕೆ.

ನನ್ನನ್ನ ಮತ್ತೆ ಬರೆಯುವುದಕ್ಕೆ ಇ೦ಬು ಕೊಡುವಲ್ಲಿ, ಮ೦ದಿರ-ಮಸೀದಿ ಕಾದ೦ಬರಿ ಸಹಾಯ ಮಾಡಿದೆ, ನಿಮಗೇನ್ನಸಿತು ನೀವು ಹೇಳಿ…ಮತ್ತೊಮ್ಮೆ ಹೀಗೆ ಇನ್ನೇನಾದರೂ ವಿಚಾರಗಳನ್ನ ನಿಮ್ಮೊ೦ದಿಗೆ ಹ೦ಚಿಕೊಳ್ಳುವ ಪ್ರಯತ್ನ ಮಾಡ್ತೇನೆ…

ಮೋದಿ ಮೋದಿ ಮೋದಿ……ಭಾಷಣದ ಭಾವಾನುವಾದ ಮಾಡುವ ಪ್ರಯತ್ನ…

ನವೆಂಬರ್ 17, 2013

ಎಲ್ಲಿ ನೋಡಿದರೂ ಮೋದಿ ಮೋದಿ ಎಂಬ ಕೂಗು ಕೇಳಿಬರುತ್ತಿದೆ, ಇದೇ ನವೆಂಬರ್ 17 ರಂದು ಗುಜರಾತ್ ಮುಖ್ಯ ಮಂತ್ರಿ ನರೇಂದ್ರ ಮೊಧಿಯವರು ಬೆಂಗಳೂರಿಗೆ ಬಂದಾಗ ಮಾಡಿದ ಭಾಷಣದ ಭಾವಾನುವಾದ ಮಾಡುವ ಪ್ರಯತ್ನ ಮಾಡಿದ್ದೇನೆ,,,,ನೀವು ಓದಿ ನಿಮಗೆ ಎನನ್ನಿಸಿತು ಹೇಳಿ……..ಅರಮನೆ ಮೈದಾನದತ್ತ ಹೋಗೋಣ ಬನ್ನಿ,,,,

“ಬೆಂಗಳೂರಿನ ಹಾಗೂ ಕರ್ನಾಟಕದ ಬಂಧು ಬಗಿನಿಯೆರೆ ನಿಮಗೆಲ್ಲ ನಮ್ಮ ನಮಸ್ಕಾರಗಳು, ಬೆಂಗಳೂರಿನ ನಿರ್ಮಾತ ಕೆಂಪೇಗೌಡ, ಬಸವಣ್ಣ, ಕಿತ್ತೂರಿನ ವೀರ ರಾಣಿ ಚೆನ್ನಮ್ಮ , ಎಲ್ಲರಿಗೂ ನನ್ನ ನಮಸ್ಕಾರಗಳು……(ಕನ್ನಡದಲ್ಲಿ ಈ ಎರಡು ಸಾಲುಗಳನ್ನ ಹೇಳಿದರು)

ಸ್ನೇಹಿತರರೇ ಇವತ್ತು ಬೆಂಗಳೂರಿನ ನೆಲದಲ್ಲಿದ್ದೇನೆ,,,,,ಮೊದಲಿಗೆ ವಿಜ್ಞಾನ ಕ್ಷೇತ್ರದಲ್ಲಿ ಭಾರತದ ಗೌರವ ಹೆಚ್ಚಿಸಿದ ಭಾರತ ರತ್ನ ಸಿ‌ಎನ್ ರಾವ್ ಅವರಿಗೆ ಅಭಿನಂದನೆಗಳು,,, ಹಾಗೆ ಸಚಿನ್ ತೆಂಡೂಲ್ಕರ್ ಅವರಿಗೂ ಅಭಿನಂದನೆಗಳು

ಬಂದುಗಳೆ,,, ಇದು ನಮ್ಮ ಬೆಂಗಳೂರು , ಭಾರತದಲ್ಲಿ ವಿಕಾಸದ ಯಾತ್ರೆಯಲ್ಲಿ ಸ್ವತತಂತ್ರದ ಪೂರ್ವದಿಂದಲೂ ಮುಂದಿರುವ ನಗರ , ಸ್ವತತಂತ್ರ ಪೂರ್ವ ದಲ್ಲೇ ವಿದ್ಯುತ್ ಗಳಿಸಿದ ನಾಡು ನಮ್ಮದು, ಇಡೀ ಪ್ರಪಂಚದಲ್ಲಿ, ಶಿಕ್ಷಣ, ವಿಜ್ಞಾನ, ಐ‌ಟಿ ಎಲ್ಲದರಲ್ಲೂ ಜ್ನಾನ ತಾಣವಾಗಿದೆ , ಅದಕ್ಕಾಗಿ ನಿಮ್ಮೆಲ್ಲರಿಗೂ ಅಭಿನಂದಿಸುತ್ತೇನೆ…

ನಾನು ಮುಂಚೆಯೂ ಈ ನಗರಕ್ಕೆ ಬಂದಿದ್ದೆ , ಇಲ್ಲಿನ ಪ್ರೌಡಿಮೆಯನ್ನು ನೋಡಿದ್ದೇನೆ, ಇಲ್ಲಿಯ ಇತಿಹಾಸ ದಲ್ಲಿ ಇಸ್ಟು ದೊಡ್ಡ ಮಟ್ಟದ ಕೇಸರಿಯ ಸಮುದ್ರದ ಅಲೆ ಹುಟ್ಟಿಸಿದ್ದೀರಿ,,, ಎಂಥಾ ದೃಶ್ಯವಿದು… ಕರ್ನಾಟಕದ ಕಾರ್ಯಕರ್ತರು ಹೆಚ್ಚು ಸಿದ್ದರು.

ಇತ್ತೀಚೆಗೆ ಎಲ್ಲರ ಕಣ್ಣು ನಮ್ಮ ಮೇಲಿದೆ, ಕುತಂತ್ರ, ಕೆಟ್ಟ ಭಾಷಾ ಪ್ರಯೋಗ ನಮ್ಮ ಮೇಲೆ ಪದೇ ಪದೇ ಆಗ್ತಿದೆ ಕಾರಣ …..ಈ ಜನಸಾಗರ ನೋಡಿ ಅವರಿಗೆ ಹೊಟ್ಟೆ ಉರಿ, ನಾನು ಈ ಸಂದರ್ಬದಲ್ಲಿ 2 ಪ್ರದಾನ ಮಂತ್ರಿಗಳನ್ನ ನೆನೆಪಿಸಿಕೊಳ್ಳುತ್ತೇನೆ, ಜೈ ಜವಾನ್  ಜೈ ಕಿಸಾನ್ ಅಂದಿದ್ದ ಮಹಾ ಪುರುಷ , ಮತ್ತು ವಾಜಪೇಯಿ ಯವರ ಜೈ ಜವಾನ್ , ಜೈ ಕಿಸಾನ್ ಹಾಗೂ ಜೈ ವಿಜ್ಞಾನ ಎಂಬ ಮಾತುಗಳನ್ನ , ಇವತ್ತು ಕರ್ನಾಟಕದ ಯುವ ಶಕ್ತಿ  ಜಗತ್ತಿನಲ್ಲಿ ದೇಶದ ಹೆಸರು ಎತ್ತಿ ಹಿಡಿದಿದೆ,,,,,,, ವಿಶ್ವದ ಹೆಚ್ಚಿನ ಐ‌ಟಿ ಕೆಲಸ ನೆಡಿಯುವುದು ಇಲ್ಲೇ….ಹೇಗೆ ,,,,ಇದು ಹೇಗೆಸಾಧ್ಯವಾಯಿತು ಎಂದು ನೋಡಿದರೆ   ಎನ್‌ಡಿ‌ಏ ಸರ್ಕಾರ ಇದ್ದಾಗ ಮೊದಲ ಬಾರಿಗೆ ಐ‌ಟಿ ಮಿನಿಸ್ಟ್ರಿ ರಚನೆ ಮಾಡಲಾಯಿತು, ಆಗ ಇದನ್ನ ಫೋಕಸ್ ಸೆಕ್ಟರ್ ಎಂದು ಘೋಷಿಸಲಾಯಿತು  ನಂತರ ನಮ್ಮ ಯುವ ಜನತೆ ಹಿಂದುರಿಗಿ ನೋಡಲಿಲ್ಲ ಸಾಧನೆಯತ್ತ ಹೆಜ್ಜೆ ಇಟ್ಟರು …..ನನ್ನ ದೇಶದ ಯುವ ಶಕ್ತಿ ತಮ್ಮ ಕೈ ಬೆರಳುಗಳಲ್ಲೇ ಪ್ರಪಂಚವನ್ನ ಬೆರಗು ಗೊಳಿಸಿತು, 2003ರ ವಾಜಪೇಯಿ  ಸರ್ಕಾರ, ವಿಜ್ನಾನ ಮತ್ತು ತಂತ್ರಜ್ಞಾನ  ಪಾಲಿಸಿ ಜಾರಿಗೆ ತಂದರು  , 2009 ರಲ್ಲೊ ವಾಜಪೇಯಿ ಯವರು ಮಾಹಿತಿ ತಂತ್ರಜ್ಞಾನದ ಕಾಯಿದೆಯನ್ನು ಅನುಸ್ಟಾನ ಗೊಳಿಸಿದರು , ಅವತ್ತು ಅವರು ನೋಡಿದ ಕನಸಿನಿಂದಾಗಿ ಇಂದಿನ ಯುವ ಶಕ್ತಿಯ ಆಶಯ  ಸಾಕಾರಗೊಂಡಿದೆ , 2003 ರಲ್ಲಿ ವಾಜಪೇಯಿ ಪ್ರಾರಂಭ ಮಾಡಿದ  ಯೋಜನೆ ಚಂದ್ರ ಯಾನ…. ……..2008 ರಲ್ಲಿ ಅದನ್ನೂ ನಮ್ಮ ವಿಜ್ನಾನಿಗಳು  ನನಸು ಮಾಡಿದರು…..ವಿಜ್ಞಾನದ ವಿಸ್ಮಯವಿದು, ಮಂಗಲಯಾನವನ್ನ ಕೂಡ  ನಾವು ಸಪಲರಗುವತ್ತ  ದಿಟ್ಟ ಹೆಜ್ಜೆ ಇಟ್ಟಿದ್ದೇವೆ…

ಮಹಾಪುರುಷರು ವ್ಯವಸ್ಥೆಗಳನ್ನ ಮಾಡುತ್ತಾರೆ, ಆದರೆ  ಕೆಟ್ಟ ಜನರ ಕೈಗೆ ಅವು  ಹೋದರೆ ಹೇಗೆ ಆಗುತ್ತೆ ಅನ್ನೋದು ನಿಮಗೆ ಗೊತ್ತು, ಭಾರತದಲ್ಲಿ 2008 ರಲ್ಲಿ 40% ರಸ್ಟು ಮಾಹಿತಿ ತಂತ್ರಜ್ನಾನದ ರಫ್ತು ಪ್ರಮಾಣವಿತ್ತು,  ನಂತರ ಯೂ‌ಪಿ‌ಏ ಸರ್ಕಾರದ ಕುಟಿಲ ನೀತಿಗಳಿಂದಾಗಿ 40 ನಿಂದ 30% ಕ್ಕೆ ತಂದು ನಿಲ್ಲಿಸಿದರು,,,,,, , ನಂತರ ಬಂದ ಯುಪಿಎ ದ 2ನೆ ಸರ್ಕಾರ ಮಾಹಿತಿ ತಂತ್ರಜ್ಞಾನದ ರಫ್ತು ವಹಿವಾಟನ್ನ ತನ್ನ ಬೇಜವಾಬ್ದಾರಿಯುತ ನೀತಿಗಳಿಂದಾಗಿ ಕೇವಲ 9% ತಂದು ಯುವಕರ ಕೆಲಸಗಳನ್ನ ಕಿತ್ತುಕೊಳ್ಳುವುದರಲ್ಲಿ ಸಫಲಗೊಂಡಿದೆ ,…. ಹಾಗಾದರೆ ಬೆಳವಣಿಗೆ ಇಲ್ಲದ ಈ ರೀತಿಯ ಅಧಪತನದ ದಾರಿಯನ್ನ ತೋರಿಸಿದವರು ಯಾರು? ಈ ಪರಿಸ್ಥಿತಿಗೆ ಕಾರಣ ಯಾರು ಬಂಧುಗಳೆ?

ಭರತದಲ್ಲಿ ಕುಶಲತೆ ಗೆ ಬೇಕಾದ ಎಲ್ಲ ಸೌಕರ್ಯಗಳೂ ಲಭ್ಯವಿದ್ದೂ ಯಾಕೆ ನಮ್ಮಲ್ಲಿ ಕೌಶಲ್ಯ ನಿರ್ಮಾಣ ಕೇಂದ್ರಗಳನ್ನ ಸ್ಥಾಪನೆ ಮಾಡಲಾಗುತ್ತಿಲ್ಲ? ಇಡೀ ಪ್ರಪಂಚದಲ್ಲೇ ಅತೀ ದೊಡ್ಡದಾದ ರೈಲ್ವೆ ಸಂಪರ್ಕ ಜಾಲವಿರುವ ದೇಶ ನಮ್ಮದು ಆ ಕ್ಷೇತ್ರದಲ್ಲಿ ಕೆಲಸ ಮಾಡಲು ಬೇಕಾದ ಜನಶಕ್ತಿಯನ್ನ ರೂಪಿಸುವಲ್ಲಿ ನಾವೇಕೆ ವಿಫಲರಾಗಿದ್ದೇವೆ? ಈ ವಿಚಾರದಲ್ಲೂ ರಾಜಕೀಯ ಸ್ನೇಹಿತರೇ……ಒತ್ತಾಯಿಸಿ ಕೇಳಿದರೆ ಯಾವುದೋ 2 ಮಾರ್ಗಗಳಿಗೆ ಹೆಚ್ಚಿನ ರೈಲ್ವೆ ಸೇವೆ ವಾಡಗಿಸುವುದು ಅಲ್ಲಿಂದ ಎಷ್ಟು ವೋಟ್ ಬ್ಯಾಂಕ್ ನಿರ್ಮಾಣ ವಾಗುತ್ತದೆ ಎಂದು ನೋಡುವುದು ಇದು ಕೇಂದ್ರ ದ ಈಗಿನ ಸರ್ಕಾರದ ಸಾಧನೆ ಅಲ್ಲವೇ?

ಕೇಂದ್ರ ಸರ್ಕಾರ ಪಿಂಕ್ ರೇವಲ್ಯೂಷನ್ ಅನ್ನು ಜಾರಿಗೆ ತಂದಿದ್ದು ನಿಮಗೆ ಗೊತ್ತಿದೆ…ಅಂದರೆ ಮಾಂಸದ ರಫ್ತು ವಹಿವಾಟು…..ಕಸಾಯಿಖಾನೆಗಳಿ0ದ ಹಸುಗಳನ್ನ ಒದಗಿಸಿ ಕೊಟ್ಟರೆ ಅಂತಹವರಿಗೆ ಸಬ್ಸಿಡಿ ಕೊಡಲಾಗುತ್ತಿದೆ……ಎಂತಹ ದುರಂತ…ಯಾವ ದೇಶದಲ್ಲಿ ಗೋ ಹತ್ಯೆ ಮಹಾ ಪಾಪವೆಂದು ಪರಿಗಣಿಸಿದ್ದೆವೋ? ಯಾವ ದೇಶದಲ್ಲಿ ಗೋವಿಗೆ ಪೂಜ್ಯ ಭಾವನೆ ಇತ್ತೋ ಅಂತಹ ದೇಶದಿಂದಲೇ ಗೋ ಮಾಂಸ ಮಾರಾಟ? ಅದಕ್ಕೆ ಸಬ್ಸಿಡಿ?….. ಅದೇ ಸಬ್ಸಿಡಿಯನ್ನ ನಮ್ಮ ದೇಶದ ಯುವ ಜನರಿಗೆ ಅವರ ಸ್ವ ಉದ್ಯೋಗ ಸ್ಥಾಪನೆಗೋ, ಅವರ ಕೆಲಸದಲ್ಲಿನ ಕ್ಷಮತೆ ಹೆಚ್ಚಿಸಿಕೊಳ್ಳಲೋ ಕೊಟ್ಟಿದರೆ….ದೇಶದ ರಫ್ತು ಪರಿಸ್ಥಿತಿ ಇಂದು ಹೀಗೆ ಶೋಚನೀಯವಾಗಿರುತ್ತಿರಲಿಲ್ಲ…. ನಮ್ಮ ದೇಶದ ರೂಪಾಯಿ ಮೌಲ್ಯ ಕುಸಿಯುತ್ತಿರಲಿಲ್ಲ……ಇದೆ ರೀತಿ ಮುಂದುವರೆದರೆ ರೂಪಾಯಿ ಸಧ್ಯದಲ್ಲೇ  ಆಸ್ಪತ್ರೆಯಲ್ಲಿನ ಐ ಸಿ ಯು ಹಂತಕ್ಕೆ ತಲುಪುತ್ತದೆ ಅಲ್ಲವೇ?

ಈಗ ಬಂದ ಕರ್ನಾಟಕ ದ ಸರ್ಕಾರ ಮಾಡಿದ್ದು ಏನು? ಮೊದಲು ಗೋ ರಕ್ಷಣಾ ಕಾನೂನನ್ನ ತೆಗೆದು ಹಾಕಿದ್ದು  ವೋಟ್ ಬ್ಯಾಂಕ್ ರಾಜಕಾರಣ ನೆಡೆಸಿದ್ದು, ಇಂತಹವರ ಬುದ್ದಿಮತ್ತೆ ಎಲ್ಲಿಯವರೆಗೆ ಇದೆ ಎನ್ನುವುದನ್ನ ನೀವೇ ಊಹಿಸಿ ಬಂಧುಗಳೆ,,,,,ಹಾಗೆ ಕೇಂದ್ರ ಸರ್ಕಾರ ವಾಜಪೇಯಿ ಸರ್ಕಾರ ತ0ದ ಪೋಟ ಕಾನೂನನ್ನ ತೆಗೆದು ಹಾಕುವುದರ ಮೂಲಕ, ನಕ್ಸಲರ ರಕ್ಷಣೆ ಹಾಗೂ ಆತಂಕವಾದಿಗಳಿಗೆ ಸುಲಭವಾಗಿ ದಾಳಿ ಮಾಡಲು ಕಾರಣವಾಗಿದ್ದು…ಇದೂ ಕೂಡ ಸರ್ಕಾರಕ್ಕೆ ತನ್ನ ದೇಶದ ಮೇಲಿನ ಸುರಕ್ಷತೆಯ ಬಗ್ಗೆ ಕಾಳಜಿ ಇಲ್ಲದಿರುವುದನ್ನ ಎತ್ತಿ ತೋರಿಸುತ್ತದೆ.

22 ನೆ ಶತಮಾನ ಯಾರಿಗೆ ಸೇರುತ್ತದೆ ಅಂದರೆ ಪ್ರಪಂಚದ ಬೇರೆ ಬೇರೆ ದೇಶಗಳ ಹೆಸರು ಹೇಳುವರಿದ್ದಾರೆ….ಆದರೆ 22 ನೆ ಶತಮಾನ ನಮ್ಮ ಭಾರತೀಯರಿಗೆ ಸೇರುತ್ತದೆ…ಸೇರಬೇಕು ಅಂತಹ ಧೃಡ ಸಂಕಲ್ಪ ನಾವಿಂದು ಮಾಡಬೇಕಿದೆ,ಏಕೆಂದರೆ 2 ವಿಚಾರಗಳಲ್ಲಿ ನಾವು ಅತ್ಯಂತ ಬಲಿಷ್ಟರಿದ್ದೇವೆ ಅವುಗಳೆಂದರೆ ಅತ್ಯಂತ ದೊಡ್ಡ ಪ್ರಜಾ ಪ್ರಭುತ್ವ ಹಾಗೆ ಮತ್ತೊಂದು ಪ್ರಪಂಚದ ಅತಿ ದೊಡ್ಡ ಯುವ ರಾಷ್ಟ್ರ ನಮ್ಮದು….ನಮ್ಮ ದೇಶದಲ್ಲಿ 65% ಜನ 35 ವರ್ಷದ ಒಳಗಿನವರಿದ್ದಾರೆ, ಇಷ್ಟು ದೊಡ್ಡ ಯುವ ಶಕ್ತಿ ಇದ್ದಾಗ ನಾವು ಇಡೀ ಪ್ರಪಂಚವನ್ನ ಅಭಿವೃದ್ದಿಯಲ್ಲಿ ಹಿಂದಿಕ್ಕಿ ಮುಂದೆ ಸಾಗಬಹುದು.

ಕಾಂಗ್ರೆಸ್ ಗೆ ಯುವಜನತೆ ಅಂದರೆ ವೋಟ್ ಬ್ಯಾಂಕ್ ಅಷ್ಟೇ ಆದರೆ ನಮಗೆ ಹಾಗಲ್ಲ ಯುವ ಜನತೆ ದೇಶದ ಶಕ್ತಿ, ಅವರನ್ನ ಭಾರತದ ಭವ್ಯ ಪ್ರಜೆಗಳನ್ನಾಗಿ ನಿರ್ಮಾಣ ಮಾಡುವುದು ನಮ್ಮ ಮೊದಲ ಕೆಲಸವಾಗಲಿದೆ, ಕೌಶಲ್ಯ ಬೆಳವಣಿಗೆಗೆ ಬೇಕಾದ ಪೂರಕ ವಾತಾವರಣವನ್ನ ನಿರ್ಮಾಣ ಮಾಡಲು ಎಲ್ಲ ದೇಶಗಳೂ ಮುಂದೆ ಬರುತ್ತಿರುವಾಗ ನಾವೇಕೆ ಹಿಂದೆ ಉಳಿಯಬೇಕು? ನಮ್ಮಲ್ಲೂ ಎಲ್ಲಾರೀತಿಯ ಕೌಶಲ್ಯಗಳನ್ನ ಹೊಂದಿರುವ ಯುವ ಶಕ್ತಿಯ ನಿರ್ಮಾಣ ನಮ್ಮ ಮುಂದಿನ ಗುರಿಯಾಗಿದೆ ಸ್ನೇಹಿತರೇ, ನಿಮಗೆ ಗೊತ್ತೇ ಕುಶಲ್ಯ ವೃದ್ದಿಗೆ ಕೇಂದ್ರ ಸರ್ಕಾರ ಮೀಸಲಿಟ್ಟ ಹಣ ಒಟ್ಟು 1 ಸಾವಿರ ಕೋಟಿ ರೂಪಾಯಿಗಳು….ಅದು ಇಂದು ಎಲ್ಲಿ ಹೋಗಿದೆ? ಅದರ ಬಳಕೆ ಆಗಿದೆಯೇ? ಖಂಡಿತಾ ಇಲ್ಲ ಕೇಂದ್ರದ ಯುಪಿಎ ಸರ್ಕಾರ ರಚಿಸಿದ ಕುಶಲ್ಯ ಬೆಳವಣಿಗೆಗಳ ಕೇಂದ್ರವನ್ನ ಅವರೇ 15 ದಿನಗಳೊಳಗಾಗಿ ಮುಚ್ಚಿದರು ನಂತರ ಬಂದ ಕಮಿಟಿಯೊಂದು ಸತತ 1.5 ವರ್ಷಗಳ ಕಾಲ ಮೌನವಾಗಿದ್ದು ಯಾವುದೇ ಯೋಜನೆಗಳನ್ನೂ ತಯಾರು ಮಾಡಲಿಲ್ಲ…. ಇತ್ತೀಚೆಗೆ ಸ್ಥಾಪಿಸಿದ ಕುಶಲ್ಯ ಅಭಿವೃದ್ದಿ ಸಮಿತಿ ಏನು ಮಾಡುತ್ತದೋ ಗೊತ್ತಿಲ್ಲ …!! ಹೀಗಾದರೆ ನಮ್ಮಲ್ಲಿನ ಜ್ನಾನ ಅಭಿವೃದ್ದಿ ಹೇಗೆ ಸಾಧ್ಯ? ದೇಶದ ಯುವ ಜನರಿಗೆ ಉದ್ಯೋಗ ಸೃಷ್ಟಿ ಮಾಡುತ್ತೇವೆ ಎಂದು ಅಧಿಕಾರ ಹಿಡಿದ ಕೇಂದ್ರ ಸರ್ಕಾರ ಯಾರಿಗಾದರೂ ಉದ್ಯೋಗ ಕೊಡೆಸಿದೆಯೇ ಸ್ನೇಹಿತರೇ?

ಕಲ್ಲಿದ್ದಲು ಹಗರಣವಂತೂ ನಾಚಿಕೆಗೇಡಿನ ವಿಚಾರ, ಅದಕ್ಕೆ ಸಂಬಂಧಪಟ್ಟ ಕಡತಗಳು ಕಾಣೆಯಾಗಿವೆ ಎನ್ನುವ ಬಾಲಿಶ ಉತ್ತರವನ್ನ ದೇಶದ ಅತ್ಯುನ್ನತವಾದ ಸುಪ್ರೀಂ ಕೋರ್ಟಿಗೆ ನೀಡುವ ಈ ಸರ್ಕಾರದ ಲಜ್ಜೆಗೆಟ್ಟತನವನ್ನ ನೀವೇ ಊಹಿಸಿ,

ಕೇಂದ್ರ ಸರ್ಕಾರಕ್ಕೆ ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇಲ್ಲ …..ಇದ್ದಿದ್ದರೆ ತುರ್ತು ಪರಿಸ್ಥಿತಿ ಅಂದು ನಿರ್ಮಾಣವಾಗುತ್ತಿರಲಿಲ್ಲ ಅಲ್ಲವೇ? ಅದೇ ಅಲ್ಲ ಜನರ ಅಭಿವ್ಯಕ್ತಿ ಸ್ವತಂತ್ರವನ್ನೂ ಕಳೆದುಕೊಳ್ಳುವಲ್ಲಿ ಸರ್ಕಾರ ಕೆಟ್ಟ ನೀತಿಯನ್ನು ಜಾರಿಗೆ ತಂದಿದೆ, ಅಂತರ್ಜಾಲತಾಣಗಳಲ್ಲಿ ಇವರ ವಿರುದ್ದ ಯಾರಾದರೂ ಏನಾದರೂ ಹೇಳಿಕೆ ನೀಡಿದರೆ ಅಂತಹವರನ್ನ ಜೈಲಿಗೆ ತಳ್ಳುವ ಇವರ ನೀಚ ನಿಯಮಗಳು ಎಷ್ಟು ಅಪಾಯಕಾರಿಅಲ್ಲವೇ? ನಿಮಗೆ ಗೊತ್ತೇ ಆಗಸ್ಟ್ 15ರ0ದು ಮೊದಲ ಭಾರಿಗೆ ಮೌನ ಮುರಿದು ಪ್ರಧಾನಿಗಳು ಭಾಷಣ ಮಾಡಿದ್ದನ್ನ ಬಿತ್ತರರಿಸಿದ ಟಿ‌ವಿ ಚಾನಲ್ಗಳು ನಂತರ ನರೇಂದ್ರ ಮೋದಿಯ ಭಾಷಣವನ್ನ ಬಿತ್ತರಿಸಿದವು….ಅದಕ್ಕೆ ಕೇಂದ್ರ ಸರ್ಕಾರ ಎಲ್ಲ ಮಧ್ಯಮಗಳಿಗೆ ಪ್ರದಾನಿ ಭಾಷಣಕ್ಕೆ ಸಾರಿಸಮನಾಗಿ ಮೊಧಿ ಭಾಷಣವನ್ನೂ ಬಿತ್ತರಿಸಿದ್ದೀರಲ್ಲ ಏಕೆ ಹೀಗೆ ಎಂಬ ……ಹಾಸ್ಯಾಸ್ಪದ ಪ್ರಶ್ನೆ ಕೇಳಿದ್ದಲ್ಲದೆ ಇನ್ನುಮುಂದೆ ಆರೀತಿ ಮಾಡಬಾರದೆಂಬ ಪತ್ರವನ್ನೂ ಕಳುಹಿಸಿತ್ತು!!!

ಲತಾ ಮಂಗೇಶ್ಕರ್ ಅವರ “ ಎ ಮೇರೆ ವತನ್ ಕೆ ಲೋಗೋ….” ಈ ಹಾಡನ್ನ ಕೇಳಿದರೆ ಎಂತಹವರ ಮನಸ್ಸಿನಲ್ಲೂ ದೇಶ ಪ್ರೇಮ ಹುಟ್ಟುತ್ತದೆ ಅಂತಹ ಮಹಾನ್ ಗಾಯಕಿ ಒಮ್ಮೆ “ ನರೇಂದ್ರ ಮೋದಿ ಸರ್ಕಾರ ಬಂದರೆ ಒಳ್ಳೆಯದಾಗುತ್ತದೆ” ಎಂದಿದ್ದಕ್ಕೆ ಅವರ ಭಾರತ ರತ್ನವನ್ನೇ ವಾಪಾಸ್ ಕೊಡಬೇಕೆಂಬ ಹಿಂಬಾಗಿಲಿನ ಹೇಳಿಕೆ ಇವರ ಅತ್ಯಂತ ನೀಚತನದ ಪರಮಾವಧಿಯನ್ನ ತೋರಿಸುತ್ತದೆ.ಹಾಗೆ ಇತ್ತೀಚೆಗೆ ನೆಡೆದ 4 ವಿಧಾನಸಭಾ ಚುನಾವಣಾ ಪಲಿತಾಂಶಗಳೂ ಕೇಂದ್ರದ ಪರವಾಗಿಲ್ಲ ಎಂಬುದನ್ನ ಅರಿತ ಸರ್ಕಾರ….. ಚುನಾವಣಾ ಪೂರ್ವ ಸಮೀಕ್ಷೆಗಳನ್ನ ರದ್ಧು ಪಡಿಸುವಲ್ಲಿ ಯಶಸ್ವಿಯಾಗಿದೆ.ಇದು ಅವರಿಗೆ ತಮ್ಮ ಅಧಪತನದ ಪ್ರಾರಂಭ ಎನ್ನುವ ಭಯವನ್ನು ತೋರಿಸುತ್ತದೆ.ಆದರೆ ಒಂದು ವಿಚಾರ ಜನತಾ ಜನಾರ್ಧನ ತೀರ್ಮಾನ ಮಾಡಿಬಿಟ್ಟಿದಾನೆ ಈ ಭಾರಿ……ಭಾರತ ಗೆಲ್ಲಿಸುತ್ತಾನೆ ಅನ್ನುವ ವಿಶ್ವಾಸ ನಮ್ಮದು.

ಸ್ನೇಹಿತರೇ ಈ ಯೂ‌ಪಿ‌ಏ ಸರಕಾರ ಬಹುಮತದಿಂದ ನೆಡಿಯುತ್ತಿಲ್ಲ, ಈ ಸರ್ಕಾರ ಸಿ ಬಿ ಐ ಇಂದ ನೆಡೆಯುತ್ತಿದೆ…ಕಾಂಗ್ರೆಸ್ ನಿಂದ ಹೊರಹೊಗಲು ತೀರ್ಮಾನಿಸಿದರೆ, ಅಥವಾ ಕಾಂಗ್ರೆಸ್ ವಿರುದ್ದ ಮಾತಾಡಿದರೆ ಅಂತಹವರ ವಿರುದ್ದ ಸಿ ಬಿ ಐ ತನಿಕೆ ಮಾಡಿಸುವುದು ಹೆದರಿಸಿ ಬೆದರಿಸುವುದು…… ಇದೆ ಇವರ ದೈನಂದಿನ ಕೆಲಸವಾಗಿದೆ..

ಕೇಂದ್ರ ಮಂತ್ರಿ ಪಿ ಚಿದಂಬರಂ ಹೇಳುತ್ತಾರೆ “ ನೀರಿಗೆ 15 ರೂಪಾಯಿ, ತಿನ್ನುವ ಐಸ್ ಕ್ರೀಂ ಗೆ 20 ರೂಪಾಯಿ ಕೊಡುತ್ತೀರಿ ಬೇಳೆ ಕಾಳುಗಳಿಗೆ ಅಕ್ಕಿ ಗೋಧಿಗೆ ಸ್ವಲ್ಪ ಬೆಲೆ ಜಾಸ್ತಿ ಯಾಕೆ ಕೊಡಲ್ಲ? “ ಸ್ವಾಮಿ ಮಂತ್ರಿಗಳೆ? ನಿಮಗೆ ಗೊತ್ತೇ ನಮ್ಮ ದೇಶದಲ್ಲಿ ಮಾಧ್ಯಮ ವರ್ಗ ಅನ್ನುವ ಒಂದು ಜೀವನ ಕ್ರಮವಿದೆ…ಅವರು ನೀವು ಮೇಲೆ ಹೇಳಿರುವ ಯಾವ ವಸ್ತುಗಳನ್ನೂ ಬಳಸದೆ ಪ್ರತಿದಿನದ ಹೊಟ್ಟೆ ಹಸಿವನ್ನ ತನಿಸಿಕೊಳ್ಳಬೇಕಿದೆ..ಅವರಿಗೆ ನಿಮ್ಮ ಬೆಲೆ ಏರಿಕೆಗಳು ಎಷ್ಟರ ಮಟ್ಟಿಗೆ ತೊಂದರೆಯನ್ನು ಉಂಟುಮಾಡುತ್ತವೆ ಗೊತ್ತಿದೆಯೇ? ಅಷ್ಟೇ ಅಲ್ಲ ಕೇವಲ 25 ರೂಪಾಯಿ ದುಡಿಯವನು ಬಡವನಲ್ಲ…ಎನ್ನುತೀರಲ್ಲ….25 ರೂಪಾಯಿಗೆ 300 ಗ್ರಾಂ ಈರುಳ್ಳಿ ಬರುವುದಿಲ್ಲ ಗೊತ್ತಿದೆಯೇ? ಮೊನ್ನೆ ವಂಕಡೆಯಲ್ಲಿ ಸಚಿನ್ ಸೆಂಚುರಿ ಬಾರಿಸಲಿಲ್ಲ ಆದರೆ ಹೀಗೆ ಮುಂದುವರೆದರೆ ಈರುಳ್ಳಿ ಬೆಲೆ ದೇಶದಲ್ಲಿ ಸೆಂಚುರಿ ಬಾರಿಸುತ್ತದೆ.

ಪ್ರತಿ ದೇಶಕ್ಕೆ ತನ್ನದೇ ಆದ ಗುರಿ, ಕನಸು ಇರಬೇಕು ಅವುಗಳನ್ನ ಒಂದು ಕಾಲಮಿತಿಯನ್ನು ನಿಗದಿಪಡಿಸಿಕೊಂಡು ಸಾಕಾರಗೊಳಿಸಲು ಪ್ರಯತ್ನ ಮಾಡಬೇಕು…ಬನ್ನಿ ಸ್ನೇಹಿತರೇ ಇನ್ನೂ 8 ವರ್ಷಗಳಲ್ಲಿ ನಮ್ಮ ದೇಶ 75ನೇ ಸ್ವತಂತ್ರ ಮಹೋತ್ಸವವನ್ನು ಆಚರಿಸುತ್ತದೆ. ಅಷ್ಟರಲ್ಲಿ ನಾವೆಲ್ಲರೂ ಎದ್ದು ನಿಂತು ಪ್ರತಿಯೊಬ್ಬರೂ ಒಂದು ಒಳ್ಳೆಯ ಗುರಿಯೊಂದಿಗೆ ಮುನ್ನುಗ್ಗಿ ಅಭಿವೃದ್ದಿಯ ಪಥದಲ್ಲಿ ಮುಂದೆ ಸಾಗೋಣ, ಸ್ವತಂತ್ರದ ಅಮೃತ ಮಹೋತ್ಸವದ ಸಮಯ ಬರುವಷ್ಟರಲ್ಲಿ ಒಂದು ಬಲಿಷ್ಟ್ರ ರಾಷ್ಟ್ರ ಕಟ್ಟೋಣ.

ಈ ಕೆಟ್ಟ ಆಡಳಿತ ಕೊನೆಗೊಳ್ಳಬೇಕಿದೆ, ಒಳ್ಳೆಯ ಕಾಲ ಮುಂದೆ ನಮ್ಮದಾಗಬೇಕಿದೆ, ಕತ್ತಲೆಯಿಂದ ಬೆಳಕಿನೆಡೆಗೆ ಸಾಗಬೇಕಿದೆ, ಬಡವರ ದೀನ ಜನಗಳ ಅಭಿವೃದ್ದಿ ಆಗಬೇಕಿದೆ, ಅದಕ್ಕಾಗಿ ನಮ್ಮ ಪಕ್ಷವನ್ನ ಬೆಂಬಲಿಸಿ, ಭವ್ಯ ಭಾರತದ ಕನಸನ್ನ ನನಸಾಗಿಸಿ…..ಹಾಗೆ ನೀವು ಇಂದಿನ ಸಭೆಗೆ ಬರಲು ಪ್ರತಿಯೊಬ್ಬರೂ 10/- ರೂಪಾಯಿಯನ್ನ ಕೊಟ್ಟು ಟಿಕೆಟ್ ಕರಿದಿಸಿದ್ದೀರಿ, ಒಟ್ಟು 3.5 ಲಕ್ಷ ಜನ ಕೊಟ್ಟ ಈ ಹಣವನ್ನ ಸರ್ಧಾರ್ ವಲ್ಲಭಾ ಭಾಯಿ ಅವರ ಪುತ್ತಳಿ ನಿರ್ಮಾಣಕ್ಕೆ ಬಳಸಲಾಗುತ್ತದೆ……..ಧನ್ಯವಾದಗಳು…..ಭಾರತ್ ಮಾತಾಕಿ ಜೈ!!

ನನಗೆ ಅನ್ನಿಸಿದ್ದು ಸ್ನೇಹಿತರೇ ಮೋದಿಯವರ ಭಾಷಣ ಆಲಿಸಿದ ನಂತರ….ನಮ್ಮ ಯುವ ಜನಾಂಗ ಎಲ್ಲ ರೀತಿಯಲ್ಲೂ ಯೋಗ್ಯರಿದ್ದು, ಅವರಿಗೆ ಕೆಲಸ ಸಿಗುತ್ತಿಲ್ಲ, ಯಾಕೆ ಹೀಗೆ? ಇದರಿಂದ ನಮ್ಮ ಯುವ ಶಕ್ತಿಯ ಆತ್ಮ ಸ್ಥೈರ್ಯ ಕುಂದುವುದಿಲ್ಲವೇ? ಇದಕ್ಕೆಲ್ಲ ಕಾರಣ ಏನು? ಒಮ್ಮೆ ಮೋದಿಗೆ ನಮ್ಮ ಬೆಂಬಲ ಕೊಟ್ಟು ನೋಡೋಣ…ಭವ್ಯ ಭಾರತದ ಕನಸು ಸಾಕಾರಗೊಳ್ಳುವಲ್ಲಿ ಸಫಲರಾಗುತ್ತಾರೋ ನೋಡೋಣ… ಬನ್ನಿ ನಿಮ್ಮ ಅಭಿಪ್ರಾಯಗಳನ್ನ ಹಂಚಿಕೊಳ್ಳಿ…..ನಿಮ್ಮೊಂದಿಗೆ ಸದಾ ……ನಾಗರಾಜ್ ಮೌಳಿ.

ಯಾರು ನಮ್ಮ ನಾಯಕರು?

ಜನವರಿ 7, 2013

ಸ್ನೇಹಿತರೇ ಹೇಗಿದ್ದೀರಿ? ತುಂಬಾ ದಿನಗಳ ನಂತರ ಸ್ವಲ್ಪ ಸಮಯ ನಿಮ್ಮೊಂದಿಗೆ ಕಳೆಯುವ ಬಯಕೆ… ಬನ್ನಿ ಮಾತಾಡೋಣ… ಇನ್ನೇನು ಕೇಂದ್ರ ಸರ್ಕಾರಕ್ಕೆ ಮತ್ತೊಂದು ಚುನಾವಣೆ ಎಂಬ ಅಗ್ನಿ ಪರೀಕ್ಷೆ ಎದುರಿಸುವ ಸಮಯ ಬಂದಿದೆ ಹಾಗೆ ಇಡೀ ದೇಶದಲ್ಲಿ ನರೇಂದ್ರ ಮೋದಿ ಮುಂದಿನ ಪ್ರದಾನಿ ಅಭ್ಯರ್ಥಿ ಅನ್ನುವ ಸುದ್ದಿ ಕೇಳಿಬರುತ್ತಿದೆ…. ಹಾಗಾದರೆ ನರೇಂದ್ರ ಮೋದಿಯವರ ಬಗ್ಗೆ ನಮಗೆ ಎಷ್ಟು ಗೊತ್ತು…ಈಗಿನ ಟೋಪಿ ಪ್ರದಾನಿಗಳೆ ಮತ್ತೆ ಆಯ್ಕೆ ಆದರೆ ಒಳ್ಳೆಯದೇ? ಅಥವಾ ಇವರು ಇಬ್ಬರನ್ನೂ ಬಿಟ್ಟು ಬೇರೆ ಯಾರದಾದರೂ ಇದ್ದಾರೆಯೇ? ಒಮ್ಮೆ ಯೋಚಿಸಿ ನೋಡೋಣ ಬನ್ನಿ…

ಮೊದಲಿಗೆ ನರೇಂದ್ರ ಮೋದಿ ಯವರ ಬಗ್ಗೆ ನೋಡೋಣ.. ಅವ್ರು 1950 ಸೆಪ್ಟೆಂಬರ್ 17 ರಂದು ವಾದ್ನಗರ್ ಅನ್ನುವ ಅವಾಗಿನ ಬಾಂಬೆ ರಾಜ್ಯದಲ್ಲಿ ಹುಟ್ಟಿದವರು ತಾಯಿ ಹೀರ ಬೆನ್ ಹಾಗೂ ತಂದೆ ದಾಮೋದರ ದಾಸ್ ಮುಲ್ಚಂಧ್  ಮೋದಿ…. ತಂದೆ ತಾಯಿಯವರಿಗೆ ಆರು ಜನ ಮಕ್ಕಳು ಅದರಲ್ಲಿ ಮೂರನೆಯವರು ನರೇಂದ್ರ ಮೋದಿ…. ಅತ್ಯಂತ ಸಾಮಾನ್ಯ ಮಧ್ಯಮ ವರ್ಗದ ಹಿಂದುಳಿದ ಕುಟುಂಬ ಅವರದ್ದು… ಹಾಗೆ ಮೋದಿ ಸಂಪೂರ್ಣ ಸಸ್ಯಾಹಾರಿ ಕೂಡ ಹೌದು….ಅತ್ಯಂತ ಚಿಕ್ಕ ವಯಸ್ಸಿನಲ್ಲೇ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಸೇರಿದರು ಮುಂದೆ ರಾಜಕೀಯ ಶಾಸ್ತ್ರದಲ್ಲಿ ಗುಜರಾತ್ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿಯನ್ನ ಕೂಡ ಸಂಪಾದಿಸಿದರು…. ತಮ್ಮ ಕಾಲೇಜು ದಿನಗಳಲ್ಲಿ ಅಕಿಲ ಬಾರತೀಯ ವಿದ್ಯಾರ್ಥಿ ಪರಿಷತ್ತಿನ ಸಕ್ರೀಯ ಕಾರ್ಯಕರ್ತಾರದ ಮೋದಿಯವರು ಮುಖಂಡತ್ವದ ಎಲ್ಲ ಗುಣಗಳನ್ನ ಸಾಬೀತು ಪಡಿಸಿದ್ದರು …

ಮೋದಿ ತಮ್ಮ ಸ್ನಾತಕೋತ್ತರ ಪದವಿ ಗಾಗಿ ವ್ಯಾಸಂಗ ಮಾಡುತ್ತಿದ್ದಾಗಲೇ ರಾಷ್ಟ್ರೀಯ ಸ್ವಾಯ0 ಸೇವಕ ಸಂಘದ ಸಕ್ರೀಯ ಕಾರ್ಯಕರ್ತಾರಾಗಿ ಯುವಜನರನ್ನ ಒಂದುಗೂಡಿಸುವ ಪ್ರಯತ್ನ ಮಾಡಿದರು, ನಂತರ ಶಂಕರ್ ಸಿಂಗ್ ವಾಘೆಲ ಅವರ ನೇತೃತ್ವದಲ್ಲಿ ಬಿ ಜೆ ಪಿ ಪಕ್ಷ ಸೇರಿ ಅವರೊಂದಿಗೆ ಪಕ್ಷವನ್ನ ಮೂಲದಿಂದ ಬಲಪಡಿಸುವ ಕೆಲಸಕ್ಕೆ ಕೈ ಹಾಕಿದರು…. 1990 ರ ಸಂದರ್ಭದಲ್ಲಿ ಸ್ವಲ್ಪ ಮಟ್ಟಿನ ಯಶಸ್ಸನ್ನ ಸಾದಿಸಿದರು ನಂತರದ ದಿನಗಳಲ್ಲಿ ಸಮ್ಮಿಶ್ರ ಸರ್ಕಾರ ರಚನೆಯಲ್ಲೂ ಶ್ರಮಿಸಿದರು ಆದರೆ ಕೆಲವೇ ತಿಂಗಳುಗಳಲ್ಲಿ ಆ ಸರ್ಕಾರ ಪತನ ಕಂಡಿತು ನಂತರ 1995 ರಲ್ಲಿ ಮತ್ತೆ ಬಿ ಜೆ ಪಿ ಗುಜಾರಾತಿನಲ್ಲಿ ಆಡಳಿತದ ಚುಕ್ಕಾಣಿ ಹಿಡಿಯಿತು… ಆ ಸಂಧರ್ಭದಲ್ಲಿ ಶಂಕರ್ ಸಿಂಗ್ ವಾಘೆಲ ಗುಜರಾತಿನ ಮುಖ್ಯಮಂತ್ರಿಯಾಗಿ ನೇಮಕ ಗೊಂಡರೆ ಮೋದಿ  ಪಕ್ಷದ ರಾಜ್ಯ ಕಾರ್ಯದರ್ಶಿಯಾಗಿ ನೇಮಕಗೊಂದು ಎಲ್ ಕೆ ಅಡ್ವಾಣಿ ಯವರೊಂದಿಗೆ ಅಯೋಧ್ಯ ರಥಯಾತ್ರೆಯಲ್ಲಿ ದೇಶದ ಮೂಲೆ ಮೂಲೆಗೂ ಸಂಚರಿಸುವ ಕಾರ್ಯ ನೆಡೆಸಿದರು. ಶಂಕರ್ ಸಿಂಗ್ ವಾಘೆಲ ಅವರ ನಂತರ ಕೆಶುಭಾಯಿ ಪಟೇಲರು ಗುಜರಾತಿನ ಮುಖ್ಯಮಂತ್ರಿಯಾದರು ಆಗ ಮೊದಿ ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿಯಾಗಿ ನೇಮಕಗೊಂಡರು ಅವರು 2001 ರವರೆಗೂ ತಮ್ಮ ಸೇವೆಯನ್ನ ಕಾರ್ಯದರ್ಶಿಯಾಗಿ ಮುಂದುವರೆಸಿದರು.

ಅಕ್ಟೋಬರ್ 2001 ರಲ್ಲಿ  ಗುಜರಾತಿನ ಮುಖ್ಯಮಂತ್ರಿಯಾದ ನರೇಂದ್ರ ಮೊದಿ ಹಿಂತುರುಗಿ ನೋಡಿದ್ದೇ ಇಲ್ಲ ….. ಡಿಸೆಂಬರ್ 2007 ರಲ್ಲಿ  ಮತ್ತೆ ಮೂರನೇ ಬಾರಿಗೆ ಮುಖ್ಯಮಂತ್ರಿಯಾದ ಮೊದಿ ಅತ್ಯಂತ ಹೆಚ್ಚಿನ ವಾಯಿದೆಗೆ ಮುಖ್ಯಮಂತ್ರಿಯಾದ ದಾಖಲೆಯನ್ನೂ ಕೂಡ ಮಾಡಿದರು ಈಗಲೂ ಅಷ್ಟೇ 2012 ರ ಚುನಾವಣೆಯಲ್ಲೂ ಅತ್ಯಂತ ಹೆಚ್ಚಿನ ಬಹುಮತದಿಂದ ಆಯ್ಕೆ ಆದ ಮೋದಿ ಸತತ ನಾಲ್ಕನೇ ಭಾರಿಗೆ ಗುಜರಾತಿನ ಮುಖ್ಯಮತ್ರಿಯಾಗಿ ನೇಮಕಗೊಂಡಿದ್ದಾರೆ..

ಯಾವಾಗಲೂ ತಮ್ಮ ವಿವಾದಾತ್ಮಕ ನಡುವಳಿಗಳಿಂದಲೇ ಗುರುತಿಸಿಕೊಂಡ ಮೋದಿ 2002 ರಲ್ಲಿ ತಮ್ಮ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟರು ಆಗ ಅದೆಷ್ಟೇ  ವಿವಾದ ಹಾಗೂ ಆರೋಪಗಳನ್ನ ಪ್ರತಿಪಕ್ಷಗಳು ಮಾಡಿದರೂ 182 ಸ್ಥಾನಗಳಿರುವ ಗುಜರಾತ್ ರಾಜ್ಯದಲ್ಲಿ 127 ಸ್ಥಾನಗಳನ್ನ ಗೆಲ್ಲುವ ಮೂಲಕ ಮತ್ತೆ ಅಧಿಕಾರಕ್ಕೆ ಮೋದಿ ಏರಿದರು

2007 ರಲ್ಲಿ ಮೋದಿ ತಮ್ಮ ಚುನಾವಣಾ ಭಾಷಣದಲ್ಲಿ  ಆತಂಕವಾದಿಯಾದ ಸೊಹ್ರಾಬುದ್ದೀನ್ ಶೇಕ್ ನ ಎನ್ಕೌಂಟರ್ ಮಾಡಿದ್ದನ್ನ ಸಮರ್ಥಿಸಿಕೊಂಡು ಚುನಾವಣಾ ಆಯೋಗಾದ ಟೀಕೆ ಹಾಗೂ ನಿರ್ಭಂದಕ್ಕೂ ಒಳಗಾದರೂ ಆದರೂ ಕೂಡ ಮೂರನೇ ಭಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು…

2012 ರಲ್ಲಿ ನಮಗೆಲ್ಲ ಗೊತ್ತೇ ಇದೆ ಸುಮಾರು 117 ಸ್ಥಾನಗಳನ್ನ ಗೆಲ್ಲುವ ಮೂಲಕ 4ನೇ ಭಾರಿಗೆ ಮುಖ್ಯಮಂತ್ರಿಯಾಗಿ ಕೂಡ ಆಯ್ಕೆಯಾಗಿದ್ದಾರೆ.

2011 ರಲ್ಲಿ ಸಧ್ಬಾವನ ಮಿಷನ್ ಅನ್ನುವ ಮುಖಾಂತರ ಶಾಂತಿಗಾಗಿ ಮೂರುದಿನಗಳ ಉಪವಾಸ ಮಾಡಿದರು ಮೋದಿ.. ನಂತರ ಈಗಿನ ಯುವಜನರನ್ನ ಒಂದುಗೂಡಿಸುವ ಸಲುವಾಗಿ ಸಾಮಾಜಿಕ ಜಾಲತಾಣಗಳನ್ನ (social networking sites) ಬಳಸಿದ ಮೊದಲ ಮುಖ್ಯಮಂತ್ರಿ ಮೋದಿ ಅಂದರೆ ಅದು ತಪ್ಪಾಗಲಾರದು..ಸುಮಾರು 1 ಲಕ್ಷ ಪ್ರಶ್ನೆಗಳು ಮೋದಿ ಅಂತರಜಾಲದಲ್ಲಿ ನೆಡೆಸಿದ ನೇರ ಸಂವಾದದಲ್ಲಿ ಕೇಳಲ್ಪಟ್ಟವು… ಗೂಗಲ್ ಹ್ಯಾಂಗ್ ಔಟ್ ಅನ್ನುವ ಅವಕಾಶದ ಮೂಲಕ ನೇರವಾಗಿ ಜನೋರೊಂದಿಗೆ ಮಾತನಾಡಿದ ಮೋದಿ ಜ್ಯಾತ್ಯಾತೀತ ವಾದ ಎಂದರೆ ಭಾರತ ಎಲ್ಲ ರಂಗಗಳಲ್ಲೂ 1 ನೇ ಸ್ಥಾನಕ್ಕೆ ಏರುವುದು, ಅದುಬಿಟ್ಟು ಮತ ಬ್ಯಾಂಕ್ ರಾಜಕೀಯಕ್ಕಾಗಿ ಜಾತ್ಯತೀತತೆ ಅನ್ನುವ ಪದದ ದುರುಪಯೋಗಮಾಡುವುದಲ್ಲ ಎಂದಿದ್ದರು.

ತಮ್ಮ ಅತ್ಯಂತ ಹರಿತವಾದ ಮಾತುಗಳಿಂದ ಕೇಂದ್ರ ದ ಕಾಂಗ್ರೆಸ್ ಸರ್ಕಾರದ ಧೋರಣೆಗಳನ್ನ ದೂಷಿಸುತ್ತಾ ಬಂದವರು ಮೊದಿ….. ಆತಂಕವಾದದ ವಿರುದ್ದ ನಿಯಂತ್ರಣ ಸಾಧಿಸಲು ಕಠಿಣ ಕಾನೂನದ ಪೋಟ (POTA- Prevention of terrorism act)  ಜಾರಿಗೆ ತರುವುದಕ್ಕೆ ಯಾಕೆ ಕೇಂದ್ರ ಸರ್ಕಾರ ಹಿಂಜರಿಯುತ್ತಿದೆ? ಕಡಲ ತೀರದಿಂದ ಆಕ್ರಮಣ ಮಾಡುವ ನೀಚ ಆತಂಕವಾದಿಗಳ ನಿಗ್ರಹಕ್ಕೆ ಹೆಚ್ಚಿನ ಸಾಮರ್ಥ್ಯದ ಸೇನೆ ಹಾಗೂ ಉಪಕರಣಗಳನ್ನ ಯಾಕೆ ಇನ್ನೂ ಸರ್ಕಾರ ನೀಡುತ್ತಿಲ್ಲ ಎನ್ನುವ ಪ್ರಶ್ನೆಯನ್ನೂ ಕೂಡ ಕೇಳಿದ್ದರು…ಕಾಂಗ್ರೆಸ್ ಸಮಾನತೆ ಸ್ವಾತಂತ್ರ್ಯದ ಬಗ್ಗೆ ಎಷ್ಟೋ ಭಾಷಣ ಮಾಡುವ ಮುಖಂಡರನ್ನ ಹೊಂದಿದೆ ಅಂತಹ ಪಕ್ಷ ಗುಜರಾತಿನ ಟಿ ವಿ 9 ಚಾನಲ್ಲಿಗೆ ಯಾವುದೇ ರೀತಿಯ  ಪಕ್ಷ ಚಟುವಟಿಕೆಯ ಮಾಹಿತಿ ಕೊಡುವುದಿಲ್ಲ ಅನ್ನುವ ತೀರ್ಮಾನ ಮಾಡಿದಾಗ ಅದು ಪ್ರಜಾ ಸ್ವತಂತ್ರದ ಕಗ್ಗೊಲೆ ಎಂದು  ತೀವ್ರವಾಗಿ ಖಂಡಿಸಿದ್ದು ಮೋದಿ..

ನೋಡಿ ಸ್ನೇಹಿತರೇ ಇಂತಹ ಒಬ್ಬ ವ್ಯಕ್ತಿ ಪ್ರದಾನಿಯಾದರೆ ಒಳ್ಳೆಯದೋ ಅಥವಾ ತನ್ನ ಸಣ್ಣ ವಯಸ್ಸಿನಿಂದಲೂ ಚಿನ್ನದ ಚಮಚೆಯಲ್ಲಿ ಊಟ ಮಾಡಿದ ಸೈಲೆಂಟ್ ಸಿಂಗ್ ಅವರು ಮತ್ತೆ ಪ್ರದಾನಿ ಯಾಗುವುದು ಒಳ್ಳೆಯದೇ? ಒಬ್ಬ ಅತ್ಯಂತ ಮಾಧ್ಯಮ ವರ್ಗದ ವ್ಯಕ್ತಿ ಸತತ ನಾಲ್ಕು ಭಾರಿ ಅತ್ಯಂತ ಬಹುಮತದಿಂದ ಅಧಿಕಾರಕ್ಕೆ ಆಯ್ಕೆ ಆಗುತ್ತಾರೆ ಎಂದರೆ ಅದು ಮೋದಿಯ ಪ್ರಚಾರದಿಂದಲ್ಲ ಅದು ಅವರ ಅಭಿವೃದ್ದಿ ಶೀಲ ಕಾರ್ಯ ಯೋಜನೆಗಳಿಂದ ಅಲ್ಲವೇ?

ಕೋಮು ಸೌಹಾರ್ದ ಅನ್ನುವ ನೆಪದಲ್ಲಿ …ಹೈದರಾಬಾದಿನ ಸಮಾವೇಶದಲ್ಲಿ ಹಿಂದುಗಳಿಗೆ ಬಾಯಿಗೆ ಬಂದಹಾಗೆ ಬೈಯ್ಯುವ  ಮಂತ್ರಿಗಳನ್ನ ರಕ್ಷಿಸುವ …. ದೆಹಲಿಯಲ್ಲಿ ಒಂದು ಹುಡುಗಿಯಮೇಲೆ ಮಾರಣಾಂತಿಕ ಬಲಾತ್ಕಾರ ನೆಡಸಿ 3 ದಿನದ ನಂತರ ಯಾರನ್ನೋ ಮುಖ ಮುಚ್ಚಿ ಇವರೇ ಅಪರಾಧಿಗಳು ಎಂದು ಜನರ ಕಣ್ಣೋರೆಸುವ ಪೊಲೀಸರನ್ನ ಸೃಷ್ಟಿಸಿದ ಕೇಂದ್ರ ಸರ್ಕಾರ  ಮತ್ತೆ ಅಧಿಕಾರಕ್ಕೆ ಬರಬೇಕೆ? ಒಮ್ಮೆಯೂ ಬಡತನ ಅಂದರೆ ಏನು, ಸಾಮಾನ್ಯ ಜನರ ಕಷ್ಟ ಅಂದರೆ ಏನು ಎಂದು ಗೊತ್ತಿಲ್ಲದ, ಒಬ್ಬ ವ್ಯಕ್ತಿ ಮತ್ತೆ ಪ್ರದಾನಿಯಾಗಬೇಕೆ? ಅಧಿಕಾರಕ್ಕೆ ಬಂದ ತಕ್ಷಣ ಮಾಡಿದ ಕೆಲಸವೆಂದರೆ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಯನ್ನ ಮತ್ತೆ ಮತ್ತೆ ಏರಿಸಿದ್ದು… ನಂತರ ಆದರ್ಶ ಅಪಾರ್ಟ್ಮೆಂಟ್ ಹಗರಣವನ್ನ ಮುಚ್ಚಿ ಹಾಕಿದ್ದು….. ಹೇಗೋ ಮಾಡಿ ಕೋಟಿಗಟ್ಟಲೇ ಕೊಳ್ಳೆ ಹೊಡೆದ ಎ. ರಾಜ ಹಾಗೂ ಕಣ್ಣಿಮೊಳಿಯವರಿಗೆ ಜಾಮೀನು ಕೊಡಿಸಿದ್ದು (2ಜಿ ತರಂಗಾಂತರ ಹಗರಣ)…ನಿಮ್ಮ ನಮ್ಮ ಕಾರಿನ ಟಿಂಟ್ ಗ್ಲಾಸು ತೆಗೆಸಿದ್ದು … ಕೇಂದ್ರದ ವಿರುದ್ದ ಅಂತರ್ಜಾಲ ದಲ್ಲಿ ಮಾತಾನಾಡಿದರೆ ಅದಕ್ಕೆ ನಿರ್ಭಂಧ ಹೆರಿದ್ದು….ಪ್ರಜಾಪಭುತ್ವ ಅನ್ನುವ ಪದದ ಕೊಲೆ ಮಾಡಿದ್ದು ಈ ನಮ್ಮ ಸೈಲೆಂಟ್ ಪ್ರದಾನಿಗಳ ಸಾಧನೆ…. ನೀವೇ ಬೇಕಾದರೆ ನೋಡಿ ಸ್ನೇಹಿತರೇ ನಮ್ಮ ಈಗಿನ ಪ್ರದಾನಿಗಳ ಬಗ್ಗೆ ನೀವು ಇಂಟರ್ನೆಟ್ ನಲ್ಲಿ ಹುಡುಕಿದರೆ ಅವರ ಚರಿತ್ರೆ ಸಿಗುತ್ತದೆ ಅದರಲ್ಲಿ ಅವರು ಅರ್ಧ ಜೀವನ ತಮ್ಮ ಓದುವಿಕೆಗೆ ವಿದೇಶದಲ್ಲಿ ಕಳೆದರೆ ಇನ್ನೂ ಉಳಿದ ಜೀವನ ಪಂಚವಾರ್ಷಿಕ ಹಾಗೂ ಮತ್ತಿತರ ಯೋಜನಗಳನ್ನ ಮಾಡುವುದರಲ್ಲಿ ಕಳೆದಿದ್ದಾರೆ …..ಯಾವುದಾದರೊಂದು ಪಂಚವಾರ್ಷಿಕ ಯೋಜನೆ ಭಾರತದಲ್ಲಿ ಸಮರ್ಥವಾಗಿ ಜಾರಿಗೆ ಬಂದಿದೆಯೇ? ಹಾಗಿದ್ದರೆ ಆ ಯೋಜನೆಗಳ ಉಪಯೋಗವಾದರೂ ಯಾರಿಗೆ? ಎಫ್ ಡಿ ಐ ಅನ್ನುವ ಹಾಳು ಯೋಜನೆಯ ಮೂಲಕ ನಮ್ಮ ಬಡ ವ್ಯಾಪಾರಿಗಳ ಹೊಟ್ಟೆಯಮೇಲೆ ಹೊಡೆಯುವ ನೀಚ ಕೆಲಸ ಮಾಡಿದ್ದಾರೆ, ಯಾವ ವಿಚಾರಕ್ಕೂ ತಲೆ ಕೆಡೆಸಿ ಕೊಳ್ಳದೆ  ಒಂದು ಮಾತನ್ನೂ ಆಡದೆ ಮೇಡಂ ಹೇಳುವುದನ್ನೇ ವೇಧವಾಕ್ಯ ಅಂದುಕೊಂಡಿರುವ ಮನುಷ್ಯ ಜೊತೆಗೆ   ಯಾವ ಅತ್ಯಂತ ಕಷ್ಟ ಪರಿಸ್ಥಿತಿಯಲ್ಲೂ ಸಮಂಜಸ ಕಾರ್ಯ ಕೈಗೊಳ್ಳದೇ ಇರುವ ಪ್ರದಾನಿ ಇದ್ದರೆ ಎಷ್ಟು ಬಿಟ್ಟರೆ ಎಷ್ಟು ಅಲ್ಲವೇ? ನೀವೇ ಹೇಳಿ ಈಗಿನ ನಮ್ಮ ಪ್ರದಾನಿಗಳು ಮಾಡಿದ ಯಾವ ಯೋಜನೆ ನಿಮ್ಮ ತಾಲೂಕ್ ಜಿಲ್ಲೆ ಅಥವಾ ರಾಜ್ಯದಲ್ಲಿ ಯಶಸ್ವಿಯಾಗಿದೆ ಅಥವಾ ಜನಪ್ರಿಯವಾಗಿದೆ?

ಇನ್ನೂ ನಮ್ಮ ಮಣ್ಣಿನ ಮಗ ನ ಬಗ್ಗೆ ಯೋಚಿಸುವುದೂ ಕಷ್ಟ ಕಂಡ ಕಂಡ ಸಭೆಗಳಲ್ಲಿ ನಿದ್ರಿಸುವುದು ಜೊತೆಗೆ ತಮ್ಮ ಮಕ್ಕಳ ಗುಣಗಾನ ಮಾಡುವುದು, ಸಭೆಗಳಲ್ಲಿ ಅಳುವುದು ಹೆಗಲಮೇಲೊಂದು ಸುಮ್ಮನೆ ತೋರುಗಾಣಿಕೆಗೆ ಹಸಿರು ಶಾಲು ಆಹಾ ನಾಟಕ ಕಲಾವಿದರು…ಅವರೆಲ್ಲಾದರೂ ಪರದಾನಿಯಾದರೆ ಭಾರತ ದೇಶದ ಹೆಸರನ್ನ ತೆಗೆದು ಇಡೀ ದೇಶಕ್ಕೆ ದೇಶವನ್ನೆ ಮಾರುವ ಕೆಲಸ ಮಾಡಿ ಬಿಟ್ಟಾರು…

ನನ್ನ  ಅಭಿಪ್ರಾಯ ಇಷ್ಟೇ ಸ್ನೇಹಿತರೇ…. ನಮ್ಮ ಮುಂದಿನ ಪೀಳಿಗೆ ಅಂದರೆ ನಮ್ಮ ಮಕ್ಕಳು ಹಾಗೂ ಅವರ ಮಕ್ಕಳು ನೆಮ್ಮದಿಯ ಬದುಕು ಸಾಗಿಸಬೇಕಾದರೆ ನಾವು ಸಮರ್ಥ ವ್ಯಕ್ತಿಯನ್ನ ನಮ್ಮ ದೇಶದ ನಾಯಕನನ್ನಾಗಿ ಮಾಡಬೇಕು ಅಲ್ಲವೇ? ಇಲ್ಲವೆಂದರೆ ನಮ್ಮ ಕಣ್ಣೆದುರೆ ನಮ್ಮ ಹೆಣ್ಣುಮಕ್ಕಳು ಬಲಾತ್ಕಾರಕ್ಕೆ ಒಳಗಾಗುವುದನ್ನ ನೋಡಬೇಕಾಡಿತು, ನಮ್ಮನ್ನ ನಡು ರಸ್ತೆಯಲ್ಲೇ ದೋಚುವ ಕಳ್ಳರ ಸಾಮ್ರಾಜ್ಯ ಸೃಷ್ಟಿಯಾದೀತು.ಮತಾಂತರ ಆತಂಕವಾದ ಇವುಗಳು ಹೆಚ್ಚಿ ನಮ್ಮ ನಾಡು ನುಡಿ ಸಂಸ್ಕೃತಿಯ ವೈಕುಂಠ ಸಮಾರಾಧನೆಯನ್ನ ನೋಡಬೇಕಾಗುತ್ತದೋ ಏನೋ…. ರಾಮನಾಳಿದ ನಾಡು ,ಭರತ ನ ಬೀಡು…ಸುಸಂಸ್ಕೃತಿಯ ನೆಲೆವೀಡು ಒಂದು ಕಾಲಕ್ಕೆ ಬರೀ ಪಳೆಯುಳಿಕೆಗಳಾಗಿ ಹೋಗಬಾರದು ನಮ್ಮಿಂದ ಏನು ಸಾಧನೆ ಮಾಡಲಾಗದಿದ್ದರೂ ಅಡ್ಡಿ ಇಲ್ಲ ನಮ್ಮಲ್ಲಿರುವ ಒಳ್ಳೆಯ ಸಂಸ್ಕೃತಿ ಶಾಂತಿಯುತ ಬಾಳ್ವೆಗೆ ಸಹಕಾರಿಯಾಗುವ ಸಮಾಜವನ್ನಾದರೂ ಮುಂದಿನ ನಮ್ಮ ಮಕ್ಕಳಿಗೆ ಬಿಟ್ಟು ಹೋಗುವ ಗುರುತರ ಜವಭ್ದಾರಿ ನಮ್ಮ ಮೇಲಿದೆ ….ಎನಂತೀರಿ ನಿಮ್ಮ ಅಭಿಪ್ರಾಯಗಳು ಹರಿದು ಬರಲಿ..ಮತ್ತೆ ಸಿಗುತ್ತೇನೆ..

ಕನ್ನಡ ಮತ್ತು ಇಂಗ್ಲೀಷ್

ಜೂನ್ 7, 2012

ನಮಸ್ಕಾರ ಸ್ನೇಹಿತರೇ ಹೇಗಿದ್ದೀರಿ? ಎಷ್ಟೊಂದು ದಿನ ಆಯಿತಲ್ಲ ನಿಮ್ಮನ್ನ ಭೇಟಿಮಾಡಿ, ಹಾಗಾಗಿ ನಿಮ್ಮೊಂದಿಗೆ ಮತ್ತೆ ಮಾತಾಡಬೇಕು ಅನ್ನಿಸಿದೆ, ಮತ್ತೊಂದು ವಿಷಯಸಿಕ್ಕಿದೆ, ಬನ್ನಿ ಸ್ವಲ್ಪ ಹೊತ್ತು ವಿಚಾರ ವಿನಿಮಯ ನೆಡೆಸೋಣ ಏನಂತೀರಿ?

ಇತ್ತೀಚೆಗ ನಮ್ಮ ಘನ ಸರ್ಕಾರ , ಸರ್ಕಾರಿ ಶಾಲೆಗಳಲ್ಲಿ 6ನೇ ತರಗತಿಯಿಂದ ಇಂಗ್ಲೀಷ್ ಕಲಿಕೆಯನ್ನು ಪ್ರಾರಂಭಗೊಳಿಸುವ ಚಿಂತನೆಯನ್ನ ನೆಡೆಸಿದೆ ಅದಕ್ಕೆ ಪೂರಕವಾದ ಅಧಿಕೃತ ಆದೇಶ ಹೊರಬೀಳಬೇಕಿದೆ ಅಷ್ಟೇ….ಆದರೆ ಅದರ ಪರ ಹಾಗೂ ವಿರೋಧ ಚರ್ಚೆಗಳು ಶುರುವಾಗಿಬಿಟ್ಟಿದೆ……ಆದರೆ ಒಬ್ಬ ಸಾಮಾನ್ಯ ಕನ್ನಡಿಗನಾಗಿ ನಮ್ಮ ಚಿಂತನೆ ಏನು ಅನ್ನುವುದು ಅಲ್ಲವೇ?

ಎಷ್ಟೋ ಸಲ ನೋಡಿದ್ದೇವೆ, ನಮ್ಮ ವಿದ್ಯಾರ್ಥಿಗಳು  ಸರ್ಕಾರಿ ಶಾಲೆಗಳಲ್ಲಿ ಕಾಲೇಜುಗಳಲ್ಲಿ ಓದಿ ನಂತರ ಈಗಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಕೇವಲ ಇಂಗ್ಲೀಷ್ ಭಾಷೆಯ ಪ್ರೌಡಿಮೆಯ ಕೊರತೆಯಿಂದಾಗಿ ತಮ್ಮನ್ನ ತಾವು ಎಷ್ಟು ಸಮರ್ಥರೆಂದು ತೋರಿಸಿಕೊಳ್ಳಲಾಗದೆ ತೊಳಲಾಡುವುದನ್ನ. ಹಾಗೆ ಎಷ್ಟೋ ಹುಡುಗರು ನಮ್ಮ ಕಾಲದಲ್ಲಿ ಇಂಗ್ಲೀಷ್ ಪೇಪರ್ ನ ಮೂರು ಅಥವಾ ಅದಕ್ಕಿಂತ ಹೆಚ್ಚುಬಾರಿ ಬರೆದು ತಮ್ಮ  ಎಸ್ ಎಸ್ ಎಲ್ ಸಿ ಯನ್ನ ಪಾಸ್ ಮಾಡಿಕೊಂಡಿದ್ದನ್ನ ಕಂಡಿದ್ದೇವೆ, ಇನ್ನೂ ಕೆಲವರಂತೂ ಇಂಗ್ಲೀಷ್ ಪೇಪರ್ ಫೈಲ್ ಆಗಿದೆ ಅಂತ ಗೊತ್ತಾಗ್ತಾ ಇದ್ದ ಹಾಗೆ ತಮ್ಮ  ಶಿಕ್ಷಣವನ್ನೇ ನಿಲ್ಲಿಸಿ ಸಣ್ಣ ಪುಟ್ಟ ಕೆಲಸ ಮಾಡಿಕೊಂಡು ಸಂಸಾರದ ಸಾವಿರ ಸಾವಿರ ತಲೆಬಿಸಿಯನ್ನ ಹೆಗಲ ಮೇಲೆ ಅತ್ಯಂತ ಚಿಕ್ಕ ವಯಸ್ಸಿನಲ್ಲೇ ಹೊತ್ತಿರುವುದನ್ನ ನೋಡಿ ಒಮ್ಮೆ ಮರುಗಿ ಹೋಗಿದ್ದೇವೆ ಅಲ್ಲವೇ? ಯಾರಿಗೆ ಗೊತ್ತು ಅವರಿಗೆ ಸ್ವಲ್ಪ ಹೆಚ್ಚಿನ ಅವಕಾಶ ಸಿಕ್ಕಿದ್ದರೆ ಹೆಚ್ಚು ಓದಿ ಒಳ್ಳೆಯ ರೀತಿಯಲ್ಲಿ ಸಮಸ್ಯೆಗಳನ್ನ ಎದುರಿಸುವ ಶಕ್ತಿ ಹೊಂದಿರುತ್ತಿದರೋ ಏನೋ?

ಇಂಗ್ಲೀಷ್ ಸಮಸ್ಯೆಗಳು ಇಲ್ಲಿಗೆ ನಿಂತಿಲ್ಲ , ಎಷ್ಟೋ ಬಾರಿ ನಮ್ಮ ರೈತ ಭಾಂದವರು ಮೋಸ ಹೋಗಿದ್ದೂ ಉಂಟು, ಅವರಿಗೆ ಬಂದ ನೋಟೀಸ್ , ಕಾಗದ, ಅಥವಾ ಬಂದ ಇನ್ನೇನೋ ಸರ್ಕಾರಿ ಆದೇಶಗಳನ್ನ ಸ್ವತಃ ಓದಿ ಅರ್ಥಮಾಡಿಕೊಳ್ಳಲಾಗದೆ ಯಾರೋ ಊರಲ್ಲಿ ಅರೆ ಬರೆ ಓದಿದ ವ್ಯಕ್ತಿಯ ಹತ್ತಿರ ಅದನ್ನ ಕೊಟ್ಟು ಓದಿಸಿ, ನಂತರ ಏನೂ ಗೊತ್ತಾಗದೆ ಸರ್ಕಾರಿ ಕಚೇರಿಗಳಿಗೆ, ಮಧ್ಯವರ್ತಿಗಳೊಂದಿಗೆ, ಓಡಾಡಿ ದುಡ್ಡು ತಿನ್ನಿಸಿ ಲಂಚದ ಬಲೆಯಲ್ಲಿ ಬಿದ್ದು, ಕೊನೆಗೆ ನಿರಾಶೆಯ ಕೈ ಹೊತ್ತು ಕೂತಿರುವುದನ್ನ ನೋಡಿದರೆ ತುಂಬಾ ಬೇಸರವಾಗುತ್ತದೆ ಅಲ್ಲವೇ?

ಯಾರೋ ದೊಡ್ಡದಾಗಿ ಇಂಗ್ಲಿಷ್ ಪೇಪರ್ ನ ಓದುವುದನ್ನ ನೋಡಿದಾಗ, ಎಲ್ಲೋ ಯಾರೋ ಅರೆ ಬರೆ ಇಂಗ್ಲೀಷ್ ಮಾತಾಡೋವಾಗ, ಇನ್ನೂ ಯಾರೋ ಒಮ್ಮೆ ತಮ್ಮ ದೊಡ್ಡತನ ತೋರಿಸಿಕೊಳ್ಳಲು ಇಂಗ್ಲೀಷ್ ನಲ್ಲೇ ಮಾತಾಡಿಸಿದಾಗ ಅದೆಷ್ಟು ಬಾರಿ ಯೋಚಿಸಿಲ್ಲ ….. ಛೇ ನನಗೇಕೆ ಹಾಗೆ ಇರಲು ಸಾದ್ಯವಿಲ್ಲ? ನನ್ನಲ್ಲಿ ಇಷ್ಟು ಜ್ಞಾನವಿದ್ದರೂ ಯಾಕೆ ಬೇರೆಯವರೊಂದಿಗೆ ಹಂಚಿಕೊಳ್ಳಲು ಸಾದ್ಯವಿಲ್ಲ ? ನಾನೇಕೆ ಅಷ್ಟು ಹೆದರುತ್ತೇನೆ ಇವರ ಮುಂದೆ ? ಈ ಎಲ್ಲ ಪ್ರಶ್ನೆಗಳೂ ನಮ್ಮನ್ನ ಹಲವು ಬಾರಿ ಕಾಡಿವೆ ಹಾಗೆ ಕಾಡುತ್ತಲೇ ಇವೆ.

ಈಗ ಕನ್ನಡ ದಲ್ಲಿಯೇ ಕಡ್ಡಾಯ ಶಿಕ್ಷಣ ಅನ್ನುವುದನ್ನ ಒಪ್ಪಿದೆವು ಅಂದುಕೊಳ್ಳೋಣ……ನೋಡಿ ಅದೆಷ್ಟೋ ಲಕ್ಷಾಂತರ ಜನ ಪ್ರತಿವರ್ಷ ನಮ್ಮ ದೇಶದ ವಿವಿದ ಭಾಗಗಳಿಂದ ತಮ್ಮ ಇಂಜೀನಿರಿಯಂಗ್ , ಪದವಿಗಳನ್ನ ಮುಗಿಸಿಕೊಂಡು ಹೊರಬರುತ್ತಾರೆ ಅವರೆಲ್ಲರಿಗೂ ಅವರ ಮಾತೃಬಾಷೇಯನ್ನೇ  ಉಪಯೋಗಿಸಿಕೊಂಡು ಕೆಲಸ ಮಾಡುವ ಅವಕಾಶ ಸಿಗುತ್ತದೆಯೇ? ಇಲ್ಲವೇ ಎಲ್ಲ ಸ್ನೇಹಿತರೇ,ಈಗಿನ ಎಲ್ಲ ಕಾರ್ಪೊರೇಟ್ ಕಂಪನಿಗಳು, ಸಂಸ್ಥೆಗಳು ಇಂಗ್ಲೀಷ್ ನಲ್ಲೇ ಸಂದರ್ಶನ ಮಾಡುವುದು ಅಲ್ಲವೇ? ಅದಿರಲಿ ಎಲ್ಲರಿಗೂ ಅವರ ರಾಜ್ಯದಲ್ಲಿಯೇ ಕೆಲಸ ಸಿಗುತ್ತದೆಯೇ? ಇಲ್ಲ ಅವರು ಬೇರೆ ಕಡೆ ಹೋಗಲೇ ಬೇಕು ಆಗ ತಕ್ಷಣ ಅಲ್ಲಿನ ಸ್ಥಳೀಯ ಭಾಷೆಯನ್ನ ಕಲಿತುಬಿಡುವುದು ಸಾದ್ಯವೇ? ಹಾಗೆ ಸರ್ಕಾರಿ ಶಾಲೆಗಳಲ್ಲಿ 10 ನೇ ತರಗತಿಯವರೆಗೆ ಕನ್ನಡ ಕಡ್ಡಾಯ ಮಾಡಿದರೆ ಖಾಸಗೀ ಶಾಲೆಗಳು ಇಂಗ್ಲೀಷ್ ಅನ್ನ ಚನ್ನಾಗಿ ಕಲಿಸುತ್ತವೆ, ಆಗ ನಮ್ಮ ಸರ್ಕಾರಿ ಶಾಲೆಗಳಲ್ಲಿ ಓದಿದ ನಮ್ಮ ಹುಡುಗರು ಕಾನ್ವೆಂಟ್ ಹುಡುಗರ ಮಧ್ಯೆ ಸ್ಪರ್ಧೆ ಮಾಡಲಾಗದೆ ಅವಕಾಶ ವಂಚಿತರಾಗುವುದಿಲ್ಲವೇ? ಹಾಗೆ ನಾವು ಯಾವುದೇ ವೃತ್ತಿ ತರಬೇತಿ ಅಥವಾ ಮೆಡಿಕಲ್, ಇನ್ನೇನೋ ಓದಲು ಹೋದಾಗ ಇಂಗ್ಲೀಷಿನಲ್ಲೇ ಓದಬೇಕು ಆಗ ನಮಗೆ ಆ ಭಾಷೆಯ ಬಗ್ಗೆ ಸ್ವಲ್ಪವೂ ಅರಿವಿಲ್ಲ ಎಂತಾದರೆ ನಾವು ಎಷ್ಟರ ಮಟ್ಟಿಗೆ ಯಶಸ್ವಿಯಾಗಬಹುದು?

ಈಗ ಮೈಕ್ರೋ ಕಂಪ್ಯೂಟರ್ ಗಳು, ಟ್ಯಾಬ್ಲೇಟ್ ಪಿ ಸಿ ಗಳ ಕಾಲ, ಇಡೀ ಪ್ರಪಂಚ ಒಂದು ಚಿಕ್ಕ ಗ್ರಾಮದಂತೆ ಕ್ಷಣಾರ್ಧದಲ್ಲಿ ಕನೆಕ್ಟ್ ಆಗಿಬಿಡುತ್ತದೆ, ಆಗ ನಮಗೆ ಕೇವಲ ಕನ್ನಡ ಮಾತ್ರ ಗೊತ್ತಿದ್ದರೆ ಸಂಪರ್ಕ ಭಾಷೆಯಾದ ಇಂಗ್ಲೀಷ್ ಗೊತ್ತಿಲ್ಲ ಅಂದರೆ, ಹೇಗೆ ಹೊರಗಿನ ಪ್ರಪಂಚದೊಂದಿಗೆ ನಾವೂ ಕೂಡ ಸೇರಿಕೊಳ್ಳುವುದು? ಹಾಗೆಂದು ಪ್ರತಿಯೊಬ್ಬರೂ ಸ್ಪಷ್ಟವಾಗಿ ಇಂಗ್ಲೀಷ್ ನಲ್ಲೇ ಮಾತನಾಡಬೇಕು ಅಂತಲ್ಲ ಆದರೆ ನಮಗೆ ಕನ್ನಡದಂತೆಯೇ ಇಂಗ್ಲೀಷ್ ನ ಜ್ಞಾನವೂ ಇರಬೇಕು ಅಲ್ಲವೇ….? ಕೊನೆಯ ಪಕ್ಷ ನಮಗೆ ಬೇರೆ ಕ್ಷೇತ್ರಗಳಲ್ಲಿ ಹೋಗಿ  ಅಧ್ಯಯನ ಮಾಡಲು ಸಹಕಾರಿಯಾಗುವ ಮಟ್ಟಿಗೆ ತಿಳಿದಿದ್ದರೆ ಸಾಕು.

ಹಾಗೆಂದು ನನ್ನ ಅಭಿಪ್ರಾಯ ಸಂಪೂರ್ಣ ಇಂಗ್ಲೀಷ್ ಶಿಕ್ಷಣ ಕೊಡಬೇಕು ಅಂತಲ್ಲ, ಸಮಾನಾಂತರವಾಗಿ ಕನ್ನಡ ಹಾಗೂ ಇಂಗ್ಲೀಷ್ ನ ಶಿಕ್ಷಣ ನೆಡೆಯಲಿ ಅಷ್ಟೇ, ಕನ್ನಡ ಒಂದು ಸ್ಥಳೀಯ ಭಾಷೆಯಾಗಿ, ಜೊತೆಗೆ ಇಂಗ್ಲೀಷ್ ಒಂದು ಸಂಪರ್ಕ ಬಾಷೆಯಾಗಿ ಭೋದಿಸುವ ಕೆಲಸ ನೆಡೆಯಲಿ, ನಮ್ಮ ಕನ್ನಡ ಪ್ರೇಮವನ್ನ ನಮ್ಮ ಹೃದಯದಲ್ಲೇ ಇಟ್ಟುಕೊಂಡು ಕನ್ನಡ ಭಾಷೆಯನ್ನ ಎಲ್ಲೆಡೆ ಬಳಸೋಣ, ನಮ್ಮ ಸಾಹಿತ್ಯವನ್ನ ಪುರಸ್ಕರಿಸೋಣ ವ್ಯವಹಾರಿಕವಾಗಿ ಇಂಗ್ಲೀಷ್ ಬಳಕೆಯ ಅಗತ್ಯತೆ ಬಂದಾಗ ನಾವು ಯಾರಿಗೂ ಕಮ್ಮಿ ಇಲ್ಲ ಅನ್ನೋದನ್ನ ತೋರಿಸಿ ಕೊಡೋಣ. ಅದನ್ನ ಬಿಟ್ಟು ಕನ್ನಡದಲ್ಲಿ ಮಾತ್ರ ಶಿಕ್ಷಣ ಕೊಡಬೇಕು ಅನ್ನುವುದು ಸಮಂಜಸವಲ್ಲ ಅಲ್ಲವೇ? ಹಾಗೆ ನಾವು ಕನ್ನಡದಲ್ಲೇ ಓದಿರೋದು ಇಡೀ ಪ್ರಪಂಚ ನಮ್ಮೊಂದಿಗೆ ಕನ್ನಡದಲ್ಲೇ ವ್ಯವಹರಿಸಬೇಕು ಅಂದರೆ ಅದನ್ನ ಪ್ರಪಂಚ ಕೇಳುತ್ತದೆಯೇ? ಒಂದು ವಿಚಾರ ಸ್ಪಷ್ಟ ಸ್ನೇಹಿತರೇ ನಮಗೆ ಇಂತಹ ಒಂದು ಭಾಷೆಯಲ್ಲಿ ಮಾತ್ರ ವ್ಯವಹಾರ ಗೊತ್ತಿರೋದು ನಮಗೆ ಕೆಲಸ ಕೊಡಿ ಅಂತ ಎಲ್ಲಾದರೂ ಹೋಗಿ ಕೇಳಿದರೆ………ಏನು ಹೇಳಿಯಾರು ಯೋಚಿಸಿ ನೋಡಿ.. ನಾವಿಲ್ಲದಿದ್ದರೆ ನಮ್ಮನ್ನ ಮೀರಿಸುವ ಜನ ಇಲ್ಲಿ ಇದ್ದಾರೆ ಅವರು ಆ ಒಳ್ಳೆಯ ಅವಕಾಶವನ್ನ ನಮ್ಮಿಂದ ಕಸಿದುಕೊಂಡು ಬಿಡುತ್ತಾರೆ ಅದಕ್ಕೆ ನಾವು ಕನ್ನಡಿಗರು ಆಸ್ಪದ ಕೊಡಬೇಕೇ? ಇನ್ಯಾರೋ ಬೇರೆ ರಾಜ್ಯದಿಂದ ಬಂದು ಇಲ್ಲಿ ನಮಗೆ ಸಿಗಬೇಕಾದ ಅವಕಾಶಗಳನ್ನ ಕಿತ್ತು ಅವರು ಅದನ್ನ ಪಡೆಯುವುದನ್ನ ನೋಡಿದರೆ ನಮಗೆ ಬೇಸರವಾಗುವುದಿಲ್ಲವೇ? ನಾವು ಒಂದೇ ಬಾಷೆಗೆ ನಮ್ಮನ್ನ ಸೀಮಿತಗೊಳಿಸಿಕೊಂಡು ಬಿಟ್ಟರೆ ಅನ್ಯ ಬಾಷಿಗರು ಬೆಂಗಳೂರಿನಂತಹ ನಗರಗಳಲ್ಲಿ ಬಂದು ನಮ್ಮ ಮೇಲೆ ದಬ್ಬಾಳಿಕೆ ಮಾಡುವುದನ್ನ ಕಾಣಬೇಕಾಗುತ್ತದೆ ಏನಂತೀರಿ?

ಸ್ನೇಹಿತರೇ ಇದು ವ್ಯವಹಾರದ ಯುಗ, ಭಾರತದಂಥ ದೇಶಗಳು ತಮ್ಮ ವ್ಯವಹಾರಕ್ಕಾಗಿ ಅವಲಂಬಿಸಿರುವುದು ಇತರ ರಾಷ್ಟ್ರಗಳನ್ನ, ಹಾಗೆ ಬಹುಪಾಲು ರಾಷ್ಟ್ರಗಳು ಇಂಗ್ಲೀಷ್ ಅನ್ನ ಸಂಪರ್ಕಬಾಷೆಯನ್ನಾಗಿ ಮಾಡಿಕೊಂಡಿವೆ, ಅವರೆಲ್ಲ ನಮಗೆ ಏನಾದರೂ ವಹಿವಾಟು ನೀಡಬೇಕಾದರೆ ಅವರೊಂದಿಗೆ ನಾವು ಚೆನ್ನಾಗಿ ಚರ್ಚೆಮಾಡಿ, ಅವರನ್ನ ಒಪ್ಪಿಸಿ ವ್ಯಾಪಾರ ಕುದುರಿಸಬೇಕು….ಹಾಗಾಗಿ ಇಂಗ್ಲೀಷ್ ಅತ್ಯಂತ ಮುಖ್ಯ,ಅದನ್ನ ಮನಗಂಡು ನಮ್ಮ ವ್ಯವಹಾರಕ್ಕೆ ಎಷ್ಟುಬೇಕೋ ಅಷ್ಟು ಪ್ರೌಡಿಮೆಯನ್ನ ನಾವು ಪಡೆದು ಕೊಳ್ಳಲು ನಮ್ಮ ಶಿಕ್ಷಣ ನೆರವಾಗಬೇಕು ನಮಗೆ.

ಈ ವಿಚಾರದಲ್ಲಿ ಕನ್ನಡ ಸಾಹಿತ್ಯ ಚಿಂತಕರಿಗೂ, ಕನ್ನಡ ಪ್ರೇಮಿಗಳಿಗೂ ನನ್ನ ಸಂಪೂರ್ಣ ಬೆಂಬಲ ಇದ್ದೇ ಇದೆ, ನಮ್ಮ ನಾಡು ನುಡಿ, ಜಲ ನೆಲದ ಇತಿಹಾಸ, ಸಂಸ್ಕೃತಿಯನ್ನ ಖಂಡಿತಾ ನಾವು ಮುಂದಿನ ಪೀಳಿಗೆಗೆ ನೀಡಲೆ ಬೇಕು, ಅದು ಪ್ರತಿಯೊಬ್ಬ ಕನ್ನಡಿಗನ ಕರ್ತವ್ಯ ಕೂಡ ಆದರೆ ನಾವೂ ಪ್ರೀತಿಸುವ ಭಾಷೆಯಾಗಿ ನಮ್ಮ ಮನದಲ್ಲಿ ಕನ್ನಡ ಸದಾ ಇರಲಿ ಅದನ್ನ ಒಗ್ಗಟ್ಟು, ಹೊಂದಾಣಿಕೆ, ಪ್ರೀತಿ ವಿಶ್ವಾಸದ ಮೂಲಕ ಎಲ್ಲರೊಂದಿಗೆ ಹಂಚಿಕೊಳ್ಳೋಣ ಆದರೆ ಸಂಪರ್ಕ ಭಾಷೆಯಾಗಿ ಇಂಗ್ಲೀಷ್ ಅದು ಹೇಗೋ ಒಗ್ಗಿಕೊಂಡು ಬಿಟ್ಟಿದೆ ಹಾಗಾಗಿ ಅದು ನಮಗೆ ಗೊತ್ತಿಲ್ಲ ಅಂತ ಯಾಕೆ ಆಗಬೇಕು……ಬೇರೆಯವರೊಂದಿಗೆ ತಲೆ ಎತ್ತಿ ಹೆಮ್ಮೆ ಇಂದ ಹೇಳೋಣ ನಾವೂ ಆಧುನಿಕ ಪ್ರಪಂಚವನ್ನ ಎದುರಿಸುವಲ್ಲಿ ಸರ್ವ ಸಮರ್ಥರು ಅನ್ನುವುದನ್ನ,

ಕೊನೆಯದಾಗಿ: ಕನ್ನಡ ಮಾಧ್ಯಮವಾಗಿರಲಿ, ಅಥವಾ ಇಂಗ್ಲೀಷ್ ಮಾಧ್ಯಮವೇ ಆಗಿರಲಿ, ಆದರೆ ನಿಮ್ಮ ಮಾತೃಭಾಷೆಗೆ ಹೆಚ್ಚಿನ ಗೌರವವನ್ನ ನೀಡಿ, ಜೊತೆಗೆ ಸಾಹಿತ್ಯ , ಸಂಸ್ಕೃತಿಯನ್ನ ಉಳಿಸಿ ಬೆಳಸುವ ಕಾರ್ಯದಲ್ಲಿ ಕೈ ಜೋಡಿಸಿ ಹಾಗೆ ಇಂಗ್ಲೀಷ್ ಅನ್ನೋ ಭಾಷೆಯ ಸಮಸ್ಯೆ ಬಂದಾಗ ಅದನ್ನ ದಿಟ್ಟವಾಗಿ ಎದುರಿಸಿ ಯಶಸ್ವಿಯಾಗುವ ತೆರದಲ್ಲಿ ಕಲಿತು ಬಾಳುವಂತಾಗಲಿ, ಆಗ ಈ ಭಾಷಾ ತರತಮ್ಯದ ಸಮಸ್ಯೆ ಯೇ ಇರುವುದಿಲ್ಲ. ಎನಂತೀರಿ? ಮತ್ತೊಮ್ಮೆ ಸಿಗುತ್ತೇನೆ.

ಪಾಕಿಸ್ಥಾನದಲ್ಲಿ ಹಿಂದೂ….!!

ಮಾರ್ಚ್ 26, 2012

ನಮಸ್ತೆ ಸ್ನೇಹಿತರೇ…ಹೇಗಿದೆ ಕೆಲಸ ? ಹೇಗಿದೆ ಜೀವನ? ಮತ್ತೆ ಮತ್ತೆ ಮಾತಾಡೋಕೆ ಬರ್ತಾ ಇದೀನಿ ಇತ್ತೀಚೆಗೆ, ಬೇಜಾರಿಲ್ಲ ತಾನೇ? ಇವತ್ತು ಸ್ವಲ್ಪ ಟೈಮ್ ಇದೆ.. ಏನಾದ್ರೂ ಸ್ವಲ್ಪ ಹರಟೊಣ.. ಎನಂತೀರ? ಇವತ್ತು ನಾನು ನೋಡಿದ ಒಂದು ಚಿಕ್ಕ ವಿಡಿಯೋ ಬಗ್ಗೆ ನಿಮ್ಗೆ ಹೇಳ್ತೀನಿ ನಿಮಗೆ ಏನು ಅನ್ನಿಸ್ತು ಅಂತ ಹೇಳಿ ಓಕೆ ನ?

ನಂಗೂ ನಿಮಗೂ ಎಲ್ಲರಿಗೂ ಗೊತ್ತಿದೆ ನಮ್ಮ ಗಡಿ ಬಾಗದಲ್ಲಿ ನಮ್ಮ ಮಿತ್ರ ದೇಶಗಳು ಅದೆಷ್ಟು ನಾಟಕಗಳನ್ನ ದಿನ ಬೆಳಗಾದ್ರೆ ಮಾಡ್ತಾವೆ ಅಂತ ಅಲ್ವಾ? ಆ ಕಡೆ ಚೀನಾ ಒಂಥರಾ ಬಯಲಾಟ ಮಾಡಿದ್ರೆ, ಈ ಕಡೆ ಬಾಂಗ್ಲಾ ಇನ್ನೊಂದು ತರ , ಮತ್ತೊಂದು ಕಡೆ ನಮ್ಮ ಮುಗ್ಧ ಜನರ ರಕ್ತದ ಕಮಠಿನಲ್ಲೇ ವಿಕೃತ ಸುಖ ಅನುಬವಿಸುವ ಪಾಕಿಸ್ತಾನ, ಅದೆಲ್ಲವನ್ನೂ ಏನೂ ಆಗದಂತೆ ನೋಡುತ್ತಿರುವ ಸೈಲೆಂಟ್ ಮೊಡ್ ಮೇಡಂ ಸರ್ಕಾರ!! ಇದೆಲ್ಲ ನೋಡಿದ್ರೆ ನಮ್ಮೂರಲ್ಲಿ ಬೇಸಿಗೆಯ ಬಿಸಿ ತಾಳಲಾರದೇ ಇಡೀ ಜಗತ್ತು ತಲೆಕೆಳಗಾದರೂ ಗೋಚ್ಚೆಯಲ್ಲಿ ಬಿದ್ದು ದೇಹ ತಣ್ಣಗೆ ಇಟ್ಟುಕೊಳ್ಳುವ ಎಮ್ಮೆಯಂತೆ ಕಾಣುತ್ತಾರೆ ನಮ್ಮ ರಾಜಕಾರಣಿಗಳು ಅಲ್ಲವೇ?

ಯಾಕೆ ಹೀಗೆ ನಾನು ಕಠೋರವಾಗಿ ಮಾತಾಡ್ತಾ ಇದೀನಿ ಅಂತೀರಾ? ಹೌದು ಒಮ್ಮೆ ನೀವೂ ಈ ವೀಡಿಯೋಗಳನ್ನ ಯು ಟ್ಯೂಬ್ ನಲ್ಲಿ ನೋಡಿ ಆಮೇಲೆ ನೀವೂ ನನ್ನ ಮಾತನ್ನ ಸಮ್ಮತಿಸ್ತೀರಿ. ಮೊದಲ ವಿಡಿಯೋ , ಹಾಗೆ ಇಲ್ಲಿದೆ ಯೆರಡನೆಯದು ಮತ್ತು ಮೂರನೆಯದು……

ಹೌದು ಪಾಕ್ ಅಲ್ಲಿ ಹಿಂದೂ ಅನ್ನುವ ಕಾರ್ಯಕ್ರಮ ಇತ್ತೀಚೆಗೆ ಸುವರ್ಣ ಸುದ್ದಿವಾಹಿನಿಯಲ್ಲಿ ಪ್ರಸಾರ ಕಂಡಿತ್ತು, ಅದನ್ನ ಅಷ್ಟು ಗಮನ ಕೊಟ್ಟು ನೋಡಿರಲಿಲ್ಲ ಆದರೆ ಅದೇ ವಿಡಿಯೋಗಳು ಯೂಟ್ಯೂಬ್ ನಲ್ಲಿ ಸಿಕ್ಕಿ ಮತ್ತೊಮೆ ನೋಡಿದಾಗ ತುಂಬಾ ಬೇಜಾರ್ ಆಯಿತು, ನಮಗೆಲ್ಲ ಗೊತ್ತಿದೆ ಪಾಕ್ ಇಂದ ಅದೆಷ್ಟುಜನ ನಾವು ಸುಖದ ನಿದ್ದೆ ಮಾಡುತ್ತಿರುವಾಗ ನಮಗೆ ಗಮನವಿಲ್ಲದೇ ನಮ್ಮ ದೇಶದ ಒಳಗೆ ನುಗ್ಗುತ್ತಿದ್ದಾರೆ, ಚೀನದಿಂದ ಅದೆಷ್ಟು ಜನ ಬರುತ್ತಿದ್ದಾರೆ, ಹಾಗೆ ಬಾಂಗ್ಲಾದಿಂದ ಒಳನುಸುಳುವಿಕೆ ಹೇಗಿದೆ ಅಂತ ಅಲ್ವೇ? ಆದರೆ ಬಾಂಗ್ಲಾ ಅನ್ನೋ ಪುಟ್ಟ ದೇಶದಿಂದ ಇಲ್ಲಿವರೆಗೆ ಭಾರತಕ್ಕೆ ಬಂದಿರುವುದು ಎಷ್ಟು ಜನ ಗೊತ್ತೇ? ಬರೋಬ್ಬರಿ 5 ಕೋಟಿ !! ಸರಿ ಸುಮಾರು ಒಂದು ಸಣ್ಣ ಕರ್ನಾಟಕದ ಒಟ್ಟು ಜನಸಂಖ್ಯೆಯಷ್ಟು!! ಹಾಗೆ ನುಗ್ಗಿರುವುದೂ ಅಲ್ಲದೆ ಅವರೆಲ್ಲ ಇಲ್ಲಿನ ಪ್ರಜೆಗಳಾಗಿ, ಮನೆ, ಆಸ್ತಿ, ಬೇಕಾದಷ್ಟೂ ಸಂಪಾದಿಸಿ ಓಟಿ ನ ಅಧಿಕಾರವನ್ನೂ ಕೂಡ ಪಡೆದಿದ್ದಾರೆ, ಅಂದರೆ…….ಏನು ಇದರ ಅರ್ಥ. ???

ಅದಿರಲಿ ಈ ವೀಡಿಯೋದಲ್ಲಿ ತೋರಿಸಿರೋದು ಸುಮಾರು 112…. ಹೌದು ಕೆವಲ ನೂರ ಹನ್ನೆರಡು ಪಾಕಿಸ್ತಾನದ ಹಿಂದೂಗಳು ಭಾರತಕ್ಕೆ ಬಂದಿದ್ದಾರೆ ಅಂತ ,ಅವರಿಗೆ ನಮ್ಮ ಘನ ಸರ್ಕಾರ ಆ 5 ಕೋಟಿ ಜನರಿಗೆ ಕೊಟ್ಟಷ್ಟು ಸೌಲಭ್ಯಗಳನ್ನ ಕೊಡೋದು ಹಾಗಿರಲಿ, ಅವರಿಗೆ ಇರಲು ಜಾಗವನ್ನೂ ಕೊಡುತ್ತಿಲ್ಲ, ಅವರಿಗೆ ಕೂಲಿ ಕೆಲಸವನ್ನ ಕೂಡ ನಮ್ಮ ದೇಶದ ಜನ ಕೊಡಲು ಒಪ್ಪುತ್ತಿಲ್ಲ, ಅವರ ಗೇಣು ಉದ್ದದ ಹೊಟ್ಟೆ ಪುಟ್ ಪಾತಿನ ಮೇಲೆ ಬಿದ್ದು ವಿಲ ವಿಲ ಒದ್ದಾಡುತ್ತಿದೆ…..ಅಲ್ಲಿರುವ ಮಕ್ಕಳು, ಅಂಗವಿಕಲರು, ಮುದುಕರು ಆತ್ತ ಸಾಯಲೂ ಆಗದೆ ಬದುಕಲೂ ಆಗದೆ ನರಳಾಡುವಂತಾಗಿದೆ……..

ಹಾಗಾದರೆ ಅವರೆಲ್ಲ ಇಲ್ಲಿ ಇಷ್ಟು ಕಷ್ಟ ಪಡುವ ಬದಲು ಅವರ ತವರಾದ ಪಾಕಿಸ್ತಾನಕ್ಕೆ ಮರಳಿ ಹೋಗಬೌದಲ್ಲ? ಅಂತ ಅನ್ನಿಸಬಹುದು, ಆದರೆ ಅಲ್ಲಿನ ಪರಿಸ್ಥಿತಿ ಹೇಗಿದೆ ಅಂದರೆ ಯಾವಾನಾದರೂ ಒಬ್ಬ ಹಿಂದೂವಿನ ಮಗಳು 12 ವರ್ಷ ತುಂಬಿದಳು ಅಂತ ಗೊತ್ತಾದ ತಕ್ಷಣ ಅಲ್ಲಿನ ಟೋಪಿಧಾರಿ 60 ವರ್ಷದ ಮುದುಕ ಆ ಮಗುವನ್ನ ಬಲಾತ್ಕಾರ ಮಾಡಿ ತನ್ನ 6 ನೇ ಹೆಂಡತಿಯನ್ನಾಗಿಸಿಕೊಂಡು ನಿಖಾ ಮಾಡಿಕೊಂಡು ಬಿಡುತ್ತಾನಂತೆ……… ದಿನ ಬೆಳಗಾದರೇ ಮತಾಂತರ,ಅತ್ಯಾಚಾರ, ಹಾಗೆ ಪಾಕಿಸ್ತಾನದ ಚರಂಡಿಗಳನ್ನ ಕ್ಲೀನ್ ಮಾಡೋಕೆ ಹಿಂದುಗಳನ್ನ ಬಳಸಿಕೊಂಡು ಆನಂತರ ಅವರನ್ನ ಕಾಮದಾಸೆಗೆ ಬಲಿಕೊಡುವ ನಿರಂತರ ಶೋಷಣೆ ಮಾಡ್ತಾನೆ ಬಂದಿದೆ ಪಾಕ್!! ಹಾಗಾದರೆ ಯೋಚಿಸಬೇಕು,ಯಾಕೆ ಈ ರೀತಿಯ ಮನುಷ್ಯರೂಪದ ಮೃಗಗಳು ಇರುವೆಡೆ ನಮ್ಮ ಹಿಂದೂಗಳು ಇರಬೇಕು? ಅಂತ.

1951 ರ ಪಾಕ್ ಜನಗಣತಿಯ ಸಂಧರ್ಭದಲ್ಲಿ ಅಲ್ಲಿಯ ಒಟ್ಟು ಹಿಂದೂಗಳ ಸಂಖ್ಯೆ ಶೇಕಡಾ 21 ರಷ್ಟು ಇತ್ತು ಆದರೆ ಈಗ ಅಲ್ಲಿ ಇರುವ ಒಟ್ಟು ಹಿಂದೂಗಳ ಸಂಖ್ಯೆ ಕೇವಲ ಶೇಕಡಾ 1.7 !!! ಯೋಚಿಸಿನೋಡಿ ಹಾಗಾದರೆ ಶೇಕಡಾ 21 ರ ಆ ಜನ ಎಲ್ಲಿ ಹೋದರು? ಮೇಲೆ ಹೇಳಿದಾಹಾಗೆ ದೌರ್ಜನ್ಯಕ್ಕೆ ಒಳಗಾಗಿ ಒಂದೋ ಪ್ರಾಣ ಬಿಟ್ಟರು ಇಲ್ಲ ಒತ್ತಡದ ಮತಾಂತರ ನೆಡೆಸಲಾಯಿತು…..ಹಾಗೆ ಅಲ್ಲಿನ ಒಟ್ಟು ದೇವಸ್ತಾನಗಳು ಆಗ 428 ಇದ್ದವು ಆದರೆ ಈಗ ಕೇವಲ ಉಳಿದಿರುವುದು 26!! ಅದನ್ನ ಕೂಡ ಪಾಕಿಸ್ತಾನದ ಮಿಲಿಟರಿ ತನ್ನ ಶಕ್ತಿ ಉಪಯೋಗಿಸಿ ನೆಲಸಮ ಮಾಡಿ ಅಳಿದ ಉಳಿದ ಅವಶೇಷಗಳು. ಹಾಗಾಗಿ ಅಲ್ಲಿನ ಹಿಂದುಗಳು ಪೂಜೆ ಮಾಡಬೇಕು ಅಂದರೆ ನೂರಾರು ಕಿಲೋಮೀಟರ್ ದೂರ ದೇವಸ್ಥಾನ ಹುಡುಕಿಕೊಂಡು ಹೋಗಬೇಕು, ಮನೆಯಲ್ಲೇ ಪೂಜೆ ಮಾಡೋಣ ಅಂದರೆ ಹೇಳಿದ ಮಂತ್ರ, ಪ್ರಾರ್ಥನೆ ಮತ್ತು ಬಾರಿಸಿದ ಘಂಟೆ ಪಕ್ಕದ ಮನೆಯವರಿಗೆ ಕೇಳಿಸಬಾರದು ಹಾಗೆಲ್ಲಾದರೂ ಅಪ್ಪಿ ತಪ್ಪಿ ಕೇಳಿಸಿತೋ ಅಲ್ಲಿನ ಹಿಂದೂ ಅವತ್ತೇ ಕೊಲೆಯಾಗಿ ಹೋಗಿರುತ್ತಾನೆ. ಒಂದು ಕೇಜಿ ರೇಷನ್ ಅಂತ ಯಾವತ್ತೂ ಅವರು ಹಿಂದುಗಳಿಗೆ ಕೊಡಲ್ಲ. ಬೇರೆ ಕಡೆ ಕೆಲಸ ಮಾಡಿಕೊಂಡು ಬದುಕುತ್ತೇವೆ ಅಂದರೆ ಬಿಡಲ್ಲ….

ನಾನು ಯಾವುದೋ ಒಂದು ಪಿಚ್ಚರ್ ಹಿಂದಿಯಲ್ಲಿ ನೋಡಿದ ನೆನಪು ಅದರಲ್ಲಿ ಒಬ್ಬ ಹಿಂದೂ ಭಾರತದ ಗಡಿಯೊಳಗೆ ಗೊತ್ತಿಲ್ಲದೆ ಪಾಕಿಸ್ತಾನದಿಂದ ನುಗ್ಗಿಬಿಡುತ್ತಾನೆ ಅವನನ್ನ ಇಲ್ಲಿ ಜೈಲಿಗೆ ಹಾಕಲಾಗುತ್ತೆ ಅದೂ ಬರೋಬ್ಬರಿ 2 ವರ್ಷ!!..

ಇಲ್ಲಿ ನೋಡಿದರೆ ಕೇವಲ 2% ರಷ್ಟಿದ್ದ ಮುಸ್ಲಿಂ ಭಾ0ದವರು ಇವತ್ತು 30% ಕ್ಕೂ ಹೆಚ್ಚು ಬೆಳೆದು ನಿಂತಿದ್ದಾರೆ, ಅವರಿಗೆ ಹಿಂದುಗಳಿಗೂ ಇಲ್ಲದ ವಿಶೇಷ ಸೇವೆ ಆದರ-ಆತಿಥ್ಯ ಸಿಗುತ್ತಿದೆ, ಉಚಿತ ಅಕ್ಕಿ ಇಂದ ಹಿಡಿದು, ಅವರಿಗೆ ಸರ್ಕಾರಿ ಕೆಲಸದವರೆಗೂ ಎಲ್ಲ ಸಿಗುತ್ತವೆ…. ಅವರ ಮಸೀದಿಗಳನ್ನ ದ್ವಂಸಮಾಡೋದು ಹಾಗಿರಲಿ ಮುಟ್ಟಲು ಹೋದರೆ ಸಾಕು ಇಡೀ ದೇಶ ಹಿಂದೂಗಳನ್ನೇ ದೇಶದ್ರೋಹಿಗಳನತೆ ಬಿಂಬಿಸಿಬಿಡುತ್ತದೆ. ಇನ್ನೂ ಮತಾಂತರ ಮಾಡಿಸಿಕೊಂಡು ಹಿಂದುಗಳನ್ನಾಗಿ ಅವರನ್ನ ಪರಿವರ್ತಿಸುವಂತೆ  ಎಲ್ಲಾದರೂ ಹಿಂದೂಗಳು ಕನಸುಕಂಡರೂ ಸಾಕು ನಮ್ಮ ಘನ ನ್ಯಾಯಾಲಯ ….ಜೀವಾವಧಿ ಶಿಕ್ಷೆ ಕೊಟ್ಟು ಬಿಡುತ್ತದೆ. ಬಾಂಗ್ಲಾದ ಮುಸ್ಲಿಮರನ್ನ ಇಲ್ಲಿ ಕರೆಸಿಕೊಂಡು ಅವರಿಗೆ ಇಲ್ಲಿನ ಮತದಾನದ ಹಕ್ಕು ಕೊಡಿಸುವ ಮಾಫಿಯಾಗಳು ಇವೆ ಅದಕ್ಕೆ ಪರೋಕ್ಷವಾಗಿ ಕೈ ಪಕ್ಷ ಬೆಂಬಲ ಕೊಡುತ್ತದೆ ಅಂತ ಸುಬ್ರಮಣ್ಯಂ ಸ್ವಾಮಿ ಅಂತವರು ಯಾರಾದರೂ ಧ್ವನಿ ಎತ್ತಿದರೆ ಅವರ ಧ್ವನಿಯನ್ನೇ ಅಡಗಿಸಿ ಬಿಡುತ್ತಾರೆ. ಅದೆಲ್ಲ ಹಾಗಿರಲಿ ನನ್ನ ಸಣ್ಣ ಪ್ರಶ್ನೆ ಆ ದೇಶದಲ್ಲಿ ಹಿಂದೂಗಳು ಬಾರಿಸಿದ ಘಂಟೆ ಶಭ್ದ ಪಕ್ಕದ ಮನೆಗೆ ಕೆಳಬಾರದು ಆದರೆ ಇಲ್ಲಿ ಪ್ರತಿ ದಿನ 1 ಘ0ಟೆಗೆ ಸರಿಯಾಗಿ ಅವರು ಮಾಡುವ ಪ್ರಾರ್ಥನೆಯನ್ನ ಧ್ವನಿ ವರ್ಧಕ ಉಪಯೋಗಿಸಿ ಎಲ್ಲರಿಗೂ ಕೇಳುವಂತೆ ಕೂಗಿಕೊಳ್ಳುವುದನ್ನ ಕೇಳುತ್ತಲೇಇದ್ದೇವೆ , ಅದನ್ನ ನಾವೇಕೆ ತಡೆಯುತ್ತಿಲ್ಲ?

ಪಾಕಿಸ್ತಾನದ ಸರ್ಕಾರ ಹೇಳೋದು ಏನು ಗೊತ್ತ ? ಅಲ್ಲಿ ಸರ್ವ ಧರ್ಮದವರಿಗೂ ಸಮಾನ ಅಧಿಕಾರ ಇದೆ ಅಂತ, ಹಾಗಾದರೆ ಹಿಂದುಗಳಮೇಲೆ ಏಕೆ ಈ ರೀತಿಯ ದೌರ್ಜನ್ಯ? ಅದಲ್ಲದೆ ಮುಷರಫ್ ಅನ್ನುವ ಅಧಕ್ಷ ಅಧ್ಯಕ್ಷ ನೊಬ್ಬ ಭಾರತದ ಮುಸ್ಲಿಮರು ಹಿಂದುಗಳ ಶೋಷಣೆಯಿಂದ ನಲುಗಿ ಹೋಗಿದ್ದಾರೆ ಅನ್ನುತ್ತಿದ್ದಾನೆ…..ಹಾಗಾದರೆ ಅವರ ದೇಶದ ಹಿಂದೂಗಳು ಹೇಗಿದ್ದಾರೆ ಅಂತ ಒಂದು ದಿನವಾದ್ರೂ ಅವನು ನೋಡಿದ್ದಾನಾ? ಅದು ಹೋಗಲಿ ಅಲ್ಲಿನ ಹಿಂದೂಗಳ ಶೋಷಣೆ ನಿಲ್ಲಿಸಿ ಅನ್ನುವ ಮನಸ್ಸು ನಮ್ಮ ಒಬ್ಬ ರಾಜಕಾರಣಿಗೂ ಇಲ್ಲವೇ? ಒಮ್ಮೆಯಾದರೂ ನಮ್ಮ ಸೈಲೆಂಟ್ ಮೊಡ್ ಪ್ರದಾನಿಗಳು ಅಂತರ ರಾಷ್ಟ್ರೀಯಮಟ್ಟದಲ್ಲಿ ಪಾಕಿಸ್ತಾನದಲ್ಲಿ ಆಗುತ್ತಿರುವ ಹಿಂದುಗಳ ಶೋಷಣೆಯ ಬಗ್ಗೆ ಧ್ವನಿ ಎತ್ತಿದರೆ? ಯಾಕೆ ?

ಅಸಹ್ಯದ ರಾಜಕಾರಣ, ಮತ ಬ್ಯಾಂಕ್ ಆಗಿ ಬಳಸಿಕೊಂಡು ಆದಿಕಾರದ ಗುದ್ದುಗೆ ಏರಬೇಕೆಂಬ ವಿಕೃತ ಚಟ, ಇವೆಲ್ಲವೂ ನಮ್ಮ ನಾಯಕರ ಕೈ ಕಾಲುಗಳನ್ನ ಕಟ್ಟಿ ಹಾಕಿವೆ. ಅದೆಲ್ಲ ಇರಲಿ ಮುಂಬೈ ನರಮೇಧ ನೆಡಸಿದ ಕಸಬ್ ನೇಣು ಹಾಕಲು ಇನ್ನೂ ಎಷ್ಟು ಯುಗಗಳು ಬೇಕು? ಗೋದ್ರಾ ಹತ್ಯಾಕಾಂಡದಲ್ಲಿ ಪಾಲ್ಗೊಂಡ ಸುಮಾರು 10 ಮುಸ್ಲಿಂ ಹುಡುಗರನ್ನ ಮಾನವೀಯತೆಯ ಆಧಾರದ ಮೇಲೆ ಬಿಡುಗಡೆ ಮಾಡಿದ ಮೇಡಂ ಸರ್ಕಾರಕ್ಕೆ ಏನು ಹೇಳಬೇಕು? ಇಡೀ ದೇಶದಲ್ಲಿ ಕುಟುಂಬ ನಿಯಂತ್ರಣ ಕಾನೂನು ಇದೆ ಆದರೆ ಮುಸ್ಲಿಮರಿಗೆ ಏಕೆ ಅದು ಅನ್ವಯಿಸುವುದಿಲ್ಲ? ಒಬ್ಬ ಯಾವನಾದರೂ ಬುದ್ದಿ ಜೀವಿ ಹೀಗೆಲ್ಲಾ ಮಾತಾಡಿದರೇ ಅವನನ್ನ ಕೋಮುವಾಧಿ ಅಂತ ಅರೆಸ್ಟ್ ಮಾಡಿ ಬಿಡ್ತಾರೆ, ಅದೇ ಕೈ ಪಕ್ಷ ಪರೋಕ್ಷವಾಗಿ ಈ ಆಲ್ಪ ಸಂಖ್ಯಾತರ ದಾರಿ ತಪ್ಪಿಸಿ ಅಧಿಕಾರದ ಗುದ್ದುಗೆ ಏರಿ ವಿಕೃತ ಆನಂದ ಪಡೆದರೆ ಅದು ಸರಿಯೇ? ಎಷ್ಟೊಂದುಸಲ ಅನ್ನಿಸಿಬಿಡುತ್ತದೆ….ಇದೆಲ್ಲೋ ಅತ್ಯಂತ ಪೂರ್ವ ನಿಯೋಜಿತ ಪಿತೂರಿ ಅಂತ, ಹೀಗೆ ತಲೆ ತಲಾಂತರದವರೆಗೆ ನಮ್ಮ ಚಾಚಾ, ಮೇಡಂ ಗಳ ಸರ್ಕಾರ ರಾಜ್ಯಭಾರ ಮಾಡಬೇಕೆಂದರೆ ಈ  2 ವಿಂಗಡನೆಗಳನ್ನ ಮಾಡಿ ಸದಾ ಇಬ್ಬರೂ ಹಿಂಸೆ, ಯುದ್ದ, ಜಗಳಗಳಲ್ಲಿ ಕಾಲ ಕಳೆಯುತ್ತಿರಬೇಕು ಅದರ ನಡುವೆ ನಾವು ದೇಶವನ್ನು ಹುರಿದು ತಿನ್ನುತ್ತಿರಬೇಕು ಅನ್ನುವ ಆಸೆ ಇಂದ ಈ  ಸ್ವತಂತ್ರ ತಂದು ಕೊಟ್ಟರೇ ಮಹಾತ್ಮಾ ತಾತ ಅಂತ ಅಲ್ಲವೇ? ನೋಡಿ ಮಹಾತ್ಮನ ಎದೆಗೆ ಗುಂಡಿಟ್ಟ ಆ ಹುಡುಗನ ಮಾತುಗಳನ್ನ….

ಅದೇನೇ ಇರಲಿ ನಾವು ಬುದ್ದಿವಂತರಾಗಬೇಕು ಯಾರನ್ನ ಅಧಿಕಾರದ ಗದ್ದುಗೆಗೆ ಏರಿಸಬೇಕು? ಯಾರನ್ನ ಮಹಾತ್ಮ ನ ಸ್ಥಾನಕ್ಕೆ ಕೂರಿಸಬೇಕು ಅನ್ನೋದನ್ನ ಮೊದಲು ತೀರ್ಮಾನ ಮಾಡಬೇಕಿದೆ., ದೇವಸ್ಥಾನ ಕಟ್ಟುತ್ತೇವೆ ಅಂತ ಮತ ಕೇಳೋರು ಒಂದು ಪಕ್ಷ, ಮುಸ್ಲಿಮರಿಗೆ ಮೀಸಲಾತಿ ಕೊಡೋರು ಇನ್ನೊಂದು ಪಕ್ಷ… ನಡುವೆ ಚಟ್ನಿ ಆಗೋರು ನಾವು ಸೋ ನಮಗೆ ಯಾರು ಬೇಕು ಅಂತ ತೀರ್ಮಾನ ಮಾಡಿ ಅವರನ್ನ ಆಯ್ಕೆ ಮಾಡುವ ಮನಸ್ಸು ನಮಗೆ ಬರಬೇಕು. ಕಂಡ ಕಂಡ ವೇದಿಕೆಗಳಲ್ಲಿ ನಿದ್ರಿಸುವ, ಮಣ್ಣಿನ ಮಗ ಅಂತ ಹೇಳಿಕೊಂಡು ದೇಶಕ್ಕಾಗಿ ಏನೂ ಮಾಡದೆ ಕೇವಲ ಕೆಲವು ತಿಂಗಳು ಪ್ರಧಾನಿ ಆದವರು ಯವ ರೀತಿಯಲ್ಲಿ ನಮ್ಮ ಸಮಾಜದ ನಿಜವಾದ ಸೇವಕರು? ದೇಶದ ಪಿತಾಮಹ ಯಾರು ಸ್ನೇಹಿತರೇ? ಪಾಕಿಸ್ತಾನದ ಹುಟ್ಟಿಗೆ ಕಾರಣರಾದ ಕಾಂಗ್ರೆಸ್ ನ ಆ ಎಲ್ಲ ನಾಯಕರುಗಳೆ? ತನ್ನ ಕೂದಲನ್ನ ತಾನೇ ಬೋಳಿಸಿಕೊಂಡ ಮಾತ್ರಕ್ಕೆ, ತನ್ನ ಬಟ್ಟೆಯನ್ನ ತಾನೇ ನೆಯ್ದುಕೊಂಡ ಮಾತ್ರಕ್ಕೆ ಮಹಾತ್ಮನಾಗಿ ಬಿಡುತ್ತಾರೆಯೇ?, ಅಹಿಂಸೆ ಅಹಿಂಸೆ ಅಂತ ಲಕ್ಷಾಂತರ ಹಿಂದೂಗಳ ಮಾರಣ ಹೋಮ ನೆಡೆದಿದ್ದರೂ ಕಣ್ಣುಮುಚ್ಚಿ ಕೂತ ಅವರು ಮಹಾತ್ಮರೆ? ದೇಶದೆಲ್ಲೆಡೆ ಆಂಗ್ಲರ ಹಿಂಸೆಗೆ ಮುಗ್ಧ ಜನರ ರಕ್ತ ಹರಿಯುತ್ತಿದ್ದರೇ  ಅವರನ್ನ ಭಯೋತ್ಪಾದಕರು ಎಂದು ಹೀಗಳೆದ ತಾತ ಯಾವ ಅರ್ಥದಲ್ಲಿ ನಮಗೆ ಹಾಗೂ ನಮ್ಮ ಮುಂದಿನ ಪೀಳಿಗೆಗೆ ಮಹಾತ್ಮರಾಗುತ್ತಾರೆ? ಹಿಂದೂಗಳ ಕಾರಣಕ್ಕೆ ಒಂದೇ ಒಂದು ಸಲ ಸತ್ಯಾಗ್ರಹ ಮಾಡದೆ 3 ಜನ ಮುಸ್ಲಿಮರಿಗೆ ಸಣ್ಣ ಗಾಯವಾದರೂ ಅವರ ಪರವಾಗಿ ದೇಶವ್ಯಾಪಿ ಚಳುವಳಿ ಮಾಡಿದ ಅವರು ಮಹಾತ್ಮರೆ? ಮುಸ್ಲಿಮರ ಪರ ಹಾಗೂ ಹಿಂದೂಗಳ ವಿರೋಧವಾಗಿ ಮಾತನಾಡಿದರೆ ತಾವು ಬುದ್ದಿಜೀವಿಗಳಾಗಿ ಬಿಡುತ್ತೇವೆ ಎಂದು ನಂಬಿರುವ ಹಣ್ಣು ಗಡ್ಡದವರಿಗೆ ಏನು ಮರ್ಯಾದೆ ಮಾಡಬೇಕು? ಇದೆಲ್ಲವೂ ತೀರ್ಮಾನವಾದಾಗ ಮಾತ್ರ ನಮ್ಮ ಅಖಂಡ ಹಿ0ದೂಸ್ಥಾನ ನೀರ್ಮಾಣವಾಗಬಹುದು. ಯಾಕೋ ಗೊತ್ತಿಲ್ಲ ಜೈ ಹಿಂದ್ ಅಂತ ಕೊನೆಯಲ್ಲಿ ಹೇಳೊದನ್ನ ನಿಲ್ಲಿಸಬೇಕು ಅನ್ನಿಸಿಬಿಟ್ಟಿದೆ……………ಬರ್ತೇನೆ ಮತ್ತೆ ಸಿಕ್ತೇನೆ.

ಅಟಲ್ ಜಿ ನಮಗೆಷ್ಟು ಗೊತ್ತು?

ಫೆಬ್ರವರಿ 16, 2012

ಸ್ನೇಹಿತರೇ ಹೇಗಿದ್ದೀರಿ? ಇವತ್ತು ಮತ್ತೆ ಸ್ವಲ್ಪ ಟೈಮ್ ಮಾಡ್ಕೊಳಿ, ಏನಾದ್ರೂ ಹಾಗೆ ಮಾತಾಡೋಣ ಅಲ್ವಾ? ನೀವೇ ನೋಡಿದ್ದೀರಲ್ಲ ಇತ್ತೀಚೆಗೆ ಟಿವಿ ಚಾನಲ್ ಗಳನ್ನ ನೋಡೋಕೆ ಆಗದೆ ಇರೋವಷ್ಟರಮಟ್ಟಿಗೆ ನಮ್ಮ ಮಾನ್ಯ ಮಂತ್ರಿಗಳು, ರಾಜಕಾರಣಿಗಳು ಹೊಲಸು ಮಾಡೋದನ್ನ, ಇನ್ನೂ ಕೆಲವರು ಅದರ ಪರ ವಿರೋಧ ಮಾತಾಡಿ ಮಜಾ ಕೊಡೋದನ್ನ!! ಅಲ್ವೇ? ಆದರೆ ನಿಷ್ಟಾವಂತರಾಗಿ ದೇಶಕ್ಕಾಗಿ ದೇಶದ ಪ್ರಗತಿಗಾಗಿ ಹೋರಾಡಿದ ಎಷ್ಟೋ ಜನರಿದ್ದಾರೆ ಅವರಲ್ಲಿ ಒಬ್ಬರು ಹಾಗೂ ಮುಖ್ಯವಾದವರು ಮಾನ್ಯ ಅಟಲ್ ಬಿಹಾರಿ ವಾಜಪೇಯಿಯವರು…….. ಅವರ ಬಗ್ಗೆ ನಮಗೆ ಎಷ್ಟು ಗೊತ್ತು? ತಿಳಿಯುವ ಸಣ್ಣ ಪ್ರಯತ್ನ ಮಾಡೋಣ ಬನ್ನಿ.

ಅಟಲ್ ಅವರು ಹುಟ್ಟಿದ್ದು ಕ್ರಿಸ್ ಮಸ್ ದಿನದಂದು ಅದು 1924 ರಲ್ಲಿ ಕೃಷ್ಣ ದೇವಿ ಹಾಗೂ ಕೃಷ್ಣ ಬಿಹಾರಿ ವಾಜಪೇಯಿ ಅವರಿಗೆ,  ಮಧ್ಯ ಪ್ರದೇಶದ ಗ್ವಾಲಿಯರ್  ಹತ್ತಿರದ  ಶಿಂದೆ ಕಿ ಚವ್ವಾಣಿ ಅನ್ನೋ ಹಳ್ಳಿಯಲ್ಲಿ, ತಂದೆ ಒಬ್ಬ ಕವಿ ಹಾಗೆ ಸಾಮಾನ್ಯ ಶಾಲೆಯ ಮೇಷ್ಟ್ರು……. ಹಾಗೆ ಅಟಲ್ ಅವರ ಅಜ್ಜ ಪಂಡಿತ್ ಶ್ಯಾಮ್ ಲಾಲ್  ವಾಜಪೇಯಿಯವರು. ಅಟಲ್ ಅವರ ಪದವಿಯನ್ನ ವಿಕ್ಟೋರಿಯಾ ಕಾಲೇಜಿನಿಂದ (ಈಗ ಲಕ್ಷ್ಮಿ ಬಾಯಿ ಕಾಲೇಜು) ಪಡೆದರು. ಹಿಂದಿ, ಇಂಗ್ಲೀಷ್ ಹಾಗೂ ಸಂಸ್ಕೃತ ಭಾಷೆಯಲ್ಲಿ ಪಾಂಡಿತ್ಯ ಗಳಿಸಿದ ಅಟಲ್  ರಾಜಕೀಯ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನ ಕಾನ್ಪುರದ ಡಿ. ಎ. ವಿ ಕಾಲೇಜಿನಿಂದ ಪಡೆದರು. ನಂತರ ರಾಷ್ಟ್ರೀಯ ಸ್ವಯಂ ಸೇವಕ ಸಂಘ  (ಆರ್. ಎಸ್. ಎಸ್ )ವನ್ನು ಸೇರಿದರು. ವೀರ ಅರ್ಜುನ ಹಾಗೂ ಪಾಂಚಜನ್ಯ ಅನ್ನುವ ಎರಡು ಪತ್ರಿಕೆಗಳಿಗೆ ಪತ್ರಕರ್ತರಾಗಿ ಕವಿಯಾಗಿ ಸೇವೆ ಸಲ್ಲಿಸಿದರು….. ನಿಮಗೆ ಗೊತ್ತ? ಭಾರತದ  ಅವಿವಾಹಿತ ಪ್ರದಾನ ಮಂತ್ರಿ ಕೇವಲ ಅಟಲ್ ಜಿ ಮಾತ್ರ…..!!

ಅಟಲ್ ಅವರ ಮೊದಲ ರಾಜಕೀಯ ಜೀವನ ಶುರುವಾಗಿದ್ದು 1942 ರಲ್ಲಿ ಕ್ವಿಟ್ ಇಂಡಿಯ (ಬ್ರಿಟಿಷರೇ ಬಾರತ ಬಿಟ್ಟು ತೊಲಗಿ) ಚಳುವಳಿಯಲ್ಲೀ ಭಾಗವಹಿಸುವ ಮೂಲಕ, ನಂತರ 23 ದಿನಗಳ ಕಾಲ ಜೈಲು ವಾಸ ಅನುಭವಿಸ ಬೇಕಾಯಿತು, 1953 ರಲ್ಲಿ ಶ್ಯಾಮ್ ಪ್ರಸಾದ್ ಮುಖರ್ಜಿ ಅವರ ಪರಿಚಯ ಭಾರತೀಯ ಜನ ಸಂಘದ ಮೂಲಕ ಆಯಿತು. 1957 ರಲ್ಲಿ ಮೊದಲ ಬಾರಿಗೆ ಲೋಕ ಸಭೆಯ ಸದಸ್ಯರಾಗಿ ಆಯ್ಕೆ ಆದರು. ನಂತರದ ದಿನಗಳಲ್ಲಿ ಇವರ ಚತುರತೆಯನ್ನ ಕಂಡ ನೆಹರು ಜಿ ಹೇಳಿದ್ರಂತೆ, ಈ ವ್ಯಕ್ತಿ ಮುಂದೆ ಪ್ರದಾನಿ ಆಗ್ತಾರೆ ಅಂತ. ಅವರ ಅಸಾಮಾನ್ಯ ಬುದ್ದಿವಂತಿಕೆಯಿಂದಾಗಿ ಎಷ್ಟರ ಮಟ್ಟಿಗೆ ಬೆಳೆದರು ಎಂದರೆ ಜನ ಸಾಮಾನ್ಯರಲ್ಲಿ ಭಾರತೀಯ ಜನ ಸಂಘ ಅನ್ನುವ ಹೆಸರೇ ಕೇಳದ ಪಕ್ಷವನ್ನ ಬುಡದಿಂದ ಕಟ್ಟಿ ಬೆಳಸಿದರು ಅದಕ್ಕೆ ಸಾಥ್ ಕೊಟ್ಟವರು ಲಾಲ್ ಕೃಷ್ಣ ಅಡ್ವಾಣಿ, ನಾನಾಜಿ ದೇಶಮುಖ್ ಹಾಗೂ ಬಾಲರಾಜ್ ಮಧೋಕ್ ಅವರು.

ವಿಶೇಷ ಇನ್ನೊಂದಿದೆ ಅವರು 3ನೇ, 10, ಹಾಗೂ 11ನೇ ಲೋಕ ಸಭೆಯನ್ನು ಬಿಟ್ಟು ಉಳಿದೆಲ್ಲ ಸಮಯದಲ್ಲಿ ಲೋಕ ಸಭೆಯ ಸದಸ್ಯರಾಗಿ ಇದ್ದರು. 1977 ರಲ್ಲಿ  ಜನತಾ ಸಂಘದ ಮೊದಲ ಸರ್ಕಾರದಲ್ಲಿ ವಿದೇಶಾಂಗ ಸಚಿವರಾಗಿ ಆಯ್ಕೆ ಆದಾಗ  ಅವರು ಅಮೆರಿಕ ದ ಅಸೆಂಬ್ಲಿಯನ್ನ ಉದ್ದೇಶಿಸಿ ಮಾತನಾಡುವ ಅವಕಾಶ ಸಿಕ್ಕಿತ್ತು ಆ ಸಂಧರ್ಬದಲ್ಲಿ ಹಿಂದಿಯಲ್ಲಿ ಅಮೆರಿಕದ ಅಸೆಂಬ್ಲಿಯನ್ನ ಉದ್ದೇಶಿಸಿ ಮಾತನಾಡಿದ ಏಕೈಕ ಭಾರತೀಯ ಅಟಲ್ ಅವರು…… ಅವರಿಗೆ ಇಂಗ್ಲಿಷ್ ಬರೋದಿಲ್ಲ ಅಂತ ಯೋಚನೆ ಮಾಡ್ಬೇಡಿ ಅವರು ಇಂಗ್ಲೀಷ್ ನಲ್ಲೂ ಕೂಡ ಪ್ರಖಾಂಡ ಪಂಡಿತರು.

1979 ರಲ್ಲಿ ಮುರಾರ್ಜಿ ದೇಸಾಯಿ ಅವರ ಸರ್ಕಾರ ಪತನಗೊಂಡ ಸಂಧರ್ಬದಲ್ಲಿ ಜನತಾ ಪಾರ್ಟಿಯನ್ನ ವಿಸರ್ಜಿಸಲಾಯಿತು ಆ ಸಂಧರ್ಬದಲ್ಲೂ ದೃತಿಗೆದದ ಅಟಲ್ ಜಿ ಭಾರತೀಯ ಜನ ಸಂಘ ಹಾಗೂ ಆರ್ ಎಸ್ ಎಸ್ ನ ಕೆಲ ಮುಖಂಡರೊಂದಿಗೆ ಸೇರಿ , ಜೊತೆಗೆ ಲಾಲ್ ಕೃಷ್ಣ ಅಡ್ವಾಣಿಯವರ ಜೊತೆಗೂಡಿ 1980 ರಲ್ಲಿ ಭಾರತೀಯ ಜನತಾ ಪಾರ್ಟಿ ಯನ್ನ ಕಟ್ಟಿದರು. 1984 ರಲ್ಲಿ ಆಪರೇಷನ್ ಬ್ಲೂ ಸ್ಟಾರ್ ಅನ್ನ ಅತ್ಯಂತ ಖಟುವಾಗಿ ವಿರೋದಿಸಿದವರು ಅಟಲ್ ಜಿ….. ಅಷ್ಟಕ್ಕೂ ಈ ಬ್ಲೂ ಸ್ಟಾರ್ ಆಪರೇಷನ್ ಅಂದರೆ ಏನು ಗೊತ್ತ? ಪಂಜಾಬ್ ನ ಸಿಕ್ಕ್ ದೇವಾಲಯ ಒಂದರಲ್ಲಿ ಅಕ್ರಮ ಶಸ್ತ್ರಾಸ್ತ್ರ ದಾಸ್ತಾನಿದೆ ಅನ್ನೋ ನೆಪ ಮಾಡಿಕೊಂಡು ಅಲ್ಲಿಗೆ ಸೈನ್ಯವನ್ನ ಕಳುಹಿಸಿ ಜಲಿಯನ್ ವಾಲಭಾಗ್ ಹತ್ಯಾಕಾಂಡಕಿಂತಲೂ ಭಯಾನಕವಾಗಿ ನರ ಮೇಧ ನೆಡೆಸಿದ್ದು!! ಅದರ ರೂವಾರಿ ಯಾರು ಗೊತ್ತ? ಮೇಡಂ ಇಂದಿರ ಗಾಂಧಿ!! ಅಷ್ಟಕ್ಕೂ ಒಡೆದು ಆಳುವ ನೀತಿಯನ್ನ ಮುಂದುವರಿಸಿಕೊಂಡು ಬಂದಿದ್ದ ಆಗಿನ ಸರ್ಕಾರದ, ಹಾಗೂ ಬ್ಲೂ ಸ್ಟಾರ್ ಆಪರೇಷನ್ ವಿರುದ್ದ ಹೋರಾಟ ಮಾಡಲು ಲೋಕ ಸಭೆಯಲ್ಲಿ ಇದ್ದ ಬಿ ಜೆ ಪಿ ಯ ಸದಸ್ಯರ ಒಟ್ಟು ಸಂಖ್ಯಾ ಬಲ ಕೇವಲ 2 ಮಾತ್ರ!! ಹಾಗಿದ್ದರೂ ದೃತಿ ಗೆಡಲಿಲ್ಲ ಅಟಲ್…..

ರಾಮ ಜನ್ಮಭೂಮಿಯ ವಿಚಾರದಲ್ಲಿ ಹೋರಾಟ, ನಂತರ 1995 ರಲ್ಲಿ ಮಹಾರಾಷ್ಟ್ರ ಹಾಗೂ ಗುಜರಾತ್ ನಲ್ಲಿ ಮೊದಲ ಬಾರಿಗೆ ಅಧಿಕಾರವನ್ನ ವಹಿಸುವ ಅವಕಾಶ ಬಿ ಜೆ ಪಿ ಗೆ ಒಲಿದು ಬಂತು ನಂತರ ಮಹಾರಾಷ್ಟ್ರದಲ್ಲಿ ಲಾಲ್ ಕೃಷ್ಣ ಅಡ್ವಾಣಿಯವರು ಮುಂದಿನ ಪ್ರಧಾನ ಮಂತ್ರಿ ಅಭ್ಯರ್ಥಿಯನ್ನಾಗಿ ಮಾನ್ಯ ಅಟಲ್ ಜಿ ಅವರ ಹೆಸರನ್ನ ಗೋಷಿಸಿದರು ಅದರಿಂದಾಗಿ 1996 ರಲ್ಲಿ ಕೇಂದ್ರದಲ್ಲಿ ಮೊದಲ ಬಿ ಜೆ ಪಿ ಯ ಸರ್ಕಾರ ರಚನೆಯಾಯಿತು. ಆದರೆ ದುರಾದೃಷ್ಟ ವಶಾತ್ ಅಟಲ್ ಬಹುಮತ ಸಾಭೀತು ಪಡಿಸುವ ಸಂದರ್ಭದಲ್ಲಿ ಸೋಲೋಪ್ಪಬೇಕಾಯಿತು ಹಾಗಾಗಿ ಮೊದಲಬಾರಿಗೆ ಅಟಲ್ ಕೇವಲ 12 ದಿನಗಳಿಗಾಗಿ ಪ್ರದಾನಿಯಾಗಿದ್ದರು ಅಷ್ಟೇ…

1998- 99 ರಲ್ಲಿ ಎನ್ ಡಿ ಎ ಅನ್ನುವ ಸಂಘಟನೆಯಡಿ ಪಕ್ಷಗಳನ್ನ ಒಂದು ಗೂಡಿಸಿ ಮತ್ತೆ ಬಿ ಜೆ ಪಿ ಅಧಿಕಾರಕ್ಕೆ ಬಂತು ಅಟಲ್ ಪ್ರಧಾನಿಯಾದರು. ಮತ್ತೆ ಜಯಲಲಿತ ತಾವು ನೀಡಿದ್ದ ಬೆಂಬಲವನ್ನ ಹಿಂಪಡೆದರು ಅದರಿಂದಾಗಿ  ಬಹುಮತ ಸಾಬೀತು ಮಾಡುವ ಪರೀಕ್ಷೆ ಎದುರಾಯಿತು ಆಗ ಕೇವಲ 1 ವೋಟಿನಿಂದ ಅಟಲ್ ಸರ್ಕಾರ ಮತ್ತೆ ಬಿದ್ದು ಹೋಯಿತು……

ಮೇ 1998ರಲ್ಲಿ ಮೊದಲ ಬಾರಿಗೆ ಅಟಲ್ ಸರ್ಕಾರ ಒಂದು ನಿರ್ಧಾರಕ್ಕೆ ಬಂದು, ಅಣ್ವಸ್ತ್ರ ಪರೀಕ್ಷೆಯನ್ನ ಪೊಖ್ರಾನ್ (ರಾಜಸ್ತಾನ ದಲ್ಲಿದೆ) ಎಂಬಲ್ಲಿ ನೆಡೆಸಿತು, ಯಶಸ್ವಿ ಆಯಿತು ಕೂಡ, ಇಡೀ ವಿಶ್ವ ಭಾರತವನ್ನ ನೋಡಿ ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತಾಯಿತು, ಅಮೆರಿಕವೆಂಬ ಹೊಟ್ಟೆಕಿಚ್ಚಿನ ದೇಶ ನಮ್ಮ ಮೇಲೆ ಅಣ್ವಸ್ತ್ರ ಪರೀಕ್ಷೆ ಮಾಡಿದ ಕಾರಣವೊಡ್ಡಿ ನಿರ್ಭಂದ ಹೇರಿತು. ಇದಾಗಿ ಎರಡೇ ವಾರದಲ್ಲಿ ನಮ್ಮ ಪರಮಾಪ್ತ!! (?) ರಾಷ್ಟ್ರ ಪಾಕಿಸ್ತಾನ ಅಣು ಶಶ್ತ್ರಾಸ್ತ್ರಗಳನ್ನ ಪರೀಕ್ಷೆ ಮಾಡಿತು ಗೊತ್ತೇ? ನಂತರ ಅಮೆರಿಕ “ಸಿ ಟಿ ಬಿ ಟಿ ಒಪ್ಪಂದಕ್ಕೆ ಸಹಿ ಮಾಡುವಂತೆ ಎಷ್ಟು ಒತ್ತಾಯ ಮಾಡಿತೆಂದರೆ ಅದೆಲ್ಲವನ್ನೂ ಅಟಲ್ ಛಲದಿಂದಲೇ ಎದುರಿಸಿದರು. ಅಷ್ಟಕ್ಕೂ ಈ ಸಿ ಟಿ ಬಿ ಟಿ ಅಂದರೆ ಏನು ಗೊತ್ತೇ? ಕಂಪ್ರಹೆನ್ಸಿವ್ ಟೆಸ್ಟ್ ಬ್ಯಾನ್ ಟ್ರೀಟಿ ಅಂತ, ಅಂದರೆ ನಾವು ಯಾರಮೇಲೂ ಅಣ್ವಸ್ತ್ರ ಪ್ರಯೋಗ ಮಾಡುವಂತಿಲ್ಲ…….ಸರಿ ಹಾಗೆಲ್ಲಾದರೂ ಸಹಿ ಹಾಕಿದರೆ ನಮ್ಮ ನೆಂಟ ರಾಷ್ಟ್ರ ಪಾಕಿಸ್ತಾನ ಸುಮ್ಮನಿರುತ್ತದೆಯೇ? ಸಹಿ ಹಾಕಿದ ಮರುಕ್ಷಣವೇ ಅವರಲ್ಲಿರುವ ಅಕ್ರಮ ಅಣು ಬಾಂಬಗಳನ್ನ ಸಾಲು ಸಾಲಾಗಿ ತಂದು ನಮ್ಮ ಮೇಲೆ ಎಸೆದು ದ್ವಂಸ ಮಾಡಿಬಿಡುವುದಿಲ್ಲವೇ? ಹಾಗೆ ಆಗಲೆಂದೇ ಅಮೆರಿಕ ಸಿ ಟಿ ಬಿ ಟಿ ಅನ್ನೋ ಕುಣಿಕೆಯನ್ನ ನಮಗೆ ಸುತ್ತಲು ಬಂದಿದ್ದು… ಆದರೆ ಅದನ್ನ ಅರಿತಿದ್ದರು ಅಟಲ್.

1998 ಹಾಗೂ 1999 ರಲ್ಲಿ ಭಾರತ ಪಾಕಿಸ್ತಾನಗಳನಡುವೆ ಲಾಹೋರ್ ಒಪ್ಪಂದಕ್ಕೂ ಮುಂದಾಗಿದ್ದು ಸ್ವತಃ ಅಟಲ್ ಬಿಹಾರಿ ವಾಜಪೇಯಿಯವರು… ಆದರೆ ಮುಂದಿನಿಂದ ಒಪ್ಪಂದ ಮಾಡಿಕೊಂಡು ಹಿಂದಿನಿಂದ ಬಂದು ಬಾಂಬ್ ಹಾಕುವ ಬುದ್ಧಿಯನ್ನ ಪಾಕ್ ಬಿಡಲೇ ಇಲ್ಲ ….ಜೂನ್ 1999 ರಲ್ಲಿ ಕಾರ್ಗಿಲ್ ಯುದ್ದ ಶುರುವಾಗಿ ಹೋಯಿತು,ಆಪರೇಷನ್ ವಿಜಯ್ ಗೆ ಕರೆ ಕೊಟ್ಟರು ಅಟಲ್, 3 ತಿಂಗಳು ನೆಡೆದ ಯುದ್ದದಲ್ಲಿ ಪಾಕ್  ಮಾಡಿದ 70% ಅತಿಕ್ರಮ ಪ್ರವೇಶ ವನ್ನ ಹಿಮ್ಮೆಟ್ಟಿಸಲಾಯಿತು, 600 ರಿಂದ ಸುಮಾರು 3000 ಸಾವಿರ ಪಾಕ್ ಉಗ್ರರನ್ನ ಮುಗಿಸಲಾಯಿತು, ನಂತರ ಪಾಕಿಸ್ತಾನ ಅಮೆರಿಕಾದ ಕಾಲು ಹಿಡಿದು ಜೀವ ಉಳಿಸಿಕೊಂಡು ಕಧನ ವಿರಾಮ ಘೋಷಣೆ ಮಾಡಿತು….ಆಗ ಅಟಲ್ ತೆಗೆದುಕೊಂಡ ನಿರ್ಧಾರಗಳು, ಅವರ ಧೈರ್ಯ ನಮ್ಮ ಸೈಲೆಂಟ್ ಮೊಡ್ ಪ್ರದಾನಿಗಳಿಗೆ ಮಾದರಿಯಾಗಬೇಕಿತ್ತು ಆದರೆ ಹಾಗಾಗಲಿಲ್ಲ ಅದೇ ನೋಡಿ ದುರಂತ.

ಮೂರನೇ ಭಾರಿಗೆ ಪ್ರದಾನಿಯಾಗಿದ್ದು 1999 ರಿಂದ 2004 ರ ವರೆಗೆ, ಆ ಸಂದರ್ಭದಲ್ಲಿ ನೆಡೆದ ಭಾರತೀಯ ವಿಮಾನ ಅಪಹರಣ (ಖಂದಹಾರ್ ನಲ್ಲಿ. – ಹಿಂದೊಮ್ಮೆ ಘಾಂದಾರ ಅಗಿತ್ತಂತೆ ಅದು ) ಕೂಡ ಸುಖಾಂತ್ಯ ಕಾಣುವಲ್ಲಿ ಅಟಲ್ ಹಾಗೂ ಜಸವಂತ್ ಸಿಂಗರ ಕೊಡುಗೆ ಅಪಾರವಾಗಿದೆ. ಮತ್ತೆ ಇನ್ನೂ ಮುಖ್ಯವಾಗಿ ಹೇಳಬೇಕೆಂದರೆ ಅಟಲ್ ಮಾಡಿದ ಮಹತ್ತರ ಸಾಧನೆಗಳಲ್ಲಿ ಪ್ರದಾನ ಮಂತ್ರಿ ಗ್ರಾಮೀಣ ರಸ್ತೆ ಯೋಜನೆ, ಎಷ್ಟರ ಮಟ್ಟಿಗೆ ಇದು ಫಲಪ್ರದವಾಯಿತೆಂದರೆ ಲಕ್ಷಾಂತರ ಹಳ್ಳಿಗಳು ಡಂಬಾರಿನ ರಸ್ತೆಗಳನ್ನ ಕಂಡವು, ಸಂಪರ್ಕ ಹಾಗೂ ರಸ್ತೆ ನಿರ್ಮಾಣದಲ್ಲಿ ಆದ ಕ್ರಾಂತಿ ಅಂದರೆ ಅದೇನು ತಪ್ಪಾಗಲಾರದು.

ನಂತರದಲ್ಲಿ 2001 ರ ಪಾರ್ಲಿಮೆಂಟ್ ಮೇಲಿನ ಉಗ್ರರ ದಾಳಿ ನಿಮಗೆಲ್ಲ ಗೊತ್ತೇ ಇದೆ, 2004 ರಲ್ಲಿ ಮತ್ತೆ ರಾಮ ಜನ್ಮಭೂಮಿಯ ಹೆಸರನ್ನ ತೆಗೆದು, ಮುಸ್ಲಿಂ ರಲ್ಲಿ ಬಿ ಜೆ ಪಿ ಯನ್ನ  ಹಿಂದೂ ಪಕ್ಷವೆಂಬಂತೆ ಬಿಂಬಿಸಿ ಮತ್ತೆ ಆದಿಕಾರಕ್ಕೆ ಬಂದಿದ್ದೆ ಈ ಯು ಪಿ ಎ  ಯ ಮೇಡಂ ಸರ್ಕಾರ ಹಾಗೂ ಸದಾ ಸೈಲೆಂಟ್ ಮೊಡ್ ನ ಮೊಬೈಲ್ ನಂತಿರುವ ನಮ್ಮ ರಬ್ಬರ್ ಸ್ಟ್ಯಾಂಪ್ ಪ್ರದಾನಿಗಳ ಪಾರ್ಟಿ.

2005 ರಲ್ಲಿ ರಾಜಕೀಯದಿಂದ ನಿವೃತ್ತಿ ಘೋಷಿಸಿ ಕೊಂಡವರು ಅಟಲ್, ರಾಜಕೀಯವನ್ನ ಬಿಟ್ಟರೆ ಅಟಲ್ ಒಬ್ಬ ಒಳ್ಳೆಯ ಕವಿ ಹಾಗೂ ಸಾಹಿತಿಯೂ ಹೌದು. ಅವರು ಬರೆದ ಪುಸ್ತಕಗಳು ಅನೇಕ. ಹಾಗೆ ಅವರಿಗೆ ಅರಸಿ ಬಂದ ಪ್ರಶಸ್ತಿಗಳೂ ಅಷ್ಟೇ, 1992 ರಲ್ಲಿ ಪಧ್ಮ ವಿಭೂಷಣ, 1994 ರಲ್ಲಿ ಲೋಕಮಾನ್ಯ ತಿಲಕ್ ಪ್ರಶಸ್ತಿ, 1994 ರಲ್ಲಿ ಉತ್ತಮ ರಾಜಕೀಯ ಪಟು ಗೌರವ, ಹಾಗೂ 1994 ರ ಪಂಡಿತ್ ಗೋವಿಂದ್ ವಲ್ಲಭ್ ಪಂತ್ ಪ್ರಶಸ್ತಿಗಳು ಮುಖ್ಯವಾದವು.ಅವರು ಬರೆದ ಕೆಲವು ಪುಸ್ತಕಗಳು:

 • Atal Bihari Vajpayee, meri samsadiya yatra (Hindi Edition). (1999). – ಇದು ಅವರ ಜೀವನ ಚರಿತ್ರೆ.
 • Four decades in parliament. (1996).
 • Atala Bihari Vajpayee, samsada mem tina dasaka. (1992).
 • Pradhanamantri Atala Bihari Vajapeyi, chune hue bhashana. (2000).
 • Values, vision & verses of Vajpayee: India’s man of destiny. (2001).
 • India’s foreign policy: New dimensions. (1977).
 • Assam problem: Repression no solution. (1981).
 • Suvasita pushpa: Atala Bihari Vajapeyi ke sreshtatama bhashana. (1997).

ಕವಿತೆಗಳು

 • Twenty-One Poems. (2003).
 • Kya khoya kya paya: Atala Vihari Vajapeyi, vyaktitva aura kavitaem (Hindi Edition). (1999).
 • Meri ikyavana kavitaem. (1995).
 • Meri ikyavana kavitaem (Hindi Edition). (1995).
 • Sreshtha kabita. (1997).
 • Nayi Disha – an album with Jagjit Singh (1999)
 • Samvedna – an album with Jagjit Singh (2002)

ಎನ್ ಡಿ  ಎ ಆಗಿರಲಿ, ಭಾರತೀಯ ಜನ ಸಂಘ ಆಗಿರಲಿ, ಭಾರತೀಯ ಜನತಾ ಪಾರ್ಟಿ ಆಗಿರಲಿ ಅವೆಲ್ಲವೂ ಹುಟ್ಟಿ ಬೆಳೆದಿದ್ದು ಅಟಲ್ ರ ಮಾರ್ಗದರ್ಶನದಲ್ಲೇ…. ಆದರೆ ಈಗ ಹಾಗಿಲ್ಲ ಬಿಡಿ, ಗಣಿ ದೂಳು, ಸೆಕ್ಸ್ ಹಗರಣಗಳು ಭೂ ಹಗರಣಗಳು ಇವೆಲ್ಲವುಗಳಿಂದಾಗಿ ಇನ್ನೊಮ್ಮೆ ಭಾರತೀಯ ಜನತಾ ಪಾರ್ಟಿ ವಿಸರ್ಜನೆ ಆದರೆ ಏನೂ ಆಶ್ಚರ್ಯ ಪಡಬೇಕಿಲ್ಲ, ತನಗಾಗಿ ಒಂದು ಸಂಸಾರವನ್ನೂ ಕಟ್ಟಿಕೊಳ್ಳದೆ ದೇಶಕ್ಕಾಗಿ ದೇಶದ ಹಿತಕ್ಕಾಗಿ ಹೋರಾಟ ಮಾಡಿದ ಆಧುನಿಕ ರಾಜಕಾರಣದ ಭೀಷ್ಮ ವಾಜಪೇಯಿಯವರೆಲ್ಲಿ? ಈ ಭ್ರಷ್ಟಾತಿಭ್ರಷ್ಟ ಪುಡಾರಿಗಳೆಲ್ಲಿ?

ಮುಂದೆ ಬರುವ ಚುನಾವಣೆಗಳಲ್ಲಿ ವಾಜಪೇಯಿ ಯವರ ಫೋಟೋವನ್ನ ತಮ್ಮ ಪಾಂಪ್ಲೇಟ್ ಗಳಲ್ಲಿ ದೊಡ್ಡದಾಗಿ ತೋರಿಸಿಕೊಂಡು  ಮತ ಕೇಳಲು ಬರುವ ಪುಡಾರಿಗಳಿಗೆ ಸರಿಯಾದ ಬುದ್ದಿ ಕಲಿಸಬೇಕಿದೆ….ವಾಜಪೇಯಿಯವರ ಯಾವ ತತ್ವ ಸಿದ್ದಾಂತಗಳನ್ನ ಅನುಸರಿಸುತ್ತೀದ್ದೀರಿ? ಅನ್ನುವ ಪ್ರಶ್ನೆಯನ್ನ ಅಭ್ಯರ್ಥಿಗಳ ಮುಖದ ಮೇಲೆ ಕೇಳಬೇಕಿದೆ, ನಿಷ್ಕಳಂಕ, ಸಜ್ಜನ , ರಾಜಕಾರಣಿಯಾಗಿ ಕವಿಯಾಗಿ ಒಬ್ಬ ಶ್ರೇಷ್ಠ ಮಾನವತಾ ವಾದಿಯಾದ ವಾಜಪೇಯಿಯವರಂತ ರಾಜಕಾರಣಿಗಳು ಜನ್ಮ ತಾಳಿದಲ್ಲಿ ದೇಶ ಉನ್ನತಿ ಸಾಧಿಸಲು ಸಾಧ್ಯ ಇಲ್ಲವಾದಲ್ಲಿ ಇದೆ ನರಕ ಕೂಪದಲ್ಲಿ ಬಿದ್ದು ಒದ್ದಾಡುವುದು ತಪ್ಪಿದ್ದಲ್ಲ ಏನಂತೀರಿ ಸ್ನೇಹಿತರೇ?

ವಾರ್ಷಿಕ ವರದಿ!! – 2011

ಜನವರಿ 1, 2012

*ನನ್ನನ್ನ ಈ ಬ್ಲಾಗ್ ಬರೆಯಲು ಪ್ರೋತ್ಸಾಹಿಸಿ, ಹುರಿದುಂಬಿಸಿ, ಸಲಹೆ ಸೂಚನೆಗಳನ್ನ ಕೊಟ್ಟ ಎಲ್ಲ ನನ್ನ ಸ್ನೇಹಿತರಿಗೂ ಹೊಸ ವರ್ಷದ ಹಾರ್ದಿಕ ಶುಭಾಷಯಗಳು*

2011 ರಲ್ಲಿ  ನೀವು ನೀಡಿದ ಪ್ರೋತ್ಸಾಹ, ತುಂಬಿದ ವಿಶ್ವಾಸದಿಂದಾಗಿ ಹೆಚ್ಚಿನ ಲೇಖನಗಳನ್ನ ಬರೆಯಲು ಸಾದ್ಯವಾಯಿತು ಅನ್ನುವುದಕ್ಕೆ ಸಾಕ್ಷಿಯಾಗಿ ಇಲ್ಲಿನ ಕೆಳಗಿನ ಲಿಂಕ್ ಅನ್ನ ಕೊಟ್ಟಿದ್ದೇನೆ, ಕ್ಲಿಕ್ ಮಾಡಿ ನೋಡಿ ನೀವು ನೀಡಿದ ಕಾಮೆಂಟುಗಳೆಷ್ಟು, ಇಷ್ಟಗಳೆಷ್ಟು? ಓದಿದ ಒಟ್ಟು ಎಲ್ಲ ಸ್ನೇಹಿತರ ಸಂಖ್ಯೆ ಎಷ್ಟು? ಎಲ್ಲ ಇಲ್ಲಿದೆ….

Click here to see the complete report.

ಧರ್ಮ!!

ಡಿಸೆಂಬರ್ 27, 2011

ನಮ್ಮಲ್ಲಿ ಅಂದರೆ, ಭಾರತದಲ್ಲಿ ಎಷ್ಟು ಧರ್ಮಗಳಿವೆ ಅಂತ ನೋಡಿದ್ರೆ ಮುಖ್ಯವಾಗಿ ಮೂರು ಮಾತ್ರ ನಮಗೆ ಕಾಣಿಸುತ್ತವೆ ಅದರಲ್ಲಿ ಹಿಂದೂ, ಮುಸ್ಲಿಂ ಹಾಗೂ ಕ್ರೈಸ್ತ ಅನ್ನುವ ಹೆಸರುಗಳು ಹೆಚ್ಚು ಬಳಕೆಗೆ ಬರುವ ಪದಗಳು ಅಲ್ಲವೇ? ನಮಗೆ ಗೊತ್ತಿರುವ ಹಾಗೆ ಹೆಚ್ಚಿನ ಜನ ಇರೋದು ಸದ್ಯಕ್ಕೆ ನಮ್ಮ ಹಿಂದೂ ಧರ್ಮದಲ್ಲಿ, ಆದರೆ ಯಾಕೆ ಅದನ್ನ ಬಿಟ್ಟು ಬೇರೆಡೆ ಜನ ಮುಖಮಾಡಿದ್ದಾರೆ? ಅದರ ಬಗ್ಗೆನೆ ಮಾತಾಡೋಣ ಎನಂತೀರ?

ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ ಹಿಂದೂ ಧರ್ಮದ ಕಟ್ಟುಪಾಡು, ಆಚರಣೆಗಳಿಗಿಂತ ಬೇರೆಯ ಧರ್ಮಗಳಲ್ಲಿನ ಆಕರ್ಷಣೆ ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವುದು. ಲವ್ ಜಿಹಾದ್ ಗೆ ಬಿದ್ದು ಹಾಳಗೊ ಹುಡಗ ಹುಡುಗಿಯರು, ಮತಾಂತರ ಕ್ಕೆ ಬೆರಗಾಗೋ ಮುಗ್ಧ ಜನ, ನಮ್ಮ ಧರ್ಮದಲ್ಲೇ ಇದ್ದು ಬೇರೆ ಧರ್ಮದ ಆಚರಣೆಗಳನ್ನ ಇಷ್ಟಪಟ್ಟು ಮಾಡುವ ಜನ, ಇನ್ನೂ ಕೆಲವರು ಹಿಂದುಗಳಾಗಿದ್ದು ಯಾಕಾದ್ರರೂ ಈ ಜಾತಿ ಲಿ ಹುಟ್ಟಿದೆನೋ ಅನ್ನುವ ಮನಸ್ಸು ಮಾಡಿಕೊಂಡಿರೋದು , ಹೀಗೆ ತರತರಾವರಿ ವಿಚಿತ್ರಗಳು…ಏಕೆ ಹೀಗೆ? ನಮ್ಮಲ್ಲಿ ಇರುವ ಹುಳುಕು ಎನು? ಅವರಲ್ಲಿರುವ ಆಕರ್ಷಣೆ ಏನು? ಇದಕ್ಕೆಲ್ಲ ಒಂದು ಉತ್ತರ ಹುಡುಕೊ ಪ್ರಯತ್ನ ನಾವು ಮಾಡಲೇಬೇಕಾದ ಪರಿಸ್ಥಿತಿ ಇದೆ ಅಲ್ಲವೇ? ಇಲ್ಲವಾದಲ್ಲಿ ಹಿಂದೂ ಧರ್ಮ ಒಂದಿತ್ತು ಅನ್ನುವ ವಿಚಾರ ಪುಸ್ತಕಗಳಲ್ಲೂ ಉಳಿಯಲಿಕ್ಕಿಲ್ಲ!!

ನಮ್ಮಲ್ಲಿರುವ ವಿಚಿತ್ರ ಹಾಗೂ ಕಷ್ಟಕರ ಆಚರಣೆಗಳು ಮುಖ್ಯವಾಗಿ ಇದಕ್ಕೆ ಕಾರಣ ಅನ್ನೋದು ನನ್ನ ಅಭಿಪ್ರಾಯ. ಯಾರೋ ಜ್ಯೋತಿಷಿ ಹೇಳಿದರು ಅಂತ ಸಾಲ ಸೂಲ ಮಾಡಿ ಹೋಮ ಹವನ ಮಾಡಿಸಬೇಕು. ದುಡ್ಡಿಲ್ಲ ಅಂದರೂ ದೊಂಬರಾಟದ ಮದುವೆ ಮಾಡಿಕೊಳ್ಳಬೇಕು. ಶಾಪ, ಕರ್ಮ, ಇನ್ನೇನೋ ವಿಮೋಚನೆಗಾಗಿ ಘನ ಘೋರವಾದ ವ್ರತಗಳನ್ನ ಆಚರಿಸಬೇಕು ಇಲ್ಲದಿದ್ದರೆ ಸರ್ವನಾಶ ಆಗುತ್ತೆ ಅನ್ನುವ ಭಯದ ವಾತಾವರಣ ಹುಟ್ಟು ಹಾಕಿರೋ ಹುಚ್ಚು ಮನಸ್ಸುಗಳು. ಇವೆಲ್ಲ ಹಿಂಸೆಗಳ ನಡುವೆ ನಾವು ನಲುಗಿ ಹೋಗಿದ್ದೇವೆ ಅದೇ ಕಾರಣಕ್ಕೆ ನಮಗೆ ಬೇರೆ ಧರ್ಮಗಳು ಹೆಚ್ಚು ಚೆನ್ನಾಗಿ ಕಾಣಿಸುತ್ತವೆನೋ ಅಲ್ಲವೇ?

ಎಷ್ಟೊಂದು ಸಲ ನಾವು ತೊಂದರೆ ಇದೆ ಅಂತ ಯಾರನ್ನಾದರೂ ಜ್ಯೋತಿಷಿಗಳನ್ನ ಕೇಳೋಕೆ ಹೋದರೆ ಸಣ್ಣ ಸಣ್ಣ ಸಮಾಧಾನಗಳನ್ನೋ, ಅಥವಾ ಸರಳ ರೀತಿಯ ಪೂಜೆಗಳನ್ನೋ ಹೇಳಿ ಆ ಮೂಲಕ ನಮ್ಮ ಸಮಸ್ಯೆಗಳನ್ನ ಬಗೆಹರಿಸಿದ್ದನ್ನ, ಅಥವಾ ಬಗೆ ಹರಿಸುವ ಪ್ರಯತ್ನ ಮಾಡಿದ್ದನ್ನ ನೋಡಿದ್ದೀರ?ಇಲ್ಲವೇ ಇಲ್ಲ. ಮೊದಲಿಗೆ ನಿಮಗೆ ಅತ್ಯಂತ ಹೆಚ್ಚು ಹೆದರಿಕೆ ಹುಟ್ಟಿಸಿಬಿಡುತ್ತಾರೆ ಅಲ್ಲವೇ? ಹಾಗೂ ಹೀಗೂ ನೀವು ಅದಕ್ಕೆಲ್ಲ ಜಗ್ಗಲಿಲ್ಲ ಅಂದುಕೊಳ್ಳಿ ನಿಮಗೆ ನಾಗ ಧೋಷ ವಿದೆ ಇಲ್ಲವೇ ನಿಮ್ಮ ಕುಟುಂಬಕ್ಕೆ ಪ್ರೇತ, ಭೂತ, ದೆವ್ವಗಳಾಗಿರುವ ನಿಮ್ಮ ಹಿರೀಕರ ಕಾಟ ಅನ್ನುತ್ತಾರೆ  ಎದೆ ಜೆಲ್ ಅನ್ನುತ್ತದೆ ಒಮ್ಮೆ.!! ಮೊದಲೇ ಮನ ನೊಂದು ಹೋಗಿರುತ್ತೇವೆ ಅಲ್ಲಿಗೆ, ಅಲ್ಲಿ ನಮ್ಮ ಮನೋ ಚೈತನ್ಯವನ್ನ ಉದ್ದೀಪನಗೊಳಿಸಬೇಕೆ ಹೊರತು ಅದಕ್ಕೆ ಭಯವೆಂಬ ರಾಕ್ಷಸನನ್ನ ತುಂಬಿ, ದೊಡ್ಡ ಮಟ್ಟದ ದೇವರಸೇವೆ ಮಾಡಿಸಬೇಕೆಂಬ ಅನಿವಾರ್ಯತೆ ಸೃಷ್ಟಿಸುವುದು ಎಷ್ಟು ಸರಿ? ಮತ್ತೆ ಜೀವನ ಅಂದರೆ ಸರಳತೆಯಲ್ಲವೇ? 80% ಜ್ಯೋತಿಷಿಗಳನ್ನ ನೋಡಿ ಅಥವಾ ಪುರೋಹಿತರನ್ನ ನೋಡಿ ಅದೆಷ್ಟು ಚಿನ್ನ, ಬೆಳ್ಳಿ ಅವರ ಮೈ ಮೇಲೆ ಇರುತ್ತದೆ….. ಅಲ್ಲಿಗೆ ಅರ್ಥವಾಗಲಿಲ್ಲವೇ? ಅವರಿಗೆ ಅದೆಲ್ಲ ಹೇಗೆ ಬಂತು ಎಂಬುದು?

ಒಂದು ಹೋಮ ಮಾಡಿಸಿಲ್ಲ ಹವನ ಇಲ್ಲ, ಯಾವ ದೊಡ್ಡ ಹೇಳುವಂತಾ ದೇವತಾ ಕಾರ್ಯ ಮಾಡಿಸಿಲ್ಲ ಇವನೆಂತಾ ನಾಸ್ತಿಕ ಜನ ಮಾರಾಯ? ಅನ್ನೋರು ನಮ್ಮ ನಡುವೆಯೇ ಇರೋದು ಇನ್ನೊಂದು ದೊಡ್ಡ ದುರಂತ ಸ್ನೇಹಿತರೇ, ಹೊರಗಿನಿಂದ ಮಾತನಾಡುವ ಜನ ಒಮ್ಮೆ ವ್ಯಕ್ತಿಯ ಪರಿಸ್ಥಿತಿಯನ್ನ ಅರ್ಥಮಾಡಿಕೊಳ್ಳಬೇಕು ಅವನಿಗೇನು ಕಷ್ಟವಿದೆಯೋ ಏನೋ? ಅಥವಾ ಅದೆಷ್ಟು ಜೀವನದಲ್ಲಿ ನೊಂದು ಜಿಗುಪ್ಸೆ ಗೆ ಒಳಗಾಗಿದ್ದನೋ ? ಇದೆಲ್ಲವನ್ನು ಯೋಚಿಸಿ ಅವನಿಗೆ ಸಹಾಯ ಹಸ್ತಚಾಚುವ ಬದಲು ಅವನ ಬಡತನವನ್ನು ಎತ್ತಿ ಆಡಿಕೊಳ್ಳುವ ಜನ, ಅದೆಷ್ಟು ದೊಡ್ಡ ಹೋಮ, ಹವನ ಗನಂದಾರಿ ಕೆಲಸಗಳನ್ನು ಮಾಡಿದರೂ ಪ್ರಯೋಜನಕ್ಕೆ ಬಾರದು ಅಲ್ಲವೇ?

ಒಬ್ಬ ತನ್ನ ಶಕ್ತಿ ಇಂದ ದೊಡ್ಡದೇನೋ ಮಾಡುತ್ತಾನೆ ಅಥವಾ ಮಡಿ ಮಡಿ ಅಂತ ಮೂರು ಹೊತ್ತು ಇದ್ದು ಭಯಾನಕ ವ್ರತ ನಿಯಮಗಳನ್ನ ಅಚ್ಚರಿಸುತ್ತಾನೆ ಅಂದರೆ ಅದು ಅವನ ಇಷ್ಟ ಅಥವಾ ನಂಬಿಕೆಯ ವಿಚಾರವಷ್ಟೆ, ಅದನ್ನ ಬೇರೆಯವರ ಮೇಲೆ ಹೇರುವ ವಿಚಿತ್ರ ಖಾಯಿಲೆ ಯಾಕೆ ?  ನಮಗೆ ನಂಬಿಕೆ ಅನ್ನುವ ವಿಚಾರ ಎಲ್ಲರಲ್ಲೂ ಯಾವಾಗಲೂ ಮೂಡುವುದಿಲ್ಲ ಹಾಗೆ ಆಚರಣೆಗಳ ವಿಚಾರದಲ್ಲೂ ಅಷ್ಟೇ ಅನ್ನುವುದು ನನ್ನ ಅಭಿಪ್ರಾಯ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಒಬ್ಬ ಪುರೋಹಿತರನ್ನೊ, ಪೂಜೆ ಪುನಸ್ಕಾರ ಮಾಡುವವರನ್ನೊ ಬೇಟಿ ಮಾಡಿ ಸಲಹೆ ಕೇಳೋಣವೆಂದರೆ ಒಬ್ಬರು ಒಂದೊಂದು ಪರಿಹಾರ, ಸಮಸ್ಯೆ, ಹಾಗೂ ವಿಧಾನಗಳನ್ನ ಹೇಳುವುದು, ಈ ಎಲ್ಲ ಗೊಂದಲಗಳ ನಡುವೆ ಯಾರನ್ನ ನಂಬಬೇಕು ಯಾರನ್ನ ಬಿಡಬೇಕು? ನಮಗೆ ಗೊತ್ತಿದಷ್ಟು ನಿಮಗೇನು ಗೊತ್ತು? ನಾವು ಮಾಡಿಸೊದೆ ಹೀಗೆ ಸಾಧ್ಯವಾದರೆ ಮಾಡಿಸಿ ಇಲ್ಲವಾದಲ್ಲಿ ಬಿಡಿ ಅನ್ನುವ ದೇವ ಸೇವಕರನ್ನ ನೋಡಿದ್ದೇನೆ ಸ್ನೇಹಿತರೇ….ಇದೆಂತಹ ವ್ಯವಹಾರ? ಬೆಂಗಳೂರಿನತಹ ನಗರಗಳಲ್ಲಿ ಪ್ರತಿಯೊಂದು ಪೂಜೆ ಹಾಗೂ ಬೇರೆ ದೇವರ ಕೆಲಸಗಳಿಗೆ ಇಷ್ಟು ಹಣ ಅಂತ ಫಿಕ್ಸ್ ಆಗಿರುತ್ತೆ ಅದನ್ನ ಕಾಂಟ್ರಾಕ್ಟ ತೆಗೆದುಕೊಳ್ಳುವ ಜನರಿದ್ದಾರೆ, ನೋಡಿ ಹೇಗಿದೆ ಮಂತ್ರಗಳ ಮಾರಾಟ!!.

ಇನ್ನೂ ಒಂದು ವಿಧಾನವಿದೆ ಸ್ನೇಹಿತರೇ ಅದು *ಆಷ್ಟ ಮಂಗಳ ದೇವ ಪ್ರಶ್ನೆ* ಅಬ್ಬಾ ಆದಂತೂ ತಿಂಗಳಾನುಗಟ್ಟಳೆ ನೀವು ಹೋಮ ಹವನ, ಪೂಜೆ ಪುನಸ್ಕಾರಗಳನ್ನ ಮಾಡಬೇಕಾಗುತ್ತದೆ. ಅದು ಸಣ್ಣ ಮಟ್ಟದಲ್ಲಿ ಅಲ್ಲ. ಪ್ರೇತ ಸಂಸ್ಕಾರದಿಂದ ಹಿಡಿದು ಯಾವ ಯಾವ ಹೋಮ ಹವನಗಳಿವೆಯೋ ಅವೆಲ್ಲವನ್ನ ಮಾಡಬೇಕು ಲಕ್ಷಾಂತರ ರೂಪಾಯಿಯ ವಹಿವಾಟು!! ಒಂದು ಕುಟುಂಬದ ಸಮಸ್ಯೆಗಳನ್ನ ಹೀಗೆ ಲಕ್ಷಾಂತರ ಹಣ ಹೋಮ ಕುಂಡದಲ್ಲಿ  ಸುರಿದು ಸರಿ ಮಾಡಬಹುದೇ? ಹಾಗಿದ್ದರೆ ನಮ್ಮ ದೇಶದಲ್ಲಿ ಬಡತನ ಸೇರಿದಂತೆ  ದೊಡ್ಡ ದೊಡ್ಡ ಸಮಸ್ಯೆಗಳು ಇನ್ನೂ ಏಕಿವೆ? ದೇವರಿಗೆ ಒನ್ ಟೈಮ್ ಸರಿಯಾಗಿ ದುಡ್ಡು ಸುರಿಯಿರಿ ಶ್ರೀಮಂತರಾಗಿರಿ….. ಸಾಧ್ಯವೇ?

ಇನ್ನು ಎದುರಾಗುವುದು ವಾಮ ಮಾರ್ಗ, ನಮ್ಮಲ್ಲಿ ಇದ್ದಷ್ಟು ಮಾಟ ಮಂತ್ರ, ವಾಮಾಚಾರಗಳು ಇನ್ನೆಲ್ಲೂ ಇಲ್ಲವೇನೋ ಅನ್ನಿಸಿಬಿಡುತ್ತದೆ, ಪ್ರಾಣಿ, ಪಕ್ಷಿಗಳ ತಲೆ, ಇನ್ನಿತರೆ ಭಾಗಗಳನ್ನ ತಂದು ನಾವು ಓಡಾಡುವ ಜಾಗದಲ್ಲಿ ಹಾಕುವುದು, ನಿಂಬೆ ಹಣ್ಣಿನಲ್ಲಿ ಮಾಟ!! ವಶೀಕರಣ ಮಾಡೋದು, ಇಷ್ಟೆಲ್ಲ ಏಕೆ? ನಮ್ಮ ವಿಧಾನ ಸೌಧಕ್ಕೆ ಮಾಟ ಮಾಡಿಸಿದ್ದು ನೆನಪಿದೆಯೇ? ಹೀಗೆಲ್ಲಾ ಆದರೆ ನಮ್ಮ ಧರ್ಮದ ಬಗ್ಗೆ ಗೌರವ ಹೇಗೆ ಹುಟ್ಟಬೇಕು? ರಷ್ಯಾ ನಮ್ಮ ಭಗವದ್ಗೀತೆಯನ್ನ ಅವರ ದೇಶದಲ್ಲಿ ಮಾರಬಾರದೆಂಬ ನಿರ್ಭಂದ ಹೇರಿರುವುದು ನಿಮಗೆಲ್ಲ ತಿಳಿದಿರೋ ಸುದ್ದಿ, ಅದನ್ನ ವಿರೋದಿಸುವರರಿಲ್ಲ ಯಾಕೆ? ಅದೇ ದೇಶದಲ್ಲಿ ಭಯೋತ್ಪಾದನೆಯ ಬೀಜ ಬಿತ್ತಿರುವ, ಜಿಹಾದ್, ಧರ್ಮದ ಹೆಸರಲ್ಲಿ ನರ ಮೇಧ ನೆಡೆಸಲು ಪ್ರಚೋದಿಸುವ ಪುಸ್ತಕಗಳನ್ನ, ಗ್ರಂಥಗಳನ್ನ ನಿಷೇದಿಸುತ್ತಿಲ್ಲ ಯಾಕೆ? ನವೆಷ್ಟು ದುರ್ಬಲರಗುತ್ತಿದ್ದೇವೆ ಅಲ್ಲವೇ? ಹಿಂದೂ ಧರ್ಮದ ಅವಹೇಳನ ಅಥವಾ ನಿಂದನೆಯಲ್ಲಿ ಮಾಧ್ಯಮಗಳೇನೂ ಹಿಂದೆ ಬಿದ್ದಿಲ್ಲ ಸ್ನೇಹಿತರೇ, ಬೇರೆ ಭಾಷೆಗಳಲ್ಲಿ ಬಿಡಿ, ಕನ್ನಡದಲ್ಲೇ ಇರೋ 10 -11 ಚಾನೆಲ್ ಗಳಲ್ಲಿ, ಹೀಗೂ ಉಂಟೆ? ನಿಗೂಡ!!, ಪ್ರೇತ ಸಾಮ್ರಾಜ್ಯ, ಈ ತರ ಇನ್ನೂ ಏನೇನೋ ಕಾರ್ಯಕ್ರಮಗಳು!! ಮೊನ್ನೆ ಸಮಯವಾಹಿನಿಯಲ್ಲಿ ಒಂದು ಗಣೇಶ ದೇವಸ್ಥಾನವನ್ನ ತೋರಿಸಿ ಅಲ್ಲಿ ಪವಾಡಗಳು ನೆಡಿತವೆ ಜನರಲ್ಲಿ ವಿಚಿತ್ರ ನಂಬಿಕೆಗಳಿವೆ ಅಂತೆಲ್ಲ ಹೇಳ್ತಿದ್ರು!! ಇದೆಂತಹ ವಿಪರ್ಯಾಸ? ದೇವರಸ್ಥಾನಗಳಲ್ಲಿ ಇವರ ಕ್ಯಾಮರಗಳನ್ನ ತೆಗೆದುಕೊಂಡು ಹೋಗಿ ಹೇಗೆ Zoom  in – zoom outಮಾಡ್ತಾರೆ ಅಂದ್ರೆ ಅಲ್ಲಿ ಏನೋ ವಿಚಿತ್ರ ನಡಿತಿದಿಯೊನೋ ಅನ್ನೋತರ!!ಯಾಕೆ ಈ ರೀತಿ? ಅದೇ ಮುಸ್ಲಿಂ ಅಥವಾ ಕ್ರೈಸ್ತ ಧರ್ಮದ ನಂಬಿಕೆಗಳ ಬಗ್ಗೆ ಇಂತಹ ಕಾರ್ಯಕ್ರಮಗಳು ಏಕೆ ಬರುವುದಿಲ್ಲ?

ಒಬ್ಬ ಶ್ರೀಮಂತ ತನ್ನ ಎಲ್ಲ ಹಣ, ಸಂಪತ್ತನ್ನ ಸುರಿದು ದೊಡ್ಡ ದೇವರ ಕೆಲಸ ಮಾಡುತ್ತಾನೆ, ಆದರೆ ಬಡವನಾದವನು ಏನು ಮಾಡಬೇಕು? ಅವನಲ್ಲಿರುವ ಪುಡಿಗಾಸನ್ನ ಸಾಲ ದ ಜೊತೆ ಸೇರಿಸಿ ಏನೋ ದೊಡ್ಡ  ಪೂಜೆ ಮಾಡಿಸಿದರೆ ಅವನು ಉದ್ದಾರ ಆಗುತ್ತಾನಾ? ಸಾಲದ ಶೂಲ ತಲೆಯಮೇಲೆ ಬಂದು ಜೀವನ ಇನ್ನೂ ನರಕವಾಗಿ ಬಿಡುವುದಿಲ್ಲವೇ?  ಹಾಗಾದರೆ ದೇವರು ಬಡವರಿಗಲ್ಲವೇ? ಅಥವಾ ದೇವರಿಗೆ ಕೇವಲ ಕೈ ಮುಗಿದು ತನಗಾದ ಮಟ್ಟಿಗೆ ಭಕ್ತಿಯನ್ನ ತೋರಿಸಿದರೆ ಸಾಲದೆ?

ಇಲ್ಲ ಸ್ನೇಹಿತರೇ ಸರಳ ಆಚರಣೆಗಳು ಖಂಡಿತಾ ನಮ್ಮಲ್ಲಿ ಇವೆ, ದೇವರೇಲ್ಲೂ ನನಗೆ ಅದುಕೊಡಿ, ಇದು ಕೊಡಿ, ಕುರಿ  ಕೋಳಿನ ಬಲಿ ಕೊಡಿ ಅಂತ ಕೇಳಿಲ್ಲ, ನಮಗಾದ ಮಟ್ಟದಲ್ಲಿ ನಮ್ಮ ಸೇವೆಯನ್ನ, ಆಚರಣೆಗಳನ್ನ ಶ್ರದ್ಧೆ ನಿಷ್ಠೆ ಇಂದ ಮಾಡಿಕೊಂಡರೆ ದೇವರು ಒಳ್ಳೆಯದನ್ನ ಮಾಡುತ್ತಾನೆ ಅನ್ನುವ ನಂಬಿಕೆ ನಮ್ಮಲ್ಲಿ ಹುಟ್ಟಬೇಕು ಅಷ್ಟೇ. ಬೇರೆಯವರ ಮನ ನೋಯಿಸದೆ, ಅವರಿಗೆ ವಂಚನೆ ಮಾಡದೆ, ಸತ್ಯ ಮಾರ್ಗದಲ್ಲಿ ಕೈಲಾದಷ್ಟು ಸಂಪಾದನೆ ಮಾಡಿ ಸರಳತೆಯ ಜೀವನವನ್ನ ನೆಡೆಸಿ, ಸಾದ್ಯವದಲ್ಲಿ ಆದಷ್ಟು ಜನರಿಗೆ ಉಪಕಾರವನ್ನ ಬಯಸಿ, ಜೀವನದಲ್ಲಿ ನಾಲ್ಕು ಜನರಿಂದ ಒಳ್ಳೆಯ ಮಾತುಗಳನ್ನ ಕೇಳಿದರೆ ಅದು ನಮ್ಮ ಆತ್ಮಕ್ಕೆ ತನ್ಮೂಲಕ ದೇವರಿಗೆ ಸಲ್ಲಿಸಿದ ಸೇವೆಯೇ ಅಲ್ಲವೇ? ದಯವಿಲ್ಲದಾ ಧರ್ಮವಾದವುದಯ್ಯ ?” ಅನ್ನುವ ಬಸವಣ್ಣವರ ಸಾಲುಗಳು ಎಷ್ಟು ಸುಂದರವಲ್ಲ್ವೆ? ಹೆತ್ತವರ ಕಷ್ಟ ನೋವುಗಳನ್ನ ಬದಿಗೊತ್ತಿ, ಮೊಜಿನ ಜೀವನ ನೆಡಸಿ ಸಾವಿರ ಯಾಗ ಮಾಡಿಸಿದರೇನು ಫಲ? ತಂದೆ ತಾಯಿಗಳು ನಮ್ಮ ಬಾಲ್ಯದಲ್ಲಿ ಅದೆಷ್ಟು ನಿಸ್ವಾರ್ಥತೆ ಇಂದ ನಮ್ಮ ಸೇವೆ ಮಾಡಿರುತ್ತಾರೋ ಅದೇ ರೀತಿ ಅವರ ಕೊನೆಗಾಲದಲ್ಲಿ ನಾವು ಅವರ ಸೇವೆ ಯನ್ನ ಅಷ್ಟೇ ನಿಸ್ವಾರ್ಥ ಮನೋಭಾವನೆಯಿಂದ ಮಾಡಿದರೆ ಅದಕ್ಕಿಂತ ದೊಡ್ಡ ದೇವರ ಕೆಲಸ ಇನ್ನೊದಿಲ್ಲ ಅನ್ನುವುದು ನನ್ನ ಅಭಿಪ್ರಾಯ.

ಯಾರಿಗೆ ಯಾವ ಒಳ್ಳೆಯ ಹಾಗೂ ಸರಳ ಆಚರಣೆಗಳ ಮೇಲೆ ನಂಬಿಕೆ ಇದೆಯೋ ಅದನ್ನ ಮಾತ್ರ ನಂಬಿ, ಅದನ್ನ ಬೇರೆಯವರ ಮೇಲೆ ಹೇರದೇ ಧೃಡ ಭಕ್ತಿಯಿಂದ ಆಚರಿಸಿಕೊಂಡು ಹೋದರೆ ಅದಕ್ಕಿಂತ ದೊಡ್ಡ ಸೇವೆ ಇನ್ನೊಂದಿಲ್ಲ, ಕೈಲಾದರೆ ಒಂದು ದೊಡ್ಡ ಹೋಮ ಹವನಗಳನ್ನ ಮಾಡೋಣ ಇಲ್ಲವೇ ಸುಮ್ಮನಿರೋಣ ಅದುಬಿಟ್ಟು ಬೇರೆಯವನೊಬ್ಬ ಮಾಡಿಸಿಲ್ಲ ತಾನು ಮಾತ್ರ ಅದೇಂತದೋ ಮಾಡಿ ಸ್ವರ್ಗಕ್ಕೇ ಹೋಗುತ್ತೇನೆ ಅನ್ನುವ ಮಾತುಗಳು ನಿಲ್ಲಲಿ, ಆದಷ್ಟು ನಮ್ಮಲ್ಲಿರುವ ಸರಳತೆ, ಸ್ವಾತಂತ್ರ್ಯ, ಸುಂದರತೆಯನ್ನ ಹೇಳಿಕೊಳ್ಳಬೇಕಿದೆ, ಒಬ್ಬರಲ್ಲೊಬ್ಬರು ಒಗ್ಗಟ್ಟಿನಿಂದ ಬಾಳುವ ಮನೋಭಾವನೆ ಬೆಳೆಯಬೇಕಿದೆ. ದುಡ್ಡಿನಾಸೆಗೆ ಅಥವಾ ಇನ್ನೇನೋ ದುರುದ್ದೇಶ ಇಟ್ಟುಕೊಂಡು ಬೇರೆಯವರ ಹಣ ವಸೂಲಿ ಮಾಡಿ ಪರಿಹಾರ ಕೊಡಿಸುತ್ತೇವೆ ಅನ್ನುವ ಹಿತ ಶತ್ರುಗಳಿಂದ ದೂರವಿರಬೇಕಿದೆ, ಹೀಗಾದರೆ ಮಾತ್ರ ನಮ್ಮ ಸನಾತನ ಧರ್ಮ ಉಳಿದುಕೊಳ್ಳುತ್ತದೆ.

ನಮ್ಮೆದುರೆ ನಮ್ಮ ಮುಂದಿನ ಸಂತಾನ, ಧರ್ಮದ ಕಟ್ಟುಪಾಡುಗಳನ್ನ ಧಿಕ್ಕರಿಸಿ ಹೆತ್ತವರ ಮನನೋಯಿಸಿ ಹೋಗದಂತೆ ಸರಳತೆಯ ಜೀವನವನ್ನ ಭೋದಿಸೋಣ, ನಮ್ಮ ಧರ್ಮ, ಆಚರಣೆಗಳ, ನಂಬಿಕೆಗಳ ಬಗ್ಗೆ ವಿಶ್ವಾಸ ಹುಟ್ಟಿಸುವ ಕೆಲಸ ಮಾಡೋಣ, ಒಗ್ಗಟ್ಟು ಹಾಗೂ ಒಲವ ಹಣತೆ ಯನ್ನ ಪ್ರತಿ ಮನೆಯಲ್ಲಿ ಬೆಳಗಿಸೋಣ, ತನ್ಮೂಲಕ ದೇಶ, ಭಾಷೆ, ಧರ್ಮವನ್ನ ವರ್ಷ ವರ್ಷವೂ ಹೆಚ್ಚಿನದಾಗಿ ಬೆಳೆಸೋಣವೆನ್ನುವ ಸಂಕಲ್ಪ ಮಾಡೋಣ……….. ಹೊಸ ವರ್ಷ ನಮ್ಮೆಲ್ಲರಿಗೂ ಹರುಷತರಲಿ, ಉತ್ತರೋತ್ತರ ಅಭಿವೃದ್ಧಿಯಾಗಲಿ, ಶುಭಾಷಯಗಳು ಸ್ನೇಹಿತರೇ ಮತ್ತೆ ಸಿಗುತ್ತೇನೆ…..

ಹರಕೆ!!

ಡಿಸೆಂಬರ್ 1, 2011

ನಾನೇಕೆ ಬರೆಯುತ್ತಿಲ್ಲ? ತುಂಬಾ ಸೋಂಬೇರಿಯಾಗಿದೀನಿ ಅಂತ ಬೈತಾ ಇದೀರಾ? ಗೊತ್ತಾಯ್ತು ಅದಕ್ಕೆ ಬಂದೆ. J ಈಸಲನೂ ಏನಾದರೂ ಸ್ವಲ್ಪ ಮಾತಾಡೋಣ ಅಂತ. ಕೆಲವೊಂದು ಸಂಪ್ರದಾಯ, ಶಾಸ್ತ್ರ ನಂಬಿಕೆಗಳನ್ನ ರಾಜಕೀಯ ದಾಳವನ್ನಾಗಿಸಿಕೊಂಡು ಬದುಕುತ್ತಿರುವ ಜೀವಿಗಳಿಗೆ ನನ್ನ ಕೆಲವು ಪ್ರಶ್ನೆಗಳನ್ನ ಕೇಳಬೇಕು ಅನ್ನುವ ಮನಸ್ಸಾಗಿದೆ ಬನ್ನಿ ನಿಮಗೆ ಎನನ್ನಿಸುತ್ತದೋ ನೋಡೋಣ.

ಮೊನ್ನೆ ಹೀಗೆ ಟಿ ವಿ ನೋಡ್ತಾ ಇದ್ದೆ. ಒಬ್ಬ ಮಹಾನುಭಾವ ವಿ ಎಸ್ ಆಚಾರ್ಯ ಅವರು ಗೊತ್ತಲ್ಲ? ಅವರಿಗೆ ಚೆನ್ನಾಗಿ ಬೈಗುಳಗಳ ಸುರಿಮಳೆಯನ್ನೇ ಸುರಿತಾ ಇದಾನೆ, ಯಾಕೆ ಗೊತ್ತ? ಅವನ ಪ್ರಕಾರ ಕುಕ್ಕೆ ಸುಬ್ರಮಣ್ಯ ದಲ್ಲಿ ನೆಡೆಯೋ “ಮಡೆ ಸ್ನಾನ” ತಪ್ಪ0ತೆ!! (ಮಡೆ ಸ್ನಾನ ಎಂದರೆ  ಬ್ರಾಹ್ಮಣರು ಊಟ ಮಾಡಿದ್ದ ಎಲೆಗಳ ಮೇಲೆ ಉರುಳು ಸೇವೆ!! ಇದು ಕುಕ್ಕೆಯ ದೇವಸ್ಥಾನ ಇದೆಯಲ್ಲ ಅದರ ಪ್ರಾಂಗಣದಲ್ಲೇ ಹರಕೆ ರೀತಿ ಪ್ರತಿವರ್ಷ ನೆಡೆಯುತ್ತದೆ ಇದು ಇಂದು ನಿನ್ನೆಯದಲ್ಲ ಸುಮಾರು 400 ವರ್ಷಗಳ ಇತಿಹಾಸವಿರುವ ಕಾಯಕ , ಅದರಂತೆ ಈವರ್ಷವೂ ನೆಡೆಯಿತು ) ಇಲ್ಲಿ ಒಂದು ಮೂಲ ಪ್ರಶ್ನೆ ಏನೆಂದರೆ ಯಾರೂ ಯಾರಿಗೂ ಇಲ್ಲಿ ಒತ್ತಾಯ ಪೂರ್ವಕವಾಗಿ ಈ ಸೇವೆಯನ್ನ ಮಾಡಿಸುವುದಿಲ್ಲ, ಹಾಗೆ ಸುಬ್ರಮಣ್ಯ ದೇವಳವು ಈ ಸೇವೆಗಾಗಿ ಯಾವುದೇ ರೀತಿಯ ಹಣವನ್ನೂ ವಸೂಲಿ ಮಾಡುತ್ತಿಲ್ಲ ಹಾಗಾದರೆ ಈ ರೀತಿಯ ಸೇವೆಯೂ ತಪ್ಪು ಅಥವಾ ಸರಿ ಅನ್ನುವ ಅನುಮಾನ ಯಾಕೆ ಹುಟ್ಟಬೇಕು? ಒಬ್ಬ ತನ್ನ ಸ್ವಂತ ಇಚ್ಛೆ ಇಂದ ಈ ಸೇವೆಯಲ್ಲಿ ಬಾಗವಹಿಸಿ ನೆಮ್ಮದಿ ಹಾಗೂ ಶಾಂತಿಯನ್ನ ಪಡೆಯುತ್ತಾನೆ ಅಂದಾದರೆ ಬೇರೆಯವರು ಇದರ ಬಗ್ಗೆ ಅಪಸ್ವರ ಯಾಕೆ ಎತ್ತಬೇಕು?

ಬುದ್ದಿ /ಲದ್ದಿ ಜೀವಿಗಳು ಹೇಳುವ ಪ್ರಕಾರ ಇಲ್ಲಿ “ಮಲೆ ಕುಡಿಯ” ಅನ್ನುವ *ಹಿಂದುಳಿದ* ಜನಾಂಗವು ಮಾತ್ರ ಈ ಆಚರಣೆಯನ್ನು ಮಾಡುತ್ತಿದೆ ಹಾಗೆ ಮಾಡುವಂತೆ ಬ್ರಾಹ್ಮಣರು ಒತ್ತಾಯ ಮಾಡುತಿದ್ದಾರೆ ಅನ್ನುವ ರೀತಿ ಇದೆ. ಆದರೆ ಇಲ್ಲಿ ಮಲೆಕುಡಿಯದವರು ಮಾತ್ರವಲ್ಲ ಬೇರೆಯವರೂ ಕೂಡ ಬಾಗವಹಿಸ್ತಾರೆ, ಅದನ್ನ ಯಾಕೆ ಇವರು ನೋಡುತ್ತಿಲ್ಲ? ಆ ಹಿಂದುಳಿದ ಜನಾಂಗದವರು ಮಾಡುವುದು ತಪ್ಪು ಎನಿಸಿದವರಿಗೆ ಅವರ ಜನಾಂಗದ ಹಿರಿಯರೊಬ್ಬರನ್ನ ಕರೆಸಿ  ತಿಳಿ ಹೇಳಿ, ಅಥವಾ ಅದನ್ನ ಮಾಡದಂತೆ ಮನ ಒಲಿಸಿ, ಅದನ್ನು ಬಿಟ್ಟು ಬೇರೆಯವರ ನಂಬಿಕೆಗೆ ಏಕೆ ಭಂಗ ತರುವ ಕೆಲಸ ಮಾಡುತಿದ್ದಾರೋ ತಿಳಿಯದು ಅಲ್ಲವೇ ? ಅದರಂತೆ ಕೆಲವರು ದೇವಸ್ತಾನಕ್ಕೆ ಕುಮಾರಾಧಾರ ನದಿ ಇದ್ಯೆಲ್ಲ ? ಅಲ್ಲಿಂದ ಉರುಳು ಸೇವೆ ಮಾಡಿಕೊಂಡು ಬರುತ್ತಾರೆ ಅದು ಸುಮಾರು ಮುಕ್ಕಾಲು ಕಿಲೋಮೀಟರ್ನಸ್ಟು ದೂರವನ್ನ (ಟಾರು ರೋಡಿನಲ್ಲಿ ಉರುಳು ಸೇವೆ!!)ಕೇವಲ 2 ತುಂಡು ಬಟ್ಟೆಯಲ್ಲಿ. ಇದರ ಬಗ್ಗೆ ಯಾಕೆ ಅಪಸ್ವರ ಎತ್ತುತ್ತಿಲ್ಲ? ಕೇವಲ ಮಡೆ ಸ್ನಾನ ಬೇಡ ಅನ್ನುವ ಜನ , ಅಥವಾ ಬ್ರಾಹ್ಮಣರ ದಬ್ಬಾಳಿಕೆ ಅನ್ನುವ ಬುದ್ದಿ ಜೀವಿಗಳು ಬೇರೆಯ ಧರ್ಮಗಳ ಮತಾಂಧತೆಯ ಬಗ್ಗೆ ಯಾಕೆ ಪ್ರಶ್ನೆ ಎತ್ತುತ್ತಿಲ್ಲ?

ಒಂದು ಕಡೆ ಅಂತೂ ಮಕ್ಕಳನ್ನ ಎತ್ತರದಿಂದ ಕೆಳಗಡೆ ಹಾಕಿ ಅವುಗಳ ರೋಗ ರುಜಿನಗಳನ್ನ ದೂರಮಾಡುತ್ತೇವೆ ಅನ್ನುವ ಮೂರ್ಖರಿದ್ದಾರೆ. ಕೈ ಕಾಲುಗಾಳಿಗೆ ಸರಪಳಿ ಹಾಕಿಕೊಳ್ಳುವುದು, ತಲೆ ಕೂದಲ ಕಾಣಿಕೆ ಕೊಡುವುದು, ಕಬ್ಬಿಣದ ರಾಡು ಗಳನ್ನ ನಾಲಿಗೆ, ಕೆನ್ನೆ, ಬೆನ್ನುಗಳಿಗೆ ಚುಚ್ಚಿಕೊಂಡು ಸೇವೆ ಮಾಡುವವರಿದ್ದಾರೆ, ಮೈ ಮೇಲೆ ದೆವ್ವ ಭೂತ ಬರುತ್ತದೆ ಅಂತ ಹೆದರಿಸೋ ಜನ ಎಷ್ಟು ಜನರಿದ್ದಾರೆ, ಕಪಟ ಜ್ಯೋತಿಷ್ಯವನ್ನ ಹೇಳಿ ಹಗಲು ದರೋಡೆ ಮಾಡುವ ವಿಷ ಜಂತುಗಳು ಇವೆ, ನಿಮಗೆ ಜನ್ಮ ಜನ್ಮಾಂತರದ ದೋಷವಿದೆಯೆಂದು ಬೇಕಾದ ಬೇಡವಾದ ಎಲ್ಲ ಪೂಜೆಗಳನ್ನ ಮಾಡಿಸಿ ಹಣವನ್ನ ಕೊಳ್ಳೆ ಹೊಡೆಯುವವರು ಇಲ್ಲವೇ? ಅನಿಷ್ಟವೆಂಬ ದೇವದಾಸಿ ಪದ್ದತಿ ಈಗಲೂ ಕದ್ದು ಮುಚ್ಚಿ ನೆಡೆಯುತ್ತಿಲ್ಲವೇ? ಡೋಂಗಿ ಬಾಬಗಳು ಕ್ಯಾನ್ಸರ್  ಅಥವಾ ಏಡ್ಸ್ ಗುಣ ಪಡಿಸುತ್ತೇವಿ ಅಂತ ಜನಗಳಿಗೆ ಮಂಕು ಬೂದಿ ಎರಚುತ್ತಿಲ್ಲವೇ?  ಧರ್ಮ , ಜಾತಿ ಹೆಸರಲ್ಲಿ ಮಾಟ, ಮಂತ್ರ, ಪ್ರಾಣಿ ಬಲಿ ಕೊಟ್ಟು ಜನರಲ್ಲಿ ಭಯದ ವಾತಾವರಣ ಹುಟ್ಟಿಸುತ್ತಿರುವರು ಇಲ್ಲವೇ?ಇವರಬಗ್ಗೆ ನಮ್ಮ ಬುದ್ದಿ ಜೀವಿಗಳು ಅಥವಾ ಹಿಂದುಳಿದ ವರ್ಗಗಳ ಮುಖಂಡರು ಮಾತಾಡುವುದಿಲ್ಲ ಏಕೆ?

ಹೋಗಲಿ ನಮಗೆ ಅತ್ಯಂತ ಹತ್ತಿರದಲ್ಲೇ ಇದ್ದು ಮತಾಂತರ ಮಾಡಿಸಿಕೊಂಡು, ಹಣ ಹಾಗೂ ಜಮೀನು ಮನೆಗಳ ಆಸೆ ತೋರಿಸುತ್ತಿರುವವರು ಯಾರು? ನೀವು ಪಾಪಿಗಳು,,, ಅವನೊಬ್ಬನೇ ನಿಮ್ಮ ಪಾಪಗಳನ್ನ ತೊಳೆಯಬಲ್ಲ, ಬನ್ನಿ ನಮ್ಮೊಂದಿಗೆ, ಹಣೆಗೆ ಕುಂಕುಮ ಇಡಬೇಡಿ, ಕೈಗಳಿಗೆ ಬಳೆ ತೊಡಬೇಡಿ, ಬಿಳಿಬಟ್ಟೆಗಳನ್ನ ಹಾಕಿ ಅಂತೆಲ್ಲ ಹೇಳಿ ಬಡಪಾಯಿಗಳ ಮೆದುಳಿಗೆ ಹುಳಬಿಟ್ಟು  ನಮ್ಮ ಊರಿನ ಬಡ ಕೂಲಿ ಕಾರ್ಮಿಕರನ್ನ ಮತಾಂತರ ಮಾಡಿಕೊಂಡಿರುವುದು ಯಾರು? ಧರ್ಮದ ಹೆಸರಲ್ಲಿ ಅತ್ಯಾಚಾರ,ಕೆಟ್ಟ ನಡತೆ, ಮಹಿಳಾ ಲೈಂಗಿಕ ಶೋಷಣೆ ಇವುಗಳನ್ನ ತಡೆಯುವ ನಿಟ್ಟಿನಲ್ಲಿ ಎಷ್ಟರ ಮಟ್ಟಿಗಿನ ಹೊರಾಟವನ್ನ ಬುದ್ದಿ ಜೀವಿಗಳು ಮಾಡುತಿದ್ದಾರೆ? ಆ ಸಂಧರ್ಬದಲ್ಲಿ ಹಿಂದುಳಿದವರ ಶೋಷಣೆ ಆಗುವುದಿಲ್ಲವೇ? ಧರ್ಮದ ಹೆಸರಲ್ಲಿ, ಮತಾಂತರ ಮಾಡಿಸುವ ಉದ್ದೇಶದಿಂದಲೇ ವಿದೇಶಗಳಿಂದ ಹಣವನ್ನ ದೇಣಿಗೆ ಪಡೆದು ಅದನ್ನ ಭಾರತದಲ್ಲಿ ಚಲಾಯಿಸುವ ಸಂಘ ಸಂಸ್ಥೆ ಗಳ ಒಳಸಂಚು ಕಾಣುವುದಿಲ್ಲ ಅಲ್ಲವೇ?

ಸುಮಾರು 65 ವರ್ಷಗಳಿಂದ ಧರ್ಮದ ಹೆಸರಿನಲ್ಲಿ ಭಯೋತ್ಪಾದನೆ ನೆಡೆಯುತ್ತಿದೆ, ಅಲ್ಪಸಂಖ್ಯಾತರ ಸೋಗಿನಲ್ಲಿ ದೇಶದ 20% ಜನಸಂಕ್ಯೆನ್ನ ಆಕ್ರಮಿಸಿಕೊಂಡಿರೋದು ಯಾರು? ಧರ್ಮದ ಹೆಸರಿನಲ್ಲಿ ಜೀವಗಳ ಬಲಿ ತೆಗೆದುಕೊಂಡರೆ ಅದಕ್ಕೆ ಯಾರು ಮಾತಾಡುವುದೀಲ್ಲ ಯಾಕೆ? ಕಸಬ್ ನಂತಹ ಉಗ್ರನೊಬ್ಬನನ್ನ ನೇಣಿಗೇರಿಸಲು ಇವರಿಗೆ ಯಾವ ಸಮಯ ಬರಬೇಕು?ಜಾತಿ ಆಧಾರದಲ್ಲಿ ರಾಜಕೀಯದ ಬೇಳೆ ಬೇಯಿಸಲು ಈ ಸಂಚು ಅಲ್ಲವೇ? ಹಬ್ಬದ ಸಂದರ್ಭದಲ್ಲಿ ಕುರಿಗಳನ್ನ ಸಾಲು ಸಾಲು ಬಲಿಕೊಡುವಾಗ  ಬುದ್ದಿಜೀವಿಗಳಿಗೆ ಅದು ಕಾಣುವುದೇ ಇಲ್ಲ!! ಹೋಗಲಿ ಬಿಡಿ, ಒಂದು ಹಬ್ಬದ ಸಂಧರ್ಬದಲ್ಲಿ  ಗೋ ಹತ್ಯೆ ನಿಷೇದ ಕಾನೂನು ಮಾಡಿದ್ದರೂ ಸಾಲು ಸಾಲು ಗೋವುಗಳ ಮಾರಣ ಹೋಮ ನೆಡೆಯುತ್ತದೆ ಅದಕ್ಕೆ ಯಾವ ರೀತಿಯ ವಿರೋಧವೂ ಇಲ್ಲವೇ? ಒಬ್ಬ ವ್ಯಕ್ತಿ ಧರ್ಮದ ಅನುಮತಿ ಇದೆ ಎಂದು 5 ಅಥವಾ 6 ಮದುವೆ ಆಗುತ್ತಾನೆ ಅದು ಮತಾಂಧತೆ ಅಲ್ಲವೇ? ಕುಟುಂಬ ನಿಯಂತ್ರಣ ಯೋಜನೆ ಅಥವಾ ಮಧುವೆಗೆ ಸಂಭಂದಪಟ್ಟ ಕಾನೂನುಗಳು ಇವರಿಗೆ ಯಾಕೆ ಅನ್ವಯಿಸುವುದಿಲ್ಲ? ತಮ್ಮ ಧರ್ಮಕ್ಕೆ ಧಕ್ಕೆ ತರುತ್ತಿವುರ ರಾಕ್ಷಸರನ್ನ ಕಲ್ಲು ಹೊಡೆದು ಓಡಿಸುವ ಹುಚ್ಚು ನಂಬಿಕೆಯ ಸಂಧರ್ಬದಲ್ಲಿ ಎಷ್ಟು ಪ್ರಾಣಾಹಾನಿ ಆಗುವುದಿಲ್ಲ? ಇದು ಧರ್ಮಾಂಧತೆಯ ಪರಮಾವಧಿಯಲ್ಲವೇ? ಧರ್ಮದ ಹೆಸರಲ್ಲಿ ಸ್ತ್ರೀ ಸ್ವತಂತ್ರದ ಹರಣ ಎಷ್ಟರ ಮಟ್ಟಿಗೆ ಸರಿ? ಇದಕ್ಕೆ ಮಹಿಳಾ ಆಯೋಗ ಅಥವಾ ಇನ್ನಿತರ ಮಹಿಳಾ ಮಣಿಗಳು ಧ್ವನಿ ಎತ್ತುವುದಿಲ್ಲ ಅಲ್ಲವೇ? ಇರಲಿ, ಜನ ಲೋಕಪಾಲ್ ನಮ್ಮ ಧರ್ಮದ ವಿರುದ್ದವಿದೆ ಅದಕ್ಕೆ ಯಾರು ಸಹಕರಿಸಬೇಡಿ ಅಂತ ಕರೆ ಕೊಟ್ಟ ದೆಹಲಿಯ ಧರ್ಮ ಗುರುವಿನ ಬಗ್ಗೆ ಹಿಂದುಳಿದ ಮುಖಂಡರ  ಅಭಿಪ್ರಾಯವೇನು ? ಲವ್ ಜಿಹಾದ್ ಅನ್ನುವ ಕೆಟ್ಟ ಸಂಪ್ರದಾಯ ನೆಡೆದು ಕೊಂಡು ಬರುತ್ತಿರುವ ಈ ಸಂಧರ್ಬದಲ್ಲಿ ಅದರ ವಿರುದ್ದ ಧ್ವನಿ ಎತ್ತುವ ಛಲ ಹಟ ಅಥವಾ ಶಕ್ತಿ ಸೋ ಕಾಲ್ಡ್ ಬುದ್ಧಿ ಜೀವಿಗಳಿಗೆ ಇಲ್ಲವೇ?

ಅದೇ ರೀತಿ ಎಷ್ಟೊಂದು ಒಳ್ಳೆಯ ಕೆಲಸಗಳೂ ಧರ್ಮದ ಹೆಸರಲ್ಲಿ ನೆಡೆಯುತ್ತಿವೆ, ಅನ್ನದಾನ, ವಿದ್ಯಾ ದಾನ, ಹಿಂದುಳಿದವರ ಏಳಿಗೆಗೆ ಆರ್ಥಿಕ ಸಹಾಯ ಕೊಡುವ ಮಠ ಮಾನ್ಯಗಳು, ಸಂಘ ಸಂಸ್ಥೆಗಳು ಬಡವರ ಹಾಗೂ ಹಿಂದುಳಿದವರ ಅಭಿವೃದ್ದಿಗಾಗಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಜನರು ಎಷ್ಟೋ ಇದ್ದಾರೆ  ಅವರ ಬಗ್ಗೆ ಒಂದೇ ಒಂದು ಮೆಚ್ಚುಗೆಯ ಮಾತನಾಡದ ನಮ್ಮ ಮುಖಂಡರು , ಹೇಗೆ ಅದೇ ಧರ್ಮ, ಜಾತಿ ಅಥವಾ ಸಮಾಜ ಅನುಸರಿಸುವ ನಂಬಿಕೆಗಳನ್ನು ಪ್ರಶ್ನಿಸಲು ಅರ್ಹರಾಗಿದ್ದಾರೆ? ಬುದ್ಧಿ ಜೀವಿಗಳು ಎಂದರೆ ಒಳ್ಳೆಯದನ್ನ ಪ್ರಶಂಸಿಸಿ ಕೆಟ್ಟದನ್ನ ತಿದ್ದುವ ತಟಸ್ಥ ಮನಸ್ಸಿನ ಜನ ಅನ್ನುವ ನಮ್ಮ ನಂಬಿಕೆ ಸುಳ್ಳು ಅನ್ನುವುದನ್ನ ಮತ್ತೆ ಮತ್ತೆ ನಮಗೆ ತೋರಿಸಿ ಕೊಡುತ್ತಿದ್ದಾರೆ ಅನ್ನಿಸುತ್ತಿಲ್ಲವೇ?

ಕೇವಲ ಜಾತಿ ಹೆಸರಲ್ಲಿ, ಓಟಿಗಾಗಿ, ಹೊಲಸು ರಾಜಕೀಯದವರಿರುವ ವರೆಗೂ ನಮಗೆ ಇದೆ ಗತಿ ಅನ್ನಿಸುತ್ತಿದೆ. ಕೇವಲ ಕೆಲವು ಮಾತ್ರ ಶಾಸ್ತ್ರ , ಸಂಪ್ರದಾಯ ಹಾಗೂ ನಂಬಿಕೆಗಳನ್ನ ಪ್ರಶ್ನಿಶಿ ಪ್ರಚಾರ ಗಿಟ್ಟಿಸುವ ವಿಕೃತ ಮನಸ್ಸುಗಳ ಆಟ ನಿಲ್ಲಬೇಕಿದೆ. ನನ್ನಲ್ಲಿ ಈ ಜಾತಿಯ ಇಷ್ಟು ಮತಗಳಿವೆ ಅವುಗಳನ್ನ ನಿಮಗೆ ಹಾಕಿಸುತ್ತೇನೇ ಆದರೆ ನನಗೆ ನೋಟಿನ ಕಂತೆಗಳನ್ನ ಸುರಿಯಿರಿ ಅನ್ನುವ ಮಾನವೀಯತೆ ಇಲ್ಲದ  ಗೋ ಮುಖ ವ್ಯಾಘ್ರಗಳು ಸಾಯಬೇಕಿದೆ. ಎಲ್ಲಕ್ಕಿಂತ ಹೆಚ್ಚಾಗಿ ಸರ್ವ ಧರ್ಮ ಸಾಹಿಷ್ಣು  ರಾಷ್ಟ್ರದಲ್ಲಿ ಎಲ್ಲರ ನಂಬಿಕೆ ಆಚರಣೆಗಳಿಗೆ ಬೆಲೆ ಕೊಟ್ಟು ಸಾಮರಸ್ಯದಿಂದ ಬಾಳುವ ಮನಸ್ಸು ಪ್ರತಿಯೊಬ್ಬ ನಾಗರೀಕರಲ್ಲೂ ಬರಬೇಕಿದೆ. ಎಲ್ಲ ಧರ್ಮ, ಶಾಸ್ತ್ರ, ನಂಬಿಕೆ, ಅಚಕರಣೆಗಳನ್ನೂ ಮೀರಿ ಮಾನವ ಧರ್ಮ ಒಂದಿದೆ ಅನ್ನುವುದನ್ನ ಅರಿಯಬೇಕಿದೆ ಎಲ್ಲ ಧರ್ಮಗಳೂ ಹಾಗೂ ಅದರ ಆಚರಣೆಗಳು ಕಾನೂನಿನ ಅಡಿಯಲ್ಲಿ ಬರುವುದಾದರೆ ಆ ಕಾನೂನಿನಲ್ಲಿ ಕಟ್ಟು ನಿಟ್ಟಿನ ಮಾರ್ಪಾಡಾಗಬೇಕಿದೆ. ನಮ್ಮ ನಂಬಿಕೆ ಸಂಪ್ರದಾಯಗಳು ಮಾತ್ರ ಸರಿ ಇನ್ನುಳಿದವು ಬೂಟಾಟಿಕೆ ಅನ್ನುವ ನ ಮನಸ್ಥಿತಿ ಗೆ ತಕ್ಕ ಚಿಕಿತ್ಸೆ ದೊರಕಬೇಕಿದೆ. ಸಮಗ್ರತೆ, ಒಗ್ಗಟ್ಟು ಪ್ರೀತಿ ವಿಶ್ವಾಸ ಇವೆಲ್ಲವೂ ಪ್ರತಿಯೊಬ್ಬರಲ್ಲೊ ಬಂದಾಗ ಮಾತ್ರ ನಮ್ಮ ದೇಶ ನೆಮ್ಮದಿಯ ಬದುಕು, ಬ್ರಷ್ಟ ರಹಿತ ಸಮಾಜವನ್ನು ಕಾಣಬಹುದು ಅಲ್ಲ್ವೆ? ನಿಮಗೆ ಏನು ಅನ್ನಿಸ್ತು ಹೇಳಿ , ಮತ್ತೆ ಬರ್ತೀನಿ.

ವಾಕ್ ಇನ್ ಸಂದರ್ಶನ!!

ಅಕ್ಟೋಬರ್ 21, 2011

ನಮಸ್ತೆ ನನ್ನೆಲ್ಲ ಆತ್ಮೀಯ ಸ್ನೇಹಿತರಿಗೆ, ಎಷ್ಟೊಂದು ಸಲ ಅಂದುಕೊಳ್ಳುತ್ತೇನೆ  ಯಾವಾಗಲೂ ನಿಮ್ಮೊಂದಿಗೆ  ಏನಾದರೂ ಮಾತನಾಡುತ್ತಲೇ ಇರಬೇಕು, ಬರಿಯುತ್ತಲೇ ಇರಬೇಕು, ಆದರೆ ಎನು ಮಾಡೋದು ಕೆಲಸ ಕೆಲಸ ಕೆಲಸ….. ಈ ಭಾರಿ ಕೆಲಸದ ಮಧ್ಯೆ ಸ್ವಲ್ಪ ಬಿಡುವು ಮಾಡಿಕೊಳ್ಳಲೇಬೇಕೆಂಬ ಹಠ ತೊಟ್ಟು  ಸ್ವಲ್ಪ ಬರೆಯಬೇಕೆಂಬ ಬಯಕೆ ಉಂಟಾಗಿದೆ ಬನ್ನಿ ಸ್ವಲ್ಪ ಹೊತ್ತು ಕಾಡು ಹರಟೆ ಹೊಡೆಯೋಣ..

ಮೊನ್ನೆ ನಮ್ಮ ಆಫೀಸಿನಲ್ಲಿ  ಬಿ ಇ ಮಾಡಿದ ಅನುಭವವಿಲ್ಲ ದ ಹುಡುಗರನ್ನು ಕೆಲಸಕ್ಕೆ ತೆಗೆದುಕೊಂಡೆವು, ಅಂದರೆ ಸಿಂಪಲ್ ಆಗಿ ಹೇಳುವುದಾದರೆ ಫ್ರೆಶರ್ ಗಳನ್ನು ಕೆಲಸಕ್ಕೆ ಸೇರಿಸಿಕೊಂಡೆವು ಅಂತ. ಅಲ್ಲಿ  ಇಂಟರ್ವ್ಯೂ ಮಾಡಲು ಟೆಕ್ ಪ್ಯಾನಲ್ ಗಳಿಗೆ ಸಹಕರಿಸಲು ಜೊತೆಗೆ ಎಚ್ ಆರ್ ಇಂಟರ್ವ್ಯೂ ಮಾಡಲು ನಾನಿದ್ದೆ. ಅದು ಶನಿವಾರ ವಾಕ್ ಇನ್ ಬೇರೆ ಆದ್ದರಿಂದ ನಾವು ಕರೆ ಮಾಡಿದ್ದು ಕೇವಲ 70 ಜನರಿಗೆ ಬಂದದ್ದು 100 ಕ್ಕಿಂತ ಹೆಚ್ಚು ಮಂದಿ. ಅವರನ್ನು ಕೂರಿಸುವುದರಲ್ಲೇ ಸುಸ್ತಾಗಿ ಹೋದೆ ನಾನು. ಮತ್ತೆ  ನಮ್ಮ ಅನುಭವಸ್ಥ ನುರಿತ (?) ಟೆಕ್ ಜೀವಿಗಳು ಬರಲು ಇನ್ನೂ ಸುಮಾರು ಹೊತ್ತು ಇತ್ತು, ಬಿಡಿ ಶನಿವಾರ ನಮ್ಮ ಸಾಫ್ಟ್ ವೇರ್  ಇಂಜಿನೀಯರುಗಳೆ ಹಾಗೆ ಶನಿವಾರ 9 ಗಂಟೆಗೆ ಬನ್ನಿ ಅಂದರೆ ರಾಜಕಾರಣಿಗಳ ರೀತಿ 11 ಗಂಟೆಗೆ ಬರುವುದು ಅವರ ಸಂಪ್ರದಾಯ. ಅದೇ ಸಮಯದಲ್ಲಿ ನಮ್ಮ ಫ್ರೇಶರುಗಳು ಏನು ಮಾಡುತ್ತಿದ್ದಾರೆ ನೋಡೋಣ ಅಂತ ಅನ್ನಿಸಿ ಮತ್ತೊಂದು ಬಾಗಿಲಿನಿಂದ ಅವರು ಕುಳಿತಿದ್ದ ಹಾಲ್ ಗೆ ಹೋದೆ….

ಏನು ನೋಡೋದು ಎಷ್ಟು ಆಶ್ಚರ್ಯ ಗೊತ್ತ ? ಸಾಲಾಗಿ ಕೂರಿಸಿದ್ದೆ ನಾನು, ಆದರೆ ಅವರು ಚೇರುಗಳನ್ನ ಸೇರಿಸಿಕೊಂಡು ಸಣ್ಣ ಸಣ್ಣ ಗುಂಪುಕಟ್ಟಿಕೊಂಡು ಬಿಟ್ಟಿದ್ದಾರೆ, ಒಬ್ಬರು ಹರಟೆ ಹೊಡೆಯುತ್ತಿದ್ದಾರೆ, ಇನ್ನೊಬ್ಬ ಮೊಬೈಲ್ ನಲ್ಲಿ ಜೋರಾಗಿ ಮಾತಾನಾಡೋದು, ಇನ್ನೂ ಕೆಲವರಂತೂ ಜಗತ್ತೇ ತಲೆ ಮೇಲೆ ಬಿದ್ದೋರತರ ಕೂತಿದ್ದಾರೆ, ಮತ್ತೆ ಕೆಲವರು ಒಂದು ಹೆಜ್ಜೆ ಮುಂದೆ ಹೋಗಿ “ಏನು ಮಗ ಈ ಕಂಪನಿ ನಿಜವಾಗ್ಲೂ ಫ್ರೆಶರ್ ಗಳನ್ನ ತಗೋತಾ ಇದ್ಯ? ಯಾರೋ ಹೇಳಿದ್ರು ನಂಗೆ, ಕಂಪನಿ ಅಷ್ಟು ಚೆನಗಿಲ್ಲ ಆದ್ರೆ ಎಕ್ಷ್ಪೀರಿಯನ್ಸ್ ಗೋಸ್ಕರ ಬಂದು ಸೇರ್ಕೋಬೇಕು ಅಷ್ಟೇ ಅಂತ , ಅದು ಅಲ್ಲ್ದೆ ಮೊನ್ನೆ ಆ ಕಂಪನಿ ಗೆ ಹೋದ್ರೆ ದಿನ ಇಡೀ ಕೂರ್ಸಿ ಏನೂ ಮಾತಡದೆ ಸಂಜೆ ಹೊತ್ತಿಗೆ ಮನೆಗೆ ಕಳ್ಸಿದ್ರು, ಇಲ್ಲೂ ಅದೇ ಕಥೆ ಅನ್ಸುತ್ತೆ  ಎಚ್ ಆರ್ ಇಲ್ಲಿ ನಮ್ಮನ್ನ ಕೂರ್ಸಿ ಎಲ್ಲಿ ಸತ್ತ ಅಂತ ಗೊತ್ತಿಲ್ಲ ನೋಡು, ಅದಕ್ಕೆ ಒಂದು ಪ್ಲಾನ್ ಮಾಡೋಣ ಅಂತ ಇದೀನಿ ನೆಕ್ಸ್ಟ್ ಟೈಮ್  ನನ್ನ ರೇಸ್ಯುಮೆ ಲಿ ನಮ್ಮ ಅಣ್ಣ ನ ಎಕ್ಸ್ಪೀರಿಯನ್ಸ್ ಹಾಕಿಕೊಂಡು ಹೋಗೋಣ ಅಂತ ”  ಅಯ್ಯೋ ಅನ್ನಿಸಿತು ನನಗೆ. ಇನ್ನೂ ಒಬ್ಬ ಮಹಾರಾಯ ಅಲ್ಲಿ ಬಂದಿರೋ ಹೂಡಗೀರನ್ನ ಗೇಲಿ ಮಾಡೋದು ಕಾಲು ಎಳೆಯೋದು ಶುರು ಮಾಡಿದ್ದಾನೆ, ಮಧ್ಯ ಮಧ್ಯ ಅವನ ಗಾನ ಸುಧೆ ಬೇರೆ. ತುಂಬಾ ಸಿಟ್ಟುಬಂದು ಅವನನ್ನ ಮಾತ್ರ ಕರೆದು ನಿಮ್ಮ ರೇಸ್ಯುಮೆಯಲ್ಲಿರೋ  ಅಂಕಗಳು 70% ಕ್ಕಿಂತ ಕಡಿಮೆ ಇದೆ ಆದ್ದರಿಂದ ಇನ್ನೊಂದು ದಿನ ಕರೆಯುತ್ತೇವೆ ನೀವು ಹೊರಡಬಹುದು ಎಂದು ಹೇಳಿ ಕಳಿಸಿಬಿಟ್ಟೆ. ಕೆಲವರು ಟಿ-ಶರ್ಟ್ ಗಳನ್ನು ಹಾಕಿಕೊಂಡು ಕಾಲೇಜಿಗೆ ಬರುವ ಹಾಗೆ ಬಂದಿದ್ದರು ಅದಾದರೂ ಮುಂದೆ ಸುದಾರಿಸಬಹುದು ಅನ್ನುವ ಕಾರಣಕ್ಕೆ ಸುಮ್ಮನಾದೆ. ಮತ್ತೆ ಇನ್ನೂ ಕೆಲವೊಂದಿಷ್ಟು ಜನ ನಮ್ಮ ಆಫೀಸಿನ ದೊಡ್ಡ ದೊಡ್ಡ (?) ಮ್ಯಾನೇಜರುಗಳ ಹೆಸರುಗಳನ್ನ ತಮ್ಮ ರೇಸ್ಯುಮೇಯ ಮೇಲೆ ಹಾಕಿಕೊಂಡು ಬಂದಿದ್ದಾರೆ.

ಕೊನೆಗೂ ನಮ್ಮ ಟೆಕ್ಕಿಗಳು ಬಂದರು ನಾನು ತಕ್ಷಣ ಒಂದು 6 ಜನ ಟೆಕ್ಕಿಗಳನ್ನು ಬೇರೆ ಬೇರೆ ರೂಮುಗಳಲ್ಲಿ ಕೂರಿಸಿ ಒಬ್ಬಬ್ಬರಂತೆ ಕರೆಯುವ ಪ್ಲಾನ್ ಮಾಡಿದೆ ಅದನ್ನೇ ಹೋಗಿ ಹಾಲ್ ನಲ್ಲಿ ಕುಳಿತಿದ್ದ ಫ್ರೇಶರ್ ಗಳಿಗೆ ಹೇಳಿದೆ. ನಂತರ ಕರೆಯಲು ಶುರುಮಾಡಿದಾಗ ಗೊತ್ತಾಗಿದ್ದು ನೋಡಿ ಭಲವಾದ ಸಮಸ್ಯೆ, ತಾ ಮುಂದು ನಾ ಮುಂದು ಅಂತ ಬಾಗಿಲುಗಳ ಬಳಿ ತಿರುಪತಿ ದೇವರ ದರ್ಶನಕ್ಕೆ ಬರುವಂತೆ ನುಗ್ಗಿದರು.  ತಡೆಯಲಾರದೇ ಸರಿಯಾಗಿ, ಜೋರಾಗಿ ಬೈದು ಕೂರಿಸಬೇಕಾಯಿತು , ಆದರೂ ನುಗ್ಗುವಿಕೆ ಕಡಿಮೆ ಆಗಲೇ ಇಲ್ಲ!! ಅಂತೂ ಹಾಗೂ ಹೀಗೂ ಎಲ್ಲರನ್ನೂ ಇಂಟರ್ವ್ಯೂ ಮಾಡಿ ಕಳಿಸುವಾಗ ಸಂಜೆ 4 ಘಂಟೆ ಸಮಯ.

ಇದನ್ನೆಲ್ಲ ಏಕೆ ಹೇಳುತ್ತಿದ್ದೇನೆ ನಿಮಗೆ ಅಂದುಕೊಂಡಿರ? ಕಾರಣ ಇಷ್ಟೇ ನಾವು ಯಾವುದೇ ಅನುಭವವಿಲ್ಲದೆ ಹೊಸದಾಗಿ ಕೆಲಸ ಹುಡುಕಲು ಹೋಗುವಾಗ ನಮ್ಮ ವರ್ತನೆ, ನಡೆ, ನುಡಿ, ಸಭ್ಯತೆ ಎಲ್ಲ ಹೇಗಿರಬೇಕು? ಅನ್ನುವ ಸಾಮಾನ್ಯ  ಮಾಹಿತಿಯನ್ನ ತಿಳಿದುಕೊಳ್ಳುವುದಕ್ಕಾಗಿ, ನನಗಿರುವ ~5 ವರ್ಷಗಳ ಎಚ್ ಆರ್ ಅನುಭವದಲ್ಲಿ ಕೆಲವು ವಿಚಾರಗಳನ್ನ ಹೇಳೋಣ ಅಂತ ಇದೀನಿ. ನಿಮಗೆ ಹೌದು ಅನ್ನಿಸಬಹುದು ನೋಡಿ.

 • ಆದಷ್ಟು ಸಣ್ಣ ಸಣ್ಣ ಕಾರಣಗಳಿಗಾಗಿ ಇಂಟರ್ವ್ಯೂ ಅನ್ನು ತಪ್ಪಿಸಿಕೊಳ್ಳುವುದು ಬೇಡ .
 • ಇಂಟರ್ವ್ಯೂ ಗೆ ಹೋಗುವ ಮುನ್ನ, ಯಾವ ಕಾರಣಕ್ಕೆ, ಮತ್ತು ಯಾವ ಯಾವ ಕುಶಲತೆ (skill expertise) ಗಳನ್ನ ಕೇಳಿದ್ದಾರೆ?ಅಂತ ಅವರು ಕಳಿಸಿರುವ ಮೈಲ್ ಅನ್ನು 2 ಭಾರಿ ಚೆಕ್ ಮಾಡಿ ನೋಡಬೇಕು.
 • ಯಾವ ಕಂಪನಿಯವರು ಕರೆದಿದ್ದಾರೆ? ನಾನು ಹೋಗುತ್ತಿರುವ ಕಂಪನಿಯ ಮೂಲ, ಇತಿಹಾಸ ಹಾಗೂ  ವ್ಯವಹಾರ ಏನು?  ಎಷ್ಟುಜನ ಇಲ್ಲಿ ಕೆಲಸ ಮಾಡುತ್ತಿದ್ದಾರೆ ಅನ್ನುವುದನ್ನ ಅವರ ವೆಬ್ ಸೈಟ್ ನೋಡಿ ತಿಳಿದುಕೊಳ್ಳಬೇಕು
 • ಅನುಭವ ಇಲ್ಲದ ಕಾರಣ ಅಲ್ಲಿ ಕೇಳಿರುವ ತಾಂತ್ರಿಕ ಜ್ಞಾನ (Knowledge not experience)ನನ್ನಲ್ಲಿ ಇದೆಯೇ?  ಇಲ್ಲವಾದಲ್ಲಿ ಅದರಬಗ್ಗೆ ಸ್ವಲ್ಪ ಹೊತ್ತು ಓದಿ ಕೊಳ್ಳುವುದು ತುಂಬಾ ಒಳಿತು.
 • ಇಂಟರ್ವ್ಯೂಗೆ ಹೋಗಲು ನನಗೆ ಆ ಕಂಪನಿಯ ವಿಳಾಸ ಸರಿಯಾಗಿ ಗೊತ್ತಿದೆಯೇ? ಇಲ್ಲವಾದಲ್ಲಿ ಹತ್ತಿರದ ಲ್ಯಾಂಡ್ ಮಾರ್ಕುಗಳು ಏನಾದರೂ ಇವೆಯೆ? ಅನ್ನುವುದನ್ನ ನೋಡಿಕೊಳ್ಳಬೇಕು ಇದು ನಾವು ಸಮಯಕ್ಕೆ ಸರಿಯಾಗಿ ನಿಗದಿತ ಸ್ಥಳ ತಲುಪಲು ಸಹಾಯಕವಾಗುತ್ತದೆ.
 • ನನ್ನ ಅನುಭವದಲ್ಲಿ ನೋಡಿದ್ದೇನೆ, ನಾವು ಕಳುಹಿಸಿದ ಮೇಲ್ ನಲ್ಲಿ ಅಥವಾ ಇಂಟರ್ನೆಟ್ ನಲ್ಲಿ ಹುಡುಕಿ ನಮ್ಮ ಫೋನ್ ನಂಬರ್ ಗಳಿಗೆ ಫೋನ್ ಮಾಡಿ “ಸಾರ್ ನನಗೆ ತುಂಬಾ ಕಷ್ಟ ಇದೆ ನನಗೆ ಎಲ್ಲೂ ಕೆಲಸ ಸಿಗುತ್ತಿಲ್ಲ,ನನಗೆ ಜೀವನ ಸಾಕಾಗಿದೆ , ದಯವಿಟ್ಟು ಕೆಲಸ ಕೊಡಿಸಿ, ಏನಾದರೂ ಮಾಡಿ ಸಾರ್ ಪ್ಲೀಸ್”…. ಅನ್ನುವುದು. ಈ ರೀತಿ ಮಾಡಿದರೆ ನಿಮ್ಮ  ಇಂಟರ್ವ್ಯೂ  ತೆಗೆದು ಕೊಳ್ಳುವ ಶಕ್ತಿ ಕುಂದಿದೆ, ಜೊತೆಗೆ ನಿಮ್ಮಲ್ಲಿಯ ಪಾಸಿಟಿವ್  ಎನರ್ಜಿ ಕಡಿಮೆ ಆಗಿದೆ ಅಥವಾ ನಿಮ್ಮಲ್ಲಿ ಆತ್ಮವಿಶ್ವಾಸ ಕುಂದಿದೆ  ಅಂತ ಅರ್ಥೈಸಿ ನಿಮ್ಮನ್ನು ಇಂಟರ್ವ್ಯೂ ಗೆ ಕರೆಯದೆ ಇರುವ ಸಾಧ್ಯತೆಗಳು ಇರುತ್ತವೆ.

ಇಂಟರ್ವ್ಯೂ ನೆಡೆಯುವ ಸ್ಥಳದಲ್ಲಿ ನಮ್ಮ ನಡತೆ ಹೇಗಿರಬೇಕು?

 • ಆದಷ್ಟು ನಿಮ್ಮ ಮೊಬೈಲ್ ಅನ್ನು ಸೈಲೆಂಟ್ ಮೊಡ್ ನಲ್ಲಿ  ಇರುವಂತೆ ನೋಡಿಕೊಳ್ಳಿ. ಜೋರಗಿನ ರಿಂಗ್ ಟೋನ್ಗಳು  ಅಥವಾ ಹಾಸ್ಯಸ್ತ್ಮಕ ಹಾಡುಗಳು ಬೇರೆಯವರಿಗೆ ಕಿರಿ ಕಿರಿ ಉಂಟುಮಾಡಬಹುದು ಅಲ್ಲವೇ?
 • ನಿಮ್ಮ ಉಡುಪು ಟಿ- ಶರ್ಟ್ ಹಾಗೂ ಜೀನ್ಸ್ ಪ್ಯಾಂಟ್ ಆಗಿರದೆ , ನಾರ್ಮಲ್  ಉಡುಪುಗಳಾಗಿರಲಿ. ಉದ್ದದ ನಾಮ, ದೊಡ್ಡ ವಿಭೂತಿ ಪಟ್ಟಿಗಳು ನಿಮ್ಮ ಹಣೆಯನ್ನ ಮುಚ್ಚದಿರಲಿ
 • ಇಂಟರ್ವ್ಯೂ ಹಾಲ್ ನಲ್ಲಿ ಆದಷ್ಟು ನಿಧಾನವಾಗಿ ಮಾತನಾಡುವ ಅಭ್ಯಾಸ ಇರಲಿ. ಗುಂಪುಗಳನ್ನ ಕಟ್ಟಿಕೊಂಡು ಕರೆದ ಕಂಪನಿಯ ಬಗ್ಗೆಯೇ ಹಗುರವಾಗಿ ಮಾತನಾಡುವ ಹವ್ಯಾಸ ಒಳ್ಳೆಯದಲ್ಲವೇನೋ ಅನ್ನುವುದು ನನ್ನ ಅಭಿಪ್ರಾಯ.
 • ಇಡೀ ಪ್ರಪಂಚ ತಲೆ ಮೇಲೆ ಬಿದ್ದಂತೆ ಕುಳಿತುಕೊಂಡಿರುವುದೇಕೆ? ಆತ್ಮವಿಶ್ವಾಸ ದಿಂದ ಸಂದರ್ಶನವನ್ನು ಎದುರಿಸಿ, ಇದಿಲ್ಲದಿದ್ದರೆ ಇನ್ನೊಂದು ಒಳ್ಳೆಯ ಅವಕಾಶ ನಿಮಗಾಗಿ ಕಾದಿರುತ್ತದೆ ಅನ್ನುವ ವಿಶ್ವಾಸ ಇಟ್ಟುಕೊಳ್ಳುವುದು ಅತ್ಯಂತ ಮುಖ್ಯ ಅಲ್ಲವೇ?
 • ನಿಜವಾಗಲೂ ನಮಗೆ ಇಂಟರ್ವ್ಯೂ ಗೆ ಹೋದ ಕಂಪನಿಯ ದೊಡ್ಡ ಮ್ಯಾನೇಜರುಗಳು ಗೊತ್ತಿದ್ದರೆ ಮಾತ್ರ ಅವರ ಹೆಸರನ್ನು ನಮೂದಿಸಿ ಇಲ್ಲವಾದಲ್ಲಿ ಬೇಡ, ಆ ಹೆಸರುಗಳಿಂದಾಗಿ ನಿಮಗೆ ಕೆಲಸ ಬೇಕೆ? ಅಥವಾ ನಿಮ್ಮ ಯೋಗ್ಯತೆಗನುಸಾರ ವಾಗಿಯೇ?
 • ಸಂದರ್ಶನ ಎದುರಿಸುವಾಗಲೂ ಅಷ್ಟೇ, ಭಯವೇಕೆ? ನಡುಗುವ ಧ್ವನಿ ಏಕೆ? ಗೊತ್ತಿರುವ ಪ್ರಶ್ನೆಗಳಿಗೆ ಸ್ಪಷ್ಟ ವಾಗಿ ಉತ್ತರಿಸಿ, ಗೊತ್ತಿಲ್ಲದಿರುವಗಳಿಗೆ “ಅವಕಾಶ ಕೊಟ್ಟಲ್ಲಿ ಖಂಡಿತ ಕಲಿತು ಕೆಲಸ ಮಾಡುತ್ತೇನೆ” ಎನ್ನುವ ಉತ್ತರವೀಯಿರಿ.
 • ಇಂಟರ್ವ್ಯೂ  ರೂಮಿಗೆ ಹೋದ ತಕ್ಷಣ “good morning / afternoon sir” ಅನ್ನುವ ಅಭ್ಯಾಸ ಅತ್ಯಂತ ಒಳ್ಳೆಯದು. ನಗುನಗುತ್ತಾ ಮಾತನಾಡಿ, ಆಳುವ ಧ್ವನಿ ಅಥವಾ ಹೆದರಿದಂತೆ ತೋರಿಸಿಕೊಳ್ಳಬೇಡಿ. ಇದನ್ನು ಮಾಡುವುದು ಕಷ್ಟ ಆದರೆ ಆದಷ್ಟು ಪ್ರ್ಯತ್ನಿಸಿ.
 • ಇಂಟರ್ವ್ಯೂ ಇದೆ ಅಂತ ಬೆಳಗ್ಗಿನ ತಿಂಡಿ ತಿನ್ನದೆಯೇ ಓಡುವುದು ಯಾಕೆ? ಚೆನ್ನಾಗಿಯೇ ಆಹಾರ ಸೇವಿಸಿ ಅದು ನಿಮಗೆ ಸುಸ್ತಾಗದಂತೆ ಕಾಪಾಡುತ್ತದೆ.
 • ಮುಖ್ಯವಾಗಿ ಹಾಗೂ ಕೊನೆಯ ನನ್ನ ಅಭಿಪ್ರಾಯವೆಂದರೆ, ನಾನು ಎಷ್ಟೋ ಭಾರಿ ನೋಡಿದ್ದೇನೆ ನಿಮ್ಮ ಇಂಟರ್ವ್ಯೂ ಆದ ನಂತರ ಮುಂದಿನ ಅಭ್ಯರ್ಥಿಯ ಬಳಿ ಹೋಗಿ ಏನೇನು ಪ್ರಶ್ನೆಗಳನ್ನು  ನಿಮಗೆ ಕೇಳಿದರು ಅನ್ನುವುದನ್ನ ಹೇಳೋದು.!!! ಇದು ಒಳ್ಳೆಯದಲ್ಲ ಅಲ್ಲವೇ? ಏಕೆಂದರೆ ನಿಮಗಿಂತ ಕಡಿಮೆ ಅಂಕಗಳನ್ನು ಗಳಿಸಿದವರು, ಅಥವಾ ಅಶಕ್ತರು  ನಿಮಗೆ ಸಿಗಬೇಕಾದ ಅವಕಾಶವನ್ನ ನಿಮ್ಮಿಂದ ಕಸಿದುಕೊಂಡಂತೆ ಆಗುವುದಿಲ್ಲವೇ? ಅಥವಾ ನಿಮಗೆ ಕೇಳಿದ ಪ್ರಶ್ನೆಗಳನ್ನೇ ಕೇಳುತ್ತಾರೆ ಅನ್ನುವ ಕಲ್ಪನೆ ಬೇಡ…  ಪ್ರಶ್ನೆಗಳನ್ನು  ಬೇರೆ ಬೇರೆ (ವಿಚಿತ್ರ!!)ರೀತಿಯಾಗಿ ಕೇಳುವಂತೆ ಎಚ್ ಆರ್ ಗಳಿಗೆ ತರಬೇತಿ ನೀಡಲಾಗಿರುತ್ತದೆ ..ಅಲ್ಲವೇ?

ನಮ್ಮ ಗುರಿ, ಉದ್ದೇಶ ಹಾಗೂ ನಾವು ಯಾವ ಕ್ಷೇತ್ರದಲ್ಲಿ ಕೆಲಸಮಾಡಬೇಕು ಅಂದುಕೊಂಡಿದ್ದೆವೋ ಅದನ್ನ ಸಾಧಿಸುವವರೆಗೂ ನಮ್ಮ ಆತ್ಮ ವಿಶ್ವಾಸ ಕುಂದದಿರಲಿ, 100 ಇಂಟರ್ವ್ಯೂ ಗಳಾಗಲಿ  101 ನೆಯಯದು ನಿಮಗಿಷ್ಟವಾದ ಕೆಲಸವನ್ನು ತಂದುಕೊಡುತ್ತದೆ ಅನ್ನುವ ನಂಬಿಕೆ ಇರಲಿ. ಸಮಸ್ಯೆಗಳು ಯಾರಿಗಿಲ್ಲ? ಎಲ್ಲರೂ ಒಂದಿಲ್ಲೊಂದು ಸಮಸ್ಯೆಯಲ್ಲೇ ಇರುತ್ತಾರೆ. ಅದನ್ನೆಲ್ಲಾ ಬದಿಗಿಟ್ಟು ನಮ್ಮ ಗುರಿಯತ್ತ ಗಮನವಿರುವೆಡೆಗೆ ಆದಷ್ಟು ಪ್ರಯತ್ನ ಮಾಡೋಣ ಅಲ್ಲವೇ?  ಪ್ರತಿ ಭಾರಿ ಇಂಟರ್ವ್ಯೂ ಕರೆದಾಗಲೂ ಒಳ್ಳೆಯ ರೀತಿಯಲ್ಲಿ  ಪ್ರದರ್ಶನ ನೀಡುತ್ತೇನೆಂಬ  ದೃಡ ಸಂಕಲ್ಪ ವಿರಲಿ, ನನ್ನೆಲ್ಲ ಪ್ರೀತಿಯ ಮಲೆನಾಡ ಕೆಲಸ ಹುಡುಕುವ ಜೀವಗಳಿಗೆ ಆದಷ್ಟು ಬೇಗ ಕನಸು ನನಸಾಗಲಿ…….ಮತ್ತೆ ಇನ್ನೊಂದು ವಿಚಾರ, ಈ ದೀಪಾವಳಿಯ ಸಂಧರ್ಬದಲ್ಲಿ ನಮ್ಮೂರಿನ ಕಾಲೇಜಿನ ಹುಡುಗರಿಗೆ ಈ ವಿಚಾರದಲ್ಲಿ ಒಂದಿಷ್ಟು ಮಾಹಿತಿಯನ್ನ ಅವರ ಕ್ಲಾಸ್ ರೂಮುಗಳಿಗೆ ಹೋಗಿ ತಿಳಿಸುವ ಅವಕಾಶ ಒದಗಿದೆ ಸೋ ನಮ್ಮ ಇಡೀ ತಂಡದೊಂದಿಗೆ ಸಧ್ಯದಲ್ಲೇ ನಮ್ಮೂರಿನ ಭಾವೀ ಉದ್ಯಮಿಗಳನ್ನ / ಪ್ರೊಫೆಷನಲ್ಸ್ ಗಳನ್ನ ಮುಖತ: ಭೇಟಿಮಾಡುತ್ತೇವೆ …..ಬರಲೇ ? ಮತ್ತೆ ಸಿಗೋಣ.

ಈ ಅರ್ಟಿಕಲ್ಲಿಗೆ ಸೇರಿದಂತೆ ನನ್ನ ಮೊದಲ ಲೇಖನ “ಉದ್ಯೋಗ ನಮ್ಮವರಿಗೆಕಿಲ್ಲ” ವನ್ನೂ ನೋಡಬಹುದು.

ಜಯ ಹೇ!!

ಆಗಷ್ಟ್ 14, 2011

ಬಿಡುವಿಲ್ಲದ ಕೆಲಸದಿಂದಾಗಿ ನಾನು ಬರಿಯೋದನ್ನ ಬಿಟ್ಟು ಬಿಡ್ತಿನೇನೋ ಅನ್ನೋಭಯ ಒಂದು ಕಡೆ,ಹಾಗೆ ನಿಮ್ಮನೆಲ್ಲ ಮಾತಾಡಿಸಿ ಸುಮಾರು ದಿನಗಳು ಆಯ್ತಲ್ಲ ಅನ್ನುವ ಬೇಸರ ಇನ್ನೊಂದು ಕಡೆ… ಈ ವಾರಂತ್ಯ ಸುಧೀರ್ಘ  ಅಂದರೆ ಲಾಂಗ್ ವೀಕೆಂಡು, ಅದು ಸ್ವತಂತ್ರ ದಿನಾಚರಣೆಯ ಕಾರಣಕ್ಕೆ, ಅದರ ಬಗ್ಗೆಯೇ ಯಾಕೆ ಮಾತಾಡಬಾರದು? ಅಲ್ವಾ?

 ಸ್ವಾತಂತ್ರ್ಯ ಬಂದು ಇಂದಿಗೆ ಸುಮಾರು ೬೫ ವರ್ಷಗಳು ಕಳೆದು ಹೋಗಿವೆ, ೧೮೫೭ ರ ಮೊದಲ ಸ್ವಾತಂತ್ರ್ಯ ಸಂಗ್ರಾಮದೊಂದಿಗೆ ಆರಂಭವಾಗಿದ್ದು ನಮ್ಮ ದೇಶವನ್ನ ಬ್ರಿಟೀಷರ ದಾಸ್ಯದಿಂದ ಬಿಡಿಸುವ ಹೊರಾಟ. ನಿರಂತರ ೨೦೦ ವರ್ಷಗಳು ಅವರು ಆಳಿದರು,ದೋಚಿದರು,ಕಬ್ಬಿನ ಜಲ್ಲೆಯಂತೆ ಹಿಂಡಿದರು,ಎಷ್ಟೋ ನಮ್ಮ ಮುಗ್ಧ ಜನರು ತಮ್ಮ ಪ್ರಾಣ ತ್ಯಾಗ ಮಾಡಿದರು, ಸುಭಾಶ್ ಚಂದ್ರ ಬೋಸ್ , ಭಗತ್ ಸಿಂಗ್, ಸೂರ್ಜೋ ಸೇನ, ಮುಂತಾದ ಸಾವಿರಾರು ಕ್ರಾಂತಿಕಾರಿಗಳ ನರಬಲಿ ನೆಡೆದು ಹೊಯಿತು  ಕೊನೆಗೆ ಗಾಂಧಿ ಅನ್ನುವ ತಾತ ಮಾಧ್ಯಮವಾಗಬೇಕಾಯಿತು  ಭಾರತ ಮತ್ತು ಪಾಕಿಸ್ತಾನಗಳನ್ನ ಬೇರೆ ಬೇರೆ ಮಾಡಿ ಸಧಾ ಕಚ್ಚಾಡುವ ತೆರದಲ್ಲಿ ಮಾಡಿ, ಮುಂದೆ ಅದನ್ನೇ ಮುಖ್ಯ ವಿಚಾರವನ್ನಾಗಿರಿಸಿಕೊಂಡು  ದೇಶದ ಒಳಗಡೆಯೂ ಎರಡು ಕೋಮುಗಳ ನಡುವೆ ಬಿರುಕು ಉಂಟುಮಾಡಿ ಮತ ಬ್ಯಾಂಕ್ ಮಾಡಿಕೊಂಡು ದೇಶವನ್ನ ಅಂತರಿಕ ವಾಗಿ ರಾಜಕಾರಣಿಗಳು ಮನಸೋ ಇಚ್ಛೆ  ದೋಚುವ ಲೈಸೆನ್ಸ್ ಕೊಡಿಸಲು!! ಅಲ್ಲವೇ?

 ೧೯೬೫ ರಲ್ಲಿ ನಮ್ಮ ನೆರೆ ರಾಷ್ಟ್ರ ಪಾಕಿಸ್ತಾನಕ್ಕೆ ಸ್ವಾತಂತ್ರ್ಯ ಸಂದರ್ಭದಲ್ಲಿ ಕೊಡುವುದೆಲ್ಲವನ್ನು ಕೊಟ್ಟು ಕಳಿಸಿದ್ದರೂ ಕಾಲು ಕೆರೆದುಕೊಂಡು ಬಂದರು ಯುದ್ದ ಮಾಡಲು,ಆವಾಗ ನಮ್ಮ ದೇಶದ ಸೈನ್ಯವನ್ನು ಎಷ್ಟು ಭದ್ರವಾಗಿ ಕಟ್ಟಿದ್ದೆವೆಂದರೆ ನಮ್ಮ ಮುಂದೆ ತರಗೆಲೆಗಳಂತೆ ಉದುರಿ ಹೊಯಿತು ಪಾಕಿಸ್ತಾನ. ಸ್ವತಹ ಆಗಿನ ಪ್ರದನಿಗಳಾಗಿದ್ದ ಲಾಲ್ ಭಾಹದ್ದೂರ್ ಶಾಸ್ತ್ರಿಗಳು ಮುಂದಾಳತ್ವ ವಹಿಸಿ “೨ನೆ ಕಾಶ್ಮೀರ ಕಧನ”ವನ್ನ ಎದುರಿಸಿದರು, ಅವರೊಂದಿಗೆ ಲೆಫ್ಟಿನೆಂಟ್  ಜನರಲ್ ಚೌದರಿ, ಲೆಫ್ಟಿನೆಂಟ್ ಜನರಲ್ ಹರ್ಭಕ್ಶ್ ಸಿಂಗ್ , ಏರ್ ಚೀಫ್ ಮಾರ್ಷಲ್ ಅರ್ಜುನ್ ಹಾಗು ಮುಂತಾದವರು ಜೊತೆಯಾದರು. ಕೊನೆಗೆ ಆ ಯುದ್ಧವೂ “ತಾಷ್ಕೆಂಟ್ ಒಪ್ಪಂದ”ವನ್ನ ಸಂಯುಕ್ತ ರಾಷ್ಟ್ರ ಸಂಘಟನೆಯ ಮಧ್ಯಸ್ತಿಕೆಯಲ್ಲಿ ಪರಸ್ಪರ ಭಾರತ ಹಾಗು ಪಾಕಿಸ್ತಾನಗಳು ಸಹಿ ಹಾಕಿಸುವಲ್ಲಿ  ಮುಕ್ತಾಯಗೊಂಡಿತು.

 ೧೯೭೧ ರಲ್ಲಿ ಮತ್ತೊಮ್ಮೆ ಪ್ರಹಾರ, ಆಗಿನ ಸಂದರ್ಭದಲ್ಲಿ ಇಂದಿರಾ ಗಾಂಧಿಯವರು ದೇಶದ ಪ್ರದಾನಿಯಗಿದ್ದರು. ಡಿಸೆಂಬರ್ ೩ ೧೯೭೧ ರಂದು ಪ್ರಾರಂಭಗೊಂಡ ಯುದ್ದವು ಕೇವಲ ೧೩ ದಿನಗಳಲ್ಲಿ ಮುಗಿದು ಹೊಯಿತು,ಹಾಗು ವಿಶ್ವ ಕಂಡ ಅತ್ಯಂತ ಕಡಿಮೆ ಸಮಯದ ಯುದ್ದ ಇದಾಗಿತ್ತು, ಆದರೆ ಆಗಿನ ಲೆಫ್ಟಿನೆಂಟ್ ಜನರಲ್ ಗಳಾದ ಜೆ. ಎಸ್ ಅರೋರ, ಜಿ. ಬೀವರ್, ಸಗಥ್ ಸಿಂಗ್, ಅಡ್ಮಿರಲ್ ನಂದ, ಹಾಗು ಏರ್ ಚೀಫ್ ಮಾರ್ಷಲ್  ಪ್ರತಾಪ್ ಲಾಲ್ ಅವರ ಹೋರಾಟ ಹೇಗಿತ್ತೆಂದರೆ ಹದಿಮೂರು ದಿನಗಳಲ್ಲಿ  ಪಾಕಿಸ್ತಾನ ತನ್ನ ಶಸ್ತ್ರಾಸ್ತ್ರ ಗಳನ್ನ ತ್ಯಜಿಸಿ ಬೇಷರತ್ ಶರಣಾಯಿತು,ನಂತರ ಪೂರ್ವ ಪಾಕಿಸ್ತಾನ ಬಾಂಗ್ಲಾದೆಶವೆನ್ನುವ ಸ್ವಾತಂತ್ರ್ಯ ರಾಷ್ಟ್ರವಾಯಿತು.

 ೧೯೯೯ ರಲ್ಲಿ ನಡೆದ ಕಾರ್ಗಿಲ್ ಯುದ್ದವಂತೂ ನಿಮಗೆಲ್ಲ ಗೊತ್ತೇ ಇದೆ, ಆಗಿನ ಪ್ರಧಾನಿಗಳಗಿದ್ದವರು ಮಾನ್ಯ ಅಟಲ್ ಬಿಹಾರಿ ವಾಜಪೇಯಿಯವರು. ಸುಮಾರು ೨ ತಿಂಗಳು ನಡೆದ  ಕದನದಲ್ಲಿ ಪಾಕಿಸ್ತಾನ ಆಕ್ರಮಿಸಿಕೊಂಡ ಕಾಶ್ಮೀರದ ಕಾರ್ಗಿಲ್ ಭಾಗವನ್ನ ಮತ್ತೆಂದು ಅವರಿಗೆ ಬಿಟ್ಟು ಕೊಡದಂತೆ ವಾಪಸ್ ಪಡೆದೆವು. ಆಗ ದೇಶಕ್ಕಾಗಿ ಪ್ರಾಣ ತೆತ್ತ ಸುಮಾರು ಸೈನಿಕರಿಗೆ ಪರಮವೀರ ಚಕ್ರ ಪ್ರಶಸ್ತಿಗಳನ್ನ ಕೊಡಮಾದಲಾಯಿತು, ಅವರಲ್ಲಿ ಯೋಗಿಂದ್ರ ಸಿಂಗ್ ಯಾದವ್, ಮನೋಜ್ ಕುಮಾರ್ ಪಾಂಡೆ, ವಿಕ್ರಂ ಭಾತ್ರ, ಅನುಜ್ ನಾಯರ್, ಸರವಣನ್, ಅಜಯ್ ಅಹುಜಾ, ಸಂಜಯ್ ಕುಮಾರ್, ಹಾಗು ರಾಜೇಶ್ ಸಿಂಗ್ ಅಧಿಕಾರಿ ಮುಂತಾದವರು ಮುಖ್ಯವಾದವರು.

 ಓದಿದಿರಲ್ಲ ಇದನ್ನೆಲ್ಲಾ? ಇದನ್ನೆಲ್ಲ ನಮಗೆ ಗೊತ್ತಿಲ್ಲ ಅನ್ನುವ ಕಾರಣಕ್ಕೆ ಹೇಳುತ್ತಿಲ್ಲ, ನಾವು ಮರೆತಿದ್ದೇವೆ ಅನ್ನುವುದನ್ನ ನೆನಪಿಸುತ್ತಿದ್ದೇನೆ ಅಷ್ಟೇ. ನಮಗೆ ಬಂದಿರುವ ಸ್ವಾತಂತ್ರ್ಯ ಎಂತಹದು ? ಸದಾ ಒಂದು ಭಾಗದಿಂದ ಒಳನುಸುಳಿ ಕಂಡ ಕಂಡಲ್ಲಿ ಬಾಂಬುಗಳನ್ನ ಇಟ್ಟು ಅಮಾಯಕರನ್ನ ಸಾಯಿಸುವ  ಪಕ್ಕದ ದೇಶ ಒಂದು ಸೃಷ್ಟಿಯಾಯಿತು, ಪದೇ ಪದೇ ಕಾಶ್ಮೀರದಲ್ಲಿ ದಲ್ಲಿ ಗಲಾಟೆ ಮಾಡುವುದು, ಮತ್ತೊಂದು ಕಡೆ ಇಂದ ಬಾಂಗ್ಲಾದೇಶ ಅನ್ನುವ ಚಿಕ್ಕ ರಾಷ್ಟ್ರದವರು ನಮ್ಮ ದೇಶಕ್ಕೆ ಅಕ್ರಮ ವಾಗಿ ಒಳನುಸುಳುವುದು, ಭಯೋತ್ಪಾದನೆಯನ್ನ ಪ್ರತ್ಯಕ್ಷವಾಗಿ ಬೆಂಬಲಿಸುವ ಪಾಕಿಸ್ತಾನವೆಂಬ ನರಕ ನಮಗೆ ಸಿಕ್ಕಿತು ಅಲ್ಲವೇ? ಹಾಗೆಂದು ಸ್ವಾತಂತ್ರ್ಯ ಸಂದರ್ಭದಲ್ಲಿ ವಿಭಜನೆ ಮಾಡಬಾರದಿತ್ತು  ಅನ್ನುವ ಅಭಿಪ್ರಾಯವಲ್ಲ  ಆದರೆ ವಿಭಜನೆಯಾದಮೇಲೆ ಸುಮ್ಮನಿದ್ದುಕೊಂಡು ದೇಶದ ಆಂತರಿಕ ಅಭಿವೃದ್ದಿಯನ್ನ ಗಮನಿಸಬೇಕು ಹೊರತು,ಮತ್ತೆ ಮತ್ತೆ ಕಾಲು ಕೆರೆದುಕೊಂಡು ಬರುವುದು ಯಾವ ಮಾಹ ಘನ ಕಾರ್ಯ ಸಾದಿಸಲು? ಅನ್ನುವುದು.

 ನಮ್ಮನ್ನು ಪ್ರತಿಕ್ಷಣವೂ ಹಿಂಸಿಸುತ್ತಿರುವ ಪಾಕಿಸ್ತಾನ,ಬಾಂಗ್ಲಾದೇಶ,ಚೀನಾಗಳು ಒಂದುಕಡೆಯಾದರೆ ಇನ್ನೊಂದು ಆಂತರಿಕವಾಗಿ ಸಾಮಾನ್ಯ ಜನರನ್ನು ಕಿತ್ತು ತಿನ್ನುತ್ತಿರುವ ಹೊಲಸು ರಾಜಕಾರಣಿಗಳು!! ಎಂತಹ ನಾಯಕರುಗಳು!!! ಪರಸ್ಪರ ಸ್ಪರ್ಧೆಗೆ ಬಿದ್ದವರಂತೆ ಹಗರಣಗಳನ್ನು  ನಡೆಸುತ್ತಿದ್ದಾರೆ, ಜನ ಸೇವೆಯ ಹೆಸರಲ್ಲಿ  ತಮ್ಮ  ೧೦ ತಲೆಮಾರುಗಳು ಕೂತು ತಿನ್ನುವಷ್ಟು ದುಡ್ಡು ದೋಚುತ್ತಿದ್ದಾರೆ, ತಮ್ಮ ಸ್ವಂತ ಆಸ್ತಿಯಂತೆ ಮಣ್ಣು ಅಗೆದು ಅಕ್ರಮ ಗಣಿಗಾರಿಕೆಯನ್ನ ರಾಜಾರೋಷವಾಗಿ ನೆಸುತ್ತಿದ್ದಾರೆ ಇನ್ನು ಕೆಲವರಂತೂ ಮುಗ್ಧ ರೈತರ ಭೂಮಿಯನ್ನ ಕಸಿದುಕೊಳ್ಳುತ್ತಿದ್ದಾರೆ, ಕೇಳಲು ಹೋದರೆ ಅನ್ನದಾತನ ತಲೆಗೆ ಗುಂಡಿಟ್ಟು ಗೋಲಿಬಾರ್ ಮಾಡುತ್ತಿದ್ದಾರೆ!! ಆದರೆ ಮಾಧ್ಯಮದ ಮುಂದೆ ಸತ್ಯ ಹರಿಶ್ಚಂದ್ರ ರಂತೆ ಪೋಸು ಕೊಡುವುದನ್ನ  ಅಭ್ಯಾಸ ಮಾಡಿಕೊಂಡಿದ್ದಾರೆ.

 ಧರ್ಮದ ಹೆಸರಲ್ಲಿ ಇನ್ನು ಕೆಲವರದ್ದು ಮೋಸ ಹಾಗು ಹಗಲು ದರೋಡೆ, ಕೋಟ್ಯಾಂತರ ರೂಪಾಯಿಗಳನ್ನ ನೆಲಮಾಳಿಗೆಯಲ್ಲಿ ಬಚ್ಚಿಡುತ್ತಿದ್ದಾರೆ, ಸಂತನೆಂದು ಹೇಳಿಕೊಂಡು ವ್ಯಭಿಚಾರವನ್ನ ನಡೆಸುವ ಕಳ್ಳ ಸ್ವಾಮಿಜಿಗಳು ನಮ್ಮ ದೇಶದಲ್ಲಿ ಮೆರೆಯುತ್ತಿದ್ದಾರೆ, ಧರ್ಮದ ಹೆಸರಿನಲ್ಲಿ ಜರನರನ್ನ ಮೋಸಗೊಳಿಸಿ ಮಂಕು ಬೂದಿ ಎರಚಿ ಹಗಲಿನಲ್ಲೇ ರಾಜಾರೋಷವಾಗಿ ಜನರ ಸಮಯ ಹಾಗು ಹಣವನ್ನ ದೋಚುತ್ತಿದ್ದಾರೆ, ಇನ್ನು ಕೆಲವು ಸ್ವಾಮಿಗಳು ಕೆಲವು ಹೊಲಸು ರಾಜಕಾರಣಿಗಳನ್ನ ನೇರವಾಗಿ ಹಳಿಯುವ, ಅಥವಾ ಬೆಂಬಲಿಸುವುದನ್ನ ನೋಡಿದರೆ ಅವರು ಧರ್ಮ ಪ್ರಚರಕರಲ್ಲ ಕೇವಲ ಅಪ ಪ್ರಚಾರಕರು ಅನ್ನುವುದು ಸ್ಪಷ್ಟವಾಗುತ್ತೆ ಅಲ್ಲವೇ?

 ಪೊಲೀಸರದು ಇನ್ನು ವಿಚಿತ್ರ ಹಿಂಸೆ, ಟ್ರಾಫಿಕ್ ಸಿಗ್ನಲ್ಲುಗಳಲ್ಲಿ ಸರಿಯಾಗಿ ನಿಮ್ಮ ವಾಹನಗಳನ್ನ ಸರಿಯಾಗಿ ಓಡಿಸಿದ್ದರೂ, ಸಂಚಾರಿ ನಿಯಮಗಳನ್ನ ಪಾಲಿಸಿದ್ದರೂ, ಸಾಮಾನ್ಯರನ್ನ ಹಿಡಿದು ಫೈನ್ ಹೆಸರಿನಲ್ಲಿ ದೋಚುತ್ತಿದ್ದಾರೆ, ಪೊಲೀಸ್ ಎನ್ನುವ ಟೋಪಿ ದರಿಸಿಕೊಂಡು ರೋಲ್ಕಾಲ್ ಮಾಡುವ ಅಧಿಕಾರಿಗಳು, ಅವರನ್ನು ಬೆಂಬಲಿಸುವ ರಾಜಕೀಯದ ಕಾಣದ ಕೈಗಳು.

 ಬ್ರಷ್ಟಾಚಾರದ ವಿರುದ್ಧ ಯಾರಾದರು ಪ್ರತಿಭಟನೆ ಮಾಡಿದರೆ, ಅವರ ಮೇಲೆ ಲಾಟಿ ಚಾರ್ಜ್ ಮಾಡುವುದು,ಅರೆಸ್ಟ್ ಮಾಡುವುದು, “ಜನರಿಗೆ ಉಪಯೋಗಕ್ಕೆ ಬರುವ ಬ್ರಷ್ಟಾಚಾರ ವಿರೋಧಿ ಕಾನೂನನ್ನ ಜಾರಿಗೆ ತನ್ನಿ” ಎಂದರೆ , ರಾಜಕೀಯದವರಿಗೆ ಬೇಕಾಗುವ, ಅವರಿಗೆ ಮತ್ತಷ್ಟು ದೋಚಲು ಅನುಕೂಲವಾಗುವ೦ತೆ ಅದನ್ನ ತಿರುಚಿ ಅದನ್ನೇ ಸಂಸತ್ತಿನಲ್ಲಿ ಮಂಡಿಸುವುದನ್ನ ನೋಡಿದರೆ ರಕ್ತ ಕುದಿಯುವುದಿಲ್ಲವೇ?

 ಅದಕ್ಕೆ ಕೇಳಿದ್ದು ಸ್ನೇಹಿತರೆ ಎಲ್ಲಿಯ ಸ್ವಾತಂತ್ರ್ಯ? ಯಾವ ಸ್ವಾತಂತ್ರ್ಯ ನಮಗೆ ಬಂದಿರುವುದು? ಹೋಗಲಿ ಒಂದು ತಮಾಷೆ ಗೊತ್ತಾ? ನಮ್ಮ ಸ್ವಾತಂತ್ರ್ಯ ದಿನಾಚರಣೆ ಯನ್ನೇ ನಾವು ನೆಮ್ಮದಿಯಾಗಿ ಆಚರಿಸಲು ಆಗುತ್ತಿಲ್ಲ!! ಪಕ್ಕದ ಪಾಕಿಗಳು ಯಾವಾಗ ಬಾಂಬ್ ಹಾಕುತ್ತಾರೋ ? ಯಾವಾಗ ನಾವು ಸಾಯಬೇಕೋ ಅನ್ನುವ ಭಯದಲ್ಲೇ ಇಡೀ ದೇಶ ಸ್ವಾತಂತ್ರ್ಯ ದಿನಾಚರಣೆ ಆಚರಿಸುತ್ತಿದೆ, ಎಷ್ಟು ನಾಚಿಕೆಗೇಡಿನ ಸಂಗತಿಯಲ್ಲವೇ? ಇನ್ನೆ೦ದೂ ನಮಗೆ ತೊಂದರೆ ಕೊಡದ ರೀತಿಯಲ್ಲಿ ಪಾಕಿಗಳನ್ನ ಸಧೆಬಡಿಯುವ ಸರ್ಕಾರ ಯಾಕೆ ಬರುತ್ತಿಲ್ಲ? ಅಥವಾ ನಮ್ಮ ರಾಜಕಾರಣಿಗಳಿಗೆ  ಅದನ್ನ ಮಾಡುವ ಮನಸಿಲ್ಲ ಏಕೆ?

ಒ೦ದೇ ಪರಿಹಾರ ಅದು ಮೊದಲು ನಮ್ಮ  ನಮ್ಮಲ್ಲೇ ಇದ್ದು ನಮ್ಮಲ್ಲೇ ಒಡಕನ್ನ ಉಂಟುಮಾಡಿ ರಾಜಕೀಯದ ಬೆಳೆಬೇಯಿಸಿಕೊಳ್ಳುತ್ತಿರುವ ರಾಜಕೀಯದ ಹೊಲಸು ನಾಯಕರುಗಳಿಗೆ ಬುದ್ದಿ ಕಲಿಸುವುದು, ಬ್ರಷ್ಟಾಚಾರವನ್ನ ಸಾಯಿಸಲು ಸೋಮರಿತನವನ್ನ ಬಿಟ್ಟು ಎಲ್ಲರೂ ಒಗ್ಗಟ್ಟಾಗಿ ದುಡಿಯುವುದು.. ಅಲ್ಲವೇ? ಇಲ್ಲದಿದ್ದಲ್ಲಿ ಇನ್ನೊಂದು ದಿನ ನಮ್ಮ ದೇಶದಲ್ಲಿ ನಾವೇ ಅಲ್ಪ ಸಂಖ್ಯಾತರಾಗಿ, ಪಾಕಿಸ್ತಾನದ ದಾಸರಾಗಿ ಹೋಗಬೇಕಾಗುತ್ತದೆ ಅಷ್ಟೇ ಅಲ್ಲ ನಮ್ಮ ಸೋಮಾರಿತನಕ್ಕೆ ನಮ್ಮ ಮೊಮ್ಮಕ್ಕಳು ನರಕಯಾತನೆಯನ್ನ ಅನುಭವಿಸಬೇಕಾಗುತ್ತದೆ ಅಲ್ಲವೇ?

 ಎಲ್ಲಾ ಅಂತರಿಕ ಕೆಸರೆರಚಾಟಗಳ ನಡುವೆಯೂ ದೇಶಕ್ಕಾಗಿ,ನಮ್ಮ ಉಜ್ವಲ ನಾಳೆಗಳಿಗಾಗಿ ಪ್ರಾಣ ತೆತ್ತು ವೀರ ಸ್ವರ್ಗವನ್ನ ಏರಿರುವ ಎಲ್ಲ ನಮ್ಮ  ಸೈನಿಕ ಭಾಂದವರಿಗೆ ಭಾವ ಪೂರ್ಣ ಅಶ್ರುತರ್ಪಣವನ್ನ ಸಲ್ಲಿಸೋಣ.. ಹಾಗೆ ಬನ್ನಿ…. ಸ್ವಾತಂತ್ರ್ಯ ದಿನಾಚರಣೆಯ ಈ ಸಂಧರ್ಬದಲ್ಲಿ ಅಣ್ಣ ಹಜಾರೆಯವರ ಬ್ರಷ್ಟಾಚಾರಿ ವಿರೋಧಿ ಕಾಯ್ದೆ  “ಲೋಕ ಪಾಲ್  ಬಿಲ್” ಅನ್ನು ಸಂಪೂರ್ಣವಾಗಿ ಬೆಂಬಲಿಸೋಣ, ಸಾಧ್ಯವಾದಷ್ಟು  ಬ್ರಷ್ಟಾಚಾರದ ವಿರುದ್ಧ ಹೋರಾಡುವ ಪ್ರತಿಜ್ಞೆ ಮಾಡೋಣ, ದೇಶವನ್ನ ಅಭಿವೃದ್ಧಿಯ ದಿಸೆಯಲ್ಲಿ ಮುನ್ನೆಡೆಸುವ ನಾಯಕರನ್ನ ಆರಿಸುವ ಜವಾಬ್ದಾರಿಯನ್ನ ಅರಿಯೋಣ ಹಾಗು ಅರಿವನ್ನ ಮೂಡಿಸುವ ಪ್ರಯತ್ನ ಮಾಡೋಣ ಅಲ್ಲವೇ? ಎಲ್ಲರಿಗೂ ಸ್ವಾತಂತ್ರ್ಯೋತ್ಸವದ ಶುಭಾಷಯಗಳು …ಮತ್ತೊಮ್ಮೆ  ಬರ್ತೀನಿ……….

ರಾಮ್ ದೇವ್ ಅವರನ್ನ ಆಡಿಕೊಳ್ಳುವ ಮೊದಲು…….

ಜುಲೈ 8, 2011

ನಮಸ್ಕಾರ ನನ್ನೆಲ್ಲ ಸಹೃದಯೀ ಸ್ನೇಹಿತರಿಗೆ, ಬಾಬಾ ರಾಮ್ ದೇವ್ ಅವರ ಬಗ್ಗೆ ನಮಗೆ ಎಷ್ಟು ಗೊತ್ತು ಯಾರು ಅವರು? ಅವರ ವಾದ, ತತ್ವ ಸಿದ್ದಾಂತ, ಬೇಡಿಕೆಗಳು ಸರಿಯೇ ತಪ್ಪೇ? ನೋಡೋಣ ಬನ್ನಿ.

ಬಾಬಾ ರಾಮ್ ದೇವ್  ಗುಲಾಬೊ ದೇವಿ ಹಾಗೂ ರಾಮ್ ನಿವಾಸ್ ಯಾದವ್ ಅವರ ಸುಪುತ್ರ, ಹುಟ್ಟಿದ್ದು ಅಲಿ ಸಾಯದ್ ಪುರ್ (ಅಲಿಗರ್) ಅನ್ನುವ ಹರಿಯಾಣ ರಾಜ್ಯದ  ಮೂಲೆ. ಬಾಲ್ಯದಿಂದಲೇ  ರಾಮ್ ಪ್ರಸಾದ್ “ಬಿಸ್ಮಿಲ್” , ನೇತಾಜಿ ಸುಭಾಶ್ಚಂದ್ರ ಭೋಸ್ ರಂತಹ ಮಹಾನ್ ವ್ಯಕ್ತಿಗಳಿಂದ ಪ್ರೇರಿತರು ಬಾಬಾ ರಾಮ್ ದೇವ್. ತನ್ನ 8 ನೇ ತರಗತಿಯ ವಿಧ್ಯಾಬ್ಯಾಸದ ನಂತರ ಖಾನ್ಪುರ ದ ಆರ್ಯ ಗುರುಕುಲ ಒಂದಕ್ಕೆ ಸೇರಿ ಸಂಸ್ಕೃತ ಹಾಗೂ ಯೋಗ ಪದ್ದತಿಗಳನ್ನು ಆಚಾರ್ಯ ಪ್ರದ್ಯುಮ್ನ ಅವರಲ್ಲಿ ಅಭ್ಯಾಸ ಮಾಡಿದರು.

ರಾಮ್ ದೇವ್ ಅವರ ಮೊದಲ ಹೆಸರು  ರಾಮ ಕೃಷ್ಣ ಯಾದವ್, ಆದರೆ ಅವರು ಆಚಾರ್ಯ ಬಲದೇವರಿಂದ ಸನ್ಯಾಸ ದೀಕ್ಷೆ ಪಡೆದ ನಂತರ ಬಾಬಾ ರಾಮ್ ದೇವ್ ಎಂಬ ಹೆಸರಿನಿಂದ ಕರೆಯಲ್ಪಟ್ಟರು. ಕಲ್ವ ಗುರುಕುಲದಲ್ಲಿ (ಜಿಂದ್ ಜಿಲ್ಲೆ ಹರಿಯಾಣ ರಾಜ್ಯದಲ್ಲಿದೆ) ಹಳ್ಳಿಯ ಜನರಿಗೆ ಯೋಗ ಗುರುವಾಗಿಯೂ ಸೇವೆ ನಿರ್ವಹಿಸಿದರು,

2003 ರರಲ್ಲಿ  ಆಚಾರ್ಯ ಬಾಲ ಕೃಷ್ಣ ರೊಂದಿಗೆ ಸೇರಿ “ ದಿವ್ಯ ಯೋಗ ಮಂದಿರ ಟ್ರಸ್ಟ್ “ ಅನ್ನು ಹುಟ್ಟು ಹಾಕಿದರು ನಂತರ “ ಆಸ್ಥಾ” ಅನ್ನುವ ಧಾರ್ಮಿಕ ಟಿ‌ವಿ ವಾಹಿನಿಯಲ್ಲಿ ಬೆಳಗ್ಗಿನ ಯೋಗ ಕಾರ್ಯಕ್ರಮದಲ್ಲಿ ಯೋಗ ಗುರುವಾಗಿ ಕಾಣಿಸಿಕೊಂಡರು, ಅವರಿಗೆ ಆ ಮೂಲಕ ಸಿಕ್ಕ ಭಾರಿ ಜನಮನ್ನಣೆ ಇಂದಾಗಿ ದೇಶ ವಿದೇಶದ ಜನ ರಾಮ್ ದೇವ್ ರ ಯೋಗ ಕಾರ್ಯಕ್ರಮಗಳನ್ನ ನೋಡುವುದರೊಂದಿಗೆ ಭಾಗವಹಿಸುವ ಅವಕಾಶ ಸಿಕ್ಕಂತೆ ಆಯಿತು. ಅಮೆರಿಕಾದ ಪ್ರಖ್ಯಾತ ನಿಯತಕಾಲಿಕೆ “ ಟೈಮ್ಸ್ ಆಫ್ ನ್ಯೂ ಯಾರ್ಕ್” ಬಾಬಾರ ಯೋಗ ಸಾಧನೆಗೆ   “ಭಾರತೀಯನಮೋಬ್ಬನ  ಯೋಗ ಸಾಮ್ರಾಜ್ಯ” ವೆಂದು ಹೊಗಳಿದೆ.

ಬಾಬಾ ರಾಮ್ ದೇವ್ “ಪಾತಂಜಲಿ ಯೋಗ ಕೇಂದ್ರ” ವನ್ನು ಸ್ಥಾಪಿಸಿದ್ದಲ್ಲದೆ ಅಲ್ಲಿ ಬಡ ರೋಗಿಗಳಿಗೆ ಆಯುರ್ವೇದ ಹಾಗೂ ಯೋಗ ಪದ್ದತಿಯ ಮೂಲಕ ಚಿಕಿತ್ಸೆ ಕೊಡುವ ಕಾರ್ಯವನ್ನೂ ಈಗಲೂ ಮಾಡುತ್ತಿದ್ದಾರೆ, ಹಾಗೆಯೇ ಪಾತಂಜಲಿ ಯೋಗ ಕೇಂದ್ರ ಸೇರಿದಂತೆ , ಪಾತಂಜಲಿ ಆಯುರ್ವೇದ ಕಾಲೇಜು, ಪಾತಂಜಲಿ ಚಿಕಿತ್ಸಾಲಯ, ಯೋಗ ಗ್ರಾಮ, ಗೋಶಾಲೆ, ಪಾತಂಜಲಿ ಆಹಾರ ಮತ್ತು ಹರ್ಬಲ್ ಉದ್ಯಾನವನಗಳು, “ದಿವ್ಯ ಯೋಗ ಮಂದಿರ ಟ್ರಸ್ಟ್ “ ನವತಿಯಿಂದ ನೆಡೆಸಲ್ಪಡುವ ಇನ್ನಷ್ಟು ಸಂಸ್ಥೆಗಳು. ಇವರ “ಯೋಗ ಸಂದೇಶ” ಅನ್ನುವ ಪುಸ್ತಕ ಕನ್ನಡ ಭಾಷೆಯನ್ನು ಒಳಗೊಂಡು ಒಟ್ಟು 11 ಭಾಷೆಗಳಲ್ಲಿ ಪ್ರಕಟ ಗೊಂಡಿದೆ.

ಸಮಾಜ ಮುಖಿಯಾಗಿ ಬಾಬಾ ರಾಮ್ ದೇವ್ ರಾಜೀವ್ ದೀಕ್ಷಿತರ “ಭರತ್ ಸ್ವಾಭಿಮಾನ್” ಅನ್ನುವ ಧ್ಯೇಯ ವಾಕ್ಯದಡಿ, 100% ಮತದಾನ, ಸ್ವದೇಶಿ ವಸ್ತುಗಳ ಬಳಕೆ, ಸರ್ವ ಭಾರತೀಯರಿಗೂ ಸಮಾನತೆ,  ಸಾವಯವ ಕೃಷಿ ಆಧಾರ, ವಿದೇಶಿ ವಸ್ತುಗಳ ವ್ಯಾಮೋಹ ಹಾಗೂ ಅನುಕರಣೆಗಳ ವಿರುದ್ಧ ಸಮರ ಮತ್ತು ಭಾರತ ಒಂದು  ಯೋಗ ವನ್ನು ಅಭ್ಯಾಸ ಮಾಡುವ ರಾಷ್ಟ್ರ ವಾಗಬೇಕೆಂಬ ಸಂದೇಶವನ್ನೂ ತಮ್ಮ ಎಲ್ಲ ಯೋಗ ಶಿಬಿರಗಳಲ್ಲಿ ಪ್ರಚಾರ ಪಡಿಸುತ್ತಲೇ ಬಂದಿದ್ದಾರೆ.

ಬಾಬರಿಗೆ ಸಂದ ಪುರಸ್ಕಾರಗಳು ಕೆಲವು ಮಾತ್ರ ಅದರಲ್ಲಿ, 2007 ರ ಕಲಿಂಗ  ಇನ್ಸ್ಟಿಟ್ಯೂಟ್  ಅವರ ಗೌರವ ಡಾಕ್ಟರೇಟ್, ಅಮೇಟಿ ವಿಶ್ವವಿಧ್ಯಾಲಯದ  ಗೌರವ ಡಾಕ್ಟರೇಟ್,  ಡಿ.ವೈ ಪಾಟೀಲ್  ವಿಶ್ವವಿಧ್ಯಾನಿಲಯದಿಂದ ಯೋಗ ವಿಜ್ಞಾನಕ್ಕಾಗಿನ ಗೌರವ ಪದವಿ ಹಾಗೂ ಮಹಾರಾಷ್ಟ್ರ ಸರ್ಕಾರದ “ಚಂದ್ರಶೇಕರೇಂದ್ರ ಸರಸ್ವತಿ  ಸ್ಮಾರಕ ಪ್ರಶಸ್ತಿಗಳು ಮುಖ್ಯವಾದವುಗಳು.

ಕಪ್ಪು ಹಣದ ಬಗ್ಗೆ ತೀವ್ರವಾದ ಹೊರಾಟವನ್ನು ಅವರು ಈವರ್ಷದ ಫೆಬ್ರವರಿ 27 ರಂದು ರಾಮ ಲೀಲ ಮೈದಾನದಲ್ಲಿ ದೊಡ್ಡ ಸಮಾವೇಶ ಮಾಡುವಮೂಲಕ ಚಾಲನೆ ನೀಡಿದರು, ಅಣ್ಣಾ ಹಜಾರೆ, ಕಿರಣ್ ಬೇಡಿ, ರಾಮ್ ಜೇಟ್ ಮಲಾನಿ, ಸ್ವಾಮಿ ಅಗ್ನಿವೆಶ್, ಅರವಿಂದ ಕೆಜ್ರಿವಾಲ್, ಮುಂತಾದವರು ಭಾಗವಹಿಸಿದ್ದ ಸಮಾವೇಶ 1 ಲಕ್ಷ ಜನರನ್ನ ಒಟ್ಟುಗೂಡಿಸಿತ್ತು ಆದರೆ ದೇಶದ ಒಂದೂ ಸುದ್ದಿವಾಹಿನಿ ಇದರ ಬಗ್ಗೆ ಮತಾಡಲೆ ಇಲ್ಲ , ಆವಾಗಲೇ ಸೋನಿಯಾ ಅಂಡ್ ಕಂಪನಿಗೆ ತಿಳಿದುಹೋಗಿತ್ತೇನೋ ಈ ವ್ಯಕ್ತಿ ಸಾಮಾನ್ಯನಲ್ಲ ಅಂತ……

ಜೂನ್ 4 ರ ರಾಮ್ ಲೀಲ ಮೈದಾನದ ದುರಂತ ನಿಮಗೆಲ್ಲರಿಗೂ ಗೊತ್ತೇ ಇದೆ, ಸುಮಾರು 3 ಘಂಟೆಗಳ ಕಾಲ ನೆಡೆದ ಪೊಲೀಸ್ ದೌರ್ಜನ್ಯ ಅಲ್ಲಿ ಹೇಗಿತ್ತೆಂದರೆ, ಹೆಂಗಸರು, ವೃದ್ದರು ಮಲಗಿದ್ದ ಸಮಯದಲ್ಲಿ ಸಿಕ್ಕಿದ್ದು ಲಾಟಿ ಏಟು. 65000 ಸಾವಿರ ಜನರಿದ್ದ ಸ್ಥಳದಲ್ಲಿ 10000 ಪೊಲೀಸರ ಆಕ್ರಮಣ, ಟೆಂಟು, ಡೇರೆಗಳಿಗೆ ಬೆಂಕಿ ಇಟ್ಟರು, ಜೆನರೇಟರ್ ಗಳ ಮೇಲೆ ನೀರು ಸುರಿದರು ಅದರಿಂದ ರಾತ್ರಿ ನೆಡೆಯುತ್ತಿದ್ದ ಆ ಹಿಂಸೆ ಕ್ಯಾಮರಾ ಕಣ್ಣಿಗೆ ಕಾಣಬಾರದು ಅನ್ನುವ ದುರುದ್ದೇಶ ಅವರದ್ದು. ಬಾಬಾ ಆ ಸಂಧರ್ಬದಲ್ಲಿ “ದಯವಿಟ್ಟು ಯಾರಿಗೂ ಹೊಡೆಯಬೇಡಿ ಹಿಂಸೆ ಕೊಡಬೇಡಿ ನನ್ನನು ಬೇಕಾದರೆ ಜೈಲಿಗೆ ತಳ್ಳಿ” ಅನ್ನುವ ಮನವಿಯನ್ನ ಪರಿ ಪರಿಯಾಗಿ ನಿವೇಧಿಸಿಕೊಂಡರೂ  ಮನ್ನಣೆ ನೀಡದ ಪೊಲೀಸರು ಅಶ್ರುವಾಯು ಸಿಡಿಸಿದರು, ಯುದ್ದ ಸನ್ನದ್ಧರಾಗಿದ್ದ ಪೊಲೀಸರು ಎಷ್ಟರ ಮಟ್ಟಿಗೆ ಹಿಂಸಿಸಿದರೆಂದರೆ ಅಲ್ಲಿ ಅಕ್ಷರಶಃ ನರಕ ಸೃಷ್ಟಿಯಾಯಿತು.  ನಂತರ 15 ದಿನಗಳ ಕಾಲ  ಬಾಬರನ್ನು ದೆಹಲಿಗೆ ಕಾಲಿಡದಂತೆ ನಿರ್ಭಂದ ಹೇರಿದರು…. ಅಷ್ಟಕ್ಕೂ ರಾಮ್ ದೇವ್ ಸತ್ರ್ಯಗ್ರಹ ಮಾಡಿದ್ದು ಯಾವ ಬೇಡಿಕೆ ಇಟ್ಟುಕೊಂಡು? ಇಲ್ಲಿದೆ ಅದರ ಪಟ್ಟಿ.

1.      ರಾಷ್ಟ್ರದ ಹೊರಗೆ ಸ್ವಿಸ್ ಬ್ಯಾಂಕ್ ನಲ್ಲಿ ಕೊಳೆಯುತ್ತಿರುವ ಕಪ್ಪುಹಣವನ್ನ ರಾಷ್ಟ್ರೀಯ ಸಂಪತ್ತಾಗಿ ಘೋಷಿಸಬೇಕು.

2.      ಸಂಯುಕ್ತ ರಾಷ್ಟ್ರಗಳ “ಭ್ರಷ್ಟಾಚಾರ ನಿರ್ಮೂಲನ ಒಪ್ಪಂದಕ್ಕೆ ಸಹಿ ಹಾಕಬೇಕು (ಈ ಒಪ್ಪಂದ 2006 ರಿಂದ ಸರ್ಕಾರಿ ಕಡತಗಳಲ್ಲಿ ದೂಳು ಹಿಡಿದುಕೊಂಡು ಬಿದ್ದಿದೆ)

3.      ಲೋಕಪಾಲ್ ಮಸೂಧೆ ತಕ್ಷಣ ಜಾರಿಗೊಳ್ಳಬೇಕು.

4.      ಸರ್ಕಾರಕ್ಕೆ ತೆರಿಗೆ ವಂಚಿಸುವವರ ವಿರುದ್ಧ ಕ್ರಮ ಕೈಗೊಳ್ಳಬೇಕು.

5.      ದೇಶದ ಹೊರಗೆ ಅನೈತಿಕವಾಗಿ ಕ್ರೋಡೀಕರಣಗೊಂಡ ಸಂಪತ್ತನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು.

6.      ನಕಲಿ ನೋಟು ಜಾಲ ತಡೆಗಾಗಿ 500 ಹಾಗೂ 1000 ರೂಪಾಯಿ ನೋಟುಗಳನ್ನು ತಕ್ಷಣದಿಂದಲೇ ನಿಷೇಧ ಮಾಡಬೇಕು.

7.      ಭ್ರಷ್ಟಾಚಾರಿಗಳಿಗೆ ಮರಣದಂಡನೆ ವಿಧಿಸಿ…..

ಬಾಬಾ ರಾಮ್ ದೇವ್ ಆಮರಣಾಂತ ಉಪವಾಸ ಕೈಗೊಂಡಿದ್ದು, ಅದನ್ನ ಪಂಡಿತ್ ರವಿಶಂಕರ್ ಗುರೂಜಿ ಯವರ ಸಂಧಾನದ ಮೂಲಕ ನಿಲ್ಲಿಸಿದ್ದು ಈಗ ಸುಧ್ಧಿಮಾತ್ರ., ಈಗಿನ ಸುದ್ಧಿ ಏನೆಂದರೆ ಬಾಬಾ ರಾಮ್ ದೇವ್ ಅವರ ಸಹಚರ ಆಚಾರ್ಯ ಬಾಲಕೃಷ್ಣ ಅವರ ಪಾಸ್ಪೋರ್ಟ್ ನಕಲಿ ಎಂದು ಸಿ.ಬಿ.ಐ ತನಿಖೆ ನೆಡೆಸುತ್ತಿರುವುದು.

ಎಂತಹ ವಿಪರ್ಯಾಸ ನೋಡಿ, ಒಬ್ಬ ಹೆಂಗಸು ನಮ್ಮ ರಾಷ್ಟ್ರಕ್ಕೆ ಸೇರಿದವರಲ್ಲ, ಅವರನ್ನು ಹೊತ್ತು ಮೆರೆಯುತ್ತಿದಾರೆ ರಾಜಕೀಯದ ಹೊಲಸು ಜೀವಿಗಳು, ಇನ್ನೂ ಪಾಕಿಸ್ತಾನ, ಬಾಂಗ್ಲಾದೇಶ, ಹಾಗೂ ಚೀನದಿಂದ ಕಾನೂನು ಭಾಹಿರವಾಗಿ ಪ್ರತಿಭಾರಿ  ಒಳನುಸುಳಿ ಬರುತ್ತಿರುವ ಸಾವಿರಾರು ಜನಗಳ ಪಾಸ್ಪೋರ್ಟ್ ಕೇಳಲು ಇವರಿಗೆ ಬಾಯಿ ಬರುತ್ತಿಲ್ಲ ಅಲ್ಲವೇ?

ದೇಶದ ಒಳಗಡೆ ನಕಲಿ ನೋಟಿನಿಂದ ಹಿಡಿದು ರೇಷನ್ ಕಾರ್ಡ್, ಡ್ರೈವಿಂಗ್  ಅನುಮತಿ, ನಕಲಿ ಮಾರ್ಕ್ಸ್ ಕಾರ್ಡುಗಳು, ನಕಲಿ ಪದವಿ, ಇನ್ನೂ ಏನೇನೋ ನಕಲಿಯಾಗಿ ಸಿಗುತ್ತಿವೆ, ಅವುಗಳನ್ನು ಮಟ್ಟ ಹಾಕುವ ಬದಲು ಸತ್ಯಾಗ್ರಹ ಮಾಡುತ್ತಿದ್ದ ಅಮಾಯಕ ಜನರಮೇಲೆ  ಲಾಟಿ ಬೀಸಿ ಏನು ದೊಡ್ಡ ಗಂಡಸ್ತನ ತೋರಿಸಿದಿರಿ ಸನ್ಮಾನ್ಯ ಪಧಾನ ಮಂತ್ರಿಗಳೆ?

ಇನ್ನು ಒಬ್ಬ ಸಾಧುವಿನ ಬಳಿ ಸಾವಿರಾರು ಕೋಟಿ ಆಸ್ತಿ ಇದೆ ಅನ್ನುವುದು, ಯಾವ ಮಠ ಮಾನ್ಯಗಳಲ್ಲಿ ದುಡ್ಡಿಲ್ಲ? ಹೋಗಲಿ, ಪರಮ ಹಿಂಸೆ ನಿತ್ಯಾನಂದನ ಆಸ್ತಿ ವಿಚಾರ ಏನಾಯ್ತು? 2ಜಿ ಹಗರಣದಲ್ಲಿ ಕಳೆದು ಹೋದ ಹಣ ಎಂದು ವಾಪಸ್ ಬರುತ್ತದೆ? ಲೋಕಾಯುಕ್ತರು 60 ದಿನಗಳ ಸಮಯ ನೀಡಿದ್ದರೂ ನಮ್ಮ ಮಂತ್ರಿಮಹಾಶಯರು ತಮ್ಮ ಆಸ್ತಿವಿವರಗಳನ್ನು ಯಾಕೆ ಬಹಿರಂಗ ಪಡಿಸಿಲ್ಲ? ನಮ್ಮ ರಾಜ್ಯದ ಅತಿ ಬಡವ (!!?) ದೇವೇಗೌಡರ ಕುಟುಂಬದ ಒಟ್ಟು ಆಸ್ತಿ ಎಷ್ಟಿದೆ? ಯಡ್ಯೂರಪ್ಪ ನವರ ಒಟ್ಟು ಗಳಿಕೆ ಎಷ್ಟು? ಯೆಜುರ್ಮಂದಿರದಲ್ಲಿ ಇರುವ ಸಾಯಿಬಾಬರ ಒಟ್ಟು ಹಣದ ಕಂತೆಗಳು ಎಷ್ಟು? ಇದೆಲ್ಲ ಬಿಡಿ ಹೋಗಲಿ, ಇವುಗಳಲ್ಲಿ ಎಷ್ಟು ರಾಜಕೀಯದ ವ್ಯಕ್ತಿಗಳು ತಮ್ಮ ಸ್ವಂತ ಹಣವನ್ನು ಬಡಬಗ್ಗರಿಗೆ, ದೀನ ದಲಿತರಿಗೆ ಧಾನ ಮಾಡಿದ್ದಾರೆ? ಬಡವರ ಉಧ್ಧಾರಕ್ಕಾಗಿ ಅವರ ಸ್ವಂತ ಖರ್ಚಿನಿಂದ ಎಂತಹಾ ಸೇವೆ ಸಲ್ಲಿಸಿದ್ದಾರೆ ? ಒಬ್ಬ ರಾಜಾಕರಣಿ ಇದ್ದಾನೆಯೇ ತನ್ನ ಸ್ವಂತ ಹಣದಿಂದ ಬೇರೆಯವರ ಹಿತ ಕಾಪಾಡಲು,,, ತೋರಿಸಿ ನೋಡೋಣ….

ಒಬ್ಬ ಭ್ರಷ್ಟಾತಿಭ್ರಷ್ಟ ಮುಖ್ಯಮಂತ್ರಿ, ಇನ್ನೊಬ್ಬ ಮಾಜಿ ಮುಖ್ಯಮಂತ್ರಿ, ಅವರು ಆಣೆ ಪ್ರಮಾಣ ಮಾಡಿದರೆ ಇಡೀ ದೇಶದ ಸುದ್ದಿವಾಹಿನಿಗಳಿಗೆ ಬೇರೆ ಕೆಲಸ ಇಲ್ಲ, ಅದನ್ನೇ ಮತ್ತೆ ಮತ್ತೆ ತೋರಿಸುವುದು, ಅದರ ಬಗ್ಗೆ ಹಗಲೂ ರಾತ್ರಿ ಚರ್ಚೆ ಮಾಡುವುದು, ಅದನ್ನ ನಮ್ಮಂತೋರು ಏನೋ ಸತ್ಯ ಹರಿಶ್ಚಂದ್ರ ನ ತುಂಡುಗಳು ಮಾತಾಡ್ತಿವೆ ಅಂತ ಬಾಯಿ ಬಿಟ್ಟುಕೊಂಡು ನೋಡೋದು….

 ನಮಗೆ  ಎನಾಗಿದೆ? ಇಲ್ಲಿ ಒಬ್ಬ ಅತ್ಯಂತ ಭ್ರಷ್ಟ ಒಬ್ಬ ಸಾವಿರಾರು ಕೋಟಿ ರೂಪಾಯಿಗಳನ್ನ ನುಂಗಿ ನೀರು ಕುಡಿಯುತ್ತಿದ್ದರೆ ಅವರನ್ನೇ ಮತ್ತೆ ಮತ್ತೆ ಆರಿಸಿ ಕಳಿಸುತ್ತಿದ್ದೆವಲ್ಲಾ? ಎಷ್ಟೇ ಹಗರಣಗಳನ್ನ ಮಾಡಿದರೂ ಮಠ ಮಾನ್ಯಗಳ ಸ್ವಾಮೀಜಿಗಳ ನೆರವಿನಿಂದ ಬಚಾವಾಗಿ ಮತ್ತದೇ ಕುಕೃತ್ಯಗಳಿಗೆ ಕೈ ಹಾಕಿದರೂ ಯಾಕೆ ನಾವು ಸುಮ್ಮನಿದ್ದೇವೆ?  ಅಬಿವೃದ್ಧಿ ಹೆಸರಿನಲ್ಲಿ ಸಾವಿರಾರು ಕೋಟಿ ರೂಪಾಯಿಗಳನ್ನ ತಮ್ಮ ಅಜ್ಜನ ಆಸ್ತಿಯಂತೆ ಭಾವಿಸಿ ಅದನ್ನ ಲಪಟಾಯಿಸುವ ತಿಮಿಂಗಿಲಗಳನ್ನು ಮಟ್ಟ ಹಾಕಲು ಒಬ್ಬ ಸಾಧು ನಿಂತರೆ ಅವನಿಗೆ ಎಷ್ಟು ಆಸ್ತಿ ಇದೆ? ಅವನ ಸಹಚರ ಒಬ್ಬ ಲಂಪಟ, ಇಲ್ಲವೇ ಆ ವ್ಯಕ್ತಿ ಕೋಮುವಾದಿ ಅನ್ನುವ ರಾಜಕಾರಣಿಗಳಿಗೆ ಮೊದಲು ಮಾನಸಿಕ ಸ್ಥಿತಿ ಹೇಗಿದೆ ಅನ್ನುವುದನ್ನ ತಿಳಿದುಕೊಳ್ಳುವುದು ಒಳ್ಳೆಯೇದೇನೋ ಅಲ್ಲವೇ? ಜೂನ್ 30ರ ಒಳಗಾಗಿ ಲೋಕಪಾಲ್ ಮಸೂದೆ ತಯಾರಾಗುತ್ತದೆ ಅದನ್ನು ಜಾರಿಗೆ ತರಲು ಎಲ್ಲ ಸಿಧ್ದ್ಧತೆಗಳು ನೆಡೆದಿವೆ ಅನ್ನುವ ರಾಜಕಾರಣಿಗಳು ಯಾಕೋ ತಲೆಮರೆಸಿಕೊಂಡತೆ ಕಾಣುತ್ತಿದೆ ಅಲ್ಲವೇ?

ಭ್ರಷ್ಟಾಚಾರಿಗಳಿಗೆ ಮರಣದಂಡನೆ ವಿಧಿಸಿ ಅನ್ನುವ ರಾಮದೇವರ ಬೇಡಿಕೆಯನ್ನ ಈಡೇರಿಸಿದರೆ ಬಹುಶಃ ರಾಷ್ಟ್ರದಲ್ಲಿ ಯಾವರಾಜಕಾರಣಿಯೂ ಜೀವಂತವಾಗಿ ಉಳಿಯಲು ಸಾಧ್ಯವಿಲ್ಲ ಅನ್ನುವ ಭಯವಿದ್ದಂತೆ ಇದೆ ನಮ್ಮ ಸರ್ಕಾರಗಳಿಗೆ ಅಲ್ಲವೇ? ಈ ಎಲ್ಲಾ  ಕೊಚ್ಚೆ, ಕೇಸೆರೆರೆಚಾಟಗಳ ಮಧ್ಯೆ ಒಬ್ಬ ಸಾಮಾನ್ಯ ನಾಗರೀಕನಾಗಿ ನಾವು ಇನ್ನುಮುಂದೆ ಮತ ಚಲಾಯಿಸುವ ಮೊದಲು ಯಾರಿಗೆ  ನಮ್ಮ ಮತ ಸೇರುತ್ತಿದೆ?? ಅವನು ಎಂತಹ ವ್ಯಕ್ತಿ? ನಮ್ಮಿಂದ ನಮ್ಮ ಮುಂದಿನ ಪೀಳೆಗೆಗೆ ಕೊಡಬೇಕಾದ ಕನಿಷ್ಠ ಕಾಣಿಕೆಯಾದರೂ ಏನು? ಅನ್ನುವುದನ್ನ ಯೋಚಿಸಿದಲ್ಲಿ ಕೆಲವೇ ವರ್ಷಗಳಲ್ಲಿ ನಾವು ಅಮೆರಿಕಾವನ್ನು ಮೀರಿಸಿ ಬೆಳೆದು ನಿಲ್ಲಬಹುದು ಅಲ್ಲವೇ? ನೀವೇನತೀರಿ?

ಗ್ರಾಂ ಸಭಿ!!

ಜುಲೈ 5, 2011

ನಮಸ್ಕಾರ ಸ್ನೇಹಿತರೇ, ನಾನು ಮೊನ್ನೆ ಊರಿಗೆ ಹೋಗಿದ್ದೆ , ಮನೆಗೆ ಹೋಗಿ ಇನ್ನೂ ಕಾಲಿಟ್ಟಿಲ್ಲ ಸುಮಾರು ಬೆಳಗಿನ 7 ಘಂಟೆಗೆಲ್ಲಾ ಮೈಕ್ ಹಿಡ್ಕೊಂಡು ಗೂಡ್ಸ್ ಆಟೋ ದಲ್ಲಿ ಪ್ರಚಾರ ಮಾಡ್ತೀದ್ರು ಸೋಮವಾರ ಗ್ರಾಂ ಸಬಿ ಅದೆ, ಗ್ರಾಮಸ್ತರು ಹೆಚ್ಚಿನ ಸಂಕೀಲಿ ಬಾಗವಹಿಸ್ಬಕು ಅಂತ….ಅಂತೂ ಸೋಮವಾರನೂ ಬಂತು ಜನನೂ ಮೌಳಿ ಇಸ್ಕೂಲ್ ಕಡೆ ಮಧ್ಯಾನ 12:30 ಹೊತ್ತಿಗೆ ಬಂದ್ರು….ಬನ್ನಿ ನಾವೂ ಹೋಗಿ ಬರೋಣ ,ನೋಡೋಣ ಜೀವರಾಜರ ಆಡಳಿತದಲ್ಲಿ ಏನೇನು ಸ್ಕೀಮುಗಳು ಇವೆ ಅಂತ !!

 ಎಂತಹಾ ಆಭಾಸ!! ಏನು ನೆಡಿತು ಗೊತ್ತಾ ? ಗ್ರಾಮ ಸಭೆಯಲ್ಲಿ ಬಂದವರು ನಮ್ಮ ಭಾಗದ  ಪಂಚಾಯತ್  ಸದಸ್ಯರು, ತಾಲೂಕ್ ಪಂಚಾಯತ್ ಸದಸ್ಯರು, ಹಾಗೂ ಒಬ್ಬ ನೋಡಲ್ ಅಧಿಕಾರಿ……ಕಾರ್ಯಕ್ರಮ ಶುರು ಆಗಿದ್ದು 12:30 ಘಂಟೆಗೆ ಹಾಗೆ ಮುಗಿದಿದ್ದು ಕೇವಲ 30 ನಿಮಿಷಗಳಲ್ಲಲ್ಲಿ!! ಮೊದಲು ಗ್ರಾಮ ಪಂಚಾಯಿತ್ ವತಿಯಿಂದ ಯಾವ ಯಾವ ಯೋಜನೆಗಳು ಇವೆ ಅಂತ ಹೇಳಿ ಸಾರ್, ಅಂದೆ ನಾನೇ ಮೊದಲಿಗನಾಗಿ ಮಾತಾಡಿದ್ದು ಅಲ್ಲಿ ಅನ್ಸುತ್ತೆ….

 ಒಬ್ಬರು ಮಹಾನುಬಾವರು ಎದ್ದು ನಿಂತರು, ನಾನು ಅಂದುಕೊಂಡೆ ಯೆಡ್ಡಿ ಸಾರ್ ಸುಮಾರೆಲ್ಲ ಟಿ‌ವಿ ಲಿ ಹೇಳ್ತಾ ಇರ್ತರಲ್ಲ ಹಾಗೆ ಒಂದು ದೊಡ್ಡ ಲಿಸ್ಟ್ ಇರ್ಬೊದು ಅಂತ ಆದರೆ ಅಲ್ಲಿ ಇದ್ದಿದ್ದು ಮೂರೇ ಮೂರು ಯೋಜನಗಳು ಅದು ಯಾವುವು ಗೊತ್ತ?

 1. ಕೇಂದ್ರದ ಉದ್ಯೋಗ ಖಾತ್ರಿ ಯೋಜನೆ ಕಾರ್ಯಕ್ರಮದಲ್ಲಿ ಎಲ್ಲರನ್ನೂ ನೋಂದಾಯಿಸುವುದು.
 2. ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿದ ಒಬ್ಬ ಗ್ರಾಮಸ್ತನಿಗೆ ಒಂದು ಹಸುವುನ್ನ ದಯಪಾಲಿಸುವುದು.
 3. ಗ್ರಾಮಕ್ಕೆ ಸಿಲಾವರ ಗಿಡಗಳನ್ನ ಹಂಚುವುದು ಆದರೆ ಅದನ್ನು ಪಡೆದರೆ 100 ಗಿಡಗಳನ್ನು ಕೊಡಮಾಡಲಾಗುತ್ತದೆ ಅದರಲ್ಲಿ 30 ಸಿಲಾವರ ಹಾಗೆ ಉಳಿದ 70 ಆಕೆಶಿಯ ಅನ್ನುವ ಪ್ರಯೋಜನಕ್ಕೆ ಬಾರದ ಗಿಡಗಳು!!!

ಅಷ್ಟೇ ಮುಗಿದೇ ಹೋಯಿತು, ಇನ್ನೇನು ಎಲ್ಲರೂ ಒಟ್ಟಿಗೆ ಗ್ರಾಮಸ್ಥರೊಡನೆ ಒಂದು ಫೋಟೋ ಕ್ಲಿಕ್ಕಿಸಿಕೊಂಡು (ದಾಖಲೆಗಾಗಿ ) ಹೊರಡಬೇಕೆನ್ನುವಷ್ಟರಲ್ಲಿ ನಾವು ಸ್ವಲ್ಪ ಜನ ತಡೆದು ನಿಲ್ಲಿಸಿದೆವು….. ಹಾಗೆ ನಿಮ್ಮ ಈ 3 ಯೋಜನೆಗಳನ್ನು ಸ್ವಲ್ಪ ವಿಸ್ತಾರವಾಗಿ ಹೇಳಿ ಆಂದೆವು.

ಆಗ ಮತ್ತೆ ಎದ್ದು ನಿಂತ ಮಹಾಶಯರು ಹೇಳಿದರು ಸಾರ್ ನಿಮ್ ಹತ್ರ ಬಿ‌ಪಿ‌ಎಲ್ ಕಾರ್ಡ್ (ಬಿಲೋ ಪಾವರ್ಟಿ ಲೈನ್) ಇದ್ದರೆ ಮಾತ್ರ ಈ 3 ಯೋಜನೆಗಳಿಗೆ ಒಳಪಡುತ್ತೀರಿ ಇಲ್ಲ ಅಂದ್ರೆ ಇಲ್ಲ ಸಾರ್ ….!!!

 ಸ್ನೇಹಿತರೇ ನಿಮಗೆ ಗೊತ್ತಿರಲಿ ನಮ್ಮ ಊರಿನ ಒಟ್ಟು ಜನಸಂಖ್ಯೆ ಸುಮಾರು 400 ಅಷ್ಟೇ, ಅದರಲ್ಲಿ ಗೌಡ ಹಾಗೂ ಬ್ರಾಹ್ಮಣ ಸಮುದಾಯಕ್ಕೆ ಸೇರಿದವರು ಎಲ್ಲರೂ, ಅಲ್ಲಿ ಹಿಂದುಳಿದ ವರ್ಗದ ಯಾವುದೇ ಕುಟುಂಬ ಇಲ್ಲ, ಅದೂ ಅಲ್ಲದೆ ಅಲ್ಲಿ ಇರುವ ಎಲ್ಲರೂ ಬಡತನ ರೇಖೆಯ ಮೇಲಿದ್ದವರೇ !!(ದಾಖಲೆಗಳಲ್ಲಿ ಮಾತ್ರ)  ಹಾಗಾದರೆ ಇವರು ಯಾರನ್ನು ಗಮನದಲ್ಲಿ ಇಟ್ಟುಕೊಂಡು ನಮ್ಮ ಗ್ರಾಮದಲ್ಲಿ ಈ ಮೂರು ಯೋಜನೆಗಳು ನಮ್ಮವೆಂದು ತೋರಿಸಲು ಬಂದಿದ್ದರು? ಭಾಗ್ಯಲಕ್ಷ್ಮಿ, ಆಶ್ರಯ ಮನೆ, ಬೆಳೆ ಸಾಲ, ಹುಡುಗರಿಗೆ ಸೈಕಲ್ಲು ಕೊಡೋ ಯೋಜನೆ, ಹಾಗೂ ಅಡಿಕೆಗೆ ಬಂದ ರೋಗ ನಿರ್ವಹಣೆಗೆ ಏನೂ ಯೋಜನೆಗಳಿಲ್ಲವೇ? ಇವರು ಕೊಡುವ 100 ಗಿಡಗಳಲ್ಲಿ 70 ಆಕೆಶಿಯಾ ಗಿಡಗಳನ್ನು ಎಲ್ಲಿ ನೆಡುವುದು? ಯಾತಕ್ಕಾಗಿ ನೆಡಬೇಕು? ನಮಗೆ ಬೇಕಿರುವುದು ಕೇವಲ ಸಿಲಾವರ ಗಿಡಗಳು ಮಾತ್ರ ಅದೂ ಅಡಿಕೆಗೆ ರೋಗಬಂದ ಹಿನ್ನೆಲೆಯಲ್ಲಿ ಕಾಳುಮೆಣಸು ಬಳ್ಳಿಯನ್ನು ಹಬ್ಬಿಸುವ ಉದ್ದೇಶಕ್ಕೆ….. ಹಾಗಾದರೆ ಇವರು ಕೊಡುವ 30 ಗಿಡಗಳಿಂದ ಏನು ಮಾಡೋದು? ಅಷ್ಟು ಸಾಕೇ?

 ಅದೂ ಅಲ್ಲದೆ ಗ್ರಾಂ ಸಭೆಯಲ್ಲಿ ಯಾವುದೇ ಅರ್ಜಿಗಳನ್ನ ಸ್ವೀಕರಿಸಿಲ್ಲ ಕೇವಲ ಒಂದು ಚೇಟಿಯಲ್ಲಿ ಎಲ್ಲರ ಹೆಸರುಗಳನ್ನ ಬರೆದುಕೊಂಡರು ಅಷ್ಟೆ, ಹಾಗಾದರೆ ಈ ಸಭೆಯಲ್ಲಿ ಹೇಳಿದ ಅಥವಾ ಲಭ್ಯವಿರುವ ಸೌಲಭ್ಯಗಳನ್ನು ಅರ್ಜಿ ಕೊಡದೆ ಹಾಗೆಯೇ ಮನೆಮುಂದೆ ತಂದು ಕೊಡುತ್ತಾರೆಯೇ?  ಅದೂ ಅಲ್ಲದೆ ನಮ್ಮ ಒಬ್ಬ ರೈತರ ಮನೆಗೆ ಹೋಗಲು ಸರಿಯಾದ ರೋಡ್ ಇಲ್ಲ ಮಳೆಗಾಲದಲ್ಲಿ ಮಣ್ಣಿನ ರೋಡು ತುಂಬಾ ಜಾರುತ್ತೆ, ದಯವಿಟ್ಟು ಏನಾದ್ರೂ ಮಾಡಿಕೊಡಿ ಅಂದ್ರೆ ಕನ್ನಡಕದ ಒಬ್ಬ ಅಧಿಕಾರಿ ಎಷ್ಟು ಖಾರವಾಗಿ ಉತ್ತರಿಸಿದ ಗೊತ್ತ? ಇನ್ನೊಬ್ಬರ ಮನೆಯ ಬಳಿ ಜಲ್ಲಿ ರೋಡ್ ಮಾಡಿದಾರೆ ಅಲ್ಲಿ ಈಗ ಜನಗಳೇನು, ಜಾನುವಾರುಗಳೂ ಒಡಿಯಾಡದ ಪರಿಸ್ಥಿತಿ ನಿರ್ಮಾಣ ವಾಗಿದೆ!! ಇನ್ನೂ ದುರಂತ ಏನು ಗೊತ್ತ? ಕುಡಿಯುವ ನೀರಿನ ಭಾವಿಯನ್ನ ಜೀವರಾಜ ಬೆಂಬಲಿತರ ಮನೆಮುಂದೆ ಅವಶ್ಯಕತೆ ಇಲ್ಲದಿದ್ದರೂ ತೊಡಿಸಿಕೊಡಲಾಗಿದೆ  ಒಬ್ಬ ಸಾಮಾನ್ಯ ರೈತರೊಬ್ಬರು 10 ವರ್ಷಗಳಿಂದ ತಮ್ಮ ಅರ್ಜಿ ಹಿಡಿದುಕೊಂಡು ಓಡಾಡಿದ್ದಾರೆ ಅವರಿಗೆ ಮಾತ್ರ ಕುಡಿಯುವ ನೀರಿನ ಬಾವಿ ಸಿಕ್ಕಿಲ್ಲ ಅವರಂತೂ ಅದನ್ನ ಹೇಳುವಾಗ ನನ್ನ ಕಣ್ಣಾಲೆಗಳೇ ತುಂಬಿಬಂದವು…. ಇದೆಂಥಾ ದುರಂತ !!

 ಇನ್ನೊಬ್ಬ ಹೆಂಗಸು, ಪಾಪ ಗಂಡಸಿಲ್ಲದ ಮನೆ ಅವರದ್ದು ತೋಟಒಂದರಲ್ಲಿ ಹಾಯ್ದು ಹೋಗುವ ಹಳ್ಳ ಅವರ ಮನೆಯ ಹಿಂಬದಿಯ ಮಣ್ಣನ್ನು ಕೊರೆದುಕೊಂಡು ಹೋಗುತ್ತಿದೆ, ಅದರಿಂದ ಅವರ ಮನೆಯೇ ಈಗ ಕುಸಿದುಬೀಳುವ ಪರಿಸ್ಥಿತಿಯಲ್ಲಿದೆ ಅವರಿಗೆ ಈ ನಮ್ಮ ಮಹಾಶಯರು ಕೊಟ್ಟ ಪರಿಹಾರ ಎಷ್ಟು ಗೊತ್ತ? ಕೇವಲ 500 ರೂಪಾಯಿ!!

 ನಮ್ಮ ಗ್ರಾಮವನ್ನು ಮಾದರಿ ಗ್ರಾಮಾವೆಂದು ಗೋಷಿಸಿದ್ದೀರಿ ಆದರೆ ಅಲ್ಲಿಯ ಕುಡಿಯುವ ನೀರಿನ ವ್ಯವಸ್ಥೆ, ವಿದ್ಯುತ್ ವ್ಯವಸ್ಥೆ, ಸಾರ್ವಕಾಲಿಕ ರಸ್ತೆಗಳು ಸರಿ ಇದ್ದರೆ ಮಾತ್ರವಲ್ಲವೇ? ಅದು ಮಾದರಿ ಗ್ರಾಮವಾಗುವುದು? ನಿಮಗೆ ಗೊತ್ತ ನೀವು ನೀಡಿದ 25 ಕೆವಿ ಟ್ರಾನ್ಸ್ ಫಾರ್ಮರ್ ಸಂಜೆಹೊತ್ತಲ್ಲಿ ಒಲ್ಟೇಜ್ ಪೂರಯಿಸಲಾಗದೆ ಒದ್ದಾಡುತ್ತಿರುವುದು?  ರಸ್ತೆಗಳು ಕಿತ್ತು ಹೋಗಿರುವುದು ನಿಮ್ಮ ಕಣ್ಣಿಗೆ ಬಿದ್ದಿಲ್ಲವೇ? ಕುಡಿಯುವ ನೀರಿನ ಬಾವಿಯನ್ನ ಸರಿಯಾದ ಫಲಾನುಭವಿಗಳಿಗೆ ನೀಡಿದ್ದೀರಾ?

 ಹೇಳಬೇಕೆಂದರೆ ಗ್ರಾಮ ಪಂಚಾಯಿತ್ ನ ಯೋಜನೆಗಳು ಜನರ ಕಿವಿಗೆ ಬೀಳುತ್ತಿಲ್ಲ, ಏಕೆ ಹೀಗೆ? ಈಗ ತುಂಬಾ ಮಳೆಗಾಲ ಸರ್ಕಾರಿ ಆಸ್ಪತ್ರೆಯಲ್ಲಿ ಯಾವ ಸಿದ್ದತೆಗಳನ್ನು ಮಾಡಿದ್ದೀರಿ? ಅದೂ ಅಲ್ಲದೆ ಕೆಲವೊಮ್ಮೆ ಬಂದ ಗೊಬ್ಬರ, ಕೀಟನಾಶಕಗಳು, ಕೆಲಒಬ್ಬರಿಗೆ ಮಾತ್ರ ಸಿಗುತ್ತಿವೆ ಅದೂ ಸಿಕ್ಕ 3 ದಿನಗಳ ನಂತರ ಬೇರೆಯವರಿಗೆ ಸುದ್ದಿ ಮುಟ್ಟುತ್ತದೆ ಅದು ಯಾಕೆ? ನಮ್ಮ ಬಡ ರೈತರು ಕೊಟ್ಟ ಅರ್ಜಿಗಳಿಗೆ ಬೆಲೆಯೇ ಇಲ್ಲವೇ? ಅಥವಾ ನಿಮ್ಮ ಗ್ರಾಮ ಸಭೆಗೆ ಬರಲು ಕೇವಲ ಬಡತನ ರೇಖೆಯ ಕೆಳಗಿರುವವರು ಮಾತ್ರ ಅರ್ಹರಾದರೆ ನಮ್ಮ ತೆರನಾದ ಸಾಮಾನ್ಯ ಜನರ ಮತಗಳನ್ನು ಏಕೆ ಕೇಳಿದಿರಿ? ಬಡತನ ಅನ್ನುವುದು ನೀವು ಕೊಡುವ ಹಳದಿ ಕಾರ್ಡಿನಿಂದ ಅಳೆಯುವುದು ಯಾವ ನ್ಯಾಯ? ಎಷ್ಟೋ ಜನ ಎಕರೆಗಟ್ಟಳೆ ತೋಟ ಇದ್ದವರು ಈಗ ಕಡು ಬಡತನದ ಬೇಗೆಯಲ್ಲಿ ಬೇಯುತ್ತಿದ್ದಾರೆ, ಹೋಗಲಿ ಬಿಡಿ ಅಡಿಕೆ ಹೋಯಿತು ಪರ್ಯಾಯ ಬೆಳೆ ಬೆಳೆಯಲು ನಿಮ್ಮ ಸಹಾಯ ಏನು? ಕೇಂದ್ರ ದಿಂದ ಬಂದ ಹಳದಿ ರೋಗದ ಅಧ್ಯಯನಕ್ಕೆ ಬಂದ ಆಯೋಗಕ್ಕೆ ಏನನ್ನು ಹೇಳಿದ್ದೀರಿ?

 ನಮ್ಮ ರೈತರಿಗೆ ಈಗ ಫುಲ್ ಕೆಲಸ, ಅವರಿಗೆ ಬೇಕಿರುವುದು ಗದ್ದೆಗಳಲ್ಲಿ ಕೆಲಸ ಮಾಡಲು ಹಾರೆ, ಕಂಬಳಿ, ಪಿಕಾಸಿಯಂತಹ ಸಲಕರಣೆಗಳು ಅದನ್ನೇನು ಉಚಿತವಾಗಿ ಬೇಡ ಸಬ್ಸಿಡಿ ದರದಲ್ಲಿ ನೀಡಿ, ಅಡಿಕೆಗೆ ರೋಗ ಬಂದಿದೆ, ಅಳಿದುಳಿದ ತೋಟವನ್ನು ಈ ಮಳೆಗಾಲದಿಂದ ರಕ್ಷಿಸಲು ಬೇಕಿರುವುದು ಸರಿಯಾದ ಕೀಟನಾಶಕಗಳು ಗದ್ದೆಗೆ ಬೇಕಿರುವ ಗೊಬ್ಬರ ಅವನ್ನು ಪೂರಯಿಸುವ ಯೋಜನೆ ಏಕೆ ಮಾಡುತ್ತಿಲ್ಲ? ಅಥವಾ ಆರೀತಿಯ ಯೋಜನೆಗಳನ್ನು ಮಾಡುವ ಮನಸಿಲ್ಲವೇ?

 ಈ ರೀತಿಯ ಪ್ರಯೋಜನಕ್ಕೆ ಬಾರದ ಯೋಜನೆಗಳಿಂದಾಗಿಯೇ ನಮ್ಮ ರೈತರ ಮಕ್ಕಳಾದ ನಾವು ಗುಳೆ ಬಂದಿರುವುದು, ಅಲ್ಲಿರುವ ಜನಗಳು ಇತ್ತ ತೋಟವನ್ನೂ ನೋಡಲಾಗದೆ, ಬೇರೆ ಕೆಲಸಕ್ಕೂ ಹೋಗಲಾರದೆ ಒದ್ದಾಡುತ್ತಿರುವುದು ಅಲ್ಲವೇ?

 ಮಾನ್ಯ ನಾಯಕರೆ ಕೊನೆಯದಾಗಿ ನಿಮಗೆ ಕೆಲವು ಪ್ರಶ್ನೆಗಳು,ಹಾಲಿ ಚಲಾಯಿಸಿದ ಮತಗಳು ನಿಮಗೆ ಹೆಚ್ಚಾದವೆ? ಮುಂದೆ ನಮ್ಮಿಂದ ನಿಮಗೆ ಯಾವ ರೀತಿಯ ಸಹಾಯ ಪ್ರೋತ್ಸಾಹಗಳು ಬೇಡವೇ? ಇನ್ನೂ ಕೇಳಿದರೆ ಸರ್ಕಾರಿ ಕಾಲೇಜು ಹಾಗೂ ಸಂತೆ ಮಾಳಗಳನ್ನು ತೋರಿಸುವ ನೀವು ಒಮ್ಮೆ ಯೋಚಿಸಿ, ಕೇವಲ ಬೆರಳೆಣಿಕೆಯ ಯೋಜೆನೆಗಳ ಜಾರಿಗೆ ಮಾತ್ರ ನಿಮ್ಮನ್ನು ಆರಿಸಿದೆವೆ? ಅದಕ್ಕೆ ನಿಮಗೆ 5 ವರ್ಷಗಳ ಕಾಲಾವಧಿ ಯಾಕೆ? ಬಡ ರೈತರಿಂದ ಕಸಿಯುವ ಮನೆಗಂದಾಯ, ಜಮೀನುಗಂದಾಯಗಳು ಎಲ್ಲಿ ಹೋಗುತ್ತಿವೆ ಅದರಿಂದ ಏನನ್ನು ಮಾಡುತ್ತಿದ್ದೀರಿ?  ಎಲ್ಲ ಟಿ‌ವಿ ಪೇಪರ್ಗಳಲ್ಲಿ ನೋಡಿದರೆ ನಿಮ್ಮ ಸರ್ಕಾರದ ಯೋಜನೆಗಳು ಸಂಪೂರ್ಣ ರೈತಪರವಾಗಿ ಕಾಣುತ್ತವೆ ಆದರೆ ಅವು ಮಲೆನಾಡಭಾಗದ ರೈತರಿಗೆ ಸಿಗುವುದಿಲ್ಲ ಏಕೆ?

 ಸ್ನೇಹಿತರೇ ನಮ್ಮ ಊರಿನಿಂದ ಬಂದವರು ನಾವು ಸಾಕಷ್ಟುಜನರಿದ್ದೇವೆ  ಬೆಂಗಳೂರು ಹಾಗೂ ಮಲೆನಾಡು ಭಾಗದಲ್ಲಿ, ನಿಮ್ಮಲ್ಲೂ ಇಂತಹ ಸಮಸ್ಯೆಗಳು ಇಲ್ಲದೆನಿಲ್ಲ, ಊರಿಗೆ ಹೋದಾಗ ನೀವು ನೋಡಿದ ಇಂತಹಾ ಅವಸ್ಥೆಗಳನ್ನ ಇಲ್ಲಿ ಕಾಮೆಂಟಿಸಿ ನಾನು ಈ ಲೇಖನವನ್ನ ಮಾನ್ಯ ಶಾಸಕರ ಫೇಸ್ ಬುಕ್ ನ ಪ್ರೊಫೈಲ್ನಲ್ಲಿ ಅಂಟಿಸುತ್ತೇನೆ, ನೋಡೋಣ ಇನ್ನೂ ಕೆಲವಾರು ವರ್ಷಗಳಲ್ಲಿಯಾದರೂ ನನ್ನ ಪ್ರಶ್ನೆಗಳಿಗೆ ಉತ್ತರ ಸಿಗಬಹುದು ಅಲ್ಲವೇ? ಬರ್ಲಾ?

ದಯ್ಯದ ಹರಕೆ!!

ಜೂನ್ 21, 2011

ನೋಡಿ ಇತ್ತೀಚೆಗೆ ಸಕತ್ ಟೈಮ್ ಸಿಕ್ತಾ ಇರೋದಕ್ಕೂ, ನೀವು ನನ್ನ ಬ್ಲಾಗ್ ವಿಸಿಟ್ ಮಾಡಿ ಪ್ರೋತ್ಸಾಹ ನೀಡ್ತಾ ಇರೋದಕ್ಕೂ ಫುಲ್ ಕುಷಿಆಗ್ತಾ ಇದೆ. ಇವತ್ತು ಸ್ವಲ್ಪ ಹಾಗೆ ಏನಾದ್ರೂ ಮಾತಾಡೋಣ ಅಂತ, ಓಕೆ ಅಲ್ವಾ?  ನಂಗೆ ಈ ತಕ್ಷಣಕ್ಕೆ ಒಂದು ಐಡಿಯಾ ಬಂದಿದೆ ಯಾರು ಹೆಚ್ಚಾಗಿ ದೆವ್ವ, ಭೂತ, ಹೀಗೆ ಹೆದರಿಸೋ ಆರ್ಟಿಕಲ್ಲುಗಳನ್ನ ತಮ್ಮ ಬ್ಲಾಗ್ನಲ್ಲಿ ಪಬ್ಲಿಷ್ ಮಾಡಿಲ್ಲ, ಅಥವಾ ನಾನು ನೋಡಿಲ್ಲ. ಸೋ ನಾನು ಯಾಕೆ ಬಾರಿಬಾರ್ದು ಅಲ್ವಾ?

ನಿಮಗೆ ಗೊತ್ತಿದೆ ಎಷ್ಟೊಂದು ದೆವ್ವ ಭೂತ, ಪಿಚಾಚಿಗಳು, ಹಾಗೆ ಅದು ಇದು ಅಂತ ಮೂವೀಸ್ ಬಂದಿದಾವೆ, ಕಥೆಗಳು , ಕಾದಂಬರಿಗಳು, ಹಾಗೆ ಅಲ್ಲಿ ಇಲ್ಲಿ ಕೇಳಿದ್ದು ಎಲ್ಲ ನಮ್ಮ ಕಿವಿಗೂ ಬೀಳ್ತಾ ಇರ್ತವೆ. ಅದರಲ್ಲಿ ಕೆಲವೊಂದು ನಿಮಗಾಗಿ ಇಲ್ಲಿ ಬರೀತಿನಿ…..ಅದಕ್ಕೂ ಮುಂಚೆ ನಮ್ಮೂರಲ್ಲಿ ದೆವ್ವ, ದೈವ, ದಯ್ಯ ಹೀಗೆಲ್ಲಾ ಕರಿತಾರೆ ನಿಮಗೆ ಯಾವತರ ಅನ್ಸುತ್ತೋ ಹಾಗೆ ಓದಿ..

 ಮೊನ್ನೆ ಟಿ‌ವಿ 9 ಲಿ ತೋರಿಸ್ತಾ ಇದ್ರು ಬೆಂಗಳೂರಲ್ಲಿ ಒಂದು 8 ಮಹಡಿ ಬಿಲ್ಡಿಂಗ್ ಇದ್ಯಂತೆ ಅಲ್ಲಿ ಯಾರು ಹೋಗೋಕೆ ಅಗಲ್ವಂತೆ, ಅದು ಏನು ಅಂತ ನೋಡೋಕೆ ಟಿ‌ವಿ 9 ತಂಡ ಹೋದಾಗ ಭಯಾನಕ ಅನುಭವ ಆಯಿತಂತೆ, ಅದನ್ನು ತೋರಿಸ್ತಿದ್ರು ಅದು ರಾತ್ರಿ ಕಣ್ರೀ ಸ್ವಲ್ಪ ಭಯನೆ ಆಯಿತು ನನಗೂ.. ಎನ್ ಕೇಳ್ತೀರಾ ಆಟೋಮೇಟಿಕ್ ಆಗಿ ಮಾಮೂಲಿ ಬಾಗಿಲು ತೆಗೆದುಕೊಳ್ಳುತ್ತೆ, ನಿಮ್ಮ ಹತ್ತಿರದಲ್ಲೇ ನೆರಳುಗಳು ಒಡಿಯಾಡ್ತವೆ, 1ನೇ ಮಹಡಿಗೆ ಹೋದ್ರೆ 4ನೇ ಮಹಡಿಲಿ, ಹಾಗೆ 4ನೇ ದಕ್ಕೆ ಹೋದರೆ 1ನೆದರಲ್ಲಿ ಯಾರೋ ಭಯಾನಕವಾಗಿ ಅಳುತ್ತಿರುವ ಶಭ್ದ, ಮೆಟ್ಟಿಲುಗಳಿಂದ ಯಾರೋ ಇಳಿದುಕೊಂಡು ಹೋಗ್ತಾ ಇರೋ ಸದ್ದು ಕೇಳಿಸುತ್ತೆ ಅಬ್ಬಾ ನೋಡಿ ಸ್ವಲ್ಪ ನೀರಾದೆ….

 ಮತ್ತೆ ಒಂದು ಮನೆ ಇದೆ ನಮ್ಮ ಊರಲ್ಲಿ ಆ ಮನೆಯ ಯಜಮಾನ್ರು ನಮ್ಮ ಅಪ್ಪನ ಹತ್ರ ನಾವು ಚಿಕ್ಕವರಿದ್ದಾಗ ಬಂದು ಹೇಳ್ತಿದ್ರು, ಅವ್ರ ಮನೇಲಿ ಮರದ ತೊಲೆಗಳ ಮೇಲೆ ಯಾರೋ ಕಂಟಿನಿಯಸ್ ಆಗಿ ಗುದ್ದಿದ ಶಭ್ದ ಕೇಳುತ್ತಿತಂತೆ, ಹಾಗೆ ರಾತ್ರಿ ಒಬ್ಬ ಎತ್ತರದ ಮನುಷ್ಯ ದೀಪ ಹಿಡಿದುಕೊಂಡು ಹಾರಿ ಹೋಗ್ತಾ ಇದ್ದಹಾಗೆ, ಗೇಟಿನಬಳಿ ಯಾವುದೋ ಬಿಳಿ ಸೀರೆಯ ಹೆಂಗಸು ನಿಂತು ಅಳುತ್ತಿರುವ ಹಾಗೆ ಕಾಣಿಸ್ತಿತ್ತಂತೆ,

 ಮನೇಲಿ ಮಲಗಿದ್ರೆ ಮೈತುಂಬಾ ಯಾವುದೋ ಒಂದು ಹಾವು ಹರಿದಾಡಿದ ಅನುಭವ ಆಗಿ ಶಾಂತಿ ಮಾಡಿಸಿದ್ದನ್ನ ನೋಡಿದೀನಿ, ಮನೇಲಿ ನೀರು ಅದಾಗಿ ಅದೇ 5 ನಿಮಿಷದಲ್ಲಿ  ಕೆಂಪು ಬಣ್ಣಕ್ಕೆ ತಿರುಗೋದು, ಏನು ಅಡಿಗೆ ಮಾಡಿದ್ರೂ, ಉಪ್ಪು ಹಾಕದೇ ಇದ್ರು, ತಿಂದಾಗ ಅತಿಯಾಗಿ ಉಪ್ಪಾಗಿ ಊಟಾನೇ ಬಿಟ್ಟು ಏಳಬೇಕು ಹಾಗೆ ಆಗ್ತಿತ್ತು ಅಂತ ಹೇಳ್ತೀದ್ರು,  ಅದನ್ನ ನೋಡೋಕೆ ನಮ್ಮ ಕೆಲವು ಗುರುತು ಪರಿಚಯ ಇರೋರು ಹೋಗಿದ್ರೂ ನಾವು ಬಿಡಿ ತುಂಬಾ ದೈರ್ಯವಂತರು ಹಾಗಾಗಿ ಅಂತ ಸಾಹಸ ಮಾಡಲಿಲ್ಲ.

 ಇನ್ನೂ ನಮ್ಮೂರ ಒಬ್ಬರು ಆಟೋ ರಿಕ್ಷಾ ಓಡಿಸ್ತಾರೆ ಅವ್ರು ರಾತ್ರಿ ಬರಬೇಕಾದ್ರೆ ಒಂದು ಅಜ್ಜಿ  ಡ್ರಾಪ್ ಕೇಳಿದ್ಳಂತೆ ಕೂರಿಸಿಕೊಂಡು ಬಂದು ಸ್ವಲ್ಪ ದೂರದ ನಂತರ ಹಿಂತಿರುಗಿ ನೋಡಿದ್ರೆ ಅವಳಿಲ್ಲ!! ಹೆದರಿದ ಆಟೋ ಡ್ರೈವರ್ ಕೃಷ್ಣಪ್ಪ 7 ದಿನ ಜ್ವರದಿಂದ ಹಾಸಿಗೆ ಹಿಡಿದು, ವಿಜೇಂದ್ರ ಡಾಕ್ಟರ್ ಓವರ್ ಡೋಸೇಜ್ ಮಾತ್ರೆ ಕೊಟ್ಟಮೇಲೆ ಸರಿಯಾಗಿದ್ದು.

ಇನ್ನೂ ಒಂದು ಕಡೆ ಅಂತೂ, ದೆವ್ವ ದಿನಾ ಮನೆಮೇಲೆ ಕಲ್ಲು ಎಸಿತಾ ಇತ್ತಂತೆ, ಮತ್ತೆ ಇನ್ನೊಬ್ಬ ಇದಾನೆ ಅವ್ನಿಗೆ ದೆವ್ವ ಬಂದು ಮೈಯೆಲ್ಲಾ ಬ್ಲೇಡ್ ಇಂದ ಕುಯ್ಯಿದಂತಾ ಗಾಯಗಳು, ಮತ್ತೆ ನಮ್ಮೂರಿನ ಅನುಭವಕ್ಕೆ ಬಂದ್ರೆ ಅಲ್ಲಿ ಯವದಾರು ಜಾನುವಾರು ಕಾಡಲ್ಲೆ ಸತ್ತು ಹೋದ್ರೆ , ಕಾಣೆಯಾದ್ರೆ ಅದನ್ನ ರಣ ಹೊಡೆದಿದೆ ಅನ್ನುವ  ಕನ್ಫರ್ಮ್  ಉತ್ತರ ಸಿಗುತ್ತೆ.

 ರಾತ್ರಿ ನೆಡೆದುಕೊಂಡು ಬರ್ತಿದ್ದ ಗೌಡ್ರಿಗೆ ಯಾರೋ ಹಿಂಬದಿಯಿಂದ ಫಾಲೋ ಮಾಡ್ತಿದಾರೆ ಅಂತ ಅನ್ನಿಸಿ ತಿರುಗಿ ನೋಡಿದ್ರೆ ಯಾರು ಇಲ್ಲ!! ಫುಲ್ ಜ್ವರ ಆವೃಗಂತೂ, ಇನ್ನೊ ಒಂದು ಹೆಜ್ಜೆ ಮುಂದೆ ಹೋಗಿ ರಾತ್ರಿ ಕತ್ತಲಲ್ಲಿ ಯಾರೋ ಬಂದಹಾಗೆ, ಅವರ ಗೆಜ್ಜೆ ಸಪ್ಪಳ ಕೇಳೋದು, ಇವರು ನಿಂತರೆ ಗೆಜ್ಜೆನೂ ನಿಲ್ಲುತ್ತೇ, ಹೊರಟರೆ ಮತ್ತೆ ಅದೇ ನಾಗವಲ್ಲಿ ಗೆಜ್ಜೆ…….

 ಇನ್ನೂ ಕೆಲವು ಕಡೆ ದೆವ್ವದ ಬನಗಳು ಇರ್ತವೆ,  ಅದು ಅಲ್ಲಿನ ಹತ್ತಿರದ ಮನೆಗಳಲ್ಲಿನ ಕೆಲವರಿಗೆ ಭಯಾನಕ ತೊಂದರೆಗಳನ್ನು ಕೊಟ್ಟು ಆಮೇಲೆ ಅದಕ್ಕೆ ಒಂದು ದೇವಸ್ಥಾನ ಕಟ್ಟಿದ್ದು ನೋಡಿದೇನೆ. ಆಮೇಲೆ ಅಲ್ಲಿ ಹರಕೆ, ಹಂದಿ, ಕೋಳಿಬಲಿಗಳು ಸಾಮಾನ್ಯ ಬಿಡಿ. ಕಾಡಿನ ಸ್ವಲ್ಪ ದೂರದಲ್ಲಿ ರೋಡ್ ಇರುತ್ತೆ ಅಲ್ಲೇ ಒಂದು ಕಲ್ಲು, ಅದರ ಬಳಿ ರಾತ್ರಿ ನೆಡೆದು ಹೋದರೆ ಜಾರಿ ಬೀಳೋದು, ಉಸಿರುಕಟ್ಟಿದಹಾಗೆ ಆಗೋದು ಇದೆಲ್ಲ ಇದೆ ಕೇಳಿದೀರಾ ಅಲ್ವಾ?

 ಇನ್ನೂ ಬಿಡಿ ವಾಮಚಾರಿಗಳಬಗ್ಗೆ ಹೇಳೋದೇ ಬೇಡ ರವಿಬೇಳೆಗೆರೆಯವರ “ಸರ್ಪ ಸಂಭಂದ” ಓದಿ ಮೂರು ದಿನ ಊಟದ ಖರ್ಚು ಉಳಿಸಿದ ಕೀರ್ತಿ ಅವರಿಗೆ ಸಲ್ಲಬೇಕು, ಅದು ಅಲ್ಲದೆ ವಾಮಾಚಾರಿಗಳಿಗೆ ಫೇಸ್ಬುಕ್  ಅಕೌಂಟ್ ಇದ್ದರೆ ಬರೀ ದೆವ್ವಗಳೆ  ಫ್ರೆಂಡ್ಸ್ ಇರ್ತಾರೆನೋ ಅಲ್ವಾ? ದೆವ್ವಗಳ ಲೈಕು, ಕಾಮೆಂಟು, ವಿಡಿಯೋ, ಅಯ್ಯೋ ಬಿಡಿ ಯಾಕೆ ಅದೆಲ್ಲ ನಮಗೆ…

 ಇನ್ನೂ ನಮ್ಮ ಮನೆ ಹತ್ರ ಒಬ್ಬರಿಗೆ ಯಾರೋ ಯಾವಗ್ಲೂ ಮಾಟ ಮಾಡ್ಸೋದು ಕಣ್ರೀ, ಮಾಟ ಮಾಡಿದ ಸ್ವಲ್ಪ ದಿನದಲ್ಲೆ ಇವರ ಎಮ್ಮೆ, ಇಲ್ಲಾ ದನ ಸತ್ತು ಬೀಳೋದು, ಇವರು ಮತ್ತೆ ಮರು ಮಾಟ ಮಾಡೋಕೆ ಕೇರಳಕ್ಕೆ ಹೋಗೋದು ಇದೆಲ್ಲ ಗುಸು ಗುಸು ಸುದ್ದಿ.

 ಪಂಜುರ್ಲಿ, ಜಟಿಕ, ಊರ ಮಾರಿ, ರಣ, ಕೆಂಬತ್ತ, ಇನ್ನೂ ಏನೇನೋ ಹೆಸರುಗಳು ಇವು ಊರ / ಗ್ರಾಮ ದೇವತೆಗಳು, ಕೆಲವೊಂದು ಮಾತ್ರ ಅದರಲ್ಲಿ ಸ್ವಲ್ಪ ಕುಟುಂಬಗಳಿಗೆ ಮಾತ್ರ ಸೇರಿರ್ತವೆ. ಇದನ್ನ  ದೆವ್ವ ಅಂತೀರಾ, ದೇವರು ಅಂತೀರಾ? ಬೇಡ ಬಿಡಿ ಅವರವರ ನಂಬಿಕೆಗೆ ಬಿಟ್ಟ ವಿಷ್ಯ, ಸುಮ್ನೆ ಯಾಕೆ ವಿವಾದ.

ಇನ್ನೂ ಕೆಲವರಿಗೆ ವಯಕ್ತಿಕವಾಗಿ ದೆವ್ವಗಳ ಕಾಟ, ಮೈಮೇಲೆ ಬರೋದು, ನೋಡೋಕೆ ಹಗಲು ಹೊತ್ತೆ ಭಯಾನಕವಾಗಿ ಕಾಣೋ ವ್ಯಕ್ತಿಗಳು ಇದ್ದಾರೆ ಅವರನ್ನ ಗಣಮಗ ಅಂತ ಕರಿತಾರೆ ನಮ್ಮ ಕಡೆ ಹಾಗೆ “ಅವನಿಗೆ ಗಾಳಿ ಸೋಕಿದೆ ಆಂತಾರೆ, ಇನ್ನೂ ಇಲ್ಲಿ ಭೂತ ಕೋಲ ಅನ್ನುವ ದಕ್ಷಿಣ ಕನ್ನಡದ ವಿಶಿಷ್ಟ ಸಂಪ್ರದಾಯದ ಬಗ್ಗೆ ಬರ್ದಿಲ್ಲ ಯಾಕಂದ್ರೆ ಅದು ಅಲ್ಲಿಯ ಜನರ ನಂಬಿಕೆ ಮತ್ತೆ ಹೆಚ್ಚಾಗಿ ಅವರು ತೊಂದರೆಗಳಲ್ಲಿ ಸಿಲುಕಿದಾಗ ದೇವರಿಗಿಂತ ದೆವ್ವ (ದೈವ)ಗಳಿಗೆ ಮೊರೆ ಹೋಗ್ತಾರೆ ಅಂತ ನಂಬಿಕೆ ಬಗ್ಗೆ ಹೇಳೋದು ಬೇಡ ಅನ್ನಿಸ್ತಿದೆ ಅದು ದಕ್ಷಿಣ ಕನ್ನಡದವರ ಅನುಭವಗಳನ್ನ ಕೇಳಿದ್ರೆ ಒಂದು ಗ್ರಂಥನೇ ಬರಿಬೋದು…..

ನಾವು ಚಿಕ್ಕವರಿದ್ದಾಗ ಪ್ಯಾರಳೆ ಮರ ಹತ್ತಿ ಅಲ್ಲಿನ ಕಾಯಿಗಳನ್ನ ತಿನ್ನೋ ಅಭ್ಯಾಸ, ಅಲ್ಲಿ ಅಪರೂಪಕ್ಕೆ ನಮ್ಮ ಕಣ್ಣಿಗೆ ಕಾಣದ ಒಂದು ಹಣ್ಣು ಇದ್ದು ಅದನ್ನ ಹಕ್ಕಿಗಳು ಅರ್ಧ ತಿಂದಿದ್ದದ್ದನ್ನ ನಾವು ಮನೆಗೆ ತಂದರೆ ಕಥೆ ಮುಗೀತು ಅಮ್ಮ ಫುಲ್ ಹೆದುರ್ಸ್ತಿದ್ರು ಅದು ದೆವ್ವ ತಿಂದಿರೋ ಹಣ್ಣು, ತಿನ್ನಬೇಡ ಅಂತ!! ಇನ್ನೂ ಮರಹತ್ತಿ ಬಿದ್ದರೆ ಅಂತೂ ದೆವ್ವದ ಕಾಟ ಇತ್ತು ಸೋ ಅದು ಎಳೆದು ಕೆಳಗಡೆ ಹಾಕಿ ಸರಿಯಾಗಿ ಏಟು ಮಾಡಿದೆ ಅಂತ ಮಂತ್ರ, ತಂತ್ರ, ತಾಯತ, ಎಲ್ಲ ನಮ್ಮ ಹಣೆ, ಕುತ್ತಿಗೆಗಳನ್ನ ಆವರಿಸ್ತಿದ್ವು.

ದೆವ್ವಗಳನ್ನ ಎದಿರು ಹಾಕ್ಕೊಂಡ್ರೆ ಅದಕ್ಕೂ ಭಲವಾದ ಶಿಕ್ಷೆ ಇದೆ ಅಂತ ಜನ ನಂಬುತ್ತಾರೆ, ರಕ್ತ ಕಾರಿ ಸಾಯಿತಾರೆ, ಅನ್ನ ನೀರು ಕೊಡಿಯೋಕೆ ಆಗ್ದೆ ಸಾವು, ಕಾಡಿಗೆ ಹೋದಾಗ ಹೊಡೆದು ಹಾಕುತ್ತೆ, ಮನೆ ಜಾನುವಾರುಗಳು ಮಟ್ಯಾಷ್!! ಹೀಗೆ ಇನ್ನೂ ಏನೇನೋ.ಅದಕ್ಕೆ ನಂಗೆ ಅನ್ನಿಸೋದು ನಮ್ಮ  ರಾಜಕಾರಣಿಗಳು ಇತ್ತೀಚೆಗೆ ಆಣೆ ಭಾಷೆ ಶುರುಮಾಡಿದ್ದರಲ್ಲ ದೇವರ ಬಳಿ ಮಾಡ್ಸೋದಕ್ಕಿಂತ ದೆವ್ವಗಳ ಬಳಿ ಮಾಡ್ಲಿ, ಸಕತ್ ಶಿಕ್ಷೆ!! ಒಟ್ಟಿಗೆ ಆಣೆ ಮಾಡಿದ ಎರಡೂ ಪಾರ್ಟಿಗಳು ನೆಗದು ಬಿದ್ದು ಹೋಗ್ಲಿ ಎನಂತೀರ?

 ನೀವು “ನಾಳೆ ಬಾ” ದೆವ್ವದ ಬಗ್ಗೆ ಕೇಳಿದೀರಾ? ನಾನು ಸಣ್ಣವನಿರುವಾಗ ಕೆಲವು ಸೈಟ್ ಮನೆಗಳ ಬಾಗಿಲುಗಳ ಮೇಲೆ ಇದನ್ನ ಬರೆದಿರ್ತಿದ್ರು, ದೆವ್ವ ಬಂದ್ರೆ ಅದಕ್ಕೆ ಕನ್ನಡ ಓದೊಕೆ ಬರುತ್ತಾ? ಎಜುಕಟೆಡ್ ದೆವ್ವಗಳು ಇದಾವ ? ಅಥವಾ ಈ ಸರ್ಕಾರಿ ಅಧಿಕಾರಿಗಳು ಸತ್ತು ಹೀಗೆ ದೆವ್ವಗಳಾಗಿದ್ದಾರಾ? ಇದೆಲ್ಲ ಉತ್ತರ ಸಿಗದ ಪ್ರಶ್ನೆಗಳು. ಹೋಗ್ಲಿ ಸಧ್ಯ ದೆವ್ವ ಬಂದ್ರೆ ಓಕೆ. ಮನೇಲಿ ಯಾರು ಇಲ್ಲದಿದ್ದಾಗ ನೆಂಟರೊಬ್ಬರು ಬಂದ್ರೆ ಅವರ ಕಥೆ ಏನು? ಬಾಗಿಲು ನೋಡಿ ನಾಳೆ ಬಾ…?!!!

 ಇನ್ನೂ ಮಜಾ ಏನು ಗೊತ್ತ ನಮ್ಮ ಊರಲ್ಲಿ ಹಳೆಯಕಾಲದಲ್ಲಿ ಎತ್ತಿನ ಗಾಡಿಗಳು ಇದ್ವು, ಈಗ ಇಲ್ಲ ಬಿಡಿ, ಆವಾಗ ಅಪ್ಪ ಮತ್ತೆ ಮಗ  ಅಮಾವಾಸ್ಯೆಯ ರಾತ್ರಿಯಲ್ಲಿ ಗಾಡಿ ಹೊಡ್ಕೊ0ಡು ಮನೆಗೆ ಬರುವಾಗ ಹಿಂದಿನಿಂದ ಯಾವುದೋ ನೆರಳು ಡ್ಯಾನ್ಸ್ ಮಾಡಿದಹಾಗೆ ಕಾಣಿಸ್ತಾ ಇತ್ತಂತೆ, ಅಪ್ಪ ಹೌಹಾರಿ ಹೋದ, ಆದರೆ ಸ್ವಲ್ಪ ಬುದ್ಧಿವಂತನಾದ ಮಗ ಗಾಡಿ ನಿಲ್ಲಿಸಲು ಹೇಳಿ ಸರಿಯಾಗಿ ನೋಡಿದ್ರೆ ಗಾಡಿಗೆ ಕಟ್ಟಿದ ಲಾಟೀನ್ ದೀಪದ ಬೆಳಕು ನೆರಳಿನ ಆಟ ಅಂತ ಗೊತ್ತಾಯಿತು!!

 ದೇವಸ್ಥಾನಗಳು ಎಷ್ಟು ಇದಾವೋ ಅದರ ಅರ್ಧದಷ್ಟು ದೆವ್ವಗಳ ಅಂದರೆ ದೈವಗಳ ಗುಡಿ ಬನಗಳೂ ಇವೆ ಅಲ್ವಾ? ದೇವರು ಅನ್ನುವ ಆಪಥ್ಬಾಂದವನ ನಡುವೆಯೇ ಇಂತ ದೆವ್ವಗಳು ನೀಡುವ ಶೀಘ್ರ ಪರಿಹಾರದ ನಂಬಿಕೆಇಂದಾಗಿಯೇ ಹೆಚ್ಚಿನ ಅಸ್ತಿತ್ವಕ್ಕೆ ಕಾರಣನೆನೋ ಅಲ್ವಾ? ಹಾಗೆ ಇವುಗಳ ಹೆಸರು ಬಳಸಿ ಮೋಸ ಮಾಡುವ, ಹೆದರಿಸಿ ದುಡ್ಡು ಮಾಡುವ ಕ್ಷುದ್ರ ಮನಸ್ಸುಗಳು ಇದ್ದವೇ ಅನ್ನೋದು ವಿಪರ್ಯಾಸ..

 ದೇವರು, ದೈವ, ದೆವ್ವ, ಇವುಗಳ ಇರುವಿಕೆಯ ಹುಡುಕಾದಲ್ಲಿ, ಈ ವಿಸ್ಮಯಗಳು, ವಿಚಿತ್ರಗಳ ನಡುವೆ ಕಾಡುವ ಒಂದೇ ಒಂದು ಪ್ರಶ್ನೆ ಹೀಗೂ ಊಂಟೇ?” (ಟಿ‌ವಿ 9 ನಾರಾಯಣ ಸ್ವಾಮಿ ಸ್ಟೈಲ್ ಅಲ್ಲಿ ಓದಿ ಮಜಾ ಬರುತ್ತೆ )ಅದೇನೇ ಇರಲಿ ಇದೆಲ್ಲ ನಾನು ಕೇಳಿದ ಸುದ್ದಿಗಳು ಅಷ್ಟೇ, ತುಂಬಾ ಸೀರಿಯಸ್ ಆಗಿ ಓದಿ ತಲೆ ಕೆಡಿಸಿಕೊಳ್ಳಬೇಡಿ, ಹಾಗೆ ನಿಮಗೆ ಕೇಳಿರೋ ಗಾಳಿ ಸುದ್ದಿ , ಇಂತ ಕಥೆಗಳು ಇದ್ರೆ ನಂಗೂ ಹೇಳಿ ನಮ್ಮ ಮ್ಯಾನೇಜರ್ ಯಾಕೋ ಸಂಬಳ ಜಾಸ್ತಿ ಮಾಡ್ತಿಲ್ಲ ಅವ್ನಿಗೆ ಈ ಕಥೆ ಹೇಳಿ ಹೆದರಿಸಿ ಕೆಲ್ಸ ಮಾಡ್ಕೊಳ್ಳೋ ಕೊನೆ ಪ್ರಯತ್ನ ಮಾಡ್ತೀನಿ….ಬರ್ಲಾ..?

ಯಾರು ಈ ಅಣ್ಣಾ ಹಜಾರೆ?

ಜೂನ್ 7, 2011

ಭ್ರಷ್ಟಾಚಾರ ತೊಲಗಿಸಬೇಕು, ನಮ್ಮೊಂದಿಗೆ ಕೈಜೋಡಿಸಿ, ಹೀಗೆ ಕುಳಿತರೆ ನಮ್ಮ ದೇಶವನ್ನ ನಿರ್ನಾಮ ಮಾಡುತ್ತಾರೆ ಬನ್ನಿ ಎಲ್ಲರೂ, ಎಂದು ತಾವೇ ಮೊದಲಿಗರಾಗಿ ಉಪವಾಸ ಕುಳಿತು ಸರ್ಕರಾದ ಖುರ್ಚಿಗಳನ್ನು ನಡುಗಿಸುತ್ತಿರುವ ಮಹಾನ್ ಚೇತನ, ವೀರ ಸೈನಿಕ, ಅಣ್ಣಾ ಹಜಾರೆಯವರಬಗ್ಗೆ ನಮಗೆಷ್ಟು ಗೊತ್ತು? ತಿಳಿದುಕೊಳ್ಳುವ ಪ್ರಯತ್ನದಲ್ಲಿ ಸಿಕ್ಕ ಮಾಹಿತಿಗಳು ಇಲ್ಲಿವೆ ನಿಮಗಾಗಿ….

 ಅಣ್ಣಾ ಮೂಲತಃ ಮುಂಬಯಿ ನ ಅಹಮದ್ ನಗರದ ಹತ್ತಿರದ ಪುಟ್ಟ ಹಳ್ಳಿಯವರು , ಅವರ ಪೂರ್ಣ ಹೆಸರು ಕಿಸನ್ ಬಾಬುರಾವ್ ಹಜಾರೆ . 1937 ಜೂನ್ 15 ರಂದು ಜನನ, ಓದಿದ್ದು 7 ನೇ ತರಗತಿ ಅಷ್ಟೆ, ಬಡತನದ ಕುಟುಂಬ ಒಂದರಿಂದ ಬಂದವರು ಅಣ್ಣಾ. ತಂದೆ ಬಾಬುರಾವ್ ಹಜಾರೆ ಆಯುರ್ವೇದ ಫಾರ್ಮೆಸಿಯಲ್ಲಿ ನೌಕರ, ಅಣ್ಣಾ ಹಜಾರೆಯವರಿಗೆ 6 ಜನ ಸೋದರ ಸೋದರಿಯರು. ಮನೆಯಲ್ಲಿ ಕಡುಬಡತನ, ಒಂದು ಹೊತ್ತಿನ ಊಟಕ್ಕೂ ಪರದಾಡುವ ಸ್ಥಿತಿ, ಆ ಮಧ್ಯೆ ಅವರ ಚಿಕ್ಕಮ್ಮ ಅಣ್ಣಾ ಅವರನ್ನ ಸಾಕುವ ಹೊಣೆ ಹೊತ್ತು ಈಗಿನ ಮುಂಬಯಿ ಅನ್ನೋ ದೊಡ್ಡ ಮಹಾನಗರಿಗೆ ಕರೆತಂದರು.

 ಮುಂಬೈಗೆ ಬಂದ ನಂತರವೂ ಕಷ್ಟಗಳನ್ನೇ ಅನುಭವಿಸಬೇಕಾಯಿತು ಅದಕ್ಕಾಗಿಯೇ ಅವರ ಶಿಕ್ಷಣ 7 ನೇ ತರಗತಿಗೆ ನಿಂತಿದ್ದು, ನಂತರ ರಸ್ತೆ ಬದಿಯಲ್ಲಿ ಹೂವುಗಳನ್ನು ಮಾರುವ ಹೊಸ ಕೆಲಸ ಆರಂಬಿಸಿಬಿಟ್ಟರು ಹಜಾರೆಯವರು. ಅವರ ಬುದ್ದಿವಂತಿಕೆ ಎಷ್ಟಿತ್ತೆಂದರೆ ನಂತರದಲ್ಲಿ ಅವರದೇ ಆದ 2 ಹೂವಿನ ಅಂಗಡಿಗಳನ್ನು ತೆರೆದು ತಿಂಗಳಿಗೆ ಆಗಿನ ಕಾಲದಲ್ಲಿ 800 ರೂಪಾಯಿಗಳಷ್ಟು ವರಮಾನ ಬರುವಂತೆ ಮಾಡಿ  ಅವರ ಸೋದರನನ್ನೂ ಮುಂಬಯಿ ಗೆ ಕರೆತಂದರು.

 ಆ ನಂತರ ತಮ್ಮನ್ನು ಸಂಪೂರ್ಣವಾಗಿ ದೇಶ ಸೇವೆಗೆ ಮುಡುಪಿಟ್ಟುಕೊಂಡು ಬಿಟ್ಟರು ಹಜಾರೆ, 1963 ರರಲ್ಲಿ ಭಾರತೀಯ ಸೇನೆ ಯಲ್ಲಿ ಚಾಲಕನಾಗಿ ಸೇರಿಕೊಂಡರು ಆಗ ಅಂದರೆ 1965 ರಲ್ಲಿ ನೆಡೆದ ಪಾಕಿಸ್ತಾನದ ವಿರುದ್ದದ ಹೊರಟದಲ್ಲಿ ಬದುಕಿಬಂದ ಅದೃಷ್ಟವಂತರಲ್ಲಿ ಹಜಾರೆಯವರೂ ಒಬ್ಬರು.

 1975 ರಲ್ಲಿ ತಮ್ಮ ಹಳ್ಳಿಯಾದ ರಾಲೆಗಾನ್ ಸಿದ್ದಿ ಗೆ ತಮ್ಮ ಸೇನೆಯ ಕೆಲಸಕ್ಕೆ ಸ್ವನಿವೃತ್ತಿ ಘೊಷಿಸಿಕೊಂಡು ಬಂದರು, ಅಲ್ಲಿ “ತರುಣ್ ಮಂಡಲ್” ಅನ್ನುವ ಯುವಕರ ಸಂಘವೊಂದನ್ನು ಕಟ್ಟಿದರು

ನಂತರ “ಪಾನಿ ಪೊರವತ್ ಮಂಡಲ್” ಅನ್ನು ಸ್ಥಾಪಿಸಿದರು ಹಳ್ಳಿಯ ನೀರಿನ ವ್ಯವಸ್ಥೆಯನ್ನ ಸರಿಪಡಿಸುವ ಉದ್ದೇಶ ಈ ಸಂಸ್ಥೆಯದ್ದು. ತಮ್ಮ ಹಳ್ಳಿಯಲ್ಲಿ ಸಾರಾಯಿ ಮಾರಾಟ ನಿಷೆದಕ್ಕಾಗಿ ಹೋರಾಟ ಪ್ರಾರಂಭ ಮಾಡಿದರು, ಅವರಿಗೆ ಸಿಕ್ಕ ಜನ ಬೆಂಬಲದಿಂದಾಗಿ ಸರಾಯಿ ಮಾರಾಟ ನಿಂತು ಹೋಯಿತು ಆದರೆ ಬೇರೆ ಹಳ್ಳಿಗಳಿಂದ ಜನರು ಸಾರಾಯಿ ಖರೀದಿಸಿ ತಂದು ಕುಡಿಯಲು ಆರಂಭಿಸಿದಾಗ ಅಂತರವರಿಗೆ 3 ಬಾರಿ ಎಚ್ಚರಿಕೆ ಕೊಡುವುದು ನಂತರವೂ ನಿಲ್ಲದಿದ್ದರೆ ಅಂತಹವರನ್ನ ಕಠಿಣ ದೈಹಿಕ ಶಿಕ್ಷೆಗೆ ಗುರಿಪಡಿಸುವುದೆಂದು ನಿರ್ಧಾರ ಮಾಡಿದರು, ಅದಕ್ಕಾಗಿ ಅವರು ಕೊಟ್ಟ ಕಾರಣ ಏನೆಂದರೆ “ಒಬ್ಬ ತಾಯಿ ತನ್ನ ಮಗುವಿಗೆ ಕಹಿಯಾದ ಔಷದವನ್ನು ರೋಗದಿಂದ ಮುಕ್ತಗೊಳಿಸುವ ಉದ್ದೇಶದಿಂದ ಮಾತ್ರ ಕುಡಿಸುತ್ತಾಳೆ ಅವಳಿಗೆ ತನ್ನ ಮಗುವಿನ ಮೇಲೆ ದ್ವೇಷ ವಿರುವುದಿಲ್ಲ ಅಂತೆಯೇ ಈ ಕುಡಕರಿಗೆ ನೀಡುವ ಶಿಕ್ಷೆ  ಬೇರೆಯವರಿಗೆ ಎಚ್ಚರಿಕೆಯ ಘಂಟೆಯಾಗಲಿ ಅನ್ನುವ ಉದ್ದೇಶಬಿಟ್ಟು ವಯಕ್ತಿಕ ದ್ವೇಷವೇನು ಇರುವುದಿಲ್ಲ ” ಅನ್ನುವುದು.

 ನೀರಿನ ಸಮಸ್ಯೆ ನಿಯಂತ್ರಣಕ್ಕೆ ಅಂತರ್ಜಲವನ್ನ ಇಂಗಿಸಿ ಭೂಮಿಯ ಫಲವತ್ತತೆ ಹೆಚ್ಚಿಸುವತ್ತ ಕ್ರಮ ಕೈಗೊಂಡ ಅಣ್ಣಾ ಹಜಾರೆಯವರು ಸ್ವಯಂ ಪ್ರೇರಿತರಾಗಿ ಹಳ್ಳಿಗರು, ಹಳ್ಳ, ಕೊಳ್ಳ, ಹಾಗೂ ಕಾಲುವೆಗಳನ್ನ ಕೊರೆಯಲು ಮುಂದೆ ಬರುವಂತೆ ಮಾಡಿದರು.ಹಾಗೆ ಹಳ್ಳಿಯಲ್ಲಿನ ಹೈನುಗಾರಿಕೆ (ಹಾಲು ಉತ್ಪಾದನೆ) ಯ ಮಟ್ಟವನ್ನ ಹೆಚ್ಚಿಸುವ ನಿಟ್ಟಿನಲ್ಲಿ ರೈತರರಿಗೆ ಹೆಚ್ಚಿನ ತರಬೇತಿಯ ಅಗತ್ಯವನ್ನ ಮನಗಂಡ ಅವರು ಜಿಲ್ಲಾ ಪಂಚಾಯತ್ ಮೂಲಕ ಹಳ್ಳಿಯಲ್ಲಿ ಒಂದು ಹೈನುಗಾರಿಕಾ ತರಬೇತಿ ಕೇಂದ್ರವನ್ನು ಆರಂಭಿಸುವಂತೆ ಮಾಡಿದರು, ಅಂದಿನ ಕಾಲದಲ್ಲಿ ೧೦೦ ಲೀಟರ್ ಪ್ರತಿದಿನದ ಉತ್ಪಾದನೆಯಿಂದ ೨೫೦೦ ಲೀಟರ್ ಉತ್ಪಾದಿಸುವ ಮಟ್ಟಕ್ಕೆ ತರಬೇತಿ ಶಾಲೆ ಹಾಗೂ ಜಿಲ್ಲಾ ಪಂಚಾಯಿತ್ ನೆರವಾಯಿತು.

 ಶಿಕ್ಷಣಕ್ಕಾಗಿ ಹಜಾರೆಯವರ ಕೊಡುಗೆ ಅಪಾರ, ಅವರು ತಮ್ಮ ಹಳ್ಳಿಯಲ್ಲಿನ ಶಿಕ್ಷಣ ಹಾಗೂ ಸುಶಿಕ್ಷಿತರ ಸಂಖ್ಯೆಯನ್ನು ಹೆಚ್ಚಿಸುವ ಸಲುವಾಗಿ  1979 ರಲ್ಲಿ  “ಸಂತ ಯಾದವಬಾಬಾ ಶಿಕ್ಷಣ ಪ್ರಸರಕ ಮಂಡಲ್” ನಿರ್ಮಾಣ ಮಾಡಿ 4 ಲಕ್ಷ ರೂಪಾಯಿಗಳ ಸರ್ಕಾರದ ಧನ ಸಹಾಯದೊಂದಿಗೆ ಅಲ್ಲಿ ಹೈಸ್ಕೂಲ್ ಹಾಗೂ ಹಾಸ್ಟೆಲು ಗಳ ನಿರ್ಮಾಣಕ್ಕೆ ನೆರವಾದರು. ಎಷ್ಟೋ ಬಡ ವಿದ್ಯಾರ್ಥಿಗಳು ಹೆಚ್ಚಿನ ಶಿಕ್ಷಣಕ್ಕಾಗಿ ಹೊರ ಊರಿಗೆ ಹೋಗಲಾಗದ್ದನ್ನು ಗಮನಿಸಿದ ಹಜಾರೆ ಈ ಸಾಹಸಕ್ಕೆ ಕೈ ಹಾಕಿದರು. ನಂತರ ಇದರಲ್ಲಿ ಮಹಿಳಾ ಶಿಕ್ಷಣಕ್ಕೂ ಒಟ್ಟು ಕೊಡುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಿದರು.

 ಮಾಹಿತಿ ಹಕ್ಕು ಕಾಯಿದೆಯನ್ನು ಜಾರಿಗೆ ತರಬೇಕೆಂದು ಒತ್ತಾಯಿಸಿ ಮಾಡಿದ ಹೋರಾಟದಲ್ಲಿ ಎಷ್ಟರ ಮಟ್ಟಿನ ಜನ ಬೆಂಬಲ ವ್ಯಕ್ತವಾಯಿತೆಂದರೆ ಮಹಾರಾಷ್ಟ್ರ ಸರ್ಕಾರ 2003 ರಲ್ಲಿ  ಮಾಹಿತಿ ಹಕ್ಕು ಕಾಯಿದೆಯನ್ನ ಜಾರಿಗೊಳಿಸಿತು. ಮತ್ತೆ ಕೆಲವೊಂದು ತಿದ್ದುಪಡಿಗಳಿಗೆ ಆಗ್ರಹಿಸಿ ಫೆಬ್ರವರಿ 2004 ಹಾಗೂ  ಆಗಸ್ಟ್ 2006 ರಲ್ಲಿ 2 ಬಾರಿ ಉಪವಾಸ ಸತ್ಯಾಗ್ರಹ ಹೂಡಿದ ಫಲವಾಗಿ ಮಹಾರಾಷ್ಟ್ರ ಸರ್ಕಾರ , ಹಾಗೂ ಕೇಂದ್ರ ಸರ್ಕಾರಗಳೆರಡೂ ಮಾಹಿತಿಹಕ್ಕು ಕಾಯಿದೆಯನ್ನು ಸಮಪ್ರಕವಾಗಿ ಜಾರಿಗೆ ತರುವ ಬರವಸೆ ನೀಡಿದವು.

 ಇನ್ನೂ ಭ್ರಷ್ಟಾಚಾರದ ಅವರ ಹೊರಟದ ಬಗ್ಗೆ ಎರಡು ಮಾತಿಲ್ಲ ಅವರ ಹೋರಾಟ ಮುಂಚಿನಿದಲೂ ನೆಡೆದುಕೊಂಡು ಬಂದಿದೆ. ಅವರ “ಭ್ರಷ್ಟಾಚಾರ ವಿರೋಧಿ ಜನ ಅಂಧೋಳನ” ಅನ್ನುವ ಧ್ಯೇಯ ವಾಕ್ಯದಡಿ ಸುಮಾರು 1991 ರಿಂದಲೂ ವಿವಿದ ಭ್ರಷ್ಟ ಅದಿಕಾರಿಗಳ, ಸರ್ಕಾರಗಳ ವಿರುದ್ಧ  ಹೋರಾಟ ಮಾಡಿದ್ದಾರೆ ಹಾಗೂ ಯಶಸ್ವಿಯಾಗಿದ್ದಾರೆ. ಅವರು ಇದೇ 2011 ಏಪ್ರಿಲ್ ನಲ್ಲಿ ನೆಡೆಸಿದ ಉಪವಾಸ ಸತ್ಯಾಗ್ರಹ ದ ಫಲವಾಗಿ ಲೋಕಪಾಲ್ ಮಸೂದೆ ಜಾರಿಯಾಗುವ ಎಲ್ಲ ಲಕ್ಷಣಗಳೂ ಕಾಣಿಸುತ್ತಿವೆ. 

 ಇಷ್ಟೆಲ್ಲ ಜನಾಗ್ರಹಕ್ಕೆ ಕಾರಣವಾಗಿರುವ ಈ ಜನ ಲೋಕಪಾಲ್ ಕಾಯ್ದೆಯಲ್ಲಿ ಏನಿದೆ? (ದಟ್ಸ್ ಕನ್ನಡ – ಸಂಗ್ರಹ)
* ಕೇಂದ್ರದಲ್ಲಿ ಲೋಕಪಾಲ ಮತ್ತು ಪ್ರತಿರಾಜ್ಯದಲ್ಲಿ ಲೋಕಾಯುಕ್ತ ನೇಮಕ.
* ಸುಪ್ರೀಂ ಕೋರ್ಟ್ ಮತ್ತು ಚುನಾವಣಾ ಆಯೋಗದಂತೆ ಲೋಕಪಾಲ ಸಂಸ್ಥೆ ಕೂಡ ಸ್ವತಂತ್ರವಾಗಿರುತ್ತದೆ.
* ಭ್ರಷ್ಟ ವ್ಯಕ್ತಿ ರಾಜಕಾರಣಿ, ಅಧಿಕಾರಿ, ನ್ಯಾಯಮೂರ್ತಿ ಯಾರೇ ಆಗಿರಲಿ, ಆರೋಪ ಸಾಬೀತಾದರೆ ಎರಡು ವರ್ಷದಲ್ಲಿ ಜೈಲು ಸೇರಬೇಕು.
* ಭ್ರಷ್ಟ ವ್ಯಕ್ತಿಯಿಂದ ಸರಕಾರಕ್ಕೆ ಆದ ನಷ್ಟವನ್ನು ಶಿಕ್ಷೆ ಆಗುವ ದಿನ ಮರುಪಾವತಿಸಬೇಕು.
* ಸರಿಯಾದ ಸಮಯದಲ್ಲಿ ಯಾವುದೇ ವ್ಯಕ್ತಿಗೆ ಸಂಬಂಧಿಸಿದ ಕೆಲಸ ನೆರವೇರದಿದ್ದರೆ ಕರ್ತವ್ಯಚ್ಯುತಿ ಮಾಡಿದ ಅಧಿಕಾರಿಗೆ ದಂಡ ವಿಧಿಸಿ, ಅದನ್ನು ಸಂಬಂಧಪಟ್ಟ ವ್ಯಕ್ತಿಗೆ ನೀಡಲಾಗುವುದು.
* ಪಂಚಾಯತ್ ನಲ್ಲಿ ಹಣ ದುರುಪಯೋಗವಾದರೆ, ರೇಶನ್ ಕಾರ್ಡ್ ನಲ್ಲಿ ಗೋಲ್ ಮಾಲ್ ನಡೆದರೆ, ಪೊಲೀಸ್ ಲಂಚ ಕೇಳಿದರು, ರಸ್ತೆ ಸರಿಯಾಗಿ ಹಾಕದಿದ್ದರೆ, ಪಾಸ್ ಪೋರ್ಟ್ ಸೂಕ್ತ ಸಮಯದಲ್ಲಿ ದೊರಯದಿದ್ದರೆ, ಲೈಸೆನ್ಸ್ ನೀಡುವ ಅಧಿಕಾರಿ ಕಿರಿಕ್ ಮಾಡಿದರೆ, ಸಬ್ ರಿಜಿಸ್ಟ್ರಾರ್ ಟೇಬಲ್ ಕೆಳಗೆ ಕೈ ಚಾಚಿದರೆ ಲೋಕಪಾಲನಿಗೆ ದೂರು ನೀಡಬಹುದು.
* ಲೋಕಪಾಲ ರಾಜಕಾರಣಿಗಳಿಂದ ನೇಮಕವಾಗದೆ, ಜನರಿಂದ, ಸಾಂವಿಧಾನಿಕ ಅಧಿಕಾರಿಯಿಂದ, ನ್ಯಾಯಮೂರ್ತಿಗಳಿಂದ ನೇಮಕವಾಗುವುದರಿಂದ ನೇಮಕವಾಗುವುದರಿಂದ ಭ್ರಷ್ಟಾಚಾರಕ್ಕೆ ಅವಕಾಶವೇ ಇಲ್ಲ.
* ಜನ ಲೋಕಪಾಲ ಮಸೂದೆ ಜಾರಿಗೆ ಬಂದರೆ ಮುಖ್ಯ ಜಾಗೃತ ಆಯುಕ್ತ, ವಿಚಕ್ಷುದಳ, ಸಿಬಿಐನ ಭ್ರಷ್ಟವಿರೋಧಿ ಶಾಖೆಗಳು ಲೋಕಪಾಲದಲ್ಲಿ ಸೇರಿಕೊಳ್ಳುತ್ತವೆ.
* ಭ್ರಷ್ಟಾಚಾರದ ವಿರುದ್ಧ ದನಿಯೆತ್ತುವ ವ್ಯಕ್ತಿಗೆ ಲೋಕಪಾಲರಿಂದ ಸಂಪೂರ್ಣ ಭದ್ರತೆ ದೊರೆಯುತ್ತದೆ..

 ಅತ್ಯಂತ ಸಣ್ಣ ಮಟ್ಟದಿಂದ ಯಾವುದೇ ದೊಡ್ಡ ಮಟ್ಟದಲ್ಲಿನ ಭ್ರಷ್ಟಾಚಾರವನ್ನ ಬುಡಮಟ್ಟ ಕಿತ್ತುಒಗೆಯುವ ಪಣ ತೊಟ್ಟಿದ್ದಾರೆ ಹಾಜಾರೆಯವರು. ಅವರು ಟಿ‌ವಿ ಸಂದರ್ಶನ ಒಂದರಲ್ಲಿ “ ಹಿಂದೆಯೂ ಸೈನಿಕನಾಗಿ ಸೇವೆ ಸಲ್ಲಿಸಿದ್ದೆ ಹಾಗೆ ಮುಂದೆಯೂ ದೇಶದ ಆಂತರಿಕ ಶತ್ರುಗಳ ಸದೆಬಡೆಯುವಲ್ಲಿ ಸೈನಿಕನಾಗಿಯೇ ಸೇವೆ ಸಲ್ಲಿಸುತ್ತೇನೆ” ಅನ್ನುವ ಮಾತು ಇಂದಿನ ಯುವಕರಲ್ಲಿ ಸ್ಪೂರ್ತಿ ತುಂಬಬೇಕಿದೆ.

 ಹಜಾರೆಯವರನ್ನ ಅರಸಿಕೊಂಡು ಬಂದ ಪ್ರಶಸ್ತಿಗಳು ಅನೇಕ ಅವು:

 1986- ಇಂದಿರ ಪ್ರಿಯದರ್ಶಿನಿ ವೃಕ್ಷಮಿತ್ರ ಪ್ರಶಸ್ತಿ (ಕೇಂದ್ರ ದಲ್ಲಿ ಪ್ರದಾನಿಯಾಗಿದ್ದ ರಾಜೀವ್ ಗಾಂಧಿ ಯವರಿಂದ 19 ನವೆಂಬರ್ 1986 ರಲ್ಲಿ ಕೊಡಮಾಡಲ್ಪಟ್ಟಿತು.)

1989 – ಕೃಷಿ ಭೂಷಣ ಪ್ರಶಸ್ತಿ (ಮಹಾರಾಷ್ಟ್ರ ಸರ್ಕಾರದಿಂದ )

1990 – ಪದ್ಮ ಶ್ರೀ ಪ್ರಶಸ್ತಿ

1991-  ಪದ್ಮ ಭೂಷಣ ಪ್ರಶಸ್ತಿ

1996 – ಶಿರೋಮಣಿ ಪ್ರಶಸ್ತಿ.

2008 – ವಿಶ್ವ ಬ್ಯಾಂಕ್ ನಿಂದ “ಜಿತ್ ಗಿಲ್” ನೆನಪಿನ ಪ್ರಶಸ್ತಿ (ಅವರ ಸಾಮಾಜಿಕ ಸೇವೆಗಾಗಿ)

2011 – ರವೀಂದ್ರನಾಥ್ ಟ್ಯಾಗೋರ್  ಶಾಂತಿ ಪುರಸ್ಕಾರ. (Indian institute of Planing and Management ನಿಂದ ಕೊಡಮಾಡಲಾಗಿದೆ )

 ನನ್ನ ಅಭಿಮತ ಏನೆಂದರೆ ಈ ಇಳಿವಯಸ್ಸಿನಲ್ಲೂ ಹುಮ್ಮಸಿನಿಂದ, ಉತ್ಸಾಹದಿಂದ ತಮ್ಮನ್ನು ತಾವು ಜನ ಸೇವೆಗೆ ಮುಡಿಪಿಟ್ಟುಕೊಂಡವರು ಅಣ್ಣಾ ಹಜಾರೆ, ಇಷ್ಟೆಲ್ಲ ಸಾಧನೆ ಮಾಡಿ ಅವರು ಎಂದೋ ರಾಜಕೀಯ ಸೇರಿ ಉನ್ನತ ಹುದ್ದೆಯಲ್ಲಿರಬಹುದಿತ್ತು. ಆದರೆ ಹಾಗೆ ಮಾಡಲಿಲ್ಲ, ಅವರ ನಿಸ್ವಾರ್ಥ ದೇಶ ಸೇವಗೆ ನಾವು ನೀವೆಲ್ಲರೂ ತಲೆಬಾಗಲೇ ಬೇಕಲ್ಲವೇ?

ಪ್ರತಿಯೊಬ್ಬ ಭಾರತೀಯನೂ ಕೂಡ ತಮಗಾಗಲಿ ಬೇರೆಯವರಿಗಾಗಲಿ ಭ್ರಷ್ಟಾಚಾರದಿಂದ ತೊಂದರೆ ಆದಾಗ ಒಗ್ಗಟ್ಟಿನಿಂದ ನಿಂತು ಹೋರಾಡಿ ನ್ಯಾಯವದಗಿಸಬೇಕು, ಅಣ್ಣಾ ಹಜಾರೆ ತಮ್ಮ ಹಳ್ಳಿ ರಾಲೆಗಾನ್ ಸಿದ್ಧಿ ಯಲ್ಲಿ ಯಶಸ್ವಿಯಾಗಿದ್ದಾರೆ ಎಂದರೆ ಅಲ್ಲಿನ ಜನ ಬೆಂಬಲ ಎಷ್ಟಿದೆ ಅವರಿಗೆ ಅಲ್ಲವೇ?

 ನಮ್ಮ ಫೇಸ್ ಬುಕ್  ಅಕೌಂಟಿನಲ್ಲಿ ಅಣ್ಣಾ ಹಾಜಾರೆಯವರನ್ನ “like” ಬಟನ್ ಒತ್ತಿ  ನಮ್ಮ ಬೆಂಬಲ ಒದಗಿಸಿದರೆ ಸಾಲದು, ಪ್ರತಿಭಾರಿ ಎಲ್ಲೆಲ್ಲಿ ಭ್ರಷ್ಟಾಚಾರದ ವಾಸನೆ ಬಡಿಯುತ್ತದೆಯೋ ಅಲ್ಲಿ ಅತಿ ನಿಷ್ಟುರತೆಯಿಂದ ಹೋರಾಡಿ ನ್ಯಾಯವದಗಿಸುವ ಮನಸ್ಸು ಪ್ರತಿಯೊಬ್ಬನಲ್ಲೂ ಹುಟ್ಟಿದರೆ ಆಗ ಭಾರತ ನಿಜವಾಗಿಯೂ ಅಭಿವೃದ್ಧಿ ಹೊಂದಿದ ದೇಶವಾಗಬಹುದು ಅಲ್ಲವೇ? ನೀವೇನಂತೀರಿ?

 (ಅಣ್ಣಾ ಅವರ ಬಗ್ಗೆ ಹೆಚ್ಚಿನ ಮಾಹಿತಿ ವಿಕಿಪೀಡಿಯದ ಈ ಲಿಂಕ್ ನಲ್ಲಿ ಲಭ್ಯವಿದೆ )

ನಮ್ಮೂರಲ್ಲಿ ಮಳೆಗಾಲ!!

ಜೂನ್ 2, 2011

ಮತ್ತೊಮ್ಮೆ  ಮಲೆನಾಡು, ಅಲ್ಲಿ ಮಳೆಗಾಲ, ನೆರೆ, ಗಾಳಿ, ಎಲ್ಲ ನೆನಪಾಯಿತು, ಹಾಗಾದಮೇಲೆ ನಿಮ್ಮೊಂದಿಗೆ ಹಂಚಿಕೊಳ್ಳಲೇಬೇಕೆಂಬ ತವಕ.

 ತುಂಬಾ ಸುಂದರ ಅಲ್ವಾ? ನಮ್ಮ ಮಲೆನಾಡು ಮಳೆಗಾಲ ಶುರುವಾಯ್ತು ಅಂದ್ರೆ? ನಮ್ಮೆಲ್ಲ ರೈತಬಾಂದವರಿಗೆ ಮೈತುಂಬಾ ಕೆಲಸ ಶುರುವಾಗಿಬಿಡುತ್ತೆ, ಅಗಡಿ ಮಾಡಬೇಕು ಬೇಲಿ ಹಾಕಬೇಕು ಗದ್ದೆಗೆ ಗೊಬ್ಬರ ಸಾಗಿಸಬೇಕು, ಅದನ್ನ ಬಿಕ್ಕಬೇಕು, ನೆಲ ಹೂಡಬೇಕು, ಆಮೇಲೆ ಮತ್ತೆ ಕೆಲಸದವರಿಗಾಗಿ ಪರದಾಟ, ಬಿತ್ತನೆ ಬೀಜ ತರಬೇಕು, ಮೊಳಕೆ ಬರಿಸಬೇಕು, ನೆಟ್ಟಿ ಕೆಲಸ ಶುರುಮಾಡಬೇಕು ಅದಕ್ಕೂ ಮುಂಚೆ ಶೃಂಗೇರಿಗೆ ಹೋಗಿ ಒಂದು ಒಳ್ಳೆಯ ಕಂಬಳಿ ಕೊಳ್ಳಬೇಕು ಅದರ ಕಸೆ ಕಟ್ಟಬೇಕು. ನೆಟ್ಟಿಗೆ ಟಿಲ್ಲರ್ ಒಂದನ್ನ ಹುಡುಕಿ ಅದರ ಒಡೆಯನಿಂದ ದಿನಾಂಕ ನಿಗದಿಪಡಿಸಿಕೊಂಡು ಅಂದೆ ಎಲ್ಲಾ ಕೆಲಸದವರನ್ನ ಒಟ್ಟುಗೂಡಿಸಬೇಕು.ಮತ್ತೆ ನೆಟ್ಟೆ ಮಾಡಬೇಕು, ಗದ್ದೆಗೆ ಹೊಸ ಅಂಚು ಹಾಕಬೇಕು, ಪ್ರತಿದಿನ ಅದನ್ನ ಮಕ್ಕಳಂತೆ ನೋಡಿಕೊಳ್ಳಬೇಕು ಗದ್ದೆಗೆ ನೀರು ಹೆಚ್ಚಾದರೂ ಕಷ್ಟ ಕಡಿಮೆಯಾದರೂ ಕಷ್ಟ …….

 ಇನ್ನೂ ತೋಟದ ಕಳೆ ಕೀಳಬೇಕು, ಔಷದಿ ಹೊಡೆಯುವರನ್ನ ಕರೆಸಬೇಕು, ಮಳೆಜಾಸ್ತಿ ಇದ್ದರೆ 2 ಅಥವಾ 3 ಬಾರಿ ಔಷದಿ ಹೊಡೆಸಬೇಕಾಗಬಹುದು.ಮತ್ತದೇ ಪಸಲಿಗಾಗಿ ಹೋರಾಟ, ಕಾಯುವಿಕೆ, ಒಳ್ಳೆಬೆಲೆಯ ನೀರಿಕ್ಷೆ ಎಷ್ಟೊಂದು ಕೆಲ್ಸ ಅಲ್ವಾ?

 ಮತ್ತೆ ನಮ್ಮೂರಲ್ಲ೦ತೂ ಮಳೆಗಾಲ ಒಂದು ಸುಂದರ ಅನುಭವ ಪ್ರತಿವರ್ಷ, ಮೊದಲು ಸರಿಯಾದ ಗಾಳಿ ಮಳೆ, ಆನಂತರ ತೋಟದ ಅಡಿಕೆಮರಗಳು ನೆಲಕಚ್ಚುವ ಭಯ, ಮಳೆಗಾಲ ಇಡೀ ಹಳ್ಳಿಗಳಲ್ಲ೦ತೂ ಕರೆಂಟ್ ನ ಸಮಸ್ಯೆ, ಅದರ ಮಧ್ಯದಲ್ಲೂ ಒಂದು ತೆರನಾದ  ಮಜಾ.

 ಮಳೆಗಾಲ ಶುರುವಾಯ್ತು ಅಂದ್ರೆ ಹುಡುಗರಿಗೆ ಹೊಸ ಛತ್ರಿ ಆಗಬೇಕು ಅದು ಬಟನ್ ಛತ್ರಿ!! ಜೋರಾಗಿ ಗಾಳಿಬೀಸಿದರೆ ಅದು ತಲೆಕೆಳಗಾಗಿ ಕೊಡುವ ತೊಂದರೆ ಮಳೆಯಲ್ಲಿ ಬ್ಯಾಗುಗಳು ಅದರೊಳಗಿನ ಪುಸ್ತಕಗಳು ನೆಂದು ಹೋದರಂತೂ ಎಲ್ಲಿಲ್ಲದ ಭಯ ನಾಳೆ ಮೇಷ್ಟ್ರು ಹೊಡೆದು ಬಿಟ್ರೆ?, ಆದರೂ ಅದೇ ಬೇಕು. ಪ್ಯಾಂಟ್ ಅರ್ಧ ಒದ್ದೆಯಾಗಿ ಕ್ಲಾಸ್ ರೂಮಿನಲ್ಲೇ ಒಣಗಬೇಕು ಅದು ಒಣಗುವುದೊರಳಗಾಗಿ ಸಂಜೆ ಆಗಿ ಸ್ಕೂಲ್ ಬಿಟ್ಟು ಮನೆಕಡೆ ಹೊರಡಬೇಕು ಮತ್ತದೇ ಮಳೆ ಒದ್ದೆ ಪ್ಯಾಂಟು….ಮನೆಗೆ ಬಂದರೆ ಮಧ್ಯನದ ಬುತ್ತಿಯಿಂದ ಹೊಟ್ಟೆ ತುಂಬಿರುವುದಿಲ್ಲ ಅನ್ನುವುದನ್ನು ಅರಿತ ಅಮ್ಮ ತಟ್ಟೆ ಇಟ್ಟು ಊಟಕ್ಕೆ ರೆಡಿ ಮಾಡಿರ್ತಾರೆ, ಅಡಿಗೆ ನೋಡಿದ್ದ್ರೆ ಅದೇ ಸೌತೆಕಾಯಿ ಹುಳಿ (ಸಾಂಬಾರು) , ಯಾಕಂದ್ರೆ ಮಳೆಗಾಲದ ಮುಂಚೆ ಗದ್ದೆ ಸೌತೆಕಾಯಿಯನ್ನ ಶೇಕರಿಸಿಟ್ಟುಕೊಂಡು ಅದನ್ನೇ  ಮಳೆಗಾಲ ಮುಗಿಯುವವರೆಗೂ ಊಣಬಡಿಸುವ ಹರಕೆ ಮಾಡಿರ್ತಾರೇನೋ ಅಮ್ಮಂದಿರು ಅಲ್ವಾ?  ಯವತ್ತಾದ್ರು ಪತ್ರವೊಡೆ ಪಲ್ಯಾ ಮಾಡಿದ್ದಾರೆ ಅಂತ ಗೊತ್ತಾದ್ರೆ ಕ್ಲಾಸಲ್ಲೆಲ್ಲ ಅದೇ ಯೋಚನೆ ಅದೆಷ್ಟು ರುಚಿ ಮುಂಡೆದು ….

 ಆದ್ರೆ ಸ್ವಲ್ಪ ಯೋಚನೆ ಮಾಡಿ, ಆ ಹಲಸಿನ ಹಪ್ಪಳ, ಹಲಸಿನ ಚಿಪ್ಸ್  ಅದರೊಂದಿಗೆ ಅಮ್ಮ ಮಾಡಿದ ಬಿಸಿ ಬಿಸಿ ಕಾಪಿ (ನಮ್ಮಲ್ಲಿ ಹಾಲಿಗೆ ಡಿಕಾಕ್ಷನ್ ಹಾಕೋದು ಕಡಿಮೆ ಡಿಕಾಕ್ಷನ್ ಅನ್ನೋ ಬೆಲ್ಲ ಹಾಗೂ ಕಾಫಿ ಪುಡಿ ಮಿಶ್ರಿತ ನೀರಿಗೆ (?) ಹಾಲು ಹಾಕ್ತಾರೆ ಅದಕ್ಕೆ ನಾನು ಅದನ್ನ ಕಾಪಿ ಅನ್ನೋದು ಕಾಫಿ ಆನ್ನಲ್ಲ )ಇದೆಲ್ಲವೂ ಇದ್ರೆ ಅದೃಷ್ಟಕ್ಕೆ ಕರೆಂಟು ಇದ್ರೆ ಟಿ‌ವಿ ನೋಡ್ತಾ ಸವಿಯುತ್ತಾ ಇದ್ರೆ ಅದರ ಮಜಾನೆ ಬೇರೆ ಬಿಡಿ. ಆದ್ರಲ್ಲೂ ಹೊಂವರ್ಕ್ ಮಾಡೋಕೆ ಸೀಮೆಯೆಣ್ಣೆಯ ಚಿಮಣಿಯೇ ಗತಿ ಅದರ ಹೊಗೆಯೋ ಯಾವುದೇ ಕಾರ್ಖಾನೆಯ ಹೊಗೆಗೇನೂ ಕಮ್ಮಿ ಇರಲ್ಲ. ಇದೆಲ್ಲ ಮುಗಿಸಿ ರಾತ್ರಿಯ ಊಟ ಮುಗಿಸಿ ತಣ್ಣಗೆ ರಗ್ಗು, (ಅಭ್ಯಾಸ ಇರೋರು ಪೆಗ್ಗು ಎಂದು ಓದಿಕೊಳ್ಳಿ) ಏರಿಸಿಕೊಂಡು ಮಲಗಿದರೆ ಮರುದಿನವೇ ಎಚ್ಚರ ಆಗೋದು.

 ಇನ್ನೂ ಮಜಾ ಅಂದ್ರೆ ಹಲಸಿನ ಬೀಜಗಳದ್ದು ಅದನ್ನ ಒಲೆಯ ಒಳಗಡೆ ಹಾಕಿ ಬೂದಿಯಲ್ಲಿ ಬೇಯಿಸಿ ತಿನ್ನೋದು, ಬೇಯಿಸುವಾಗ ಮಧ್ಯದಲ್ಲಿ ಅದು ಬಾಂಬಿನತೆ ಸ್ಪೋಟಗೊಂಡರೆ ಸುತ್ತ ಬೂದಿ ಹಾರಿ ಅಮ್ಮನಿಂದ ಬೈಗುಳ ಬೇರೆ.

 ಮಳೆಗಾಲದ ವಿಶೇಷ ಹಣ್ಣುಗಳು ಹುಡುಗರ ಪಾಲಿನ ಸಿಹಿತಿನಿಸುಗಳು ,

ಕಲ್ಲುಸಂಪಿಗೆ: ಸ್ವಲ್ಪ ಹುಳಿ ಮತ್ತು ಸ್ವಲ್ಪ ಸಿಹಿ ಕೆಲ್ವಂದರಲ್ಲಿ ಹುಳ ಆಗಿರ್ತವೆ  ನೋಡಿಕೊಂಡು ತಿನ್ನಬೇಕು.

ರಂಜದ ಹಣ್ಣು: ತಿಂದರೆ ಬಾಯಿತುಂಬಾ ಹಿಟ್ಟು ಹಿಟ್ಟಿನ ಅನುಭವ.

ಕಾಡು ನೇರಳೆ: ಕೈಗೆಟುಕುವಂತೆ ಹಣ್ಣಾಗಿರುತ್ತವೆ ಜಾಸ್ತಿ ತಿಂದರೆ ಶೀತ ಗ್ಯಾರಂಟಿ!!

ಹೆಬ್ಬಲಸು: ಚಿಕ್ಕ ಹಲಸಿನ ಹಣ್ಣಿನಂತೆ ಇರೋದು ಆದರೆ ಬೀಜವನ್ನ ಬೇಯಿಸಿಕೊಂಡು ತಿಂದರೆ ಮಜಾ..

ಪೇರಲೆ ಹಣ್ಣು: ಚಿರ ಪರಿಚಿತ ಹಣ್ಣು.

ಹಲಸಿನ ಹಣ್ಣು : ಬಕ್ಕೆ ಹಾಗೂ ಬೆಳುವ ಅನ್ನುವ ೨ ರೀತಿ. ಬೆಳುವದ ಸೊಳೆಗಳು ಅತಿಯಾಗಿ ಮೃದುವಾಗಿದ್ದರೆ ಬಕ್ಕೆಯ ಹಣ್ಣುಗಳು ಸ್ವಲ್ಪ ಬಿಡಿಸಲು ಬರುವಷ್ಟು ಮೆತ್ತಗೆ.

ಕಾಡು ಮಾವು : ಕೆಲವೊಂದು ಹುಳಿ, ಕೆಲವೊಂದು ಸಿಹಿ ಅತಿಯಾಗಿ ತಿಂದು ಹೊಟ್ಟೆನೋವು ಮಾಡಿಕೊಂಡ ನೆನಪುಬಂದಾಗಲೆಲ್ಲ ಮಾವಿನ ಹಣ್ಣಿನಿಂದ ದೂರ ಓಡಿಬಿಡಬೇಕೆನಿಸುತ್ತದೆ ಈಗಲೂ!!

ಹಿಪ್ಪಲಿ ಹಣ್ಣು: ಸಕತ್ ಹುಳಿ ಇದಂತೂ………

ಬೆಂಬಾರಳ ಹಣ್ಣು: ಒಂದು ರೀತಿಯ ಕಾಡು ಹಣ್ಣು

ಪನ್ನೇರಳ ಹಣ್ಣು: ನಮ್ಮ ಮನೆಯಕಡೇ ಸಕತ್ ಅಪರೂಪವಾಗಿದೆ ಇದು.

ಗೇರು ಹಣ್ಣು : ಸರಿಯಾಗಿ ಹಣ್ಣಾಗದ್ದನ್ನ ತಿಂದರೆ ಗಂಟಲ ತುರಿಕೆ ಗ್ಯಾರಂಟಿ.

ನೆನಪಿದೆಯಾ? ಈ ಎಲ್ಲಾ ಹಣ್ಣುಗಳ ಸವಿಯನ್ನ ಅತಿಯಾಗಿ ಸವಿದು ಜ್ವರ ಶೀತ ಮಾಡಿಕೊಂಡು ಡಾಕ್ಟರ್ ಹತ್ರ ಇಂಜೆಕ್ಷನ್ ತಗೊಂಡಿದ್ದು? ಸ್ಕೂಲಿಗೆ ಚಕ್ಕರ್ ಹೊಡೆದದ್ದೂ? ಇನ್ನಂತೂ ನೆರೆ ಬಂದರೆ ಮನೆಯವರಿಗೆ ಎಲ್ಲಿ ಗದ್ದೆಯಲ್ಲಿ ಹುಗುಳು (ಹೊಂಡ) ಹೋಗುತ್ತೋ ನೆಟ್ಟಿ ಕೊಚ್ಚಿಕೊಂಡು ಹೋಗುತ್ತೋ , ಅಥವಾ ತೋಟಕ್ಕೆ ಕೊಳೆರೋಗ ಬರುತ್ತೇನೋ ಅಂತೆಲ್ಲ ಭಯ ಆದ್ರೆ ನಮ್ಮ್ ಹುಡುಗರಿಗೆ ಫುಲ್ ಮಜಾ, ಶಾಲೆಗೆ ರಜಾ.ಮಧ್ಯದಲ್ಲಿ ನೆರೆ ಬಂದಿದ್ದನ್ನ ನೋಡೋಕೆ ಹೋಗೋದು ನೋಡಿಬಂದು ಎಲ್ಲರಿಗೂ ಹೇಳೋದು ಆಹಾ ಚೆನ್ನಾಗಿರುತ್ತೆ ……

ಅವರಿವರ ಮನೆ ಮಾವಿನ ಮರ ಹತ್ತಿ ಬೈಸಿಕೊಳ್ಳೋದು, ಸ್ವಲ್ಪ ತುಂಬಿದ ಹಳ್ಳ ದಾಟೋದು, ಹೊಸ ಅಂಚು ಹಾಕಿದ ಗದ್ದೆಮೇಲೆ ನೆಡೆದು ಜಾರಿಬಿದ್ದು ಎದ್ದು ಮನೆಗೆ ಹೋಗೋದು, ಜಾರುತ್ತೆ ಅಂತ ಗೊತ್ತಿದ್ದೂ  ಮರಹತ್ತಿ ಬಿದ್ದು ಏಟು ಮಾಡಿಕೊಂಡ್ರೆನೇ ಮಳೆಗಾಲ ಸಾರ್ಥಕವಾಗ್ತಿದ್ದಿದ್ದು  ನಮ್ಮ  ಸ್ಕೂಲ್ ದಿನಗಳಲ್ಲಿ ಗೊತ್ತ?

ಮಳೆಗಾಲದಲ್ಲಿ ಶಾಲೆಗೆ ರಜೆ ಇದ್ದರೆ ಅಡೊ ಚೆನ್ನೆ ಮಣೆ, ಹಾವು ಏಣಿ, ಚದುರಂಗ, ಮನೆ ದೊಡ್ಡಡಿದ್ರೆ ಕದ್ದು ಕೂರುವ ಆಟ ಇದೆಲ್ಲ ಚಿಕ್ಕಮಕ್ಕಳಿಗೆ…..

ಈ ವರ್ಷವೂ ಮಳೆಗಾಲ, ತಂಗಾಳಿ ,ನಮ್ಮಮಲೆನಾಡ ಮೇಲಂತೂ ವರುಣನ ವರ್ಷ ಸಿಂಚನ ಶುರುವಾಗಿ ಬಿಟ್ಟಿದೆ, ಹೀಗಿರುವಾಗ ನಮ್ಮೆಲ್ಲ ರೈತ ಭಾಂಧವರು ಕೆಲಸ ಶುರುಮಾಡಿದ್ದಾರೆ ಹಾಗೆ ಹುಡುಗರಿಗೆ ಶಾಲೆ ಶುರುವಾಗಿದೆ ಅವರಿಗೆಲ್ಲ ನಮ್ಮ ನಿಮ್ಮ ಕಡೆಯಿಂದ ಆಲ್ ದಿ ಬೆಸ್ಟ್ ಹೇಳೋಣ ಅಲ್ವಾ?  ಮತ್ತೊಮ್ಮೆ ಬರ್ತೀನಿ. (ಸೂಚನೆ :ಇದನ್ನ ನೋಡಿ ಹಲಸಿನ ಬೀಜ ಸುಟ್ಟು ಅದು ಹೊಟ್ಟಿ, ಅಥವಾ ಜಾಸ್ತಿ ತಿಂದು ಗ್ಯಾಸ್ ಪ್ರಾಬ್ಲಮ್ ಆದ್ರೆ ನಾನಂತೂ ಕಾರಣ ಅಲ್ಲಪ್ಪ )

ಉದ್ಯೋಗ – ನಮ್ಮವರಿಗೆಕಿಲ್ಲ?

ಮೇ 12, 2011

ಸ್ನೇಹಿತರೇ ಇವತ್ತು ಒಂದು ವಿಚಾರ ಹೇಳೋಣ ಅಂತ ಬಂದಿದೀನಿ ಇದು ಒಬ್ಬ ವ್ಯಕ್ತಿಯ ಜೀವನದ ತುಂಬಾ ಮುಖ್ಯವಿಚಾರಗಳಲ್ಲಿ ಒಂದು ಅನ್ನುವುದು ನನ್ನ ಅಭಿಪ್ರಾಯ.

ನಮ್ಮ ಮಲೆನಾಡಲ್ಲಿ, ಪ್ರತಿಭಾವಂತರಿದ್ದಾರೆ, ಸಾಫ್ಟ್ವೇರ್ ಇಂಜಿನೀಯರುಗಳಿದ್ದಾರೆ ,ವೇದ ಪಂಡಿತೋತ್ತಮರಿದ್ದಾರೆ, ಕೃಷಿ ತಜ್ಞರಿದ್ದಾರೆ, ಹಾಗೆ ಪದವಿ ಪೂರೈಸಿ ಮುಂದೇನು ? ಎನ್ನುವ  ಪ್ರಶ್ನೆಗೆ ಉತ್ತರ ಸಿಗದವರೂ ಇದ್ದಾರೆ ಅಲ್ಲವೇ? ಇವತ್ತು ನಾನು ಹೇಳೋ ವಿಚಾರ “ಮುಂದೇನು?” ಅನ್ನುವ ಉತ್ತರ ಬಯಸುವ ಮನಸುಗಳಿಗೆ ಒಂದು ಸಣ್ಣ ಸಂದೇಶ  ಅಷ್ಟೇ.

ನಾನು ಕೆಲಸಕ್ಕಾಗಿ ಹುಟ್ಟೂರು ಬಿಟ್ಟು ಬಂದು ಇಂದಿಗೆ ಸುಮಾರು 5 ವರ್ಷಗಳು ಕಳೆದು ಹೋದವು, ಬಂದಾಗ ಕೆಲಸ ಹೇಗೆ?, ಎಲ್ಲಿ?, ಯಾವ ರೀತಿ ಹುಡುಕಬೇಕು ಅನ್ನುವ ಯಾವುದೇ ಮಾಹಿತಿ ನನ್ನಲ್ಲಿ ಇರಲಿಲ್ಲ ಆದರೆ ಅದೇನೋ ದೇವರ ಅನುಗ್ರಹ ಇವತ್ತು ಒಂದು ಸಣ್ಣ ಕಂಪನಿಯಲ್ಲಿ ಹೆಚ್ ಆರ್ (human resource)  ಅಂದರೆ ಸಾಫ್ಟ್ವೇರ್ ಇಂಜೀನಿಯರುಗಳು ನಮ್ಮ ಕಂಪನಿಗೆ ಬೇಕಾದಾಗ ಅಂತಹವರನ್ನು ಹುಡುಕಿ, ಸಂದರ್ಶನ (ಇಂಟರ್ವ್ಯೂ) ಏರ್ಪಡಿಸಿ, ಆಯ್ಕೆಯಾದ  ಅಭ್ಯರ್ಥಿಗಳನ್ನ ನಮ್ಮ ಕಂಪನಿಗೆ ಸೇರಿಸಿಕೊಂಡು ಕೆಲಸ ಶುರುಮಾಡುವ ವರೆಗಿನ ಎಲ್ಲ ರೀತಿಯ ಸಹಾಯ, ಸಲಹೆ, ಹಾಗೂ ಕೆಲಸ   ನಾನು ಮಾಡಬೇಕು , ಹಾಗೆ ಅದೇ ನನ್ನ ದಿನಚರಿ ಕಳೆದ ನಾಲ್ಕುವರೆ ವರ್ಷಗಳಿಂದ…

ನಾನು ನನ್ನ ಅನುಭವದಲ್ಲಿ ಬಂದ , ನಮ್ಮೂರಿಂದ ಬಂದ ಎಲ್ಲ ಹುಡುಗರ ಕಷ್ಟ ಸುಖಗಳನ್ನ ನೋಡಿ ಕೆಲಸಹುಡುಕುವ ಅವರ ರೀತಿಯನ್ನ ನೋಡಿ ಈಗ ಕೆಲವು ವಿಚಾರಗಳನ್ನ ನಿಮ್ಮೊಂದಿಗೆ ಹಂಚಿಕೊಳ್ಳುವ ಮನಸ್ಸಾಗಿದೆ  ಉಪಯೋಗ ಅಗಭಹುದು ಅನ್ನುವ ನಂಬಿಕೆ ನನ್ನದು.

 ಮೊದಲನೆಯದಾಗಿ ಅತಿಯಾಗಿ ಹೆದರುವ ನಮ್ಮ ಹುಡುಗರು “ಇಂಗ್ಲೀಷ್ ನಲ್ಲಿ ಇಂಟರ್ವ್ಯೂ  ಇರುತ್ತೆ “ ಅಂದಾಗ ಅರ್ಧ ಜೀವ ಮಾಡಿಕೊಂಡು  ಕಲಿತಿದ್ದನ್ನು ಮರೆತು ಬಿಡುವುದು.

 ಇಂಟರ್ವ್ಯೂ  ನಲ್ಲಿ ಕೇಳಿದ ಪ್ರಶ್ನೆ ಅರ್ಥವಾಗಿದ್ದರೂ ಉತ್ತರ ಕೊಡುವಾಗ ಹಿಂಜರಿಕೆ, ಇದಕ್ಕೆ “ನಾನು ಕೊಡುವ ಉತ್ತರದಲ್ಲಿ ವ್ಯಾಕರಣದೋಷವಿರಬಹುದು ಎನ್ನುವ ಸಂದೇಹ” ಕಾರಣವಿರಬಹುದು.

 ಅರ್ಥವಾಗದಿರೋ ಪ್ರಶ್ನೆಗೆ ಏನೂ ಪ್ರತಿಕ್ರೀಯೆ ನೀಡದೆ ಮೌನಕ್ಕೆ ಶರಣಾಗಿಬಿಡುವುದು.

 ಕೆಲಸಗಿಟ್ಟಿಸಿಕೊಳ್ಳಲೇಬೇಕೆಂಬ ಹಂಬಲದಲ್ಲಿ ಕೇಳಿದ ಪ್ರಶ್ನೆಗೆ ಸಂಭಂದಿಸದ ಉತ್ತರ ನೀಡುವುದು.

 ಇಂಟರ್ನೆಟ್ ನ ತಿಳುವಳಿಕೆಯ ಕೊರತೆಯಿಂದಾಗಿ ತಮ್ಮ  ಬಯೋಡೇಟ / ರೇಸ್ಯುಮೆ ಯನ್ನ ಅಲ್ಲಿ ಪೋಸ್ಟ್ ಮಾಡದೆ ಇರುವುದು.

 ಯಾವ ಕೆಲಸಕ್ಕೆ ಇಂಟರ್ವ್ಯೂ ಕರೆಯಲಾಗಿದೆ ಅನ್ನುವ ಸ್ಪಷ್ಟಮಾಹಿತಿಯನ್ನ ನೋಡಿಕೊಳ್ಳದೆ ಇರುವುದು.

 ಯಾವಾಗಲೂ ನಿರಂತರವಾಗಿ ತಮ್ಮ ಈಮೇಲ್ ನ ಚೆಕ್ ಮಾಡದೆ ಇರುವುದು ಕೂಡ ಒಂದು ಕಾರಣ.

ಎಲ್ಲವಾದಕ್ಕೂ ಮುಖ್ಯವಾಗಿ ಬೆಂಗಳೂರಿಗೊ, ಮಂಗಳೂರಿಗೊ, ಅಥವಾ ಇನ್ನ್ಯಾವುದೇ ಸ್ಥಳದಲ್ಲಿ ಇಂಟರ್ವ್ಯೂ ಕೊಟ್ಟು ಫೇಲ್ ಆದವರ ಕಥೆಕೇಳಿ, ನಂಗೂ ಇದೆ ಗತಿ ಎಂದು ನಿರ್ಧರಿಸಿಬಿಡುವುದು.

 ಇದಕ್ಕೆಲ್ಲ ಸಮಾಧಾನ, ಪರಿಹಾರ ಇಲ್ಲವೇ? ನನಗೆ ತೋಚಿದ ಕೆಲವು ದಾರಿಗಳಲ್ಲಿ,

 ಮೊದಲನೆಯದು “ಇಂಗ್ಲೀಷ್ ಇಂಟರ್ವ್ಯೂ” , ಹೇಗೆ ನಾವು ಕನ್ನಡದಲ್ಲಿ ಪ್ರತಿದಿನ ನಮ್ಮ ಆಡುಭಾಷೆಯಲ್ಲಿ ಹಳೆಗನ್ನಡವನ್ನೊ, ಕವಿಗಳ ಭಾಷೆಯನ್ನೋ ಬಳಸದೆ ಮಾತನಾಡುತ್ತೇವೆಯೋ ಹಾಗೆ ಪ್ರತಿಯೊಬ್ಬರೂ ಇಂಗ್ಲೀಷ್ ನಲ್ಲಿ ಪ್ರವೀಣರಲ್ಲ, ಅವರೂಕೂಡ ಸುಲಭದ ವಾಕ್ಯಗಳ ಮೊರೆ ಹೋಗಿರುತ್ತಾರೆ, ಹಾಗೆಂದಮೇಲೆ ಹೆದರಿಕೆ ಯೇಕೆ? ಚಿಕ್ಕ ಚಿಕ್ಕ ವಾಕ್ಯಗಳೆ ಇರಲಿ, ತಪ್ಪಿದ್ದರೇ ಇರಲಿ, ತಿದ್ದುವ ಸಹೃದಯತೆ ಇಂಟರ್ವ್ಯೂ ಮಾಡುವ ವ್ಯಕ್ತಿಗೂ ಇರುತ್ತದೆ. ನೀವು ದೈರ್ಯ ಮಾಡಬೇಕಷ್ಟೆ…

 ನಾವು ಕೊಡುವ ಉತ್ತರದಲ್ಲಿ ವ್ಯಾಕರಣದೋಷವಿದೆಯೋ, ಇಲ್ಲವೋ ಅನ್ನುವುದು ಅನಂತರದ ಪ್ರಶ್ನೆ ಮೊದಲು ನಾವು ಕೊಟ್ಟ ಉತ್ತರದ ಅರ್ಥ ಅವರಿಗೆ ಆಗುವಂತಿದ್ದರೆ ಸಾಕು, ನಂತರ ವ್ಯಾಕರಣದೋಷ ಸರಿಪಡಿಸಿಕೊಳ್ಳಬಹುದು ಆದ್ದರಿಂದ ಕೊಡುವ ಉತ್ತರವನ್ನ ಚಿಕ್ಕದಾಗಿ, ಗೊತ್ತಿರುವ ನಿಮ್ಮ ಇಂಗ್ಲೀಷಿನಲ್ಲಿ ಉತ್ತರಿಸಿ ಬಂದರೆ ಸಾವಿರ ಹೋದರೆ ಏನೂ ನಷ್ಟವೂ ಇಲ್ಲ ಅಲ್ಲವೇ ? ಪ್ರಯತ್ನ ಮಾಡುವ ಮನಸ್ಸು ನಮಗಿರಲಿ.

 ಅರ್ಥವಾಗದಿರುವ ಪ್ರಶ್ನೆಯನ್ನ ಮತ್ತೊಮ್ಮೆ ಕೇಳಿ ತಿಳಿದುಕೊಳ್ಳಿ ಎರಡನೆಬಾರಿಯೂ ಅರ್ಥವಾಗದಿದ್ದರೆ ನಿಮಗೆ ಅರ್ಥವಾದ ವಿಚಾರಕ್ಕೆ ಮಾತ್ರ ಉತ್ತರಿಸಿ , ಬದಲಾಗಿ ಮೌನಕ್ಕೆ  ಶರಣಾದರೆ ಪ್ರಶ್ನೆ ಕೇಳುವ ವ್ಯಕ್ತಿಗೂ ಇರುಸುಮುರುಸಾಗಬಹುದು. ಮುಂದಿನ ಪ್ರಶ್ನೆಗೆ ಹೋಗದೆ ಇಂಟರ್ವ್ಯೂ ಮುಗಿಸಿಬಿಡಬಹುದು.

 ಕೆಲಸಗಿಟ್ಟಿಸಿಕೊಳ್ಳುವ ತವಕದಲ್ಲಿ ಕೇಳಿದ ಪ್ರಶ್ನೆಗೆ ಸಂಭಂದಿಸದ ಉತ್ತರ ನೀಡಬಾರದು ಬದಲಾಗಿ ಮೇಲೆ ಹೇಳಿದಂತೆ 2ನೆಬಾರಿ ಪ್ರಶ್ನೆಯನ್ನ ಕೇಳಿಕೊಂಡು ಅರ್ಥವಾದಷ್ಟರ ಮಟ್ಟಿಗೆ ಉತ್ತರಿಸಬಹುದು.

ಕೆಲಸ ಹುಡುಕುವ ತೀರ್ಮಾನ ಮಾಡಿದ ಮರುಗಳಿಗೆಯೇ ನಿಮ್ಮ ಬಯೋಡೇಟಾ /ರೇಸ್ಯುಮೆ ಯನ್ನು ಇಂಟರ್ನೆಟ್ ನ ನೌಕ್ರಿ ಹಾಗೂ ಮಾನ್-ಸ್ಟರ್  ವೆಬ್ ಸೈಟು ಗಳಲ್ಲಿ  ಅವರು ಕೇಳಿರುವ ಮಾಹಿತಿಯನ್ನ ನೀಡಿ ಅಪ್ಲೋಡ್ ಮಾಡಿ.

(ನೌಕ್ರಿ ಯ ಈ ಲಿಂಕಿನಲ್ಲಿ  ಹಾಗೂ ಮಾನ್-ಸ್ಟರ್ ನ ಈ ಲಿಂಕಿನಲ್ಲಿ ನಿಮ್ಮ ರೆಸ್ಯೂಮೇಯನ್ನ ಅಪ್ಲೋಡ್ ಮಾಡಿ )

 ಯಾವುದೇ ಕರೆ, ಅಥವಾ ಈಮೇಲ್ ಬಂದಾಗ ಯಾವ ಕೆಲಸಕ್ಕೆ ಕರೆಯಲಾಗಿದೆ ಅನ್ನುವುದನ್ನು ಸ್ಪಷ್ಟವಾಗಿ ಅವಲೋಕಿಸಿ ನಿಮ್ಮ ರೆಸ್ಯೂಮೇಯನ್ನ ಅವರಿಗೆ ಕಳುಹಿಸಿ ಕೊಡಿ.

 ಪ್ರತಿದಿನ ನಿಮ್ಮ ರೇಸುಮೆಯನ್ನ ಕೋರಿ, ಅಥವಾ ಕೆಲಸದ ಅವಕಾಶಗಳನ್ನ ತೋರಿಸುವ ಈಮೇಲ್ ಗಳಿಗೆ ತಪ್ಪದೆ ಉತ್ತರಿಸಿ.

ಹಾಗೆ ಹೋದ ಕಡೆಯಲ್ಲಿ ಕೆಲಸ ಸಿಗದಿದ್ದರೆ ದೃತಿಗೆಡಬಾರದು “ಮರಳಿಯತ್ನವಮಾಡು” ಎಂಬಂತೆ ನಿರಂತರ ಪ್ರಯತ್ನ ಹಾಗೂ ಪ್ರತಿ ಇಂಟರ್ವ್ಯೂ ನಲ್ಲಿ ನೀವು ಅನುಭವಿಸಿದ, ನೋಡಿದ ಅನುಭವಗಳನ್ನ ಇಟ್ಟುಕೊ0ಡು, ಮುಂದಿನದರಲ್ಲಿ ಉತ್ತಮ ಪ್ರದರ್ಶನ ನೀಡುವ ಪ್ರಯತ್ನ ನೆಡೆಯಲಿ.

 ಹಾಗೆ ಮುಖ್ಯಾವಾಗಿ ಬೇರೆಯವರ ಕಥೆಗಳನ್ನ ಕೇಳುವುದಕ್ಕಿಂತ ಸ್ವಂತ ಅನುಭವ ದೊಡ್ಡದಲ್ಲವೇ? ಹಾಗೆ ಪ್ರತಿಯೊಬ್ಬರ ಪ್ರತಿಭೆ ಭಿನ್ನವಾಗಿರುತ್ತದೆ, ಅವರಿಗಾದ ಕೆಟ್ಟ ಅನುಭವ ನಿಮಗೂ ಆಗುತ್ತದೆಂಬ ಭಯ ಬೇಡ, ಬೇರೆಯವರ ಮಾತಿಗೆ ಕಿವಿಗೊಡದೆ ನಿಮ್ಮ ಆತ್ಮವಿಶ್ವಾಸ ಜೀವಂತವಾಗಿರಿಸಿಕೊಂಡು ಕೆಲಸಗಿಟ್ಟಿಸಿ ಕೊಳ್ಳುವ ನಿರಂತರ ಉತ್ಸಾಹ ನಿಮಗಿರಲಿ.

 ಎಲ್ಲರಿಗೂ ಒಳ್ಳೆಯ ಉದ್ಯೋಗ ನೀವು ಬಯಸಿದ ಕ್ಷೇತ್ರಗಳಲ್ಲಿ, ಊರುಗಳಲ್ಲಿ ಸಿಗುವಂತಾಗಲಿ, ಇಂಟರ್ವ್ಯೂ ಎದುರಿಸುವ ಭಯ ದುಗುಡಗಳಿದ್ದರೆ ನನಗೂ ಒಂದು ಮೇಲ್ (mmnagara@gmail.com) ಮಾಡಿ ಅಥವಾ  ನಿಮ್ಮ ದೂರವಾಣಿ ನಂಬರ್ ಕೊಡಿ ನನಗೆ ಗೊತ್ತಿದ್ದವರಿಂದ, ನನಗೆ ಗೊತ್ತಿರುವ ಮಟ್ಟಿಗೆ ನನ್ನ  ಕೈಲಾದ ಸಹಾಯಕ್ಕೆ ನಾನೆಂದಿಗೂ ಸಿದ್ದನಾಗಿರುತ್ತೇನೆ. ಹಾಗೆ ನಾನು ಮುಂಚೆಯೇ ಹೇಳಿದಂತೆ ನಮ್ಮಲ್ಲೂ ಪ್ರತಿಭಾವಂತರು ಅಸಂಖ್ಯಾರಿದ್ದಾರೆ ಆದ್ದರಿಂದ ನಿಮ್ಮ ಸಲಹೆ ಸೂಚನೆಗಳನ್ನೂ ಇಲ್ಲಿ ಕಾಮೆಂಟಿಸಿ. ನನ್ನ ಎಲ್ಲ ಅಭಿಪ್ರಾಯಗಳೂ ಉತ್ತರ ಹುಡುಕುವ ಮನಸ್ಸುಗಳಲ್ಲಿ ಸಣ್ಣದೊಂದು ದೈರ್ಯದ ಗೆರೆ ಮೂಡಿಸಿದೆ ಅಂದರೆ ನಾನು ಧನ್ಯ.

ನಮ್ಮೂರಿನವ ಬೇಡ!!

ಏಪ್ರಿಲ್ 21, 2011

ಪ್ರೀತಿಯ ಎಲ್ಲ ಸ್ನೇಹಿತರೇ,

ಈ ಲೇಖನ ಓದಿದಮೇಲೆ ನಾನು ತುಂಬಾ ಖಾರವಾಗಿ ಬರ್ದಿದಿನಿ ಅಂತ ಅನ್ಕೋಬೇಡಿ ದಯವಿಟ್ಟು. ಈ ಬಾರಿ ನಾನು ಹೇಳೋಕೆ ಹೊರ್ಟಿರೋದು ನಮ್ಮೂರಿನ ಒಂದು ವಿಚಾರದ ಬಗ್ಗೆಯೇ, ಆದರೆ ಇದು ಯಾವುದೇ ವ್ಯಕ್ತಿಯನ್ನ ಗುರಿಯಾಗಿಸಬೇಕು ಅನ್ನುವ ಉದ್ದೇಶ ಹೊಂದಿಲ್ಲ.

ಮೊದಲೆಲ್ಲಾ ಹೆಣ್ಣು ಹೆತ್ತರೆ ಕೊರಗುವಜನ ಈಗ ಗಂಡು ಇದ್ದರೆ ಕೊರಗುವಂತಾಗಿದೆ ನಮ್ಮಲ್ಲಿ, ಯಾಕೆಂದರೆ ನೀವು ನಮ್ಮ ಮಲೆನಾಡ ಬಾಗದವರಾದ್ರೆ ನಿಮಗೆ ಗೊತ್ತೇ ಇದೆ ಅಲ್ಲಿ ಬ್ರಾಹ್ಮಣ ಹುಡುಗಿಯರಿಗೆ ಫುಲ್ ಡಿಮ್ಯಾಂಡ್ ಇದೆ ಮದುವೆಯ ವಿಚಾರಕ್ಕೆ ಬಂದರೆ ಅಂತ. ಇಲ್ಲಿ ವಿಚಾರ ಅಂದ್ರೆ ಅದನ್ನ ದುರುಪಯೋಗ ಪಡಿಸಿಕೊಳ್ಳುವ ಅಥವಾ ಅದೇ ವಿಚಾರವನ್ನು ಇಟ್ಟುಕೊಂಡು ನಮ್ಮೂರಿನ ಹುಡುಗರನ್ನ ಅವಮಾನ ಮಾಡುವ ಕೆಲವು ಘಟನೆಗಳು.

“ನಮ್ಮ ಹುಡ್ಗಿಗೆ ಪುರೋಹಿತರು, ಜಮೀನು ಇರೋರು,ಇಲ್ಲಿ ಇರೋರು ಅಗಲ್ವಂತೆ, ಅವಳಿಗೆ ಬೆಂಗಳೂರಿನ ಸಾಫ್ಟ್ ವೇರ್ ವರ ಬೇಕಂತೆ” ಇದು ಇಲ್ಲಿಯ ಕನ್ಯಾ ಪಿತೃಗಳು ಒಬ್ಬ ಹುಡುಗ ಜಾತಕ ಹಿಡ್ಕೋಂಡು ಹುಡ್ಗಿಯ ಮನೆಗೆ ಹೋದರೆ ಕೇಳಿಬರುವ ನುಡಿ…. ಕೊನೆಗೆ ಹುಡುಗಿಯ ಮುಖವನ್ನೂ ಕೂಡ ನೋಡೋಕೆ ಬಿಡದೆ ಅಥವಾ ಅವಳ ಅಭಿಪ್ರಾಯ ಏನಿದೆ ಅನ್ನುವದನ್ನೂ ವಿಚಾರಿಸದೆ ಆಡುವ ಮಾತುಗಳು ಇವು, ಅಂತ ನನಗೆ ಅನ್ನಿಸುತ್ತೆ.  ನಮ್ಮಲ್ಲಿ ವೇದ ವಿದ್ವಾಂಸರಿದ್ದಾರೆ, ವಿದ್ಯೆಗೆ ಇನ್ನೊಂದು ಹೆಸರು ನಮ್ಮೂರು, ಅಷ್ಟು ಬುದ್ದಿವಂತ ಪೂರೋಹಿತನಾದರೇನು,ಅಥವಾ ಬೇರೆ ಉದ್ಯೋಗದಲ್ಲಿದ್ದರೇನು ಹುಡುಗ ಒಳ್ಳೆಯವನಾದರೆ ತನ್ನ ಮಡದಿಯನ್ನ ಚೆನ್ನಾಗಿಯೇ ಸಾಕುತ್ತಾನೆ ಅನ್ನುವ ಬರವಸೆ ನಮ್ಮವರಿಗೆಕಿಲ್ಲ?

ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಕೆಲವರು ಜಾತಕವನ್ನು ನೋಡಿ ನಂತರ ಕೇಳಿದರೆ “ಇಲ್ಲ ನಮ್ಮ ಹುಡುಗಿಗೆ ಮತ್ತೊಬ್ಬ ಗೊತ್ತಾಗಿದ್ದಾನೆ ಅವನ ಬಳಿ 3 -4 ಪೆಟ್ರೋಲ್ ಬಂಕ್ ಇದೆ 10 ಎಕರೆ ಅಡಿಕೆ ತೋಟ ಇದೆ ಆದ್ದರಿಂದ ಆವ್ರಿಗೆ ಕೊಟ್ಟು ಮದ್ವೆ ಮಾಡ್ತೀವಿ” ಅಂತ ಹೇಳೋದು ಕಂಡು ಬರ್ತಿದೆ, ನಮ್ಮ ಹುಡುಗರ ಬಳಿ ಪೆಟ್ರೋಲ್ ಬಂಕ್ ಇರ್ದೆ ಇದ್ರೆ ಏನು ಚೆನ್ನಾಗಿರೋ ಸಂಸ್ಕೃತಿ, ಜೀವನದ ಅನುಭವ, ಬುದ್ದಿವಂತಿಕೆ ಇದೆ ಅನ್ನೋದನ್ನ ಮರ್ತು ಮಾತಾಡೋ ಹಾಗಿದೆ ಇದು!! ಅದು ಅಲ್ಲದೆ “ಇಲ್ಲ ಹುಡ್ಗಿಗೆ ಬೇರೆ ಕಡೆ ಗಂಡು ಗೊತ್ತಾಗಿದೆ ದಯವಿಟ್ಟು ಕ್ಷಮಿಸಿ” ಇಷ್ಟು ಮಾತ್ರ ಹೇಳಬಹುದಲ್ಲ? ಯಾಕೆ ಆ ಹೊಸ ಹುಡುಗನ ಆಸ್ತಿವಿಚಾರ ನಮಗೆ? ನಿಮ್ಮ ಹುಡುಗನ ಬಳಿ ಅಷ್ಟು ಆಸ್ತಿ ಇಲ್ಲ ಅನ್ನುವ ನೇರ ಆಪಾದನೆಯೇ?

ಇನ್ನೂ ಕೆಟ್ಟ ನಡವಳಿಕೆ ಅಂದರೆ “ನನ್ನ ಮಗಳನ್ನು ಕೊಟ್ಟು ಮದುವೆ ಮಾಡಲು ಅಡ್ಡಿ ಇಲ್ಲ ನಮಗೆ 2 ಲಕ್ಷದಷ್ಟು ಸಾಲ ಇದೆ ಅದನ್ನು ತೀರಿಸಿ ಆಮೇಲೆ ನೋಡೋಣ” ಅಥವಾ ನಮಗೆ ಇಷ್ಟು ಹಣಕೊಟ್ಟು ಕರ್ಚು ನೀವೇ ಬರಿಸಿ ಮದುವೆ ಮಾಡಿಕೊಳ್ಳಿ ಅನ್ನುವುದು, ಇದೆಂಥಾ ವಿಪರ್ಯಾಸ ಸ್ನೇಹಿತರೇ? ಹುಡುಗಿಯ ಮದುವೆಯೋ ಅಥವಾ ಅವರ ದೊಡ್ಡವರಿಂದ ಹುಡುಗಿಯ…..ಸೇಲ್? ಹೀಗೆ ಬರಿಯೋದಕ್ಕೂ ನನಗೆ ತುಂಬಾ ಹಿಂಸೆ ಆಗ್ತಿದೆ.

ಅದು ಅಲ್ಲದೆ ವಿಜಾತಿಯರನ್ನ ಮದುವೆಮಾಡಿಕೊಂಡು ಬಂದರೆ ಮೂಗು ಮುರಿಯುವ ಜನರಿದ್ದಾರೆ ನಮ್ಮಲ್ಲಿ . ಇದು ಯಾವ ರೀತಿಯ ಸಂಸ್ಕೃತಿ, ಇಲ್ಲಿಯ ಹುಡುಗಿಯರನ್ನು ಕೊಟ್ಟು ಮದುವೆ ಮಾಡಲ್ಲ ಬೇರೆಯವರನ್ನ ಮದುವೆ ಮಾಡಿಕೊಂಡು ಬಂದರೆ ಸಹಿಸಲ್ಲ, ಛೇ ಇದೆಂಥಾ ರಾಜಕೀಯ? ಇನ್ನೂ ಕೆಲವರಂತೂ ಹುಡುಗಿ ಮನೆಯಲ್ಲಿದ್ದಾಳೆ ಅಂದರೆ ಅಥವಾ ಅವಳ ಜಾತಕ ಕೇಳಿಕೊಂಡು ಬಂದರೆ ಉಪಚಾರಿಸುವ ರೀತಿಯೇ ಬೇರೆ !!

ಹಾಗೆಂದು ನಮ್ಮ ಹುಡುಗರ ಪೋಷಕರೂ ಕೂಡ ಕಮ್ಮಿ ಇಲ್ಲ ಅವರು ಕನ್ಯಾಪಿತೃಗಳು ಕೇಳಿದ ಹಣ ಕೊಡಲು ತಯಾರಿದ್ದಾರೆ, ಆದರೆ ಅದು ನಮ್ಮ ಮಗನಿಗೆ ಮದುವೆ ಆಗುತ್ತಿಲ್ಲ ಅನ್ನುವ ನೋವಿನಿಂದ ಅಥವಾ ಹುಡುಗಿಯರು ಕಡಿಮೆ ಇದ್ದಾರೆ ಅನ್ನುವ ಅನಿವಾರ್ಯ ಕಾರಣಗಳಿಗೆ ಒಪ್ಪಿರುತ್ತಾರೆ ಅನ್ನಿಸುತ್ತೆ ನನಗೆ.

ನಮ್ಮಲ್ಲಿ ಸ್ವಂತ ಉದ್ಯೋಗ ಮಾಡಿಕೊಂಡು, ಕೆಲವರು ಅಡಿಕೆಗೆ ರೋಗಬಂದ ಹಿನ್ನೆಲೆಯಲ್ಲಿ ಕಾಳುಮೆಣಸು , ಏಲಕ್ಕಿ, ಬಾಳೆ, ಕಾಫಿ,ಬೆಳದು ಒಳ್ಳೆಯ ಆರ್ಥಿಕ ಸ್ಥಾನಮಾನಗಳನ್ನ  ಹೊಂದಿದವರಿದ್ದಾರೆ, ಡಿಗ್ರಿ ಓದಿದ್ದಾರೆ, ಹಾಗಾದ್ರೆ  ನಮ್ಮ ಹುಡುಗರು ಯಾವುದರಲ್ಲಿ ಕಡಿಮೆ ಇದ್ದಾರೆ? ಅವರು ಕೃಷಿಯನ್ನ ಅವಲಂಬಿಸಿಕೊಂಡು ತಮ್ಮ ತಂದೆ ತಾಯಿಗಳೊಂದಿಗೆ ಇರುವುದು ತಪ್ಪೇ? ಪುರೋಹಿತರ ಪಾಂಡಿತ್ಯ ನಮ್ಮ ಸಾಫ್ಟ್ ವೇರ್ ಜನಗಳಿಗಿಂತ ಹೆಚ್ಚಿನದು ಅನ್ನುವುದು ನನ್ನ ಭಾವನೆ, ಪಾಂಡಿತ್ಯಕ್ಕೆ  ಬೆಲೆಯಿಲ್ಲವೇ ? ತಮ್ಮ ಮಗಳು ಹಣವಂತರ ಬಳಿಮಾತ್ರ ಚೆನ್ನಾಗಿ ಇರುತ್ತಾಳೆ ಅನ್ನುವುದು ಯಾವ ರೀತಿಯ ನಂಬಿಕೆ?

ವರದಕ್ಷಿಣೆ ಬೇಡ, ಕೊನೆಯಹೊತ್ತಿಗೆ ಅತಿ ಸರಳವಾಗಿ ಮದುವೆ ಮಾಡಿಕೊಡಲಾಗದ್ದಿರೂ ಬೇಡ ಹುಡುಗನ ಕಡೆಯಿಂದಲೇ  ಮದುವೆ ಕರ್ಚು ಹಾಕಿಸಿ ಕೊಳ್ಳಲಿ ಆದರೆ ವಧು ದಕ್ಸಿಣೆಯಾಗಿ ಲಕ್ಷ ಹಣ ದ ಬೇಡಿಕೆ, ಇದು ಸರಿಯೇ? ಮಕ್ಕಳನ್ನು ದುಡ್ಡಿಗಾಗಿ ಸಾಕಿದ್ದಾರೆಯೇ?  ಅಥವಾ ತಮ್ಮ ಮಗಳು ನಮ್ಮ ಊರಿನಲ್ಲೇ ಇರುವುದು ಇಷ್ಟವಿಲ್ಲವೇ?

ನನ್ನ ಸವಿನಯ ಮನವಿ ಇಷ್ಟೇ, ಹುಡುಗ ಚೆನ್ನಾಗಿದ್ದು , ಸಾಕುವ ತಾಕತ್ತಿದ್ದು, ಉತ್ತಮ ನಡವಳಿಕೆ, ಸಂಸ್ಕೃತಿ ಇದ್ದರೆ ಅವನ ಪೂರ್ವಾಪರಗಳನ್ನ ವಿಮರ್ಶಿಶಿ ಸರಿ ಕಂಡಲ್ಲಿ ಹುಡುಗಿಯ ಅಭಿಪ್ರಾಯವನ್ನು ಅರಿತು, ಮುಂದೆ ನಿಂತು ಮದುವೆ ಮಾಡಿಕೊಡುವ ಕರುಣೆ ತೋರಿಸಿ, ಹುಡುಗಿಯರೂ ಅಷ್ಟೇ ಕಾಣದ ಊರಿನ ದುಡ್ಡಿನ ಗಂಡನ ಕನಸನ್ನೊಮ್ಮೆ ಬದಿಗೊತ್ತಿ ನಮ್ಮ ಹುಡುಗರ ಕಡೆ ಒಮ್ಮೆ ನೋಡಿ ವಿಮರ್ಶಿಸಿ ನಿರ್ಧಾರ ಕೈಗೊಳ್ಳುವ ಮನಸು ಮಾಡಿ, ನಮ್ಮ ಸಂಸ್ಕೃತಿ ಉಳಿಯಲಿ , ಮಲೆನಾಡ ಬ್ರಾಹ್ಮಣ ಹುಡುಗರಿಗೆ ಮದುವೆಯ ಯೋಗ ಕೂಡಿಬರಲಿ ಬಾಳು ಹಸನಾಗಲಿ. (ನಿಮ್ಮ ನೇರವಾದ ಅಭಿಪ್ರಾಯಕ್ಕೆ ಸದಾ ನನ್ನ ಸ್ವಾಗತವಿದೆ ನಿಮ್ಮ ಕಾಮೆಂಟ್ಸ್ ಗಳೂ ಹರಿದು ಬರಲಿ )

ಏಪ್ರಿಲ್, ಮೇ……

ಏಪ್ರಿಲ್ 14, 2011

ಗೆಳೆಯರೇ  ಮತ್ತೆ ಏನೋ ಮಾತಾಡಬೇಕು, ನಿಮ್ಮೊಂದಿಗೆ ಕೆಲಕಾಲ ಹರಟೆಹೊಡೆದು ನೀವೆಲ್ಲ ಹೇಗಿದ್ದೀರಿ ಅಂತ ನೋಡಬೇಕು ಅಂತ ಮನಸಾಗಿದೆ ಅದಕ್ಕಾಗಿ ಏನಾದ್ರೂ ವಿಷ್ಯಬೇಕಲ್ಲ ಸೋ ಇವತ್ತು ಮತ್ತೆ ಬಂದಿದೀನಿ, ನಿಮ್ಗೆಲ್ಲಾ ಗೊತ್ತಿದೆ ನಾನು 2 ಪಾಸು 3 ಅನ್ನೋ ಆರ್ಟಿಕಲ್ ಬರ್ದಿದ್ದೆ ನೀವು ಓದಿದ್ರಿ ಅದೇ ತರದ್ದು, ಆದ್ರೆ ಈಗ ಶಾಲೆಗೆ ರಜೆ ಬಂದಿದ್ಯಲ್ಲಾ………..ಓದಿ, ನನ್ನೊಂದಿಗೆ ನಿಮ್ಮೆಲ್ಲರ ಬಾಲ್ಯಕ್ಕೆ ಹೋಗಿ ಸವಿ ನೆನಪಗಳನ್ನ ಕೆದಕೋಣ ಬನ್ನಿ..

ಶಾಲೆಗೆ ರಜೆ ಬಂತು ಅಂದ್ರೆ ಆದ್ರ ಅರ್ಥ ಇನ್ನೂ 2 ತಿಂಗಳು ಪುಸ್ತಕ ಅಥವಾ ಓದಿಗೆ ಸಂಬಂದಿಸಿದ ವಿಚಾರಗಳನ್ನು ದೂರವಿಡಲೇಬೇಕು ಅನ್ನುವ ತೀರ್ಮಾನ ಮಾಡಿ ಸಮಾಜ ಸೇವೆಗೆ 🙂 ಸಜ್ಜಾಗುತ್ತಿದ್ದೆವು ಅಲ್ವಾ? ಎಷ್ಟು ಸೂಪರ್ ಅಲ್ವಾ ಆದಿನಗಳು ?

ಮಾವಿನ ಕಾಯಿಗೋಸ್ಕರ ಗೌಡರ ಮನೆ ದಿಂಡಿನ ಮಾವಿನ ಮರ ಹತ್ತಿ ಕಾಯಿ ಕಿತ್ತು, ಅವ್ರ ಹತ್ರ ಬೈಸ್ಕೋಂಡು ಬಂದ್ರೂ ಸಹ ತಂದ ಮಾವಿನ ಕಾಯಿಗೆ ಉಪ್ಪು ಸೇರಿಸಿ ತಿಂದರೆ ಬೈಸ್ಕೊಂಡಿದ್ದೇಲಾ ಅರ್ಧ ನಿಮಿಷದಲ್ಲಿ ಮಾಯ!!

ಗೇರು ಹಣ್ಣು ತಿಂದು ರಾತ್ರಿಯಲ್ಲಾ ಗಂಟಲು ಕೆರೆದು ಕೆಮ್ಮು ಬಂದ್ರೂ ಮರುದಿನ ಆದೇ ಗೇರುಮರ ನಮಗೋಸ್ಕರ ಕಾಯ್ತಾ ಇರ್ತಿತ್ತು, “ಇವತ್ತೂ ಗೇರು ಹಣ್ಣು ತಿನ್ನಿ ರಾತ್ರಿ ಕೆಮ್ಮೀ , ನಾನು ಎಲ್ಲರನ್ನೂ ಒದ್ದು ಅಂಗಳದಲ್ಲಿ ಮಲಗಿಸ್ತಿನಿ” ಅಂತ ಅಜ್ಜಿ ಹೇಳಿದ್ರೆ ನಾವು ಒಬ್ರ ಮೇಲೆ ಮತ್ತೊಬ್ರೂ ಚಾಡಿ ಹೇಳ್ತೀದ್ವಿ “ನಾನು ಏನೂ ತಿಂದಿಲ್ಲ ಇವ್ನೆ ಜಾಸ್ತಿ ತಿಂದಿದಾನೆ ಇವತ್ತು” ಅಂತ ಅಲ್ವಾ?

ತೋಟದಲ್ಲಿ ನೆರಳಿಗಾಗಿ ಬೆಳೆಸಿದ ಕಲ್ಲುಬಾಳೆ, ಕೊನೆ ಬಿಟ್ರೆ ಅದು ನಮ್ಮ ಗ್ರೂಪ್ ನ ಕೆಲವರಿಗೆ ಮಾತ್ರ ಗೊತ್ತಾಗ್ತಾ ಇತ್ತು, ತಕ್ಷಣ ತೋಟಕ್ಕೆ ಕತ್ತಿ ತಗೊಂಡು ಹೊದ್ವಿ ಅಂದ್ರೆ ಆ ಬಾಳೆಕೊನೆ ಜೊತೆಗೆ ಬಾಳೆ ಮರನೇ ಕಡಿಯೋದು, ಕೊನೆಯನ್ನ ಅಡಿಕೆ ಸೋಗೆಒಟ್ಳು ಸಂದಿ ಕದ್ದು ಹಾಕೋದು, ಅದು ಹಣ್ಣಾಗೋತನಗಕ ಪ್ರತಿದಿನ ಹೋಗಿ ನೋಡೋದು ಹಣ್ಣಾಗಿದ್ದೆ ತಡ ನಮ್ಮ ತಂಡದ ಕೆಲವರಿಗೆ ಮಾತ್ರ ಸುದ್ದಿ ಮುಟ್ಟಿಸಿ ಪೂರಾ ತಿಂದು ಬೇರೆಯವರಿಗೆ ಸಿಟ್ಟುಬರಿಸೋದು, ಹೊಟ್ಟೆ ಉರಿಸೋದು, ಹೊಟ್ಟೆ ನೋವು ಮಾಡ್ಕೊಳ್ಳೋದು….

ಹತ್ತಿರದ ಪ್ಯಾರಲೆ ಮರಕ್ಕೆ ನಾವು ದಿನ ಹೋಗಿ ಬಂದು ಆದ್ರಲ್ಲಿರೋ ಕಡ್ಡೆ, ಕಾಯಿಯಲ್ಲ ತೆರೆದು ಹಾಕಿಲ್ಲಾ ಅಂದ್ರೆ ಅವತ್ತು ಸರಿಯಾಗಿ ನಿದ್ದೆ ಬರ್ತಿರ್ಲಿಲ್ವೇನೋ ಅಲ್ವಾ?

ಅಜ್ಜ ಎಲ್ಲರಿಗೂ ಮಾರಿ ಬಿಸ್ಕೆಟ್ ತಂದಿದಾರೆ ಅಂದ್ರೆ ಅವತ್ತು ಅಜ್ಜನ ಮೇಲೆ ಇನ್ನಿಲ್ಲದ ಪ್ರೀತಿ, ಹತ್ತಿರದ ಶಾಲೆ ಬಯಲ್ಲಲ್ಲಿ  ಮರಕೋತಿ ಆಡೋದು ದಿನಕ್ಕೆ ಒಬ್ಬರಂತೆ ಸರದಿಯಲ್ಲಿ ಕೈ,ಕಾಲು ನೋವು ಮಾಡಿಕೊಂಡು, ಮನೆಗೆಬಂದು ಏನು ಆಗಿಲ್ಲ ಅಂತ ತೋರಿಸಿಕೊಳ್ಳೋದು……

ಇನ್ನೂ ಒಂದು ಹೆಜ್ಜೆ ಮುಂದು ಹೋಗಿ, ಕಾಡಿಗೆ ಹೋಗೋದು, ಅಲ್ಲಿ ಹಲಸಿನ ಹಣ್ಣು ಕಿತ್ತು ಅಲ್ಲೇ ತಿಂದು ಕೈಎಲ್ಲಾ ಮೇಣ ಮಾಡಿಕೊಂಡು ಬಂದ್ರೆ ನಮಗಾಗಿ ಅಪ್ಪನ ಕೋಲು, ಅಮ್ಮನ ಬೈಗುಳಗಳು ಕಾಯುತ್ತಾ ಇರ್ತಿದ್ವು.

ನೆನಪಿದ್ಯಾ? ಹೆಬ್ಬಲಸು, ಹೆಬ್ಬಲಿಗೆ, ಕಲ್ಲುಸಂಪಿಗೆ, ಕರ್ಜಿಕಾಯಿ, ಕಾಡು ನೇರಳೆ, ರಂಜದ ಹಣ್ಣು ಕೆಲವು ಕಾಟು ಮಾವು, ಇವೆಲ್ಲ ನಮಗೋಸ್ಕರ ಬೇಸಿಗೆ ರಜದಲ್ಲೇ ಹಣ್ಣು ಬಿಡುತ್ತಿದ್ದವು, ಅದನ್ನ ತಿಂದು ನಾವು ಎಷ್ಟು ಖುಷಿ ಪಡ್ತೀದ್ವಿ !!

ದಿನ ನಮ್ಮ ಗ್ರೂಪ್ ಅಲ್ಲಿ ಒಂದಲ್ಲಾ ಒಂದು ಜಗಳ, ಆಮೇಲೆ ಅರ್ಧ ಘಂಟೆಲಿ ಯೆಲ್ಲಾ ಸಂಧಾನ, ಸಮಧಾನ, ಆದ್ರ ಮದ್ಯದಲ್ಲಿ ಅವನ ಕಡೆ ನಾಲ್ಕು ಜನ ಇವನ ಕಡೆ ನಾಲ್ಕುಜನ, ಅವನ ಗ್ರೂಪ್ ಮೆಂಬರ್ಸ್ ಹತ್ರ ಇವರ ಗ್ರೂಪ್ ನವರು ಮಾತಾಡಲ್ಲ!!

ಮನೆ ಟಿ‌ವಿ ಲಿ ಬರೀ ದೂರದರ್ಶನ್ ಬರುತ್ತೆ ಅಂತ ಗೌಡ್ರ ಮನೆ ಗೆ ಹೋಗಿ ಸ್ವಲ್ಪ ಉದಯ ಟಿ‌ವಿ ನೋಡಿದ್ದು, ನೋಡ್ತಾ ನೋಡ್ತಾ ಟೈಮ್ ಹೋಗಿದ್ದೆ ಗೊತ್ತಾಗ್ದೆ ರಾತ್ರಿ ೮ ಘಂಟೆಗೆ ಮನೆಗೆ ಬಂದ್ರೆ ಅಪ್ಪ ನ ಕೋಲು ನಮ್ಮ ಬೆನ್ನಿನಮೇಲೆ ಬಿಸಿ ಬಿಸಿ ಬಾಸುಂಡೆ ಬಾರ್ಸಿದ್ವು,

ಅಡಿಕೆ ಸೋಗೆ ತಂದು ಅದರಲ್ಲಿ ಆಟದ ಮನೆ ಕಟ್ಟಿದ್ದು, ಅದರೊಳಗೆ ಗರಟಗಳನ್ನು ತಂದು ಮಣ್ಣಲ್ಲೆ ಅಡಿಗೆ ಮಾಡಿದ್ದು, ಗದ್ದೆಯ ಕೆನೆ ಮಣ್ಣಲ್ಲಿ ಶಿವಲಿಂಗ ಮಾಡಿದ್ದು, ಹಾಗೆ ಪ್ರತಿದಿನ ಸಂಜೆ ಕ್ರಿಕೆಟ್ ಆಟ, ಮೈ ಕೈ ನೋವು…ಎಷ್ಟು ಕೆಲ್ಸ …ಊಪ್ಸ್!

ವಿಡಿಯೋ ಗೇಮ್ ಕೊಡಿಸಿದ್ರೆ ಅದರ ಒಳಗಡೆ ಏನಿದೆ? ಅಂತ ಎಂಜಿನಿಯರ್ಗಳತರ ಅದನ್ನ ಬಿಚ್ಚಿ ನೋಡಿ ಆಮೇಲೆ ಅದನ್ನ ಮತ್ತೆ ಜೋಡಿಸಿದ್ರೆ ಏನು ಬರ್ತಾ ಇಲ್ಲ!! ಅದು ಹಾಳಾಗಿದೆ ಅಂತ ಗೊತ್ತಾದ್ರೆ ಅಪ್ಪ ಬೈತಾರೆ ಅಂತ ಅದನ್ನ ಮುಚ್ಚಿ ಹಾಕಿದ್ದು, ಸೂಪರ್ ಆಗಿತ್ತು….

ಅಜ್ಜಿ ಮನೆಗೆ ನಾಳೆ ಅಪ್ಪ ಕರ್ಕೊ೦ಡು ಹೋಗ್ತಾರೆ, ಅಲ್ಲೇ ಇನ್ನೂ ೧ ತಿಂಗಳು ಇರೋದು ಅಂತ ತೀರ್ಮಾನ ಆಗ್ತಿದ್ದ ಹಾಗೆ ಅಲ್ಲಿಗೆ ನಮ್ಮ ಇತರ ಮಾವನ ಮಕ್ಕಳು ಬಂದಿರ್ತಿದ್ರು  ಅನ್ನೋದನ್ನ ಅರ್ಥ ಮಾಡಿಕೊಂಡ ನಾವು ಎಲ್ಲಾ ರೀತಿಯ ಪ್ಲಾನುಗಳನ್ನ ಮಾಡಿಕೊಂಡು ಸೀದಾ ಜಯಪುರ ಬುಸ್ಸು ಹತ್ತಿ ಕೂಳೂರ್ ಹತ್ರ ಮಡುವಿನಕೆರೆ ಕ್ರಾಸ್ ಅಲ್ಲಿ ಇಳ್ಕೊಂಡು ಅಜ್ಜಿ ಮನೆ ಗೇಟ್ ಎದುರ್ಗಡೆ ಹೋಗಿ ನೋಡಿದ್ರೆ ಅಜ್ಜ, ಅಜ್ಜಿ ಎಲ್ಲಾ ನಮ್ಮ ಬರುವಿಕೆಗಾಗಿಯೇ ವರ್ಷಗಳ ಕಾಲ ಕಾದಿದ್ರೆನೋ ಅನ್ನೋವಷ್ಟು ಪ್ರೀತಿಯಿಂದ ಬರಮಾಡಿಕೊಳ್ತಿದ್ರು…..

ಮತ್ತೆ ಸ್ಕೂಲಿಗೆ ಹೋಗ್ಬೇಕು ಅಂದ್ರೆ ಕ್ಯಾಮೆಲ್ ಜಾಮಿಟ್ರಿನೇ ಬೇಕು ಅಂತ ಹಟ, ಹೊಸ ಚಪ್ಪಲಿ, ಹೊಸ ಬ್ಯಾಗು, ಹೊಸ ಪುಸ್ತಕಗಳು, ವಾವ್…..ವರ್ಷ ವರ್ಷ ಹೊಸಾದೂ!!!!

ಈಗಿನ ಸಮ್ಮರ್ ಕ್ಯಾಂಪುಗಳನ್ನ ಮೀರಿಸಿ ನಿಲ್ತಿತ್ತು ಅಲ್ವಾ ನಮ್ಮ ಬೇಸಿಗೆ ರಜೆ?  ಹಾಗೆ ಮತ್ತೆ ಕಳೆದು ಹೋದ ಆ ದಿನಗಳು ಮತ್ತೆ ಬಂದರೆ ಅದೆಷ್ಟು ಚೆಂದ……ಹಾಗೆ ಚಿರನಿದ್ದೆಗೆ ಜಾರಿದ ಅಜ್ಜ ಅಜ್ಜಿ ಕೂಡ ವಾಪಸ್ ಬ೦ದಿದ್ದರೆ…ಎಲ್ಲಾ ಇಂದು ನೆನಪು ಮಾತ್ರ… ನಿಮಗೂ ನಿಮ್ಮ ಬೇಸಿಗೆ ರಜೆ ನೆನಪಾಯಿತು ಅಲ್ವಾ?  ಮತ್ತೊಮ್ಮೆ ಬರ್ತೀನಿ ನಿಮಗೆ ಎನನ್ನಿಸ್ತು  ಒಂದು ಕಾಮೆಂಟ್ ಹಾಕಿ ಇಲ್ಲಿ  🙂

ನಮ್ಮೂರು ಈಗ!!

ಫೆಬ್ರವರಿ 28, 2011

ಮತ್ತೆ ಎನ್ ಸಮಾಚಾರ? ಹೇಗಿದ್ದೀರಿ? ಈ ಸಲಾನು ತುಂಬಾ ದಿನಗಳಾದಮೇಲೆ ಬರೀತಾ ಇದೀನಿ ಅಂತ ಸಿಟ್ಟು ಇಲ್ಲ ತಾನೇ? ನಂಗೆ ಗೊತ್ತು  ನೀವು ನನ್ನ ಕ್ಲೋಸ್ ಫ್ರೆಂಡು ಅಂತ…….. ಆದ್ರೆ ಈಸಲ ನಾನು ತುಂಬಾ ಸೀರಿಯಸ್ ಮ್ಯಾಟರ್ ನೇ ಡಿಸ್ಕಸ್ಸ್ ಮಾಡೋಕೆ ಬಂದಿದೀನಿ…….

ಮೊನ್ನೆ ಊರಿಗೆ ಹೋಗಿದ್ದೆ ಮತ್ತೆ ನಿದಾನವಾಗಿ ಶುರು ಆಗ್ತಿರೋ ಶಕೆ, ಹೂ ಬಿಟ್ಟ ಮಾವಿನಮರಗಳು,  ಹಸಿರುಟ್ಟ ಹಲಸು, ಚಳಿಇಂದ ಕೊಡವಿಕೊಂಡು ಮೇಲೆದ್ದ ನೆನಪುಗಳನ್ನು ಒಮ್ಮೆ ಮುದ್ದಿಸುವ ಬಯಕೆ ಇಂದಹೋಗಿದ್ದು…ಆದ್ರೆ ತುಂಬಾ ಬೇಜಾರು ಆಗುವಂತ ವಿಷ್ಯಗಳು ನಮ್ಮ ಮಲೆನಾಡಲ್ಲಿ ನೆಡಿತಿವೆ ಅಂತ ಕೇಳಿ ಮನಸಿಗೆ ತುಂಬಾನೇ ನೋವಾಯಿತು..

ನಮ್ಮ ಯಡಿಯೂರಪ್ಪ ನವರ ಸರ್ಕಾರ ಕೊಟ್ಟೆ(ಸಾರಾಯಿ ) ಬ್ಯಾನ್ ಮಾಡಿರೋದು ನಿಮ್ಗೆ ಗೊತ್ತಿರೋ ವಿಚಾರ ಅಲ್ವಾ? ಆದ್ರೆ ನಮ್ಮ ಮಲೆನಾಡಲ್ಲಿ “ಕಳ್ಳ ಬಟ್ಟಿ ಯನ್ನತಯಾರ್ಸೋಕೆ ಅಂತ ಹೊಸ ಕಂಪನಿಗಳು ಶುರುವಾಗಿದೆ  ಗೊತ್ತ? ……ಮಲೆನಾಡ ಮಡಿಲಲ್ಲಿ ಬಟ್ಟಿ ಸರಾಯಿಯ ಕಮಟು ವಾಸನೆ..

ಅದನ್ನ ಮತ್ತೆ ಯಾರು ಅಲ್ಲ ಇಲ್ಲಿನ ಲೋಕಲ್ ಜನಗಳೇ ಮಾಡಿ ಕದ್ದು ಮಾರಾಟ ಮಾಡ್ತಾರೆ ಅಂದ್ರೆ ಎಷ್ಟು ಬೇಜಾರು ಆಗುತ್ತೆ ಅಲ್ವಾ? ಎಲ್ಲೋ ಇರುವ ಕೊಳಕು ಪುಡಿ ಕಾಸಿನ ಆಸೆಗೆಬಿದ್ದು ನನ್ನ ಮಲೆನಾಡ ಜನ ಇಂತ ನೀಚ ಕೆಲಸಕ್ಕೆ ಕೈ ಹಾಕ್ತಾರೆ ಅಂತ ನಾನು ಕನಸು ಮನಸಿನಲ್ಲೂ ಎಣಿಸಿರಲಿಲ್ಲ!!

ಇದರಿಂದಲೇ  ನಮ್ಮಲ್ಲಿ ಈಗ ಬೆಲ್ಲದ ಬೆಲೆ ತೀರ ಹೆಚ್ಚಿರುವುದು ಅನ್ನೋದು ಸತ್ಯ ಅಂತ ನಮ್ಮೂರಲ್ಲಿ ಜನ ಮಾತಾಡ್ತಾರೆ, ಅಲ್ಲಲ್ಲಿ ಸಿಗೋ ಕಪ್ಪು ತುಳಸಿಕಟ್ಟೆ ಅಚ್ಚು ಅನ್ನೋ ಬೆಲ್ಲವನ್ನು ತಂದು ನೀರಲ್ಲಿ ವಾರಗಟ್ಟಲೆ  ನೆನಸಿ ಅದಕ್ಕೆ ನವಸಾಗರ (ನ್ಯಾಯವಾಗಿ ನೋಡಿದ್ರೆ ನವಸಾಗರ ಅಂದ್ರೆ ಅಂತ ದೊಡ್ಡ ವಸ್ತುವೇನು ಅಲ್ಲ ಅದು ನಾವು ನೀವು ನೋಡಿರೋ ಸಾಲ್ದರಿಂಗ್ ಪೇಸ್ಟ್ !! ಅದೇನು ಅಂತ ಕೇಳ್ತೀರಾ? ಅದು ಸಿಂಪಲ್ಲು ಯಾವುದಾದ್ರು ಎಲೆಕ್ಟ್ರಾನಿಕ್ ಶಾಪ್ ಅಲ್ಲಿ ನೋಡಿ ಸಾಲ್ಡರ್ ಮಾಡಬೇಕಾದ ಸರ್ಕ್ಯೂಟ್ ತಳಬಾಗಕ್ಕೆ ಹಚ್ಚೋ ಒಂದು ಪೇಸ್ಟ್ ನಂತಹ ಪದಾರ್ಥ ಅದೇ ನವಸಾಗರ !!!) ಅನ್ನೋ ಒಂದು ವಸ್ತುವನ್ನು ಬೆರಸಿ, ಮಂಗನ ಬಳ್ಳಿಯನ್ನು  ಕುಟ್ಟಿ ಹಾಕಿ  ಬಟ್ಟಿ ಇಳಿಸಿ ಅದನ್ನ ಕದ್ದು ಬೇಕಾದ ಜಾಗಗಳಿಗೆ ಸಾಗಿಸಿ ಅಲ್ಲಿಂದ ಅದನ್ನು ಮಾರಾಟ ಮಾಡುವ ಅನೇಕ ಜಾಲಗಳು ತಲೆಎತ್ತಿರುವುದು ವಿಷಾದದ ಸಂಗತಿ, ಅದನ್ನ ಮಟ್ಟ ಹಾಕುವುದರಲ್ಲಿ ನಮ್ಮ ಪೋಲಿಸಿನವರು ಕೂಡ ಹೆಚ್ಚಿನ ಶ್ರಮ ವಹಿಸಿ ಕೆಲಸ ಮಾಡುತ್ತಿರುವುದು ಕೂಡ ಪ್ರಶಂಸೆ ಗೆ ಅರ್ಹವಾದಂತ ವಿಚಾರ ಆದ್ರೆ……

ನಮ್ಮ ಮಲೆನಾಡಿನಲ್ಲಿ ಏರೀತಿಯ ಆಕ್ರಮಚಟುವಟಿಕೆಯೇ? ನಂಬಲು ಆಸಾದ್ಯ , ಅಸಹ್ಯ  …

ಶಾಂತಿ, ನೆಮ್ಮದಿ, ಸ್ವಚ್ಛಂದ ಪರಿಸರ, ಒಳ್ಳೆಯ ಸಂಸ್ಕೃತಿ ಅಂದ್ರೆ ಮಲೆನಾಡು, ಅನ್ನೋ ಮಾತಿತ್ತು, ಆದ್ರೆ ಈ ರೀತಿ ಆದ್ರೆ ಅದು ಎಸ್ಟು ದಿನ ಉಳಿದೀತು? ನೀವೇ ಹೇಳಿ. ಎಲ್ಲೋ ಉತ್ತರದ ಬಾಗದಲ್ಲಿ ಈ ರೀತಿ ಚಟುವಟಿಕೆಗಳು ನೆಡಿತಿವೆ ಅಂತ ಕೇಳಿದ್ವಿ ಆದ್ರೆ ನಮ್ಮ ಊರಲ್ಲೇ ಕಳ್ಳಾರಿದಾರೆ ಅಂದ್ರೆ ಯೋಚನೆ ಮಾಡಿ..ಹಾಲು ಕೂಡಿದ ಮಕ್ಕಳೇ ಬದುಕೊಲ್ಲ ಇನ್ನೂ ಕಳ್ಳಬಟ್ಟಿ …..ಛೇ!! ಇದೆಂಥಾ ದುರಾಸೆ? “ಏನೇ ಆದ್ರೂ ಮೂರು ಹೊತ್ತು ಗಂಜಿ ಕುಡಿಯೋಕೆ ದೇವರು ನಮ್ಗೆ ಯೇನು ಕಮ್ಮಿ ಮಾಡಿಲ್ಲ” ಅಂತ ಹೇಳ್ತಿದ್ದ ಜನ ಇಂತ ಹೇಸಿಗೆ ಕೆಲ್ಸಕ್ಕೆ ನಮ್ಮೂರಲ್ಲಿ ಕೈ ಹಾಕ್ತಾರೆ ಅಂದ್ರೆ ಎಂತ ಕಾಲ ಬಂತಪ್ಪ ಅನಿಸಲ್ವಾ?

ಹಾಗಂತ ನಾವು ಸರ್ಕಾರಕ್ಕೋ, ಸ್ಥಳೀಯ ಆಡಳಿತದಮೇಲೋ ಗೂಬೆ ಕೂರಿಸೋಕೆ ಆಗಲ್ಲ ಅನ್ಸುತ್ತೆ, ಅವ್ರು ಮಾಡೋ ಕೆಲ್ಸಗಳನ್ನು ಮಾಡ್ತಾನೆ ಇರ್ತಾರೆ ಆದ್ರೆ  ನಮ್ಮೊರಿನ ಮಾನ, ಗೌರವವನ್ನು ವುಳಿಸುವ ಮನಸ್ಸು ಬಟ್ಟಿ ಇಳಿಸುವ ಬಟ್ಟೀ ಮಕ್ಕಳಿಗೆ ಇರಬೇಕು ಅಲ್ವಾ?  ಅದನ್ನ ಕುಡಿಯೋಕೆ ಹೋಗೋರು ಕೂಡ ಏನು ಹೊರಗಿನವರಲ್ಲ ಸ್ಥಳೀಯ ಜನಗಳೆ. ಕುಡಿಯದೆ ಬದುಕು ಮಾಡೋದು ಅಸ್ಟು ಕಷ್ಟವೇ?

ನಮ್ಗೆಲ್ಲಾ ಗೊತ್ತು ಅಡಿಕೆಗೆ  ತುಂಡೆರೋಗ ಬಂದು ಸಂಪೂರ್ಣ ಹಾಳಾಗಿದೆ ಅದರಿಂದ ಜೀವನಸಾಗಿಸೋದು ಕಷ್ಟ ಅಂತಾನೂ ಗೊತ್ತಿದೆ, ಆದ್ರೆ  ಈ ರೀತಿಯ ಹೀನ ದಾರಿ ಹಿಡಿದು ತಮ್ಮ ಹೆಂಡತಿ ಮಕ್ಕಳನ್ನ ಸಾಕೋ ಪರಿಸ್ಥಿತಿ ಬಂದಿದ್ಯ? ಇದರಿಂದ ಎಸ್ಟು ಕೆಟ್ಟ ಹೆಸರು ಅಲ್ವಾ? ಹುಟ್ಟಿ ಬೆಳೆದ ನಾಡಿನ ಹೆಸರನ್ನೆ ಹಾಳು ಮಾಡುವ ನೀಚ ಬುದ್ದಿ ನಮ್ಮವರಿಗೆ ಎಲ್ಲಿಂದನಾದ್ರೂ ಬಂತು? ಇನ್ನೂ ಕೆಲವರಂತೂ ತಮ್ಮ ಓಟುಗಳನ್ನ ರಾಜಾ ರೋಷವಾಗಿ ಹಣಕ್ಕೋಸ್ಕರ ಮಾರಿಕೊಳ್ಳುತ್ತಿದಾರೆ ಅದೂ ಕೂಡ ಅಸ್ಟೆ ನೀಚ ಅಪರಾಧ, ಪುಡಿ ಕಾಸಿನ ಆಸೆಇಂದ ಅಯೋಗ್ಯರನ್ನ ಅಧಿಕಾರಕ್ಕೆ ತಂದು ದೋಚಲು ಬಿಟ್ಟರೆ ಮುಂದಿನ ಪೀಳಿಗೆಗೆ ಏನನ್ನು ಉಳಿಸಿದ ಹಾಗೆ ಆಗುತ್ತದೆ? ಇದೆ ಏನು ದುಡ್ಡಿಗಾಗಿ ಓಟು ಮಾರಿಕೊಂಡವರ ಉಡುಗೊರೆ ತಮ್ಮ ಮುಂದಿನ ಸಂತಾನಕ್ಕೆ? ಅಂತೂ ನಮ್ಮೂರಿನ ಅಡಿಕೆ ಮರಗಳ ಎಲೆಗಳು ಹಸಿರಾಗುವ ಬದಲು ಹಳದಿಯಾಗಿ ಬಾಡಿಹೋಗುವದರೊಂದಿಗೆ ಜನ ಜೀವನವೂ ಅಸ್ತವ್ಯಸ್ಥವಾಗುತ್ತಿದೆ ಅನ್ನಿಸುತ್ತಿದೆ, ಪರ್ಯಾಯವಾಗಿ ಕಾಫಿ,ಬಾಳೆ ಬೆಳೆದರೆ ಮಂಗಗಳ ಕೀಟಲೆ, ಕಾಳುಮೆಣಸು ಬಂದರೆ ಕುಯ್ಯಲು ಜನರಿಲ್ಲ, ಹೀಗೆಯಾದರೆ “ಪೂರ್ಣ ಚಂದ್ರ ತೇಜಸ್ವಿಯವರ ಜುಗಾರಿ ಕ್ರಾಸ್” ನಲ್ಲಿ ಬರೋ ಬಿದಿರಿನ ಬುಟ್ಟಿ ಹೆಣೆಯುತ್ತಿದ್ದ  ಹಳ್ಳಿಯೊಂದು ಪ್ಲಾಸ್ಟಿಕ್ ಹಾವಳಿಇಂದ ನಶಿಶಿ ಹೋದ ಕಥೆ ನಮ್ಮೂರಲ್ಲೂ ಆಗಬಹುದೇನೋ….

ಏನಾದರೂ ಆಗಲಿ ಮಲೆನಾಡ ಸೊಗಡು ಉಳಿಯಲಿ ಬರಡಾದ ತೋಟಗಳಲ್ಲಿ ಹೊಸ ಚಿಗುರು ಬರಲಿ , ನೇರ ನಡೆ, ಶುದ್ದವಾದ ಚಿಂತನೆ,ಕಷ್ಟ ಪಟ್ಟು ಮೈ ಬಗ್ಗಿಸಿ ದುಡಿದು ನೆಮ್ಮದಿಯ ಬದುಕು ಸಾಗಿಸುವ ಮನಸು, ಶಕ್ತಿ ಮತ್ತೆ ನಮ್ಮ  ಮುಗ್ದ ಜನರಲ್ಲಿ ಬರಲಿ…..ಅಲ್ವಾ? ನಿಮ್ಗೆ ಎನನ್ನಿಸಿತು? ನಂಗೆ ತಿಳಿಸಿ……ಬರ್ಲಾ?

ಖೇಲೆ ಹಮ್ ಜೀ ಜಾನ್ ಸೆ

ಡಿಸೆಂಬರ್ 23, 2010

ನಮಸ್ತೆ ನನ್ನ ಎಲ್ಲಾ ಬ್ಲಾಗ್ ಸ್ನೇಹಿತರಿಗೆ,

ತುಂಬಾದಿನಗಳೇನು ಈಬಾರಿ ಹಲವು ತಿಂಗಳುಗಳೆ ಕಳೆದು ಹೋಗಿವೆ ನಿಮ್ಮೊಂದಿಗೆ ಮಾತಾಡಿ ಅಲ್ವೆ? ಅದಕ್ಕೆ ಎನಾದ್ರು ಮಾಡಿ ಇವತ್ತು ಸ್ವಲ್ಪ ಎನಾದ್ರು ಬರೀಲೇಬೇಕು ಅಂತ ತೀರ್ಮಾನ ಮಾಡಿಕೊಂಡು ಕೂತಿದೀನಿ….ವಿಚಾರ ಏನಪ್ಪಾ ಅಂದ್ರೆ ನಾನು ಸುಮಾರು ೧೫ ದಿನಗಳ ಹಿಂದೆ “ಖೇಲೆ ಹಮ್ ಜೀ ಜಾನ್ ಸೆ” ಅಂತ ಒಂದು ಪಿಚ್ಚರ್ ನೊಡ್ದೆ ….ತುಂಬಾ ಚೆನಾಗಿದೆ…

ಮಾನಿನಿ ಚಟರ್ಜಿಯವರ “do and die” ಅನ್ನುವ ಕಾದಂಬರಿ ಆಧಾರಿತವಾಗಿರುವ ಚಿತ್ರ ಅದು. ಅಲ್ಲಿನ ಎಲ್ಲಾ ನಮ್ಮ ಕ್ರಾಂತಿವೀರರ ಪಾತ್ರಗಳಿಗೆ ಜೀವತುಂಬಿಸಿ ಅಧ್ಬುತವಾಗಿ ತೊರಿಸಲಾಗಿದೆ ಅಂದ್ರೆ ತಪ್ಪಾಗಲಿಕ್ಕಿಲ್ಲ. ಈ ಘಟನೆಯನ್ನು “ಚಿತ್ತಗಾಂಗ್ ಆರ್ಮರಿ ರೈಡ್” ಎಂದೂ ಕರೆಯಲಾಗಿದೆ ಮತ್ತು  ಈ ಘಟನೆಯು ಎಪ್ರಿಲ್ ೧೮ ೧೯೩೦ ರಂದು ನೆಡೆದಿರುವುದೆಂದು ಚಟರ್ಜೀ ಅವರ ಪುಸ್ತಕದಲ್ಲಿ ಹೇಳಲಾಗಿದೆ.

ಕಥೆ ಚಿತ್ತಗಾಂಗ್ ನ  ಹುಡುಗರು ಆಡುವ ಆಟದ ಮೈದಾನವನ್ನ ಬ್ರಿಟೀಷ್ ಅಧಿಕಾರಿಗಳ ತರಬೇತಿಗಾಗಿ ವಶಪಡಿಸಿಕೊಳ್ಳುವ ಮೂಲಕ ಶುರುವಾಗುತ್ತೆ.ಚಿತ್ರದ ಪ್ರಮುಖ ಪಾತ್ರ ಅಭಿಷೇಕ್ ಬಚ್ಚನ್  ಅವರದ್ದು,ಅದರಲ್ಲಿ ಅವರು ಸೂರ್ಜೊ ಸೇನ್ (ಮಾಸ್ಟರ್ ದಾ) ಆಗಿ ಕಾಣಿಸಿಕೊಂಡಿದ್ದಾರೆ.

ಆಟದ ಮೈದಾನ ವಾಪಸ್ ಪಡೆಯಲು ಸಹಾಯ ಕೇಳಿ ಬರುವ ಹುಡುಗರಲ್ಲಿನ ಉತ್ಸಾಹ ಕಂಡು ಅವರನ್ನು ಕ್ರಾಂತಿಕಾರಿ ಚಳುವಳಿಗೆ ಸೂರ್ಜೊ ಸೇನ್ ಸೇರಿಸಿಕೊಳ್ಳುತ್ತಾನೆ, ನಂತರ ಕ್ರಾಂತಿಯ ಮೊದಲ ಅಂಗವಾಗಿ ಬ್ರಿಟೀಷ್ ಅಧಿಕಾರಿಗಳು  ಇರುವ ಅರಮನೆಯಂತಹ ಮನೆಯ ಒಳಗೂ ಹೊರಗೂ ಏನೇನಿದೆ,  ಹಾಗೆ ಯಾವಕಡೆಯಿಂದ ದಾಳಿಮಾಡಿ ಅವರನ್ನು ಓಡಿಸಬಹುದು ಅನ್ನುವ ಲೆಕ್ಕಾಚಾರ ಶುರುವಾಗುತ್ತದೆ ಆ ಸಮಯದಲ್ಲಿ ಕೊಲ್ಪನ (ದೀಪಿಕಾ ಪಡುಕೋಣೆ ಈ ಪಾತ್ರದಲ್ಲಿದ್ದಾರೆ ) ಮತ್ತು ಅವಳ ಗೆಳತಿ ಅಲ್ಲಿನ ಕೆಲಸಗಾರರ ರೂಪದಲ್ಲಿ ಹೋಗಿ ಎಲ್ಲಾ ಮಾಹಿತಿ ಸಂಗ್ರಹಿಸಿಕೊಂಡು ಬರುತ್ತಾರೆ, ನಂತರದಲ್ಲಿ ಅವ್ರು ಸಹ ಸಕ್ರೀಯ ಕ್ರಾಂತಿ ಯ ಹೋರಾಟದಲ್ಲಿ ಬಾಗವಹಿಸುವ ಅವಕಾಶವನ್ನು ಪಡೆಯುತ್ತಾರೆ.

ನಂತರ ಕ್ರಾಂತಿ ಚಳುವಳಿಗೆ ದುಮುಕಿದ ಪ್ರತಿಯೊಬ್ಬರ ಮನೆಯಿಂದ  ನಗ, ನಾಣ್ಯಗಳನ್ನು ಸಂಗ್ರಹಿಸಿ ಸೂರ್ಜೋ ಸೇನ್ ತಂಡವು ೭ ಬಂದೂಕು ಹಾಗೆ ೩ ಪಿಸ್ತೂಲುಗಳನ್ನು ಖರೀದಿಸುತ್ತದೆ ಕಲ್ಪೊನಾ ನಾಡಬಾಂಬ್ ತಯಾರಿಕೆಗೆ ಬೇಕಾಗುವ ರಾಸಾಯನಿಕಗಳನ್ನು ಒಟ್ಟುಗೂಡಿಸಿ ೩ ಬಾಂಬ್ ಗಳನ್ನೂ ತ ತಯಾರಿಸಿ  ಕೊಡುತ್ತಾಳೆ. ಆಮೇಲೆ ಮೊದಲ ದಾಳಿಯಾಗಿ ಟೆಲಿಗ್ರಾಫ್ ಕಚೇರಿಯನ್ನು ರಾತ್ರೊ ರಾತ್ರಿ ಪುಡಿ ಪುಡಿ ಮಾಡಲಾಗುತ್ತದೆ, ಹಾಗೆ ರೈಲ್ವೆ ಹಳಿಗಳನ್ನು ತುಂಡುಮಾಡಲಾಗುತ್ತದೆ. ನಂತರ ೨ನೇಯದಾಗಿ ಬ್ರೀಟೀಷ್ ಅಧಿಕಾರಿಗಳಿರುವ ಅರಮನೆಗೆ ದಾಳಿ ಮಾಡಿ ಅಲ್ಲಿ ಇರುವ ಅಧಿಕಾರಿಗಳನ್ನು ಕೊಲ್ಲುವ ಅಥವ ಓಡಿಸುವ ಯತ್ನ ವಿಫಲವಾಗುತ್ತದೆ ಎಕೆಂದರೆ ಅಲ್ಲಿ “Good Friday” ಆಗಿರುವುದರಿಂದ ಅಲ್ಲಿ ಯಾವ ಅಧಿಕಾರಿಯೂ ಇರುವುದಿಲ್ಲ!!

ಆಂಗ್ಲರವೇ ಶಸ್ತ್ರಾಸ್ತ್ರಗಳನ್ನ ವಷಪಡಿಸಿಕೊಂಡು ಅವರನ್ನ ಹಿಮ್ಮೆಟ್ಟಿಸುವಕೆಲಸಕ್ಕೆ ಸೂರ್ಜೊ ಸೇನ್ ತಂಡ ರೆಡಿಯಾಗುತ್ತದೆ ಇರುವ ಮೂರೇ ಮೂರು ಬಾಂಬ್ ಗಳನ್ನ ಬಳಸಿ ಅವರ ಬಂದೂಕು ಸಂಗ್ರಹಗಾರವನ್ನೇನೊ ವಷ ಪಡಿಸಿಕೊಳ್ಳಲಾಗುತ್ತದೆ, ಆದರೆ ಅಲ್ಲಿ ಇವರಿಗೆ ಬಂದೂಕಿಗೆ ಬೇಕಾಗುವ ಮದ್ದುಗುಂಡುಗಳು ಸಿಗುವುದೇಇಲ್ಲ. ಯಾಕೆಂದರೆ ಅತಿಬುದ್ಧಿವಂತರಾದ ಬ್ರಿಟೀಷರು ಬಂದುಕುಗಳನ್ನು ಒಂದುಕಡೆ ಹಾಗು ಮದ್ದುಗುಂಡುಗಳನ್ನು ಮತ್ತೊಂದೆಡೆ ಸಂಗ್ರಹಿಸಿಟ್ಟುಕೊಂಡಿರುವುದು.ಇವರಲ್ಲಿರುವ ಒಂದೇ ನಳಿಕೆಯ ಬಂದೂಕುಗಳಿಂದ ಹೋರಾಟ ಮುಂದುವರೆಸುವ ಸಾಹಸಕ್ಕೆ ಕೈ ಹಾಕುತ್ತಾರೆ,ಆದರೆ ಆಂಗ್ಲರ ಅಸಂಕ್ಯ ಸೈನ್ಯ ಬಲದಿಂದ ತಪ್ಪಿಸಿಕೊಳ್ಳಲಾದೀತೇ? ಅವರಲ್ಲಿರುವ ಆಧುನಿಕ ಶಸ್ತ್ರಾಸ್ತ್ರ ಗಳನ್ನ ಬಳಸಿಕೊಂಡು ಎಲ್ಲ ನಮ್ಮ ಕ್ರಾಂತಿಕಾರಿಗಳ ಮಾರಣ ಹೋಮ ಮಾಡುವ, ಹೆಣಗಳನ್ನು ಒಟ್ಟುಗೂಡಿಸಿ ಪೆಟ್ರೋಲ್ ಹಾಕಿ ಸುಡುವ ರೀತಿ, ಅವುಗಳನ್ನ ಚಿತ್ರದಲ್ಲಿ ತೋರಿಸುವ ಪರಿ ಎಂತಹ ಭಾರತೀಯನಲ್ಲೂ ಸ್ವಾತಂತ್ರ ಹೋರಾಟದ ಭಯಾನಕ ದೃಶ್ಯಗಳನ್ನು ತೆರೆದಿಡುತ್ತದೆ.ಕೊನೆಗೆ ಸೂರ್ಜೋ ಸೇನ್ ಗೆ ಗಲ್ಲು ಶಿಕ್ಷೆಯಾಗುತ್ತದೆ, ಅವರಿಗೆ ಸಹಕರಿಸಿದ ಕೊಲ್ಪನ ಹಾಗು ಅವಳ ಗೆಳತಿಗೆ ಜೀವಾವದಿ ಶಿಕ್ಷೆ………

ಚಿತ್ರ ನೋಡುವ ಪ್ರತಿಕ್ಷಣವೂ ರೋಮಾಂಚನಕಾರಿ ಘಟನೆಗಳು ಕಣ್ಣೆದುರು ಬಂದು ನಿಲ್ಲುತ್ತವೆ, ಬ್ರಿಟೀಷರ ಅರಮನೆಯ ಮುಂದೆ “ಇಲ್ಲಿ ನಾಯಿಗಳಿಗೆ ಹಾಗು ಭಾರತೀಯರಿಗೆ ಪ್ರವೇಶವಿಲ್ಲ”  ಅನ್ನುವ ಬೋರ್ಡ್ ಹಾಕಿರುವುದನ್ನು ತೋರಿಸುತ್ತಿರುವಾಗ ಮೈ ಉರಿದು ಹೋಗುತ್ತದೆ.ಸೂರ್ಜೋ ಸೇನ್ ಹಾಗು ಅವರ ತಂಡ ಆಡುವ ಪ್ರತಿಯೊಂದು ಮಾತು ನಮ್ಮಲ್ಲಿ ದೇಶಪ್ರೇಮ ತರದೇ ಇರದು. ಅವರಿಗಾಗುವ ದು:ಸ್ಥಿತಿ  ಯನ್ನು ನೋಡುವಾಗಲಂತೂ ಕಣ್ಣೀರು ಬಂದುಬಿಡುತ್ತವೆ.

ಚಿತ್ತಗಾಂಗ್ ಹೋರಾಟದಲ್ಲಿ ಮಡಿದ ನಮ್ಮೆಲ್ಲ ಸ್ವಾತಂತ್ರ್ಯ ಹೋರಾಟಗರರು: ಸೂರ್ಜೊ ಸೇನ್ (ಮಾಸ್ತರ್ ದಾ), ಗಣೇಶ್ ಘೊಷ್, ಲೊಕೆನಾಥ್ ಬಾಲ್, ನಿರ್ಮಲ್ ಸೇನ್, ನರೇಶ್ ರಾಯ್, ಸಸಾಂಕ ದತ್ತಾ, ಅರ್ದೆಂದು ದಸ್ತಿದಾರ್, ಹರಿಗೋಪಾಲ್ ಬಾಲ್, ತರಕೆಶ್ವರ್ ದಸ್ತಿದಾರ್, ಜಿಬಾನ್ ಘೋಶಾಲ್, ಆನಂದ ಗುಪ್ತ, ಪ್ರೀತಿ ಲತ್ತಾ, ಹಾಗು ಸೋಬೋದ್ ರಾಯ್ (ಕೇವಲ ೧೪ ವರ್ಷದ ಹುಡುಗ ಇವನು) ಇವರೆಲ್ಲರಿಗೂ ನನ್ನ ಈ ಲೇಖನದ ಮೂಲಕ ಅಕ್ಷರ ನಮನ

ಹಾಗೆ ಸ್ನೇಹಿತರೆ, ಯಾವಾಗಲು, ದೊಡ್ಡ ದೊಡ್ಡ ಹೆಸರುಗಳನ್ನ ಸ್ವಾತಂತ್ರ ಹೋರಾಟಗಾರೆಂದು ಹೇಳುವಾಗ, ಅವರ ಜಯಂತಿಗಳನ್ನು ಆಚರಿಸುವಾಗ, ರಾಷ್ಟ್ರೀಯ ಹಬ್ಬಗಳಲ್ಲಿ ಅವರುಗಳ ಗುಣಗಾನ ಮಾಡುವಾಗ ನಮಗಾಗಿ ಪ್ರಾಣ ತೆತ್ತ ಎಷ್ಟೋ ಸೂರ್ಜೋ ಸೇನ್ರಂತಹ ಕ್ರಾಂತಿಕಾರಿಗಳನ್ನು ನೆನೆಯುವುದಲ್ಲದೆ ಅವರ ಬಗ್ಗೆ ನಮ್ಮ ಮುಂದಿನ ಪೀಳಿಗೆಗೂ ತಿಳಿಹೇಳುವ ಅಗತ್ಯ ಎಷ್ಟಿದೆ ಅಲ್ಲವೆ? ಗಾಂಧೀಜಿಯವರ ಅಹಿಂಸಾ ಮಾರ್ಗದಲ್ಲಿ ಬಂದ ಸ್ವಾತಂತ್ರ ದ ಹಿಂದೆ ಎಷ್ಟೋ ಕ್ರಾಂತಿಕಾರಿಗಳ ರಕ್ತದ ಗುರುತಿದೆ ಎನ್ನುವುದನ್ನ ನಾವು, ಈಗಿನ ರಾಜಕೀಯ ನಾಯಕರು ಮರೆತಹಾಗಿದೆ…ನಿಮಗೆ ಏನನ್ನಿಸಿತು ಅನ್ನುವುದನ್ನೂ ತಿಳಿಸಿ.. … ಮತ್ತೊಮ್ಮೆ ಸಿಗುತ್ತೇನೆ…..

ಹಾಗೆ “Do and Die ” ಬಗ್ಗೆ ಹೆಚ್ಚಿನ ವಿವರಗಳು ಈ ಲಿಂಕಿನಲ್ಲಿ ಇವೆ ಒಮ್ಮೆ ಕ್ಲಿಕ್ಕಿಸಿ (ವಿಕಿಪೀಡಿಯ ಸಂಗ್ರಹ)

ಕವಲು ನಾ ಕಂಡಹಾಗೆ….

ಸೆಪ್ಟೆಂಬರ್ 6, 2010

ನಿಮ್ಮನ್ನೆಲ್ಲ ಮಾತಡ್ಸಿ ಸುಮಾರು ದಿನ ಅಗಿತ್ತಲ್ಲ ಹಾಗಾಗಿ ಎನಾದ್ರು ವಿಚಾರ ನಿಮ್ಜೊತೆ ಹಂಚ್ಕೊಬೇಕು ಅಂತ ಅನ್ನಿಸ್ತಿದೆ, ಸೊ ಇತ್ತೀಚೆಗೆ ಬಹು ಚರ್ಚಿತ ಕಾದಂಬರಿ “ಕವಲು” ನನ್ನ ಗೆಳೆಯರೊಬ್ಬರಿಂದ ಬಾಡಿಗೆಗೆ ತಗೊಂಡು ಒದಿದೆ ಅದನ್ನೆ ಮಾತಡೋಣ ಅಂತಿದೀನಿ ಏನಾದ್ರು ತಪ್ಪು ಬರ್ದಿದ್ದ್ರೆ ಸೀರಿಯಸ್ಸಾಗಿ ತಗೊಬೇಡಿ ಒಕೆ ನ?

ಅಂದಹಾಗೆ ಸುಮಾರು ದಿನದಿಂದ ನೋಡ್ತಾ ಇದ್ದೆ , ಬ್ಲಾಗು, ವೆಬ್ ಸೈಟು, ವಿಚಾರ ಸಂಕಿರಣಗಳಲ್ಲೆಲ್ಲಾ ಕವಲು ಹರೀತಾ ಇತ್ತಲ್ಲಾ ,ಆ ಪುಸ್ತಕ ಸಿಕ್ಕಿದ್ರೆ ಒಂದ್ಸಲ ಓದ್ಬೇಕು ಅಂದ್ಕೊಳ್ಳೊವಾಗ್ಲೆ ನನ್ನ ಫ್ರೆಂಡು ಒಬ್ಬ್ರ ಹತ್ರ ಸಿಕ್ತು……..

ನಂಗೇನೊ ತುಂಬಾ ಚೆನ್ನಾಗಿನೇ ಬರ್ದೀದಾರೆ ಅಂತ ಅನ್ನಿಸ್ತು ಯಾಕಂದ್ರೆ ಅದ್ರಲ್ಲಿ ಇತ್ತೀಚೆಗೆ ಮಹಿಳಾ ಪರ ಕಾನೂನುಗಳು ಹೇಗೆ ದುರುಪಯೋಗ ಆಗ್ತಿದೆ ಅಂತ ಬರ್ದಿದಾರೆ ಒಂದು ಒಳ್ಳೆ ಕಥೆಯ ರೂಪ ಕೊಟ್ಟು ಅಷ್ಟೆ.

ಆಗ್ಲೇ ಹೆಳಿದ್ನಲ್ಲಾ ಎಲ್ಲಾಕಡೆ ಚರ್ಚೆ ನಡೀತಿದೆ ಅಂತ ಅದ್ರಲ್ಲಿ ವಿರೋದ ಮಾಡ್ತಿರೊದು ನೋಡಿದ್ರೆ ಅಷ್ಟೊಂದು ಏನು ಇಲ್ಲ ಅಂತ ಅನ್ಸುತ್ತೆ ನಂಗೆ…ಯಾಕಂದ್ರೆ ಏನೊ  ಮಹಿಳಾಮಣಿಗಳು ಒಬ್ಬ್ರು ಇಬ್ಬ್ರು ತಪ್ಪು ಮಾಡ್ತರೆ, ಅದ್ರಲ್ಲೂ ಈ ಈ ತರ ಯೆಲ್ಲಾ ಮಾಡ್ತರೆ ಅಂತ ಅಷ್ಟೆ ಹೇಳಿರೊದು, ಅದಕ್ಕೆ ಇಡೀ ಮಹಿಳಾ ಸಮುದಾಯಕ್ಕೆ ಹೇಳಿದಾರೇನೊ ಅಂತ ಯಾಕೆ ತಿಳ್ಕೊಬೇಕು?

ದಿನಾ ಟಿವಿ, ಪೆಪರ್ ಗಳಲ್ಲಿ ನೊಡ್ತಿವಪ್ಪ, ಅಪರಾಧ, ಕೊಲೆ, ಸುಲಿಗೆ, ರೆಪ್, ರಿಪೊರ್ಟ್ ಗಳನ್ನ ಅಲ್ವಾ? ಅದ್ರಲ್ಲಿ ಯೆಲ್ಲಾದ್ರಲ್ಲೂ ಆಲ್ ಮೋಸ್ಟ್ ಗಂಡಸರದೇ ಕೈವಾಡ ಇರುತ್ತೆ, ಹಾಗಂತ ಆ ತರ ನಿವ್ಸ್ ಗೆ ಮಸಾಲೆ ಹಚ್ಚಿ ಹೇಳೊವಾಗ ನವೆಲ್ಲಾ ಇಡೀ ಗಂಡಸರ ಕುಲಕ್ಕೆ ಅವಮಾನ ಅಗಿದೆ ಅಂತ ಅಂದ್ಕೋತಿವಾ ? ಇಲ್ಲಾ ತಾನೆ….ಹಾಗೆ ಇದು ಅಷ್ಟೆ ಕೆಲವು ಕೆಟ್ಟ ಹೆಂಗಸರಬಗ್ಗೆ ಮಾತ್ರ ಹೇಳಿರುದು ಅಂತ ಅರ್ಥ ಮಾಡ್ಕೊಂಡ್ರೆ ಕಥೆ ತುಂಬಾನೆ ಚೆನಾಗಿದೆ.

ಹಾಗೆ ಬೈರಪ್ಪ ನವರು ಇತ್ತೀಚಿನ ಕೆಲವು ಮಹಿಳಾಮಣಿಗಳು ಫುಲ್ ಡ್ರೆಸ್ ಕೊಡ್ ನೆ ಮರ್ತಿದಾರೆ ಅಂತ ಹೇಳಿದಾರೆ, ಸತ್ಯ ಅಲ್ವ? ಅದೇನೊ ಕಂಫರ್ಟಬಲ್ಲು , ಚೆನ್ನಾಗಿರುತ್ತೆ, ನಾವಿರೋದೆ ಹೀಗೆ ….ಅಂತೆಲ್ಲಾ ನಮ್ಮ ಸ್ನೆಹಿತೆಯರು ಮಾತಾಡ್ತಾರೆ ಅದ್ರೆ ಅದನ್ನೆಲ್ಲಾ ಹೊರಗಿನ ಜನರಿಗೂ ತೊರ್ಸೊಕೆ ಹೋಗಿ ಪಡ್ಡೆ ಹುಡ್ಗರು ಸೀಟಿ ಹೊಡ್ದು, ರೇಗ್ಸಿದ್ರೆ ಅಮೇಲೆ ಹುಡುಗರೆಲ್ಲ ಕೆಟ್ಟ ಜಾತಿಯವರು ಅಂತ ಬೈಯೊಬದ್ಲು ಎಟ್ಲೀಸ್ಟ್ ಮನೆ ಹೊರ್ಗಡೆ ಬರ್ಬೆಕಾದ್ರೆನಾರು ಸ್ವಲ್ಪ ಸೀರೆನೊ, ಚುಡಿದಾರೋ ಹಾಕ್ಕೊಂಡು ಬರಬಹ್ಹುದು ಅಲ್ವಾ? ಅದ್ರಿಂದ ಸಮಸ್ಸೆನು ಕಮ್ಮಿ ಆಗುತ್ತೆ…ಅದೇನೋಡಿ ನಾವೆನಾದ್ರು (ಗಂಡಸರು) ಕಂಫರ್ಟಬಲ್ಲು ಚೆನ್ನಾಗಿರುತ್ತೆ ಅಂತ ಬರೇ ಚಡ್ಡಿ ಹಾಕೊಂಡು ಬಂದ್ರೆ ಆಫೀಸಿಗೆ ಅತ್ವಾ ಯಾವುದಾದ್ರು ಫಂಕ್ಷನ್ನಿಗೆ ಬಂದ್ರೆ ಜನ ನಗೊದಿಲ್ವೆ?

ಯೆನೊಪ್ಪ ನೀವೆನು ಹೆಳ್ತಿರೊ ಗೊತ್ತಿಲ್ಲ ಮೊನ್ನೆ ಒಂದು ಪಿಚ್ಚರ್ ನೋಡ್ದೆ “ಪಂಚರಂಗಿ” ಅಂತ, ಅದ್ರಲ್ಲಿ ಹೀರೊ ಹೀರೊಇನ್ ಗೆ ಸೀರೆ ಉಡ್ಸೊ ಸೀನ್ ಇದೆ ಎಷ್ಟು ಚೆನ್ನಾಗಿ ಇದೆ ಅಂದ್ರೆ ಅದ್ರಲ್ಲಿ ಏಲ್ಲೂ ಕೊಳಕಾಗಿ ತೊರ್ಸಿಲ್ಲ, ಮತ್ತೆ ಹೀರೋಇನ್ ಸೀರೆ ಉಟ್ಟ ಮೇಲೆ ತುಂಬಾನೆ ಚೆನ್ನಾಗಿ ಕಾಂಣ್ತಾರೆ ಕಂಡ್ರಿ 😉

ಇನ್ನು ತುಂಬಾನೇ ಸೀರಿಯಸ್ಸಾಗಿ ಚರ್ಚೆ ಆಗಿರೋದು  ಲೈಂಗಿಕ ದೌರ್ಜನ್ಯದಬಗ್ಗೆ, ಇದ್ರಲ್ಲಿ ಯಾರೇ ತಪ್ಪು ಮಾಡಿದ್ರು ಅವ್ರಿಗೆ ಶಿಕ್ಷೆ ಆಗ್ಲಿ, ನೂರರಲ್ಲಿ ಹತ್ತು ಕೇಸುಗಳಲ್ಲಿ ಮಹಿಳೆಯರದೆ ತಪ್ಪು ಅಂತ ಇದ್ರೆ ಆವಾಗ ಶೀಲಕಳೆದುಕೊಂಡ ಗಂಡಸರ ಪರವಾಗಿಯು ನ್ಯಾಯ ಸಿಗೋ ಹಾಗೆ ಇರೊ ಕಾನೂನು ಇದ್ರೆ ಒಳ್ಳೇದು, ಯೆಲ್ಲಾ ಮಹಿಳಪರವಾಗಿ ಇದ್ರೆ ಅಮಾಯಕರಪಾಡೇನು ಅಂತ ನನ್ನ ಸಣ್ಣ ಕಂನ್ಸರ್ನ್……….

ಹೀಗೆ ಮತ್ತೆ ಮೊನ್ನೆ ಕವಲು ಬಗ್ಗೆ ರಿವೀವ್ಸ್ ಹುಡ್ಕೊವಾಗ “ದಟ್ಸ್ ಕನ್ನಡ” ದಲ್ಲಿ ಫುಲ್ಲ್ ಕಥೆನ ಸಿಂಪಲ್ಲಾಗಿ ಹೇಳಿರೊದನ್ನ ನೋಡ್ದೆ…ಇಲ್ಲಿ ಕೆಳಗಡೆ ಪೇಸ್ಟ್ ಮಾಡಿದೀನಿ ನೋಡಿ.

ಕಾದಂಬರಿಯ ಪ್ರಮುಖ ಪಾತ್ರಧಾರಿಯಾದ ಜಯಕುಮಾರ ಸ್ವಂತ ಪರಿಶ್ರಮದಿಂದ ಕಂಪನಿ ಕಟ್ಟಿ ಬೆಳಸಿದ ಸಾಹಸಿ.ಈತನ ಬೆಳವಣಿಗೆಗೆ ಜೊತೆ ಜೊತೆಯಾಗಿ ಹೆಗಲುಕೊಟ್ಟು ದುಡಿದವಳು ಮಡದಿ ವೈಜಯಂತಿ ಅಪಘಾತದಲ್ಲಿ ಮರಣಹೊಂದಿದಾಗ ಎರಡನೇ ಹೆಂಡತಿಯಾಗಿ ಅದು ಒಂದು ರೀತಿಯಲ್ಲಿ ಬ್ಲ್ಯಾಕ್ ಮೇಲ್ ಮಾಡಿ ಅವನ ಮನೆಗೆ ಕಾಲಿಟ್ಟವಳು ಮಹಿಳಾವಾದದಿಂದ ಪ್ರೇರಣೆಗೊಂಡು ಬದುಕುತ್ತಿರುವ ಮಂಗಳೆ.

ಅಪಘಾತದಿಂದ ಮಂದ ಬುದ್ಧಿಯಾಗಿರುವ ಮಗಳು ಪುಟ್ಟಕ್ಕನನ್ನು ಅತ್ಯಂತ ಪ್ರೀತಿಯಿಂದ ಮಾನವೀಯತೆಯಿಂದ ನೋಡಿಕೊಳ್ಳುತ್ತಿರುವ ತಂದೆ ಜಯಕುಮಾರ. ಇವರಿಬ್ಬರ ತಂದೆ ಮಗಳ ಸಂಬಂಧ ಬಗ್ಗೆನೆ ಅಪಾರ್ಥ ಕಲ್ಪಿಸಿ ನೋಡುವ ಮಂಗಳ ತಾನು ಮದುವೆಯಾದ ಮೇಲು ಮೊದಲ ಪ್ರೇಮಿಯೊಡನೆ ಸಂಬಂಧ ಮುಂದುವರಿಸಿಕೊಂಡು ಹೊಗುತ್ತಾಳೆ.

ತನ್ನಿಚ್ಚೆಯಂತೆ ನಡೆದುಕೊಳ್ಳಲಿಲ್ಲವೆಂದು ಪೋಲಿಸರಿಗೆ ದೂರು ಕೊಟ್ಟು ಗಂಡನನ್ನು ಜೈಲಿಗೆ ಹಾಕುತ್ತಾಳೆ. ಮುಂದೆ ಡೈವೋರ್ಸ್ ಗೆ ಅರ್ಜಿ ಹಾಕಿ ಅವನು ಕಷ್ಟಪಟ್ಟು ದುಡಿದು ಸಂಪಾದಿಸಿದ ಕೋಟ್ಯಾಂತರ ರೂಪಾಯಿ ಆಸ್ತಿಯನ್ನು ಯಾವುದೇ ಪರಿಶ್ರಮವಿಲ್ಲದೇ ಪಡೆಯುತ್ತಾಳೆ. ಜಯಕುಮಾರ ಬುದ್ಧಿಮಾಂದ್ಯ ಮಗಳ ಜೊತೆ ಬೀದಿಗೆ ಬೀಳುತ್ತಾನೆ.

ಇನ್ನೊಂದು ಕುಟುಂಬದಲ್ಲಿ ವಿನಯಚಂದ್ರ ಕಂಪನಿಯೊಂದರಲ್ಲಿ ಉನ್ನತ್ತ ಹುದ್ದೆಯಲ್ಲಿದ್ದರೂ ತನ್ನ ಹಳ್ಳಿಯ ಜೀವನವನ್ನು, ತನ್ನ ತಾಯಿ ತಮ್ಮಂದಿರನ್ನು ಮರೆಯದಂತಹ ಸಹೃದಯ ಜೀವಿ. ಇದಕ್ಕೆ ವಿರುದ್ಧವಾಗಿ ಆಧುನಿಕತೆಯನ್ನು ಮೈಗೂಡಿಸಿಕೊಂಡಿರುವ ಯೂನಿವರ್ಸಿಟಿಯೊಂದರಲ್ಲಿ ಇಂಗ್ಲೀಷ್ ಅಧ್ಯಾಪಕಿಯಾಗಿರುವ ಇಳಾ ಅವನ ಹೆಂಡತಿ.

ಅವರಿಬ್ಬರ ಮುದ್ದಿನ ಮಗಳು ಸುಜಯಾಳಿಗೆ ತಂದೆಯಂತೆ ಹಳ್ಳಿ ವಾತಾವರಣ ಇಷ್ಟ. ಭಡ್ತಿ ಸಿಕ್ಕು ದೆಹಲಿಗೆ ಹೋಗಬೇಕಾಗಿ ಬಂದಾಗ ಅವನ ಜೊತೆ ಹೋಗಲು ಒಪ್ಪದೆ, ಇಳಾ ಬೆಂಗಳೂರಿನಲ್ಲಿ ಉಳಿಯುತ್ತಾಳೆ. ಅಲ್ಲದೆ ಮುಂದೆ ಮಂತ್ರಿಯೊಬ್ಬನ ಜೊತೆ ಸ್ನೇಹ ಬೆಳಸಿ ಅದು ದೈಹಿಕ ಸಂಬಂಧದವರೆಗೂ ಮುಂದುವರಿಯುತ್ತದೆ. ಅದನ್ನು ಮಗಳು ಪ್ರಶ್ನಿಸಿದಾಗ ನೀನು ಬಾಯ್ ಫ್ರೆಂಡ್ ನ ಮಾಡಿಕ್ಕೊ ಎನ್ನುವ ಮಾತು ತಾಯಿಯಿಂದ ಬರುತ್ತದೆ.

ಇದು ಅನಿಲ್ ಕುಮಾರನಿಗೆ ಗೊತ್ತಾಗಿ ಗುಟ್ಟಾಗಿ ಮಂತ್ರಿ ಮತ್ತು ಅವಳ ಸಂಬಂಧಗಳ ಪೋಟೋ ತೆಗೆದು ಅವಳಿಗೆ ಒಂದು ರೀತಿಯಲ್ಲಿ ಬ್ಲಾಕ್ ಮೇಲ್ ಮಾಡುವುದರ ಮೂಲಕ ಯಾವುದೇ ಪರಿಹಾರ ನೀಡದೇ ಅವಳಿಂದ ಡೈವೋರ್ಸ್ ಪಡೆದುಕೊಳ್ಳಲು ಯಶಸ್ವಿಯಾಗುತ್ತಾನೆ.”

ಏನೊಪ್ಪ ನಂಗೆ ಚೆನ್ನಾಗಿದೆ ಅಂತ ಅನ್ನಿಸ್ತು ನಿಮ್ಗು ಟೈಮ್ ಸಿಕ್ಕಿದ್ರೆ ಒಮ್ಮೆ ಓದಿ ….ಹಾಗೆ ಇಲ್ಲಿ ಕಮೆಂಟ್ ಹಾಕೊದನ್ನ ಮರಿಬೇಡಿ …..ಬರ್ಲಾ? ಅಂದಾಹಾಗೆ ಮರ್ತಿದ್ದೆ ಇದನ್ನ ಓದಿದ್ಮೇಲೆ “ನಂಗೆ ಮದ್ವೆನೆ ಬೇಡಪ್ಪ” ಅಂತ ತೀರ್ಮಾನ ಮಾಡಬೇಡಿ ಅಷ್ಟೆ..

2 ಪಾಸು 3

ಏಪ್ರಿಲ್ 17, 2010

ಸ್ನೆಹಿತರೇ ಎಷ್ಟು ಚೆಂದ ಇತ್ತು ಅಲ್ವಾ ನಮ್ಮ ಬಾಲ್ಯ? ಆ ಸ್ಕೂಲ್ ದಿನಗಳು!!! ಬನ್ನಿ ಒಮ್ಮೆ ನೆನಪುಗಳ ಅಂಗಳದಲ್ಲಿ ಇರುವ ಆ ಸುಂದರ ಹೂವುಗಳನ್ನೊಮ್ಮೆ ಮಾತಡಿಸಿಕೊಂಡು ಬರೋಣ…..

ಮೊದ್ಲು ಸ್ಕೂಲಿಗೆ ಅಪ್ಪ ಸೇರಿಸ್ತರೆ ಅನ್ನೊದೆ ಒಂದು ಸಂಬ್ರಮ ಅವತ್ತೆಲ್ಲಾ, ಮತ್ತೆ ಜುನ್ 1 ನೇ ತಾರಿಕಿಂದ ಶಾಲೆಗೆ ಹೊಗ್ಬೇಕು, ಮೇಷ್ಟ್ರು ತುಂಬಾ ಜೊರು, ತಪ್ಪು ಉತ್ತರ ಹೇಳಿದ್ರೆ ಪೆಟ್ಟು ಬಿಡ್ತರಂತೆ, ಅವತ್ತು ಅವ್ನಿಗೆ ಒಂಟಿಕಾಲಲ್ಲಿ ನಿಲ್ಸಿದ್ರಂತೆ ಇಡೀ ದಿನ…..ಹೀಗೆಲ್ಲ ಸುದ್ದಿ ನಡುವೆ ಭಯ, ಹೊಸ ಪುಸ್ತಕ,ಸ್ಲೇಟು, ಬಳಪ ಬ್ಯಾಗು ಎಲ್ಲಾ ಬಂದಿದೆ ಅಂತ ಒಂದು ಕುಷಿ ಮಧ್ಯದಲ್ಲಿ.

ಹಾಗೆ ಶುರುವಾಗುತ್ತೆ ಅಲ್ವಾ ನಮ್ಮೆಲ್ಲರ ಜೀವನ? ಶಾಲೆಇಂದ ಮನೆಗೆ ಕರ್ಕೊಂಡು ಹೊಗೊಕೆ ಅಮ್ಮ ಬಂದಿಲ್ಲ ಅಂತ ಅಲ್ಲೆ ಮೆಟ್ಟಿಲು ಗಳಮೇಲೆ ಕೂತು ಅತ್ತಿದ್ದು ಅದನ್ನ ನೋಡಿ ಒಬ್ಬಳು ನನ್ನ ಕಣ್ಣೀರು ಒರೆಸಿ ಸಮದಾನ ಮಾಡಿದ್ಲಲ್ಲಾ ಅವ್ಳೆ ನನ್ನ ಬೆಸ್ಟ್ ಫ್ರೆಂಡು, ಅಮೇಲೆ ಮನೆಗೆ ಹೊಗಿ ಅಮ್ಮಂಗೆ ಬೈದಿದ್ದು, ದಿನಾ ಶಾಲೆ ಮುಗ್ಯೊದೆ ತಡ, ಬ್ಯಾಗ್ ಬಿಸಾಕಿ ಆಟ ಆಡೊಕೆ ಹೊಗೊದು,ಮರುದಿನ ಮತ್ತೆ ಬೇಗ ಬೇಗ ಶಾಲೆಗೆ ಹೋಗಿ ಹೊಂವರ್ಕ್ ಕಾಪಿ ಮಾಡಿ ಬರ್ದು ತೊರಿಸೊದು, ಪ್ರತಿದಿನಕ್ಕೊಂದು ಬಳಪ, ಪೆನ್ಸಿಲ್ ಕಳೆದುಕೊಂಡಾಗಲೆಲ್ಲಾ ಅಮ್ಮ ಕಿವಿ ಹಿಂಡಿದ್ದು ಇದೆಲ್ಲಾ ಎಷ್ಟು ಚೆಂದ ನೆನಪಿದೆ ಅಲ್ವ? ಹಾಗೆ ತುಂಬ ಹೆಚ್ಚು ಮರ್ಕ್ಸ್ ಬಂದಿದ್ದಕ್ಕೆ ಗೆದ್ದ ಕಾರ್ಡ್ ಬೋರ್ಡ್, ಅದನ್ನ ಮನೆಗೆತಂದು ಒಳ್ಳೆ ಬಾರತರತ್ನ ಅವಾರ್ಡ್ ತರ ಎಲ್ಲರಿಗೂ ತೊರ್ಸೊದು, ನಂಗೆ ಅದುಬಂದಿಲ್ಲ ಅಂತ ಆ ಹುಡ್ಗಿ ನನ್ನ ನೋಡಿದಾಗಲೆಲ್ಲಾ ಮೂತಿ ತಿರಿಗಿಸೋದು.. “ನಿಜ್ಜ ಅಂದ್ರೆ ನಂಗೇ ಅದು ಸಿಗ್ಬೇಕಿತ್ತು ಆದ್ರೆ ಮೇಷ್ಟ್ರು ನಂಗೆ ಮೋಸಮಾಡಿದಾರೆ” ಅಂತ ಹೇಳೊದು…ಶನಿವಾರ ಬಂತುಅಂದ್ರೆ ಮರಕೋತಿ ಆಟ, ಇಲ್ಲಾಂದ್ರೆ ಲಗೋರಿ, ಅಮೇಲೆ ಕ್ರಿಕೆಟ್ಟು ಅದೇ ಗೌಡ್ರ ಗದ್ದೆ ಬಯಲಲ್ಲಿ..ಸುಪರ್ ಆಗಿತ್ತು .

ನಾಲ್ಕನೇ ಕ್ಲಾಸಲ್ಲಿ ಎಲ್ಲರೂ ಟೂರ್ ಹೋಗ್ತರೆ ನಾನು ಹೋಗ್ಬೆಕು ನಂಗೆ 150 ರುಪಾಯಿ ಬೇಕು ಅಂತ ಒಂದು ದಿನ ಊಟ ಬಿಟ್ಟಿದ್ದು ಅಮೇಲೆ ಅಪ್ಪ ಅಮ್ಮನ್ನ ಒಪ್ಪಿಸಿ 2 ದಿನ ಮಂಗಳೂರು, ಮುರುಡೇಶ್ವರ ಅಂತ ಸುತ್ತಾಡಿದ್ದು ಅದ್ರ ಫೋಟೊಗಳನ್ನು ಎಲ್ಲ್ರಿಗೂ ತೊರ್ಸಿ ಪೊಸ್ ಕೊಟ್ಟಿದ್ದು ………….ನೆನಪಿದೆ ಇನ್ನೂ!!

5 ನೇಕ್ಲಾಸಿಗೆ ಸುಮಾರು 8 ಕಿಲೊಮೀಟರ್ ದೂರದಲ್ಲಿರೋ ಶಾಲೆಗೆ ಸೇರಿಕೊಂಡ ಸಂಭ್ರಮ…ದಿನಾ 1 ಘಂಟೆ ನೆಡೆದೇ ಹೊಗ್ಬೇಕಿತ್ತು…ಆದ್ರು ಬೇಜಾರಿಲ್ಲ ಹೊಸ ಫ್ರೆಂಡ್ಸು.ಹೊಸ ಟೀಚರ್ ಸುಪರ್ ಅಷ್ಟೆ.ಎಷ್ಟೊಂದು ಜನ ಹೊಸ ಫ್ರೆಂಡ್ಸು, ದಿನ ಊಟದ ಬಾಕ್ಸ್ ಶೇರ್ ಮಾಡ್ಕೊತಿದ್ವಿ.ಎಷ್ಟು ಒಳ್ಳೆಯವರು ಗೊತ್ತ ಅವ್ರೆಲ್ಲಾ..ನಮ್ದು ಒಂದು ಗ್ರೂಪು ಅದರಲ್ಲಿ ೬ ರಿಂದ ೮ ಜನ ಎಲ್ಲಿಗೆ ಹೋದ್ರು ಒಟ್ಟಿಗೇ. ಉದಾಹರಣೆಗೆ ಸಾಲಾಗಿ ನಿಂತಿದ್ದು ನೆನಪು ಮಾಡಿಕೊಳ್ಳಿ ದಿನಾ ಉಚ್ಚೆ ಹುಯ್ಯೊಕೆ ಬಿಟ್ಟಾಗ..ಒಂದೇತರದ್ದು ಜಾಮಿಟ್ರಿ ಬಾಕ್ಸು ಎಲ್ಲರದ್ದೂ, ಒಂದೇ ತರದ್ದು ಸೈಕಲ್ಲು, ಕೊಡೆ ಕೊನೆಹೊತ್ತಿಗೆ ಚಪ್ಪಲಿ ಕೂಡ!!!

ಎಲ್ಲರೂ ಒಂದ್ಸಲ ಒಟ್ಟಿಗೆ ಬೆಸಿಗೆಲಿ ತುಂಗಾ ನದಿಲಿ ಸ್ನಾನ ಮಡೊಕೆ ಹೊಗಿದ್ದು ,ಮನೆಲಿ ಹೆಳ್ದೇ…ಅವ್ನ ಪೆನ್ನು ನಾನು ನನ್ನ ಜಾಮಿಟ್ರಿ ಬಾಕ್ಸು ಅವ್ನು ಎಕ್ಸಚೇಂಜ್ ಮಾಡಿಕೊಂಡಿದ್ದು, ೧೫ ರುಪಾಯಿ ಜೆಟ್ಟರ್ ಪೆನ್ನು ಕಳ್ಕೊಂಡಗ ಕದ್ದು ಅತ್ತಿದ್ದು, ಹೊಟ್ಟೆ ನೋವಿಲ್ಲ ಅಂದ್ರು ಅಮ್ಮನ ಹತ್ರ ಸುಳ್ಳು ಹೇಳಿ ಶಾಲೆಗೆ ರಜ ಹಾಕಿದ್ದು, ಮಾರ್ಕ್ ಕಾರ್ಡಿಗೆ ಅಪ್ಪನ ಕನ್ನಡಕ ಕದ್ದಿಟ್ಟು ಸೈನ್ ಹಾಕಿಸ್ಕೊತಿದ್ದಿದ್ದು ಸಕ್ಕತ್ ನೆನಪುಗಳು.ಎಷ್ಟೋಂದಿನ ಹೊಂವರ್ಕ್ ಮಾಡಿಲ್ಲ ಅಂತ ಮೇಷ್ಟ್ರ ಹತ್ತ್ರೆ ಪೆಟ್ಟು ತಿಂದು ಬಿಟ್ವಿ. ಹೋಮ್ವರ್ಕ್ ಬರ್ದೀದಿನಿ ತಂದಿಲ್ಲ ಅಂತ ಮಧ್ಯದಲ್ಲಿ ಸಮಜಾಯಿಷಿ ಕೊಟ್ಟು ಒಳ್ಳೆ ಹುಡ್ಗ ಆಗೋಕೆ ನೊಡಿದ್ವಿ.

ಹೈಸ್ಕೂಲಿಗೆ ಇನ್ನೂ 3 ಕಿಲೋಮೀಟರ್ ಹೆಚ್ಚು ನಡೀಬೇಕು ಅದ್ರೆ ಅದೇ ಹೈಸ್ಕೂಲು ಚೆನ್ನಗಿರೋದು ಅಂತ ಮನೆಲಿ ನಮ್ಮ ಗ್ರೂಪಿನ ಎಲ್ಲ ಸ್ನೆಹಿತರೂ ಒಪ್ಪಿಸತಕ್ಕದ್ದು ಅಂತ ಎಲ್ಲರೂ ಮಾತಾಡಿಕೊಂಡು ಕೊನೆಗೆ ಅಲ್ಲಿಗೆ ಸೇರಿದ್ವಿ 5 ದೂ ಜನ ಒಟ್ಟಿಗೇ ಒಂದೇ ಬೆಂಚಲ್ಲಿ ಕೂರ್ಬೇಕು ಅಂತ ಎಷ್ಟೆಲ್ಲಾ ಹೋರಾಟ ಮಾಡ್ತಿದ್ವಿ. ಹೈಸ್ಕೂಲಲ್ಲಿ ಸಣ್ಣಕೆ ಲೈನ್ ಹೊಡ್ದಿದ್ದು ಆ ಬಿಳಿಯ ಹುಡುಗಿಗೆ, ಅದು ಒಬ್ಬರಿಂದ ಒಬ್ಬರಿಗೆ ಗೊತ್ತಾಗಿ ಗುಸು ಗುಸು, ಮಜಾ ಇತ್ತು ಆ ಅನುಭವ. ಶನಿವಾರ ಡ್ರಿಲ್ ಮಾಡ್ಬೇಕಾದ್ರೆ ತಪ್ಪಿಸಿಕೊಳ್ಳೊಕೆ ಸುಮ್ಮನೆ ತಲೆ ತಿರುಗಿಬಿದ್ದಹಾಂಗೆ ಮಾಡೊದು ಅಮೇಲೆ ಕ್ಲಾಸ್ ರೂಮಲ್ಲಿ ಹರಟೆ ಹೊಡಿಯೊದು. ಮೇಷ್ಟ್ರ ಹತ್ರ ಹೇಳ್ತಿನಿ ಅಂತ ಕ್ಲಾಸ್ ಲೀಡರ್ ನಮ್ಮ ಹೆಸ್ರು ಬೊರ್ಡ್ ಮೇಲೆ ಬರ್ದ್ರೆ ಅವನಮೇಲೆ ಯುದ್ದ ಸಾರಿದ್ದು ನೆನಪಾಗಿ ನಗು ಬರುತ್ತೆ . ಮೇಷ್ಟ್ರಿಗೇ ಗೊತ್ತಿಲ್ಲದ ಹಾಗೆ ಪುಸ್ತಕ ನೊಡಿಕೊಂಡೇ ಉತ್ತರ ಹೇಳಿದ್ದು ನಿಜ ತಾನೆ?ಯುನಿಟ್ ಟೆಸ್ಟ್ ಗಳಲ್ಲಿ ಸಕತ್ ಕಾಪಿ ಹೊಡ್ದಿದ್ದು ಸತ್ಯ ಅಂತ ಒಪ್ಪಲೇ ಬೇಕು.

ಅದ್ರೆ ಪ್ರತೀ ಸ್ಕೂಲಿನ ಹಂತವನ್ನ ಬಿಟ್ಟು ಮುಂದೆ ಹೊಗುವಾಗಲೂ ಎಷ್ಟೊಂದು ಜನ ಫ್ರೆಂಡ್ಸ್ ನ ಕೈ ಬಿಟ್ಟಿದಿವಿ, ಒಬ್ಬಬ್ಬರು ಒಂದೊಂದು ದಿಕ್ಕು ಇವತ್ತು, ಅದ್ರೆ ಹಾಗೆ ವಿದಾಯ ಹೇಳೊವಾಗ ನಮಗೆ ಅಗಿರೊ ನೊವು ಮರ್ಯೊಕೆ ಅಗಲ್ಲ ಅನ್ಸುತ್ತೆ. ಆ ನೆನಪುಗಳನ್ನ ಹಂಚಿಕೊಳ್ಳೊಕೆ ನನ್ನ ಹತ್ರ ಪದಗಳಿಲ್ಲ ಅನ್ನಿಸಿಬಿಡುತ್ತೆ. ಮತ್ತೊಮ್ಮೆ ಅದೇ ಬಾಲ್ಯ ವಾಪಾಸ್ ಬಂದಿದ್ದರೆ….

ಕಾಲೇಜು ನೆನಪುಗಳನ್ನೂ ಹಂಚಿಕೊಳ್ಳೊ ಮನಸ್ಸು ನನಗಿದೆ ಆದ್ರೆ ಯಾಕೊ ಕೈಬಿಟ್ಟು ಹೋದ ಚಡ್ಡಿ ದೊಸ್ತ್ ಗಳು ಇವತ್ತು ತುಂಬ ನೆನಪಾಗ್ತಿದಾರೆ ಅವರಿಗಾಗಿ ಕಾದಿದ್ದ ನನ್ನ ಕಣ್ಣ ಹನಿಗಳು ಒತ್ತರಿಸಿಕೊಂಡು ಬರ್ತಿದೆ……….ಮತ್ತೆ ಬರ್ತೀನಿ ಅದನ್ನ ಹೇಳೊಕೆ………

ನಮ್ಮೂರ್ ಬಾಷಿ!!!

ಮಾರ್ಚ್ 10, 2010

ಹೋಯ್ ನಮಸ್ಕಾರ ಕಂಡ್ರಿ!! ಹ್ಯಾಂಗಿದ್ರಿ….ಸುಮಾರ್ ದಿನ ಅಗಿತ್ತಲ್ಲಾ ನಿಮ್ಜೊತೆ ಮಾತಾಡಿ, ಅದುಕ್ಕೆ ಚೂರ್ ಹೊತ್ತು ಮಾತಾಡನ ಅಂತ ಬಂದೆ……ನೀವ್ ಎಂತ ಮಾಡ್ತಿದ್ರಿ? ಚೆನ್ನಾಗಿದ್ರ್ಯಾ?

ಈ ಕಾಲ್ ನಾವೆಲ್ಲ ಬದುಕ್ ಮಾಡ್ದ್ಂಗೆ ಬಿಡಿ…ತೋಟುದ್ ಬದಿ ಹೊದ್ರೆ ತಟ..ತಟಾ ಅಂತ ಸಬ್ದ ಬತ್ತಾ ಅದೆ ..ಎಂತ ಅಂತ ಮಾಡಿರಿ? ಅಡ್ಕಿ ಕಾಯ್ ಕೊಳ್ತು ಉದ್ರಿ ಹೋಗುದು!! ..ನಮ್ಮ ಚಿಕ್ಕಯ್ಯಂದು  ತ್ವಾಟ ಪೂರ ಹೋತೆ? ಅದೇನ್ ಇನ್ನ್ ನೋಡುದ್ಬ್ಯಾಡೆ…..ಈ ಕಡೆ ಪೂರ ತುಂಡೆ ರ್ವಾಗ್ ಬಂದು ಪೂರ ಬುಡಮುಟ್ಟ ಬಂದದೆ …..

ಗ್ಯದ್ದೆ ನೊಡುದ್ರೆ ಬ್ಯಾಸಿಗೆಲೂ ಈ ಕಾಲ್ ಮಳೆ ಬಂದು, ಒಕ್ಕಲಾಟ ಮಾಡುಕ್ಕೆ ಆಗ್ದೆ  ಪೂರ ಮುಗ್ಗಿ ಹೊಗ್ಯದೆ…ಎಂತ ಮಾಡುದೇನು…ಇಲ್ಲಿ ಹುಡುಗಣ್ಣ ಗೊಳ್ ಎಲ್ಲರೂ ಬ್ಯಂಗಳೂರ್ ಕಡಿ  ಹೋಗಿ ಕೆಲ್ಸ ಹುಡ್ಕುಂಡರೆ? ಇಲ್ಲಿ ಕೆಲ್ಸ ಮಾಡೊರ್ ಯಾರ್? ಜನನೇ ಸಿಗುಲ್ಲ ಕಣ್ರಿ..ಇಲ್ಲಿ ಕೆಲ್ಸುಕ್ಕೆ!!. ನಾವು ಅತ್ಲಗೆ ಬ್ಯಂಗಳೂರ್ ಕಡೆ ಬಂದು ಬಿಡನ ಅಂದ್ರೆ ಅಲ್ಲಿಗೆ ಬರುಕ್ಕೆ ಹೆದ್ರಿಕಿ ಅತದೆ ಮರ್ರೆ!! ಮನ್ನಿ ನೊಡಿ…ಯಾದೋ ದಿಂಡೇ ಬಿಲ್ಡಿಂಗಿಗೆ ಬೆಂಕಿ ಬಿದ್ದು ಎಳೆಂಟು ಜನ ಸತ್ತೇ ಹೊಗ್ಯರೆ ….ಟಿವಿ ಲಿ ನೋಡ್ಬಕಾಗಿತ್ತು  ನೀವು..ಬಿಲ್ಡಿಂಗಿಂದ ಹ್ಯರ್ಗಡಿ ಹಾರಿ ಪ್ರಾಣ ಬಿಟ್ಟರೆ ನೊಡಿ…..ಅಲ್ಲಿ ಎಂತಾಗ್ಯದೆ ಗೊತ್ತಾ ನಿಮ್ಗೆ? ಯಾರೊ ಹಡ್ಬಿ ನನ್ನ್ ಮಗ ಬೀಡಿ ಸೇದಿ ಹಾಕ್ಯನೆ…ಅದು ಬಿಂಕಿ ಕಿಡಿ ಅಲ್ಲಾ? ಪೂರ …ಬಿಲ್ಡಿಂಗಿಗೂ ಹಿಡ್ಕುಂಡದೆ.. ನೋಡಿ ನಮ್ ಕಡಿ ಹುಲ್ಲ್ ಕುತ್ರಿಗೆ ಬೆಂಕಿಬಿದ್ರೆ ಉಳಿತದಾ ಹಾಂಗೆಯಾ…ಅಲ್ಲಾ?

ಇದ್ರು ಮದ್ಯದಗ …ಈ ದುಡ್ಡಿಲ್ದ್ ಹೊತ್ತಲ್ಲಿ ನಮ್ಮ್ ಮನಿಯೋಳ್ ..ಸಂಕುದಿಂದ ಜಾರಿ ಬಿದ್ದು ಮನ್ನಿ ಸೊಂಟ ಮುರ್ಕುಂಡಳೆ ಕಂಡ್ರಿ..ಟಿಬಿ ಹಾಸ್ಪತ್ರಿಗೆ ತ್ವಾರ್ಸುದ್ರೆ ಇಲ್ಲಿ ಆಗುದೇ ಇಲ್ಲ ಮಣಿಪಾಲಿಗೆ ಕರ್ಕು ಹೋಗಿ ಅನ್ನುದೇಂನ್ರಿ? ಎಲ್ಲಿಗೆ ಮಣಿಪಾಲಿಗೆ ಕರ್ಕು ಹೋಗುದು? ದುಡ್ಡು ಸ್ವಲ್ಪ ಬೇಕೆಂಡ್ರಿ? ಅದುಕ್ಕೆ ಚಿಣ್ಮಿಣಿಕಿಗೆ  ಕರ್ಕು ಹೋಗುದು ಅಂತ ತೀರ್ಮಾನ ಮಾಡಿನಿ ನೋಡಿ…ಅಲ್ಲಿ ಬಾರಿ ನಾಟಿ ಅವ್ಸಿದಿ ಕೊಡ್ತರಂತಲ….

ನಮ್ಮ ಮಗುಗೆ ಓಂದು  ಮೊಬಿಲ್ ಆಬಾಕಂತೆ …ಅದು ಈಗ್ಲೆ ಆಬಕು ಇಲ್ಲ ಅಂದ್ರೆ ನಾನ್ ಕಾಲೇಜಿಗೇ ಹೋಗುದ್ಲ  ಅಪ್ಪಯ್ಯ ಅಂತ ಕೂತನೆ.. ಅದು ಜಾಸ್ತಿ ರೇಟಿಂದೆ ಅಬಕಂತೆ!!!!! ನಮ್ ಕಾಲ್ದಲ್ಲಿ ಹೀಂಗೆಲ್ಲ ಇತ್ತೆಂಡ್ರಿ? ಪೋನು ಅಂದ್ರೇ ಯಂತದ್ ಅಂತ ನಮುಗ್ ಗೊತ್ತೇ ಈರ್ಲಾ. ಕಾಲಿಗ್ ಹಾಕು ಯಕ್ಕಡ ಕೇಂಡ್ರೆ…. ಅಪ್ಪಯ್ಯ ಬ್ಯರ್ಸುಗುಂಡು ಬತ್ತುತ್ತು.

ನೋಡಿ ನನ್ ಸಮಸ್ಸಿ ಹೇಳ್ಕುಂಡು ಕೂತ್ಗುಂಡಿನಿ… ಬಂದುದ್ದೆ ಯಂತಕ್ಕೆ ಅಂತ ಮರ್ತೇ ಹೋಗ್ಯದೆ…ಹೊಗಿಸೋಪ್ಪ್ ಅದ್ಯ? ಮೊನ್ನಿ ದೊಡ್ಡಾನಿ ಲಿ ತಂದುದ್ದು ಮರ್ರೆ ಕಂಯಾ ಕಂಯ ಕಣ್ರಿ…ನಿಮ್ಮತ್ರೆ ಆದ್ರೆ ಅಡ್ಡ್ಗದ್ದೆ ಸಾಬ್ರು ಅಂಗ್ಡಿ ದ್ ತಂದಿದ್ದ್ ಈರ್ತದಲ್ಲಾ ಅದುಕ್ಕೆ ಕೇಳ್ಕ್ಯುಂಡು ಹೋಗಣ ಅಂತ ಬಂದೆ ….ಆದ್ಯಾ? ಇದ್ರೇ ಚೂರ್ ಕೋಡಿ ಮಾರ್ರೆ ಅಮ್ಯಾಲೆ ತಂದು ಕೊಡನಾ….

ಎವಾಗ್ ಬಂದಾಗ್ಲೂ ನಾನ್ ವಟ ವಟ ಅನ್ನೂದೆ ಆಗ್ಯದೆ…ನೀವು ಯಂತಾರು ಮಾತಡ್ರಿ.. ಇಲ್ಲಿ ಕೆಳ್ಗಡಿ  ಕಮಿಂಟು ಅಂತ ಬರಿಕೆ ಅತದಂತಲ್ಲ…ಬರಿರಿ ಅತಾ? ನಾನ್ ಹೋಯ್ ಬತ್ತಿನಿ …ಮರ್ರೆ ಲೇಟಾಗ್ಯದೆ…ಮನಿಯೋಳ್ ಕಾಯ್ತಾ ಅದಾಳೇನು..

ನಾನು ಯಾರುನ್ನು ಹಂಗ್ರಣಿ ಮಾಡುಕೆ ಇಲ್ಲಿ ಬರ್ದಿಲ್ಲ ಬೇಜಾರ್ ಅಗಿಲ್ಲಾ ಅಲ್ಲಾ? ಅದೂ ಅಲ್ದೆ ನಮ್ಮ್ ಊರಿನ ಬಾಷಾ ಶ್ಯೆಲಿ ಯನ್ನ ಪರಿಚಯ ಮಾಡ್ದೇ ಇದ್ರೆ ಹೇಗೆ?….ಬರ್ಲಾ?…..

ಸಂಬಂಧ!!!!

ನವೆಂಬರ್ 26, 2009

ಓದುತ್ತಿದ್ದರೆ ಎದುರಿಗಿನ ಕಿಟಕಿಯ ಗಾಜುಗಳಬಳಿ ಎರಡಂಗೈ ಅಗಲದಷ್ಟು ದೊಡ್ಡದಾದ ಹೆಡೆಯುಳ್ಳ ಕಪ್ಪಗಿನ ಕಾಳಿಂಗ ಸರ್ಪ ಒಂದು  ಜೋರಾಗಿ ಬುಸುಗುಟ್ಟಿದಂತೆ ಆಗುತ್ತೆ, ಯಾವುದೋ ಮಗು ಉಸಿರು ಕಟ್ಟಿಕೊಂಡು ಅಳುತ್ತಿರುವಂತೆ ಅನ್ನಿಸುತ್ತೆ, ಭಯಾನಕ ಧ್ವನಿಯಲ್ಲಿ ಯಾರೊ ನಮ್ಮ ಹೆಸರನ್ನು ಹಿಡಿದು ಜೊರಾಗಿ ಅರಚುತ್ತಿದ್ದಾರೆ ಅಂತ ಅನ್ನಿಸಿಬಿಡುತ್ತೆ. ಯಾರೊ ವಿಕಾರವಾಗಿ ನಗ್ತಿದಾರೆ ಅನ್ಸುತ್ತೆ, ಎಲ್ಲಿ ನಮ್ಮ ಕಾಲು ಬೆರಳುಗ ಸಂದಿಗಳಿಗೆ ನಾಗರ ಹಾವೊಂದು ಕಚ್ಚಿ ಬಿಟ್ಟಿದಿಯೆನೋ ಆಂತ ಚೆಕ್ ಮಾಡ್ಕೊಂಡು ಬಿಡಬೇಕು…………..ಹೀಗೆಲ್ಲಾ ಯಾಕೆ ನಾನು ಹೇಳ್ತಿದಿನಿ ಅಂತ ಅಂದ್ಕೊಂಡ್ರಾ? ನಾನು ಈಗ ಹೇಳ್ತಾ ಇರೊದು ರವಿ ಬೆಳೆಗೆರೆ ಯವರು ಬರೆದ “ಸರ್ಪ ಸಂಬಂಧ” ಅನ್ನೊ ಕಾದಂಬರಿ ಒದಿದಾಗ ಸಿಗೋ  ಎಕ್ಸ್ಪೀರಿಯನ್ಸು.!!!!

ಹೇಗೆ ಜನ ದೇವರನ್ನು ನಂಬ್ತಾರೊ ಹಾಗೆ ದೆವ್ವಗಳ ಬಗ್ಗೆನೂ ಕೆಲವರು ನಂಬ್ತಾರೆ, ಹೆದ್ರತಾರೆ, ನಂಬಿದ್ರೆ ಹೆದ್ರಿಸ್ತಾರೆ ಅಲ್ವಾ? ಹಾಗೆ ಹೇಗೆ ಸಾತ್ವಿಕ ಪೂಜೆ, ಪ್ರಾರ್ಥನೆ, ಹೊಮ, ಹವನಗಳು ನೆಡಿತವೊ ಹಾಗೆ ಮಾಟ ಮಂತ್ರ ಗಳನ್ನೂ ಮಾಡ್ಸೋ ಜನ ಇದ್ದಾರೆ ಅಂತ ನಾನು ಕೇಳಿದಿನಿ. ಈ ವಾಮಚಾರ, ಅಘೋರ ವಿದ್ಯೆ ಗಳ ಸುತ್ತ ಒಂದು ಭಯಾನಕ ಕಥೆಯನ್ನ ಹೆಣೆಯುವುದರಲ್ಲಿ ರವಿ ಯಶಸ್ವಿಯಾಗಿದ್ದಾರೆ.

ಒಂದು  ಸರ್ಪ ಶಿಶು ವಾಗಿ , ಅದಕ್ಕಾದ ಮೋಸದ ದ್ವೇಷ ತೀರಿಸಿಕೊಳ್ಳಲು  ಹಾಗೂ ಅದನ್ನು ಸಾಕಿಕೊಂಡಿದ್ದ ಮಾಟಗಾತಿ ಯೊಬ್ಬಳು ತನ್ನ ಸೇಡು ತೀರಿಸಿಕೊಳ್ಳಲು,ಜೊತೆಗೆ ಸರ್ಪ ಶಿಶುವನ್ನು ಬಳಸಿಕೊಂಡು ವಾಮಾಚಾರ ಲೋಕದ ರಾಣಿಯಾಗಬೇಕೆಂಬ ವಿಕ್ರತ ಮನಸ್ಸಿನಿಂದ  ಮಾಡುವ  ಭಯಾನಕ ವಾಮಾಚಾರದ ಪ್ರಯೊಗಗಳಿಂದ ಕಥೆ ಪ್ರಾರಂಬವಾಗುತ್ತೆ, ಅದನ್ನ ತಡೆಯಲು ಸಾತ್ವಿಕ ಅಘೋರಿಗಳಿಬ್ಬರು ನೆಡೆಸುವ ಪ್ರತಿತಂತ್ರಗಳೂ ರೋಚಕವಾಗಿ ಬಿಂಬಿತವಾಗಿವೆ. ಆದರೆ ಸರ್ಪ ಶಿಶುವಿನ ಲಕ್ಷಣಗಳನ್ನು ಓದುವಾಗ ಒಮ್ಮೆ ಎದೆ ಜಲ್ಲ್ ಅನ್ನುತ್ತೆ, ಯಾಕಂದ್ರೆ ಅದು ಯಾರನ್ನಾದ್ರು ಕಚ್ಚಿದ್ರೆ ಅವ್ರು ಸರ್ಪ ಸಂತತಿಗೆ ಸೇರಿಬಿಡ್ತಾರೆ ಇಲ್ಲಾಂದ್ರೆ ಸಾಯ್ತಾರೆ. ಅದು ಅತ್ತರೇ ಇಡೀ ಮನೆನೇ ನಡುಗಬೇಕು ಅಂತಹ ಕರ್ಕಶ ಅಳು. ಅದರ  ಬೆನ್ನತುಂಬ ಬೆಳದುನಿಂತ ಒರಟಾದ ಕೂದಲು, ಮೈಯಿಂದ ಪೊರೆ ಪೊರೆ ಯಾಗಿ ಹೊಗುವ ಚರ್ಮ……. ಹೀಗೆ ಹಲವಾರು ಭಯಾನಕ ಹೋಲಿಕೆಗಳು.!!!

ಮಾಟಗತಿಯೋ ಅವಳು ಮಾಡುವ ಮ್ಯಾಜಿಕ್ ಗಳು ಒಂದೆರಡಲ್ಲ…..ಕಣ್ಣಲ್ಲೇ ರಕ್ತ ಬರಿಸುವ, ಪಾಪದ ಅಮಾಯಕರು ಇಂಚಿಂಚಾಗಿ ದೇಹದ ಭಾಗ ಗಳು ಕೊಳೆತು ಸಾಯುವಂತೆ ಮಾಡುವ, ಪ್ರೇತ ಪಿಚಾಚಿಗಳನ್ನು ಬಿಟ್ಟು ತನ್ನ ಶತ್ರುಗಳನ್ನು ದಾರಿತಪ್ಪಿಸುವ, ಕಣ್ಣುಗುಡ್ಡೆಗಳನ್ನು ಕಿತ್ತು ತನ್ನವರಿಗಾಗದವರನ್ನು ಇರಿದು ಕೊಲ್ಲುವ ರೀತಿ ವಿಕ್ರತ ಮನಸ್ಸಿನ ಮಾಟಗಾತಿಯ ಹತ್ತು ಹಲವು ಮುಖಗಳನ್ನು ಪರಿಚಯಿಸುತ್ತದೆ. ಹಾಗೇಯೆ ಸಾತ್ವಿಕ ಅಘೋರಿಯೊಬ್ಬ ಆ ತೇಜಮ್ಮನೆಂಬ ಮಹಾಮಾಟಗಾತಿಯ ಹುಟ್ಟಡಗಿಸಲು ಎಲ್ಲಾ ಪ್ರತಿ ತಂತ್ರಗಳನ್ನೂ ಮಾಡುತ್ತಾನೆ.

ನಂತರದಲ್ಲಿ ಅಗ್ನಿನಾಥನೆಂಬ ಸಾತ್ವಿಕ ಅಘೋರಿ , ತೇಜಮ್ಮ ಆ ಸರ್ಪ ಶಿಶು ವನ್ನು  ಸ್ವಾತಿಯ ಮೊದಲ ಮಳೆಹನಿಗಳನ್ನು ಕುಡಿಯುವಂತೆ ಮಾಡಿ ಅದನ್ನು ಕಾರ್ಕೋಟಕ ವಿಷ ಸರ್ಪವನ್ನಾಗಿ ಮಾಡಿಕೊಂಡು ವಾಮಜಗತ್ತನ್ನು ಗೆಲ್ಲುವ ಕನಸನ್ನು , ಅವಳ ದೇಹವನ್ನು ಮಂತ್ರಗಳ ಮೂಲಕವೇ ಸ್ಫೊಟಿಸಿ ಕೊಲ್ಲುತ್ತಾನೆ. ಆದರೆ ಅತ್ಯಂತ ಕುತೂಹಲವಿರುವ ವ್ಯಕ್ತಿ ವಿಶ್ವ ನೆಂಬ ಸರ್ಪಶಾಸ್ತ್ರಜ್ನ ಮಾಟಗಾತಿಯ ಸಾವನ್ನು ರೇಬೀಸ್ ಬಂದು ಸತ್ತನೆಂದುಕೊಳ್ಳುತ್ತಾನೆ!!!!

ಕೊನೆಗೆ ನಮಗೆ ಅನ್ಸೊದು ವಿಜ್ನಾನದ ಕಣ್ಣು ತಪ್ಪಿಸಿಕೊಂಡು ಇರುವ ವಾಮಜಗತ್ತು ನಿಜವಾಗಿಯೂ ಇದ್ಯಾ? ಮಂತ್ರ ತಂತ್ರಗಳಿಂದ ಇಷ್ಟೊಂದು ನಾಶ ಸಾದ್ಯನ? ಹಾವುಗಳೂ ಹೀಗೂ ದ್ವೇಷ ತೀರಿಸಿಕೊಳ್ತವಾ? ……………………..ಜೊತೆಗೆ ಈ ಪುಸ್ತಕ ಓದಿ ಮುಗಿಸೊವರಿಗೂ ಅದು ನಿಮ್ಮನ್ನ ಬಿಡೋದಿಲ್ಲ ಅಷ್ಟು ಕುತೂಹಲಕಾರಿಯಾಗಿದೆ..ಒಮ್ಮೆ ಸಿಕ್ಕಿದ್ರೆ ಓದಿನೋಡಿ………ಮತ್ತೊಮ್ಮೆ ಹೀಗೆ ಸ್ವಲ್ಪ ಬರ್ಕೊಂಡು ಬರ್ತಿನಿ……ಬೋರ್ ಅಗ್ಲಿಲ್ಲ ಅಲ್ವಾ ?

ಮತ್ತೊಂದು ಕಥೆ

ಅಕ್ಟೋಬರ್ 24, 2009

ಹೀಗೆ ಮತ್ತೊಮ್ಮೆ ನಿಮ್ ಜೊತೆ ಒಂದು ಸ್ವಲ್ಪ ಮಾತಡ್ಬೇಕು ಹಾಗೆ……..ನೋವು,ಬೇಜಾರು ಹಂಚ್ಕೋಬೇಕು ಅಂತ ಅನ್ಸಿದೆ ಸೊ ಒಂದು ಆರ್ಟಿಕಲ್ಲ್ ಬರೀತಿದಿನಿ…….ಪ್ಲೀಸ್ ಓದಿ.

ಮೊನ್ನೆ ಹೀಗೆ ಸುಮಾರು ತಿಂಗಳೇ ಆಯ್ತಲ್ಲಾ ಅಂತ ನನ್ನ ಹಳೇ ಗೆಳೆಯ ಒಬ್ಬನಿಗೆ ಫೊನ್ ಮಾಡಿ ಮನೆಗೆ ಬಾರೋ ತುಂಬಾ ಬೇಜಾರ್ ಆಗ್ತಾಇದೆ ಅಂದೆ. ಅವ್ನು ಒಂದು ಡಬ್ಬಾ ಸೈಕಲ್ ತುಳ್ಕೊಂಡು ಮನೆ ಹತ್ರ ಸುಮಾರು ೬ ಘಂಟೆ ಅಷ್ಟೋತ್ತಿಗೆ ಬಂದ. ನಂತರ ಹೀಗೆ ಚಾ, ಕುಡ್ದು ಮಾತಾಡ್ತಾ ಕೂತಿದ್ವಿ, ಎಲ್ಲಾ ಕಾಲೇಜು, ಸ್ಕೂಲು, ಮಧ್ಯ ದಲ್ಲಿ ಹುಡ್ಗೀರ್ ವಿಚಾರ ಹೀಗೆ ಸುಮಾರು ಕಥೆಗಳು ಹಾದು ಹೋದವು. ಇನ್ನೇನು ಅವ್ನನ್ನ ರಾಮಂಜನೇಯ ಟೆಂಪಲ್ ಗೆ ಕರ್ಕೊಂಡು ಹೊಗಿ, ಮತ್ತೆ ಮನೆಗೆ ಬೀಳ್ಕೊಡೊದು ಅಂತ ತೀರ್ಮಾನ ಮಾಡ್ದೆ. ಎಲ್ಲಿತ್ತೊ ಕುತೂಹಲ ತಡಿಯಕೆ ಆಗ್ದೆ ನಿಮ್ಮ ಅಕ್ಕಂದ್ರು ಇಬ್ಬರು ಇದ್ರಲ್ಲಾ ಮದ್ವೆ ಆಯ್ತೆನೊ ಅಂತ ಕೇಳ್ದೆ………

ಅವಾಗ ಅವ್ನು ಮಾತಾಡೊಕೆ ಶುರು ಮಾಡ್ದಾನೋಡ್ರಿ, ಅಲ್ಲಿ ತನಕ ನಾನೆ ವಟ ವಟ ಅಂತಿದ್ದೆ ಅಂತ ಸಪರೇಟ್ ಆಗಿ ಎನು ಹೇಳ್ಬೇಕಾಗಿಲ್ಲ ಅಲ್ವಾ? ಅವ್ನಿಗೆ ಇಬ್ಬರು ಅಕ್ಕಂದಿರು, ಇಬ್ಬರಿಗೂ ಒಟ್ಟಿಗೇ ಮದ್ವೆ ಮಾಡಿದ್ರೆ ಒಂದೇ ಖರ್ಚಲ್ಲಿ ಆಗುತ್ತೆ ಅಂತ ಆ ಬಡ ಬ್ರಾಹ್ಮಣ ಮಾಡಿದಾರೆ. ಒಬ್ಬ್ರು ಪುರೊಹಿತ್ರಿಗೆ ಹಿರಿ ಮಗಳನ್ನ ಕೊಟ್ಟು ಮದ್ವೆ ಮಾಡಿದ್ರು ಮತ್ತೊಬ್ರಿಗೆ ಒಬ್ಬ ಆಟೊ ಡ್ರೈವರ್ ಸಿಕ್ದ…ಅವ್ನೊ ಇಡೀ ಬೆಂಗಳೂರಲ್ಲಿ ಸುರ ಸುಂದರ………..ಹೇಳ್ಕೊಂಡಿದ್ದು ಸಾವಿರ ನಿಜವಾಗಿ ಇದ್ದಿದ್ದು ನೂರೇ!!

ಮೊದಲ ಮಗ್ಳು ಸೀಮಂತ ಹಾಗೆ ನಂತರ ೧ ಹೆಣ್ಣು ಮಗುವನ್ನು ಕೂಡ ಹೆತ್ತಳು.ಹೇಗೊ ಅಲ್ಲಿ ಇಲ್ಲಿ ಸಾಲಮಾಡಿ ಮೊದಲ ಬಾಣಂತನ ನ ಚೆನ್ನಾಗೇ ಮಾಡಿಕೊಟ್ರು. ಇನ್ನೇನು ಎಲ್ಲಾ ಮುಗಿತು ಎಲ್ಲಾ ಸೆಟಲ್ ಆಯ್ತು ಅಂದ್ಕೊಳ್ಳೋ ಹೊತ್ತಿಗೆ ಎರಡನೇ ಮಗ್ಳು ಒಂದಿನ ಅತ್ತ್ಕೊಂಡು ಮನೆಗೆ ಬದ್ಳು…ಯಾಕಂದ್ರೆ ಅವ್ಲ ಗಂಡ ಅನ್ನಿಸ್ಕೊಂಡೊನು ತಾಳಿನೂ ಬಿಡ್ದೆ ಎಲ್ಲಾ ದೋಚಿ …ಸರಿಯಾಗಿ ಕುಡ್ದು ಹಾಸಿಗೆ ಹಿಡ್ದು ಮಲಗಿದ್ದ..ಅದೂ ಅಲ್ಲ್ದೆ ಜಾಂಡೀಸ್ ಅಂತ ಡೇಂಜರ್ ಖಾಯಿಲೆ ಇತ್ತು ಅಂತ ಆ ಬಡ ಹೆಣ್ಣು ಜೀವಕ್ಕೆ ಗೊತ್ತಾಗಿದ್ದೇ ಆವಾಗೆ ಅದೂ ಆಗಿದ್ದು ಮದ್ವೆ ಆಗಿ ೧ ವರ್ಷ ಮುಗಿದ್ಮೇಲೆ. ಇನ್ನೇನು ಮಾಡ್ತಾರೆ ಆ ಬಡ್ವ್ರವ್ರು ಮಾರ್ಯಾದೆ ನೆ ಆಸ್ತಿ ಅವ್ರಿಗೆ. ಹೇಗೋ ಆ ಚಾಂಡಾಲಂಗೆ ಟ್ರೀಟ್ ಮೆಂಟ್ ಕೊಡ್ಸೊಣ ಅಂತ ಮತ್ತೆ ಸಾಲ ಮಾಡಿ ದುಡ್ಡು ಅಡ್ಜಸ್ಟ್ ಮಾಡೊ ಹೊತ್ತಿಗೆ ಅವ್ನು ಪರ್ಮೆನೆಂಟ್ ನಿದ್ರೆಗೆ ಜಾರಿಯೇ ಬಿಟ್ಟ…….ಎರಡನೇ ಮಗ್ಳೊ ೧೦ನೇ ಕ್ಲಾಸ್ ಫೇಲು..ಆಳೊದು ಬಿಟ್ರೆ ಬೇರೆ ಗೊತ್ತಿಲ್ಲ ಅವ್ರಿಗೆ….ಇದನ್ನೆಲ್ಲಾ ನೊಡ್ತಿದ್ದ ನನ್ನ ಚಿಕ್ಕ ಗೆಳೆಯನ ಮನಸ್ಸಿನ ಸ್ಥಿತಿ ಹೇಗಿರ್ಬೇಡ ಯೊಚನೆ ಮಾಡಿ…..

ನನ್ನ ಪುಟ್ಟ ಗೆಳೆಯನೋ ಪಿ ಯು ಸಿ ಓದ್ತಾ ಇದಾನೆ…. ದಿನ ಮನೆಗೆ ಹೋಗೋಕೆ ಬೇಜಾರು ಅಂತಾನೆ. ಆಹುಡ್ಗ ಹೇಗಾದ್ರು ಮಾಡಿ ಈ ಸಿಚುಯೇಶನ್ ಎಲ್ಲ ಎದುರಿಸೋಕೆ ದೇವ್ರು ಶಕ್ತಿ ಕೊಡಲಿ ಅಂತ ನಾನು ಕೆಳ್ಕೊತಿನಿ ದೇವ್ರು ಅನ್ನೋ ಕಲ್ಲು ವಿಗ್ರಹಕ್ಕೆ ಏನಾದ್ರು ಶಕ್ತಿ ಇದ್ರೆ ಆ ಬಡ ಬ್ರಾಹ್ಮಣರ ಜೀವನದಲ್ಲಿ ಒಂದು ಆಶಾ ಕಿರಣ ಮೂಡಿಸಲಿ ಅಲ್ವಾ? ಮತ್ತೆ ಹೀಗೆ ಇನ್ನೊದು ಆರ್ಟಿಕಲ್ ಬರಕೊಂಡು ಬರ್ತೀನಿ…………..

ನಮಸ್ತೆ…

My 1st Article

ಮೇ 9, 2008
ಅವ್ರುದ್ದು ೧ ದೊಡ್ಡ ಮನೆ ,ಅದೂ ಮಲೆನಾಡ ಮನೆ. ಮಲೆನಾಡ ಮನೆ ಗಳನ್ನು  ಆದಷ್ಟು ಹೆಚ್ಚು ಮರಗಳನ್ನ ಬಲಿ ಕೊಟ್ಟು ಮಾಡಿರ್ತಾರೆ….. ಹಾಗೆ ನಮ್ಮ ಹುಡುಗನ ಮನೆ ನೂ ಕೂಡ. ಅದೂ ಅವರ ಅಪ್ಪನಿಗೆ  ಪಿತ್ರಾರ್ಜಿತ ವಾಗಿ ಬಂದದ್ದು. ಅದೊಂದು ಬಿಟ್ಟರೆ  ಅರ್ಧ ಎಕರೆ ಅಡಿಕೆ ತೊಟ. ಅದ್ರಲ್ಲಿ ಬರೋ ಆದಾಯದಲ್ಲೆ ವರ್ಷ ಇಡೀ ಕಳಿಬೇಕು……….
 ನಮ್ಮ ಹುಡ್ಗ ನ ಹೆಸ್ರು ನವೀನ್ ಅಂತ, ಅವ್ನು ಅವ್ರ ಅಪ್ಪ ಅಮ್ಮನಿಗೆ  ಒಬ್ಬನೇ ಮಗ , ಜೊತೆಗೆ ಇವ್ನ ತಂಗಿ ಒಬ್ಬ್ಲು ಇದ್ಲು ಅವ್ಲಿಗೆ ಮದ್ವೆ ಅಗಿದೆ. ಅವನ ತಂಗಿ ಗೋ ಬೇಡ , ಬೇಡ ಅಂದ್ರೂ ಪಿ ಯೂ ಸಿ ಮುಗಿತಿದ್ದಂಗೆ ನೇ ಮದ್ವೆ ಮಾಡಿ ಬಿಟ್ರು.  ಅದ್ರೆ ಮದ್ವೆ ಮಾಡ್ಬೆಕಾದ್ರೆ ಇದ್ದಿದ್ದ  ಅರ್ಧ ಎಕರೆ ಗದ್ದೆ ಮಾರಿ ಮಾಡ್ಬೇಕಾಯಿತು ಅಂತ  ನವೀನ ನೆನೆಸಿಕೊಂಡಾಗಲೆಲ್ಲಾ ಬೆಜಾರ್ ಮಾಡ್ಕೊಂಡು ಮುಖ ಸಣ್ಣಗೆ ಅಗುತ್ತೆ.
 ಈಗ ನಮ್ಮ ನವೀನ ಬೆಂಗಳೂರಿಗೆ ಬಂದು ೩ – ೪ ವರ್ಷ ಆಗಿದೆ, ಅವ್ನು ನಾಳೆ ಊರಿಗೆ ಹೊರ್ಟಿದಾನೆ, ಅದೇ ಯುಗಾದಿ ಹಬ್ಬಕ್ಕೆ. ತಂಗಿ ಬಾವ ಬಂದಿರ್ತಾರೆ, ಅವ್ರಿಗೂ ಇದು ಮೊದಲ ಹಬ್ಬ , ಇದೇ ತಿಂಗಳು ಅಪ್ಪ ಅಮ್ಮ ನ ಹುಟ್ಟಿದ ದಿನ ಗಳೂ ಕೂಡ……ಹೀಗೆಲ್ಲ ಯೊಚನೆ ಮಾಡ್ತಾ ಕೆ.ಎಸ್ ಅರ್.ಟಿ .ಸಿ ರಿಸರ್ವೇಷನ್ ಕೌಂಟರ್ ಹತ್ರ ಹೋಗಿ ನಿಂತೊಕೊಂಡ. ಹೋಗಕ್ಕೆ ಬರೊಕೆ ಎರಡಕ್ಕೂ ಟಿಕೆಟ್ ಮಾಡ್ಸಿ ….ರೂಮಿಗೆ ಬಂದು ಊಟ ಮಾಡಿ ಮಲ್ಗೊ ಹೊತ್ತಿಗೆ ರಾತ್ರಿ ಹತ್ತು ಘಂಟೆ.
 ಮರುದಿನ ಅರ್ಧ ಘಂಟೆ ಮುಂಚೆನೇ ಆಫಿಸಿನಿಂದ ಹೊರಟು ಯೆಲ್ಲಾ  ಒಗಿದೇ ಇರೊ ಬಟ್ಟೆ ಗಳನ್ನೆಲ್ಲಾ ಪ್ಯಾಕ್ ಮಾಡಿಕೊಂಡು ಕೆ.ಎಸ್.ಅರ್.ಟಿ.ಸಿ ಯ ಬಸ್ಸ್ ನಿಲ್ದಾಣ ದಲ್ಲಿ ಬಂದು ಬೆಂಗಳೂರು – ಶ್ರಿಂಗೇರಿ ಬಸ್ ಹತ್ತಿದ…..
 ಸರಿಯಾಗಿ  9:30 ಗೆ ಬಸ್ಸು ಹೊರಟಿತು….. ನಮ್ಮ ನವೀನಂಗೆ ನಿದ್ದೆ ಬರಲ್ಲ ಬಸ್ಸು ಹತ್ತಿದ್ರೆ. ಅದಕ್ಕೆ ಹಾಗೆ ಕಣ್ಮುಚ್ಚಿ ಕೂತ್ಕೊಂಡ. ೪ನೇ ಕ್ಲಾಸು ಆದ್ಮೇಲೆ  ಮುಂದೆ ಒದಬೇಕಂದ್ರೆ  ೬ ರಿಂದ ೭ ಕಿಲೋಮೀಟರು ನೆಡಿಬೇಕು ದಿನಾ…!!!  ಹಾಗೆ ಎಷ್ಟೋಂದು ದಿನ ಚಪ್ಪಲಿ ನೇ ಇಲ್ಲದೇ  ನೆಡೆದಿದ್ದು ನೆನಪಾಯಿತು, ಸುರಿಯುವ ಮಳೆಗಾಲದಲ್ಲೂ ಕಡಿಮೆ ರೇಟಿನ ಹವಾಯಿ ಚಪ್ಪಲಿ ಹಾಕ್ಕೊಂಡು ಹೊಗ್ತಿತ್ತಿದ್ದಿದ್ದು, ಜಾರಿ ಬಿದ್ದು ಪುಸ್ತಕ ಒದ್ದೆ ಆಗ್ತಿತ್ತಿದ್ದು, ಜೋರು ಮಳೆಗೆ ಕೊಡೆ ಹಾರಿ ಹೋಯಿತು ಅಂತ ಮನೆಲಿ ಹೇಳಿದ್ದಕ್ಕೆ ಪೆಟ್ಟು ತಿಂದಿದ್ದು, ಯೆಲ್ಲಾ ನೆನಪಿನ ಅಂಗಳದಲ್ಲಿ ಬಂದು ಮರೆಯಾದವು.
 ಮನೆಲಿ ಟಿ ವಿ ಇಲ್ಲ , ಆದ್ರೆ ಇವ್ನಿಗೆ ಟಿ ವಿ ನೋಡೊದು ಅಂದ್ರೆ ಪಂಚಪ್ರಾಣ, ಹಾಗಂತ  ಊರ ಗೌಡ್ರ ಮನೇಲಿ ಒಂದಿನ ರಾತ್ರಿ ಹತ್ತು ಗಂಟೆ ವರೆಗೂ ಟಿ.ವಿ ನೋಡಿಕೊಂಡು ಮನೆಗೆ ಬಂದ್ರೆ …. ಅಮ್ಮ ಬಾಗಿಲ್ಲಲ್ಲೇ ಲಕ್ಕಿಯ (ಲಕ್ಕಿ – ಅದೊಂದು ಸಸ್ಯ) ಬರಲು ಹಿಡ್ಕೊಂಡು ನಿಂತಿದ್ಲು. ಬಂದು ಮೆಟ್ಟಿಲು ಹತ್ತಿದ್ದೇ ತಡ  ಆ ಕೋಲುಗಳು ಬೆನ್ನ  ಮೇಲೆ ಬಾಸುಂಡೆ ಬರಿಸಿದ್ದವು…. ಅಮೇಲಿಂದ ಇವತ್ತಿನವರೆಗೂ ಬೆರೆಯವರ ಮನೆಯಲ್ಲಿ ಟಿ. ವಿ ನೊಡ್ತಿಲ್ಲ  ನವೀನ.
 ದಿನಾ ಸ್ಕೂಲಿಂದ ಬರೊದು ೬ ಘಂಟೆ ಆಗ್ತಿತ್ತು, ಶನಿವಾರ  ಬಾನುವಾರ ಹುಡುಗರ ಜೊತೆ ಕ್ರಿಕೆಟ್ ಆಡಿಕೊಂಡು ಮಾನೆಗೆ ಬಂದಾಗಲೂ ಯಾರ ಮೇಲಿನ ಸಿಟ್ಟೊ , ಗೊತ್ತಿಲ್ಲ ….ಆದ್ರೆ ಬರೆ ಬೀಳ್ತಿತ್ತಿದ್ದಿದ್ದು ನವೀನ ನ ಪಾಪದ ಬೆನ್ನುಗಳಿಗೆ ……..ನೆನಪಾಗಿ  ಮತ್ತೆ ನೋವಾಯಿತು.
 ದಿನಾ ಅಪ್ಪ ಅಮ್ಮ ಅಕ್ಕ-ಪಕ್ಕದ ಮನೆಗಳಿಗೆ ಕೇಳುವಂತೆ ಗಲಾಟೆ ಮಾಡ್ಕೊತಾ ಇದ್ರು, ಅದನ್ನ ನೋಡಿದವರೆಲ್ಲಾ “ಏನೊ ನವೀನ ಇವತ್ತು ನಿಮ್ಮಮನೆಲಿ ಯಾವ ಹೊಸ ಸಿನೇಮಾ ಶೋ ಶುರುಆಗಿದೆ?” ಅಂತ ಕೇಳ್ದಾಗ ಇವನು ಏಸ್ಟೊ ಸಲ  ತನಗರಿವಿಲ್ಲದೇ ಕಣ್ಣೀರು ಹಾಕಿದ್ದ. ಗಲಾಟೆನಾದ್ರು ಏನಕ್ಕ? ಅಪ್ಪ ನ ಇಸ್ಪೀಟು ಆಟದ ಹುಚ್ಚನ್ನು ಬಿಡಿಸುವ ವ್ಯರ್ಥ ಪ್ರಯತ್ನ ಅಮ್ಮನದು. ಅಷ್ಟೇ.
 ಒಂದು ಸಲ ಶಿವಮೊಗ್ಗ ಕ್ಕೆ ಅಡಿಕೆ ಮಂಡಿಗೆ ಹೊಗಿ ಅಪ್ಪ ರಾತ್ರಿ ತಡವಾಗಿ ಬಂದ್ರು, ಆವಾಗ್ಲೆ ಗೊತ್ತಾಗಿದ್ದು ಅಪ್ಪ ತಿಂಗಳಿಗೊಮ್ಮೆ ಕುಡಿತಾನೆ ಅಂತ ಆವಾಗಲಂತೂ ಆದ ನೋವು ……ಈಗಲೂ ಬೇಜಾರಗುತ್ತೆ ನೆನಸಿಕೊಂಡ್ರೆ.
 ಮತ್ತೆ ೮ ನೇ ಕ್ಲಾಸಿಗೋ ೧೦ ಕಿಲೋಮೀಟರ್ ನೆಡಿಬೇಕು. ಅತ್ತು ಕರೆದು ೧ ಸೈಕಲ್ ತಗೊಂಡಿದ್ದು, ಮಳೆಗಾಲದಲ್ಲಿ ಸೈಕಲ್ಲಿಂದ ಬಿದ್ದು ಕೈ ಮುರಿದಿದ್ದು, ದಿನಾ ೨ ಬೆಟ್ಟ ದಂತಹಾ ಜಾಗಗಳನ್ನ  ಸೈಕಲ್ ದೂಡಿಕೊಂಡೆ ಸವೆಸಿದ್ದು, ಮತ್ತೆ ಕಾಲೇಜಿಗೆ ಸೇರೊಕೆ  ಮನೆಲಿ ದುಡ್ಡು ಕೊಡದಿದ್ದಾಗ ಆ ಸೈಕಲ್ಲನ್ನೇ ಮಾರಿ  ಸರ್ಕಾರಿ ಕಾಲೇಜು ಸೇರಿದ್ದು ……..ಇದೆಲ್ಲಾ ಮತ್ತೆ ಮತ್ತೆ ನೆನಪಾಗುವ ಇತಿಹಾಸದ ಪುಟಗಳು ನವೀನ ಪಾಲಿಗೆ.
 ಹೀಗೆ ಅದೆಲ್ಲಾ ಆಗಿ ಮುಖದ ಮೇಲೆ ಮೀಸೆ ಬಂದಮೇಲೆ , ಏನೇನೋ ವ್ಯವಹಾರಗಳಿಗೆ ಕೈ ಹಾಕಿ ಎಲ್ಲಾದ್ರಲ್ಲೂ ಸೋತು ….ಬೆಂಗಳೂರಿಗೆ ಬಂದು  ೩ – ೪ ವರ್ಷ ಆಯ್ತು ಈಗಲೂ ಒಂದು ಹೇಳ್ಕೊಳ್ಳಕ್ಕೆ ೧ ಒಳ್ಳೆ ಕೆಲ್ಸ ಇಲ್ಲ  ಆದ್ರೆ ಪ್ರತಿಸಲ ಹೋದಾಗ್ಲೂ ಅಪ್ಪ, ಮಗ ಈ ಬಾರಿ ಏಷ್ಟು ಹಣ ತಂದಿದಾನೆ ಎಷ್ಟು ಇಸ್ಪೀಟು ಕಚೇರಿಗಳಿಗೆ ಆ ದುಡ್ಡು ಸಾಲುತ್ತೆ ಅಂತ ಲೆಕ್ಕಚಾರ ಹಾಕ್ತಾನೆ ….. ಏನ್ಮಾಡೊದಪ್ಪಾ………ಅಂತ ಯೊಚನೆ , ಕನಸು , ಕಂಡು ಮುಗಿಸುವಷ್ಟರಲ್ಲಿ ನವೀನ ಕೂತಿದ್ದ ಬಸ್ಸು ಹಾಸನ ತಲುಪಿತ್ತು ಅಷ್ಟೆ!!!.
               ***********************************
 ನಿಮ್ಮವ,
ನಾಗರಾಜ್ ಎಮ್ ಎಮ್.